ಮೊನ್ನೆ ಮೊನ್ನೆ ಆತ್ಮಹತ್ಯೆಗೆ (Suicide) ಮುಂದಾಗಿದ್ದ ಯುವಕನನ್ನು ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿ ರಕ್ಷಣೆ ಮಾಡಲಾಗಿತ್ತು. ʻನೋವು ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ' ಎಂದು ವ್ಯಕ್ತಿಯೊಬ್ಬರು ಗೂಗಲ್‌ನಲ್ಲಿ ಹುಡುಕುತ್ತಿದ್ದಾರೆ ಎಂದು ಅಮೆರಿಕದ (American Law) ಕಾನೂನು ಜಾರಿ ಸಂಸ್ಥೆಯಿಂದ ಬಂದ ಎಚ್ಚರಿಕೆಯ ನಂತರ ಮುಂಬೈ ಪೊಲೀಸರು 25 ವರ್ಷದ ವ್ಯಕ್ತಿಯನ್ನು ಪತ್ತೆ ಹಚ್ಚಿ, ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಆತನನ್ನು ರಕ್ಷಿಸಿದ್ದರು.
ಆತ್ಮಹತ್ಯೆಗೆ ಮುಂದಾಗಿದ್ದ ಯುವತಿ ರಕ್ಷಣೆ
ಇಂತದ್ದೇ ಘಟನೆಯೊಂದು ಭೋಪಾಲ್‌ನಲ್ಲಿ ನಡೆದಿದ್ದು, ಆತ್ಮಹತ್ಯೆಗೆ ಯೋಚಿಸುತ್ತಿದ್ದ ಯುವತಿಯನ್ನು ಪ್ರಾಣಾಪಾಯದಿಂದ ಮಧ್ಯಪ್ರದೇಶ ರಾಜ್ಯ ಸೈಬರ್ ಸೆಲ್ ರಕ್ಷಿಸಿದೆ. ರಾಜ್ಯ ಸೈಬರ್ ಸೆಲ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯೋಗೇಶ್ ದೇಶಮುಖ್ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಕರಣದಲ್ಲಿ ತಂಡ ವಹಿಸಿದ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್‌ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ
ಪ್ರಕರಣ ಏನು?
ಯುವತಿಯೊಬ್ಬಳು ಇನ್‌ಸ್ಟಾಗ್ರಾಮ್‌ನಲ್ಲಿ ನೋವಿನ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಆತ್ಮಹತ್ಯೆ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಳು. ಇದನ್ನು ತಕ್ಷಣ ಪತ್ತೆ ಹಚ್ಚಿದ ಯುಎಸ್‌ನ ಮೆಟಾದ ಶಾಖೆ ಈ ಮಾಹಿತಿಯನ್ನು ಮಧ್ಯಪ್ರದೇಶದಲ್ಲಿನ ಇಲಾಖೆಗೆ ತಿಳಿಸಿದೆ.
ಈ ಮಾಹಿತಿಯನ್ನು ಸ್ವೀಕರಿಸಿದ ಮಧ್ಯಪ್ರದೇಶದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾದರು. ಯುಎಸ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ-ಇಂಟರ್‌ಪೋಲ್ ಹಂಚಿಕೊಂಡಿರುವ ಐಪಿ ವಿಳಾಸ ಮತ್ತು ಸ್ಥಳದಂತಹ ಪ್ರಮುಖ ಮಾಹಿತಿ ಆಧಾರದ ಮೇಲೆ ರಾಜ್ಯ ಸೈಬರ್ ಸೆಲ್ ಸ್ಥಳವನ್ನು ಪತ್ತೆ ಹಚ್ಚಿ ಅಲ್ಲಿಗೆ ತೆರಳಿದರು. ಸೈಬರ್ ಸೆಲ್ ತನಿಖಾಧಿಕಾರಿಗಳು ಸಿಂಗ್ರೌಲಿ ಜಿಲ್ಲೆಗೆ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಇದನ್ನೂ ಓದಿ: Firecracker Factory: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 9 ಸಾವು, ದೇಹಗಳು ಛಿದ್ರ ಛಿದ್ರ!
ಕೌನ್ಸೆಲಿಂಗ್ ನಡೆಸಿದ ಅಧಿಕಾರಿಗಳು
ಯುವತಿಯ ಊರು ಸಿಂಗ್ರೌಲಿ ಎಂದು ತಿಳಿಯಿತು, ನಂತರ ಆಕೆ ನರ್ಸಿಂಗ್ ವಿದ್ಯಾರ್ಥಿ ಎಂದು ತಿಳಿಯಿತು. ಕೌಟುಂಬಿಕ ಕಾರಣದಿಂದ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ನೋವಿನ ಸ್ಟೋರಿಯನ್ನು ಪೋಸ್ಟ್ ಮಾಡಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದರು. ನಂತರ ಆಕೆಯನ್ನು ಅಪರಾಧ ವಿಭಾಗದ ಕಚೇರಿಗೆ ಕರೆತಂದು ಕೌನ್ಸೆಲಿಂಗ್ ಮಾಡಲಾಗಿದೆ.
ಸಾತ್ನಾದಲ್ಲೂ ಇಂತಹದ್ದೇ ಘಟನೆ
ರಾಜ್ಯದ ಸೈಬರ್ ಸೆಲ್ ಇಂತಹ ಹಲವು ಪ್ರಕರಣಗಳನ್ನು ನಿಭಾಯಿಸಿದ್ದು, ಯಶಸ್ಸು ಕಂಡಿದೆ. ಮತ್ತೊಂದು ಸಾತ್ನಾನದ ಪ್ರಕರಣದಲ್ಲಿ ಸೈಬರ್-ಕ್ರೈಮ್ ವಿಭಾಗದ ಇಂದೋರ್ ಘಟಕವು ಸಾಮಾಜಿಕ ಮಾಧ್ಯಮ ವೇದಿಕೆಯಿಂದ ಸ್ವಯಂ ಹಾನಿಗೆ ಸಂಬಂಧಿಸಿದ ಎಚ್ಚರಿಕೆಯನ್ನು ಸ್ವೀಕರಿಸದ ನಂತರ ಪ್ರಕರಣವನ್ನು ಕೈಗೆತ್ತಿಗೊಂಡು ಯುವತಿಯನ್ನು ರಕ್ಷಣೆ ಮಾಡಿತು.
ಹುಡುಗಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಮಣಿಕಟ್ಟಿನ ಮೇಲೆ ಗಾಯ ಮಾಡಿಕೊಂಡ ಪೋಸ್ಟ್ ಅನ್ನು ಹಂಚಿಕೊಂಡಿದ್ದಳು. ಇದನ್ನು ಗಮನಿಸಿದ ಅಧಿಕಾರಿಗಳು ತಕ್ಷಣ ಸ್ಥಳ ಮತ್ತು ಇತರೆ ಮಾಹಿತಿ ಕಲೆ ಹಾಕಿ, ಯುವತಿ ರಕ್ಷಣೆ ಮಾಡಿತು.
ಐದು ದಿನಗಳಿಂದ ತನ್ನೊಂದಿಗೆ ಮಾತನಾಡದ ಗೆಳೆಯನನ್ನು ಬ್ಲ್ಯಾಕ್‌ಮೇಲೆ ಮಾಡುವುದು ಆಕೆಯ ಉದ್ದೇಶವಾಗಿತ್ತು ಎಂದು ತನಿಖೆಯ ವೇಳೆ ಬಹಿರಂಗಪಡಿಸಿದ್ದಳು. ಕೌನ್ಸೆಲಿಂಗ್ ನಂತರ, ಹುಡುಗಿಯನ್ನು ಮನೆಗೆ ಕಳುಹಿಸಲಾಯಿತು.
ಪ್ರಾಣ ಉಳಿಸಿದ ತಂತ್ರಜ್ಞಾನ
ಮತ್ತೊಂದು ಪ್ರಕರಣದಲ್ಲಿ, ನೋವು ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು ವ್ಯಕ್ತಿಯೊಬ್ಬರು ಗೂಗಲ್‌ನಲ್ಲಿ ಹುಡುಕುತ್ತಿದ್ದಾರೆ ಎಂದು ಅಮೆರಿಕದ ಕಾನೂನು ಜಾರಿ ಸಂಸ್ಥೆಯಿಂದ ಬಂದ ಎಚ್ಚರಿಕೆಯ ನಂತರ ಮುಂಬೈ ಪೊಲೀಸರು 25 ವರ್ಷದ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದರು ಮತ್ತು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಆತನನ್ನು ರಕ್ಷಿಸಿದ್ದರು ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಯುಎಸ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ-ಇಂಟರ್‌ಪೋಲ್ ಹಂಚಿಕೊಂಡಿರುವ ಐಪಿ ವಿಳಾಸ ಮತ್ತು ಸ್ಥಳದಂತಹ ಪ್ರಮುಖ ಮಾಹಿತಿ ಆಧಾರದ ಮೇಲೆ ಮುಂಬೈನ ಕುರ್ಲಾ ಪ್ರದೇಶದ ಐಟಿ ಕಂಪನಿಯೊಂದರಲ್ಲಿದ್ದ ವ್ಯಕ್ತಿಯನ್ನು ಪತ್ತೆಹಚ್ಚಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ