Amazon: ಡ್ರಗ್ಸ್ ಸಂಬಂಧಿತ ತಪಾಸಣೆಗೆ ಅಮೇಜಾನ್ ಅಧಿಕಾರಿಗಳು ಸಹಕಾರ ನೀಡದಿದ್ದರೆ ಅವರ ವಿರುದ್ಧವೇ ಕ್ರಮ: ಮಧ್ಯಪ್ರದೇಶ ಎಚ್ಚರಿಕೆ

ಗಾಂಜಾ ಸಾಗಣೆಗೆ ಅಮೆಜಾನ್ ಅನ್ನು ಬಳಸಲಾಗಿದೆ ಎಂಬುದು ಬಹಳ ಗಂಭೀರವಾದ ವಿಷಯವಾಗಿದೆ. ನಾವು ಈ ಸಂಬಂಧ ಕಂಪನಿಯ ಅಧಿಕಾರಿಗಳಿಗೆ ಕರೆ ಮಾಡಿದರೂ ಅವರು ಸಹಕರಿಸುತ್ತಿಲ್ಲ. ಅವರು ಸಹಕರಿಸದಿದ್ದರೆ ಬಂಧಿಸುತ್ತೇವೆ ಮತ್ತು ಅಂತಹ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ-ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ

ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ

ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ

  • Share this:
ಇ-ಕಾಮರ್ಸ್ ವೆಬ್‌ಸೈಟ್(E-Commerce Website) ಮೂಲಕ ಮಾದಕವಸ್ತು(Narcotic)ಗಳ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಹಕರಿಸದಿದ್ದರೆ ಅಮೆಜಾನ್(Amazon)‌ನ ವ್ಯವಸ್ಥಾಪಕ ನಿರ್ದೇಶಕ(Managing Director) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(Chief Executive Officer) ವಿರುದ್ಧ ಕ್ರಮ ಜರುಗಿಸುವುದಾಗಿ ಮಧ್ಯಪ್ರದೇಶ ಸರ್ಕಾರ(Madhya Pradesh Government) ಗುರುವಾರ ಎಚ್ಚರಿಸಿದೆ.

ಸಹಕರಿಸದಿದ್ದರೆ ಬಂಧನ

“ಗಾಂಜಾ ಸಾಗಣೆಗೆ ಅಮೆಜಾನ್ ಅನ್ನು ಬಳಸಲಾಗಿದೆ ಎಂಬುದು ಬಹಳ ಗಂಭೀರವಾದ ವಿಷಯವಾಗಿದೆ. ನಾವು ಈ ಸಂಬಂಧ ಕಂಪನಿಯ ಅಧಿಕಾರಿಗಳಿಗೆ ಕರೆ ಮಾಡಿದರೂ ಅವರು ಸಹಕರಿಸುತ್ತಿಲ್ಲ. ಅವರು ಸಹಕರಿಸದಿದ್ದರೆ ಬಂಧಿಸುತ್ತೇವೆ ಮತ್ತು ಅಂತಹ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. ಹೀಗಾಗಿ ತನಿಖೆಗೆ ಸಹಕರಿಸುವಂತೆ ಕಂಪನಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಅಮೆಜಾನ್ ಮೂಲಕ ಗಾಂಜಾ ಸಾಗಾಟ

ಕಳೆದ ವಾರ ಮಧ್ಯಪ್ರದೇಶದ ಭಿಂದ್‌ನಲ್ಲಿ ಪೊಲೀಸರು ಡ್ರಗ್ ಪೆಡ್ಲರ್‌ಗಳ ಗ್ಯಾಂಗ್ ಅನ್ನು ಭೇದಿಸಿದ್ದಾಗಿ ಹೇಳಿದ ನರೋತ್ತಮ್‌ ಮಿಶ್ರಾ, ಆ ಗ್ಯಾಂಗ್‌ ವಿಶಾಖಪಟ್ಟಣಂನಿಂದ ಅಮೆಜಾನ್ ಮೂಲಕ ಗಾಂಜಾ ತಲುಪಿಸುತ್ತಾರೆ ಮತ್ತು ನಗದು ರೂಪದಲ್ಲಿ ಪಾವತಿಸುತ್ತಾರೆ ಎಂದು ಆರೋಪಿಸಿದ್ದಾರೆ. ಅಮೆಜಾನ್‌ನಲ್ಲಿ ಮಾರಾಟಗಾರರಾಗಿ ನೋಂದಾಯಿಸಲ್ಪಟ್ಟ ಕಂಪನಿಯು 12 ಸ್ಥಳಗಳಲ್ಲಿ ಗಾಂಜಾ ಸರಬರಾಜು ಮಾಡಿದೆ ಎಂದು ಮಿಶ್ರಾ ಹೇಳಿದರು.

ಇದನ್ನೂ ಓದಿ: Farm Laws: ಪ್ರಧಾನಿ ಮೋದಿ ಮಹತ್ವದ ಘೋಷಣೆ: ಮೂರು ಕೃಷಿ ಕಾಯ್ದೆಗಳು ರದ್ದು

ಸ್ಟೀವಿಯಾ ಎಲೆಗಳಾಗಿ ಆನ್​ಲೈನ್​ ಮೂಲಕ ಡೆಲಿವರಿ

ಅಮೆಜಾನ್ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದರೆ, ನಾವು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ವಿಶಾಖಪಟ್ಟಣದಿಂದ ಗಾಂಜಾ ಸಾಗಿಸುತ್ತಿದ್ದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಗಾಂಜಾವನ್ನು ಪ್ಯಾಕ್ ಮಾಡಿ ಸ್ಟೀವಿಯಾ ಎಲೆಗಳಾಗಿ ಆನ್‌ಲೈನ್‌ ಮೂಲಕ ಡೆಲಿವರಿ ಮಾಡಲಾಗಿದೆ ಎಂದು ಮಿಶ್ರಾ ಹೇಳಿದರು.

ಆನ್​ಲೈನ್​ ಶಾಪಿಂಗ್ ಸೈಟ್​​ಗಳಿಗೆ ಹೊಸ ನಿಯಮ

“ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳು ಮತ್ತು ಮಾರ್ಗಸೂಚಿಗಳಿಲ್ಲ. ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಸಹ ಸರಬರಾಜು ಮಾಡಬಹುದು. ಪ್ಲಾಟ್‌ಫಾರ್ಮ್‌ಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳಲು ಮಧ್ಯಪ್ರದೇಶ ಸರ್ಕಾರವು ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಗೆ ನಿಯಮಗಳನ್ನು ರೂಪಿಸುತ್ತದೆ ಎಂದೂ ಅಲ್ಲಿನ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದರು.

ಅಮೆಜಾನ್‌ನ ವಕೀಲ ಸುಮಂತ್ ನಾರಂಗ್ ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಈ ವಿಷಯವು ತನಿಖೆಯಲ್ಲಿದೆ ಎಂದು ಹೇಳಿದರು.

ವೀರ್​ ದಾಸ್​ ವಿರುದ್ಧ ನರೋತ್ತಮ್ ಮಿಶ್ರಾ ವಾಗ್ದಾಳಿ

ಇನ್ನೊಂದೆಡೆ, ಕಾಮಿಡಿಯನ್‌ ವೀರ್ ದಾಸ್ ಅಮೆರಿಕದಲ್ಲಿ ಭಾರತವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ನರೋತ್ತಮ್‌ ಮಿಶ್ರಾ, ವೀರ್ ದಾಸ್ ಮೇಲೆ ವಾಗ್ದಾಳಿ ನಡೆಸಿದರು. ಹಾಗೂ, ಅವರಿಗೆ ಮಧ್ಯಪ್ರದೇಶದಲ್ಲಿ ಪ್ರದರ್ಶನ ನೀಡಲು ಬಿಡುವುದಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.

"ಅವರು ತನ್ನ ಕಾರ್ಯಗಳಿಗಾಗಿ ಕ್ಷಮೆಯಾಚಿಸಿದರೆ, ನಾವು ಅದನ್ನು ಮರುಚಿಂತನೆ ಮಾಡುತ್ತೇವೆ." ಭಾರತದ ಚಿತ್ರಣವನ್ನು ಕೆಡಿಸಲು ಪ್ರಯತ್ನಿಸುವ "ಕೆಲವು ವಿದೂಷಕರು" ಇದ್ದಾರೆ ಎಂದು ನರೋತ್ತಮ್‌ ಮಿಶ್ರಾ ಹೇಳಿದರು.

ಇದನ್ನೂ ಓದಿ: ನಾನು ಕ್ರಿಪ್ಟೋಕರೆನ್ಸಿ ಹೊಂದಿಲ್ಲ ಎಂದು ಬಹಿರಂಗಪಡಿಸಿದ Google CEO Sundar Pichai!

“...ಕಪಿಲ್ ಸಿಬಲ್ ಮತ್ತು ಇತರ ಕಾಂಗ್ರೆಸ್ಸಿಗರು ವೀರ್‌ ದಾಸ್‌ರನ್ನು ಬೆಂಬಲಿಸಿದರು. ವಿದೇಶದಲ್ಲಿ ನಮ್ಮ ದೇಶವನ್ನು ದೂಷಿಸಿದ ರಾಹುಲ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಭವ್ಯ ಭಾರತವನ್ನು ಮಾನನಷ್ಟ ಭಾರತ ಎಂದು ಕರೆಯುತ್ತಿದ್ದಾರೆ.

ವೀರ್​ ದಾಸ್​ ವಿರುದ್ಧ ದೂರು ದಾಖಲು

ಈ ಮಧ್ಯೆ, ಬಿಜೆಪಿ ನಾಯಕರೊಬ್ಬರು ದಾಸ್ ವಿರುದ್ಧ ನವದೆಹಲಿಯಲ್ಲಿ ದೂರು ದಾಖಲಿಸಿದ್ದಾರೆ. ದಾಸ್ ತನ್ನ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಬಳಿಕ ಈ ಪ್ರತಿಕ್ರಿಯೆಯನ್ನು ಎದುರಿಸಿದರು.

6 ನಿಮಿಷಗಳ ವಿಡಿಯೋದಲ್ಲಿ, ಕೋವಿಡ್ -19 ವಿರುದ್ಧದ ಯುದ್ಧ, ಅತ್ಯಾಚಾರದ ಘಟನೆಗಳು, ಹಾಸ್ಯನಟರ ಮೇಲಿನ ದಬ್ಬಾಳಿಕೆ ಮತ್ತು ರೈತರ ಪ್ರತಿಭಟನೆಗಳು ಸೇರಿದಂತೆ ಭಾರತ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವೀರ್‌ ದಾಸ್‌ ಹೆಚ್ಚು ಮಾತನಾಡಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿದ ವೀರ್‌ ದಾಸ್, ಸಮಸ್ಯೆಗಳ ಹೊರತಾಗಿಯೂ, ನಮ್ಮ ದೇಶ ಅದ್ಭುತವಾಗಿದೆ ಎಂದು ನೆನಪಿಸುವುದು ತನ್ನ ಉದ್ದೇಶವಾಗಿದೆ ಎಂದು ಹೇಳಿದರು.
Published by:Latha CG
First published: