Bhagavad Gita: ಕಾಲೇಜುಗಳಲ್ಲಿ ಭಗವದ್ಗೀತೆ; ಐಚ್ಛಿಕ ವಿಷಯವಾಗಿ ಓದಲು ಅವಕಾಶ

ಮುಂದಿನ ಶೈಕ್ಷಣಿಕ ವರ್ಷದಿಂದ 1,360 ಕಾಲೇಜುಗಳ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಐಚ್ಛಿಕ ವಿಷಯವಾಗಿ ಪರಿಚಯಿಸಲು ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಐಚ್ಛಿಕ ವಿಷಯವಾಗಿ ಭಗವದ್ಗೀತೆ

ಐಚ್ಛಿಕ ವಿಷಯವಾಗಿ ಭಗವದ್ಗೀತೆ

  • Share this:
ಈ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ (Children) ಪಠ್ಯ ಪುಸ್ತಕದ ಜ್ಞಾನದ ಜೊತೆಗೆ ಜೀವನದಲ್ಲಿ ನೈತಿಕವಾದ ಮೌಲ್ಯಗಳನ್ನು ಸಹ ಕಲಿಸಲು ಮಧ್ಯಪ್ರದೇಶ ಸರ್ಕಾರವು (Government of Madhya Pradesh) ಮುಂದಾಗಿದೆ. ಹೌದು.. ಮುಂದಿನ ಶೈಕ್ಷಣಿಕ ವರ್ಷದಿಂದ 1,360 ಕಾಲೇಜುಗಳಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು (Bhagavad Gita) ಐಚ್ಛಿಕ ವಿಷಯವಾಗಿ ಪರಿಚಯಿಸಲು ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ವಿಷಯದ ಬಗ್ಗೆ ತಿಳಿದಿರುವ ಅಧಿಕಾರಿಗಳು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಧ್ಯಪ್ರದೇಶ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಮೋಹನ್ ಯಾದವ್ ಅವರು ವಿದ್ಯಾರ್ಥಿಗಳಲ್ಲಿ (Students) ಜೀವನ ನಿರ್ವಹಣೆ ಮತ್ತು ನೈತಿಕತೆಯನ್ನು ಬೆಳೆಸಲು ಈ ರೀತಿಯ ವಿಷಯವನ್ನು ಐಚ್ಛಿಕ ವಿಷಯವಾಗಿ ಪರಿಚಯಿಸಲು ಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಯೋಜನೆಯ ಉದ್ದೇಶವೇನು?
ಇದರ ಉದ್ದೇಶ ಏನೆಂದರೆ ಈ ಮೂಲಕ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡುವುದು. ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ, ವಿದ್ಯಾರ್ಥಿಗಳು ಆಧುನಿಕ ಶಿಕ್ಷಣವನ್ನು ಪಡೆಯಬೇಕು ಮತ್ತು ಶ್ರೀಮಂತ ಭಾರತೀಯ ಇತಿಹಾಸದ ಬಗ್ಗೆ ಸಹ ತಿಳಿದುಕೊಳ್ಳಬೇಕು. ಗೀತೆ ಮತ್ತು ರಾಮಾಯಣ ಕೇವಲ ಧಾರ್ಮಿಕ ಗ್ರಂಥಗಳಲ್ಲ, ಅವು ನಮಗೆ ಜೀವನದ ಮೌಲ್ಯಗಳನ್ನು ಸಹ ಕಲಿಸುತ್ತವೆ ಎಂದು ಹೇಳಿದರು.

ಭಗವದ್ಗೀತೆಗೆ ಸಂಬಂಧಿಸಿದ ಆಯ್ಕೆಯ ಕೋರ್ಸ್ ನ ಭಾಗವಾಗಿ, ವಿದ್ಯಾರ್ಥಿಗಳಿಗೆ "ಜೀವನದ ಮೌಲ್ಯಗಳು, ಜೀವನವನ್ನು ಹೇಗೆ ನಿರ್ವಹಿಸುವುದು ಮತ್ತು ನಿರ್ಭೀತ ಜೀವನವನ್ನು ಹೇಗೆ ನಡೆಸುವುದು" ಎಂಬುದರ ಬಗ್ಗೆ ಕಲಿಸಲಾಗುವುದು ಎಂದು ಯಾದವ್ ಹೇಳಿದರು. ಈಗಾಗಲೇ ಹಿಂದೊಮ್ಮೆ ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳು ಸಹ ಭಗವದ್ಗೀತೆಯನ್ನು ಪಠ್ಯಕ್ರಮದ ಭಾಗವಾಗಿ ಪರಿಚಯಿಸುವ ಯೋಜನೆಯನ್ನು ಘೋಷಿಸಿದ್ದವು.

ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡಲು ಈ ಕೋರ್ಸ್
ಗೀತೆಯ ಬೋಧನೆಗಳನ್ನು ಅನುಸರಿಸಿ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಆನಿಬೆಸೆಂಟ್ ಅವರಂತಹ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಸಹ ಈ ಕೋರ್ಸ್ ನಲ್ಲಿ ಸೇರಿಸಲಾಗುವುದು ಎಂದು ಮಧ್ಯಪ್ರದೇಶದ ಉನ್ನತ ಶಿಕ್ಷಣ ಇಲಾಖೆಯ ಪಠ್ಯಕ್ರಮ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವಿಷಯವು ಕೇವಲ ಶ್ಲೋಕಗಳನ್ನು ಮತ್ತು ಅವುಗಳ ಅನುವಾದಗಳನ್ನು ಮಾತ್ರ ಹೊಂದಿರುವುದಿಲ್ಲ ಎಂದು ಅವರು ಹೇಳಿದರು. "ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗುತ್ತಿದೆ" ಎಂದು ಹೇಳಿದರು.

ದಾರ್ಶನಿಕ ಚಾಣಕ್ಯನ ಕೃತಿಗಳನ್ನು ಐಚ್ಛಿಕ ವಿಷಯವಾಗಿ ಪರಿಚಯ
ಇಷ್ಟೇ ಅಲ್ಲದೆ ಮೂರನೇ ವರ್ಷದ ಕಾಲೇಜು ವಿದ್ಯಾರ್ಥಿಗಳಿಗೆ ದಾರ್ಶನಿಕ ಚಾಣಕ್ಯನ ಕೃತಿಗಳನ್ನು ಐಚ್ಛಿಕ ವಿಷಯವಾಗಿ ಪರಿಚಯಿಸಲು ಮಧ್ಯಪ್ರದೇಶ ರಾಜ್ಯ ಸರ್ಕಾರ ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ. 2021 ರಲ್ಲಿ, ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯಗಳಾಗಿ 16ನೇ ಶತಮಾನದ ಭಕ್ತಿ ಕವಿ ತುಳಸೀದಾಸ್ ಅವರ ಶ್ರೀ ರಾಮಚರಿತಮಾನಸ್, ಭಗವಾನ್ ರಾಮನ ಕಥೆಯನ್ನು ವಿವರಿಸುವ ಮಹಾಕಾವ್ಯ ಮತ್ತು ಸಂಸ್ಕೃತ ಮಂತ್ರಗಳು ಮತ್ತು ಪೂಜೆಯ ವಿಧಾನ ತಿಳಿಸಿಕೊಡುವ ವಿಷಯವನ್ನು ಪರಿಚಯಿಸಿತ್ತು.

ಇದನ್ನೂ ಓದಿ:  Mamata Banerjee: ಬುಡಕಟ್ಟು ಜನಾಂಗದ ಮಹಿಳೆಯರ ಜೊತೆ ಸಿಎಂ ಸಖತ್ ಡ್ಯಾನ್ಸ್!

ಆದರೆ ಒಟ್ಟು 1,360 ಕಾಲೇಜುಗಳಲ್ಲಿ ಕೇವಲ 97 ವಿದ್ಯಾರ್ಥಿಗಳು ಮಾತ್ರ ಶ್ರೀ ರಾಮಚರಿತಮಾನಸ್ ಮತ್ತು ಐದು ಸಂಸ್ಕೃತ ಮಂತ್ರಗಳು ಮತ್ತು ಪೂಜೆ ವಿಧಾನ ಹೇಳಿಕೊಡುವ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮಾಯಣದಲ್ಲಿ ಒಂದು ವರ್ಷದ ಡಿಪ್ಲೊಮಾ
ರಾಜ್ಯದ ಭೋಜ್ ಮುಕ್ತ ವಿಶ್ವವಿದ್ಯಾಲಯ, ಅಟಲ್ ಬಿಹಾರಿ ವಾಜಪೇಯಿ ಹಿಂದಿ ವಿಶ್ವವಿದ್ಯಾಲಯ ಮತ್ತು ವಿಕ್ರಮ್ ವಿಶ್ವವಿದ್ಯಾಲಯಗಳು ಜೈನ ಧರ್ಮ, ವೇದ ಶಾಸ್ತ್ರ, ರಾಮಾಯಣ ಮತ್ತು ಮಹಾಭಾರತದ ಕೋರ್ಸ್ ಗಳನ್ನು ಸಹ ಪರಿಚಯಿಸಿವೆ. ಭೋಪಾಲ್ ನ ಭೋಜ್ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಮಾಯಣದಲ್ಲಿ ಒಂದು ವರ್ಷದ ಡಿಪ್ಲೊಮಾಗೆ ಕೇವಲ 100 ವಿದ್ಯಾರ್ಥಿಗಳು ಮಾತ್ರ ನೋಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: Pakistan Hindus: ಪಾಕಿಸ್ತಾನದಲ್ಲಿರುವ ಹಿಂದೂಗಳ ಸಂಖ್ಯೆಯೆಷ್ಟು? ಹಿಂದೂ ದೇಗುಲಗಳೆಷ್ಟು?

ಶಿಕ್ಷಣ ತಜ್ಞ ಲೋಕೇಶ್ ಮಾಲತಿ ಪ್ರಕಾಶ್ ಮಾತನಾಡಿ, ಧಾರ್ಮಿಕ ಪುಸ್ತಕಗಳ ಸೇರ್ಪಡೆಯು ವಿಮರ್ಶಾತ್ಮಕ ಚಿಂತನೆಯ ಮೇಲೆ ಪರಿಣಾಮ ಬೀರುತ್ತದೆ. "ಒಂದು ಪುಸ್ತಕವನ್ನು ಕೇವಲ ಒಂದು ದೃಷ್ಟಿಕೋನದಿಂದ ಮಾತ್ರ ಓದಲು ಸಾಧ್ಯವಿಲ್ಲ... ಧಾರ್ಮಿಕ ಪುಸ್ತಕಗಳನ್ನು ಧನಾತ್ಮಕವಾಗಿ ಮಾತ್ರ ನೋಡಬಹುದು" ಎಂದು ಹೇಳಿದರು.
Published by:Ashwini Prabhu
First published: