Thai Guavas: ಥಾಯ್ ಪೇರಲೆ ಹಣ್ಣಿನಿಂದ ವರ್ಷಕ್ಕೆ 32 ಲಕ್ಷ ರೂ ಆದಾಯ ಪಡೆಯುತ್ತಿರುವ ರೈತ!

Thai Guavas: ಥಾಯ್ ಪೇರಲೆಯ ದೀರ್ಘ ಶೆಲ್ಫ್ ಲೈಫ್ ಕಾರಣದಿಂದ ದೂರದ ಮಾರುಕಟ್ಟೆಗಳನ್ನು ಪ್ರವೇಶಿಸಬಹುದು ಮತ್ತು ಅದೊಂದು ಲಾಭದಾಯಕ ಅವಕಾಶ ಎಂದು ಪರಿಗಣಿಸಿ , ಅದನ್ನು ಪ್ರಯೋಗಿಸಲು ದಿನೇಶ್ ನಿರ್ಧರಿಸಿದರು.

Thai Guavas/ ಥಾಯ್ ಪೇರಲೆ

Thai Guavas/ ಥಾಯ್ ಪೇರಲೆ

 • Share this:
  ಮಧ್ಯಪ್ರದೇಶದ (Madhya Pradesh) ದಿನೇಶ್ ಬಗ್ಗಡ್ ಅವರ ಪೇರಲೆ ಹಣ್ಣಿನ (Guavas) ತೋಟಕ್ಕೆ ಭೇಟಿ ನೀಡಿದವರು, ತೋಟದುದ್ದಕ್ಕೂ ಹರಡಿರುವ ನೂರಾರು ದೈತ್ಯಾಕಾರದ ಪೇರಲೆಗಳನ್ನು ನೋಡಿದಾಗ ಮೂಕ ವಿಸ್ಮಿತರಾಗುವುದಂತೂ ಖಚಿತ. ಆದರೆ, ಕೆಲವು ವರ್ಷಗಳ ಹಿಂದೆ ಅವರ ತೋಟದ ನೋಟ ಹೀಗಿರಲಿಲ್ಲ. ಸಾಜೋಡ್ –ರಾಜೋಡ್ ಗ್ರಾಮದ ಈ ರೈತ ಮೊದಲು ತಮ್ಮ 4 ಎಕರೆ ಪಿತ್ರಾರ್ಜಿತ ಜಮೀನಿನಲ್ಲಿ ಮೆಣಸಿನಕಾಯಿ (Chilli), ಟೊಮ್ಯಾಟೋ (Tomato), ಬೆಂಡೆಕಾಯಿ (Ginger), ಹಾಗಲಕಾಯಿ (cucumber) ಮತ್ತು ಇತರ ಋತುಮಾನದ ತರಕಾರಿಗಳನ್ನು ಬೆಳೆಯುತ್ತಿದ್ದರು. ಆದರೂ, ಕ್ರಿಮಿಕೀಟ ಮತ್ತು ಶಿಲೀಂದ್ರಗಳ ಕಾಟ, ಕಾರ್ಮಿಕ ವೆಚ್ಚದ ಹೆಚ್ಚಳದಿಂದ ದಿನೇಶ್‌ಗೆ ಲಾಭ ಮತ್ತು ಅದಾಯ ಕಡಿಮೆ ಆಗತೊಡಗಿತು.“ಉತ್ಪಾದನಾ ವೆಚ್ಚಗಳಿಗೆ ಹೋಲಿಸಿದರೆ, ಮಾರುಕಟ್ಟೆ ದರಗಳು ಹೆಚ್ಚು ಏರುವುದಿಲ್ಲ. ವರ್ಷಗಳಲ್ಲಿನ ಸಾಧಾರಣ ಆದಾಯವು ಕೃಷಿಯನ್ನು ಆರ್ಥಿಕವಾಗಿ ಕಷ್ಟದಾಯಕವಾಗಿಸುತ್ತದೆ” ಎನ್ನುತ್ತಾರೆ ಸಾಂಪ್ರದಾಯಿಕ ಕೃಷಿಯ ಮೂಲಕ ಸುಮಾರು 7 ಲಕ್ಷ ರೂ. ಗಳಿಸಿದ ದಿನೇಶ್.

  1.4 ಕೆಜಿ ತೂಗುವ ಹಣ್ಣು

  2010ರಲ್ಲಿ, ಸ್ನೇಹಿತರೊಬ್ಬರು ತೋಟಗಾರಿಕೆ ಮಾಡುವಂತೆ ಸಲಹೆ ನೀಡಿ, ಥಾಯ್ ಪೇರಲೆಯ (Thai Guavas) ತಳಿಯನ್ನು ಪರಿಚಯಿಸಿದರು. “ಫೋಟೋ ಮತ್ತು ವಿಡಿಯೋಗಳಲ್ಲಿ ಪೇರಲೆ ಅತಿ ದೊಡ್ಡದಾಗಿ ಕಾಣುತಿತ್ತು. ನಾನು ನೆರೆಯ ರಾಜ್ಯದ ತೊಟಗಳಿಗೂ ಹೋಗಿದ್ದೆ ಮತ್ತು ಕನಿಷ್ಟ 300 ಗ್ರಾಂ ತೂಗುತ್ತಿದ್ದ ಮತ್ತು ಖರ್ಬೂಜದ ಗಾತ್ರಕ್ಕೆ ಬೆಳೆದಿದ್ದ ಪ್ರತಿ ಹಣ್ಣುಗಳನ್ನು ಕಂಡು ಆಶ್ಚರ್ಯಚಕಿತನಾದೆ” ಎನ್ನುತ್ತಾರೆ ಅವರು.

  “ಆ ತಳಿಗೆ ವಿಎನ್‍ಆರ್ – 1 ಎಂದು ಹೆಸರಿಡಲಾಗಿದೆ. ಮತ್ತು ಆ ಹಣ್ಣು 6 ದಿನಗಳ ಶೆಲ್ಫ್ ಲೈಫ್ ಹೊಂದಿರುತ್ತದೆ ಹಾಗೂ ಕಡಿಮೆ ಸೋಂಕಿಗೆ ಒಳಗಾಗುತ್ತದೆ ಎಂಬುದನ್ನು ಕಂಡುಕೊಂಡೆ” ಎನ್ನುತ್ತಾರೆ ಅವರು.

  ಥಾಯ್ ಪೇರಲೆಯ ದೀರ್ಘ ಶೆಲ್ಫ್ ಲೈಫ್ ಕಾರಣದಿಂದ ದೂರದ ಮಾರುಕಟ್ಟೆಗಳನ್ನು ಪ್ರವೇಶಿಸಬಹುದು ಮತ್ತು ಅದೊಂದು ಲಾಭದಾಯಕ ಅವಕಾಶ ಎಂದು ಪರಿಗಣಿಸಿ , ಅದನ್ನು ಪ್ರಯೋಗಿಸಲು ದಿನೇಶ್ ನಿರ್ಧರಿಸಿದರು.
  ಅವರ ತೋಟದಲ್ಲಿ ಈಗ 4,000 ಗಿಡಗಳಿದ್ದು, ವಾರ್ಷಿಕ 30 ಲಕ್ಷ ರೂ. ಲಾಭ ಗಳಿಸುತ್ತಿದ್ದಾರೆ. ಅವರ ಸಾಧನೆಯಿಂದ ಸ್ಪೂರ್ತಿ ಪಡೆದು , ಮಧ್ಯಪ್ರದೇಶ ಸುಮಾರು 400 ರೈತರು ಈ ಬೆಳೆಯನ್ನು ಬೆಳೆಯಲು ಆರಂಭಿಸಿದ್ದಾರೆ.

  ಇದನ್ನು ಓದಿ: Electric plane: ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ವಿಮಾನವಿದು! ಇದರ ವಿಶೇಷತೆ ಏನು ಗೊತ್ತಾ?

  ಹತ್ತು ವರ್ಷಗಳಲ್ಲಿ 4,000 ಮರಗಳನ್ನು ಬೆಳೆಸುವ ಉದ್ದೇಶದಿಂದ ತಮ್ಮ ಸಹೋದರರೊಂದಿಗೆ 18 ಎಕರೆ ಆಸ್ತಿಯನ್ನು ಗುತ್ತಿಗೆಗೆ ತೆಗೆದುಕೊಂಡರು. ಅವರ ಪ್ರಕಾರ ಅದಾಯವು ವರ್ಷಗಳು ಕಳೆದಂತೆ ಐದು ಪಟ್ಟು ಹೆಚ್ಚಾಗಿದೆ.

  “ನಾನು ಒಂದು ಕೆಜಿ ಹಣ್ಣನ್ನು 40-50 ರೂ.ಗಳಿಗೆ ಮಾರಿದ್ದೇನೆ ಮತ್ತು 2021ರ ಒಳಗೆ 65 ಟನ್‍ಗಳಷ್ಟು ಹಣ್ಣು ಬೆಳೆಯುವ ನಿರೀಕ್ಷೆಯಿದೆ. ಪ್ರತೀ ಹಣ್ಣು 400 ರಿಂದ 1,400 ಗ್ರಾಂಗಳಷ್ಟು ತೂಗುತ್ತದೆ ಮತ್ತು ಅದರ ಗಾತ್ರ ಹಾಗೂ ರುಚಿಯಿಂದ ಕೊಳ್ಳುವವರ ಗಮನ ಸೆಳೆಯುತ್ತದೆ” ಎನ್ನುತ್ತಾರೆ ಅವರು.

  ವಿಕಸನಗೊಳ್ಳುತ್ತಿರುವ ಮಾರುಕಟ್ಟೆ ಬೇಡಿಕೆ

  ದಿನೇಶ್ ಮೊದಲು ಹಣ್ಣುಗಳನ್ನು ಮಾರಲು ಯತ್ನಿಸಿದಾಗ, ಅದರ ಗಾತ್ರ ಕಂಡು , ಅದು ಕಿಲೋಗಿಂತಲೂ ಹೆಚ್ಚು ತೂಗುತ್ತದೆ ಎಂದು ಗ್ರಾಹಕರು ಕೊಳ್ಳಲು ಹಿಂಜರಿಯುತ್ತಿದ್ದರು. ಹೊಸ ತೋಟಗಾರಿಕೆ ಕ್ಷೇತ್ರವನ್ನು ಪ್ರವೇಶಿಸಲು ಸಂಪೂರ್ಣವಾಗಿ ವಿಭಿನ್ನ ಮಾರುಕಟ್ಟೆಯ ಅವಶ್ಯಕತೆ ಇದೆ ಎಂಬುದನ್ನು ಅವರು ಅರಿತುಕೊಂಡರು. ಬೇರೆ ಬೇರೆ ರಾಜ್ಯಗಳ 12 ಮಾರುಕಟ್ಟೆಗಳಲ್ಲಿ ಅವರು ಈ ಪೇರಲೆಗಳನ್ನು ಮಾರಲು ಪ್ರಯತ್ನಿಸಿದರು. ಅವರಿಗೆ ಯಶಸ್ಸು ಸಿಕ್ಕಿತು. ದೆಹಲಿ ಮತ್ತು ಮುಂಬೈನ ಗ್ರಾಹಕರಿಗೆ ಈ ಹಣ್ಣು ಹೆಚ್ಚು ಸೇರುತ್ತದೆ ಎಂಬುವುದನ್ನು ಕಂಡುಕೊಂಡರು.

  ಇದನ್ನು ಓದಿ: Road Trips: ಈ ರಸ್ತೆಯಲ್ಲಿ ರೋಡ್ ಟ್ರಿಪ್ ಹೋದ್ರೆ ಮತ್ತೆ ನಿಮಗೆ ಬೇರೆ ಯಾವ ಪ್ರವಾಸವೂ ಇಷ್ಟವಾಗಲ್ಲ!

  ಮುಂಬರುವ ವರ್ಷಗಳಲ್ಲಿ ಅವರು ತಮ್ಮ ತೋಟವನ್ನು 5 ಎಕರೆಗಳಷ್ಟು ವಿಸ್ತರಿಸುವ ಯೋಜನೆ ಹೊಂದಿದ್ದಾರೆ. ಅಷ್ಟು ಮಾತ್ರವಲ್ಲ, ಅವರಿಗೆ ರೆಡ್ ಡೈಮಂಡ್ ಎಂಬ ಬೀಜ ರಹಿತ ಪೇರಲೆ ತಳಿಯನ್ನು ಬೆಳೆಯುವ ಪ್ರಯತ್ನ ಮಾಡುವ ಉದ್ದೇಶವೂ ಇದೆ.
  Published by:Harshith AS
  First published: