HOME » NEWS » National-international » MADHYA PRADESH CULTURE MINISTER USHA THAKUR ADVICES YAGNA CAN DEFEAT COVID 19 THIRD WAVE STG SCT

Usha Thakur: 4 ದಿನ ಯಜ್ಞ ಚಿಕಿತ್ಸೆ ಮಾಡಿದರೆ ಕೊರೊನಾ 3ನೇ ಅಲೆ ಭಾರತಕ್ಕೆ ಕಾಲಿಡುವುದೇ ಇಲ್ಲ!; ಮಧ್ಯಪ್ರದೇಶದ ಸಚಿವೆ

Usha Thakur: ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಕೋವಿಡ್ -19 ಮೂರನೇ ಅಲೆಯನ್ನು ತಡೆಗಟ್ಟಲು ಯಜ್ಞ ಚಿಕಿತ್ಸೆ ನಡೆಸಲು ಸಲಹೆ ನೀಡಿದ್ದಾರೆ.

news18-kannada
Updated:May 13, 2021, 3:04 PM IST
Usha Thakur: 4 ದಿನ ಯಜ್ಞ ಚಿಕಿತ್ಸೆ ಮಾಡಿದರೆ ಕೊರೊನಾ 3ನೇ ಅಲೆ ಭಾರತಕ್ಕೆ ಕಾಲಿಡುವುದೇ ಇಲ್ಲ!; ಮಧ್ಯಪ್ರದೇಶದ ಸಚಿವೆ
ಸಚಿವೆ ಉಷಾ ಠಾಕೂರ್
  • Share this:
ಭಾರತದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದು, ದೇಶಾದ್ಯಂತ ಅಭೂತಪೂರ್ವ ಸಂಖ್ಯೆಯ ಕೋವಿಡ್ -19 ಸಾವುಗಳನ್ನು ದಾಖಲಿಸುತ್ತಲೇ ಇದೆ. ಈ ನಡುವೆ ಮೂರನೇ ಅಲೆಯ ಕೊರೊನಾ ವೈರಸ್ ಅನ್ನು ತಡೆಗಟ್ಟಲು ವಿಲಕ್ಷಣ ಮತ್ತು ಅವೈಜ್ಞಾನಿಕ ಪರಿಹಾರವನ್ನು ಸೂಚಿಸಿದ್ದಾರೆ ಬಿಜೆಪಿ ನಾಯಕಿ. ಅವರ ಈ ಹೇಳಿಕೆಗೆ ತೀವ್ರ ವಿರೋಧಗಳು ಕೇಳಿಬರುತ್ತಿದೆ. ಈ ಹಿಂದೆಯೂ ಅವರು ಹಲವು ಬಾರಿ ಕೊರೊನಾ ಸೋಂಕಿನ ವಿಚಾರದಲ್ಲೇ ಟೀಕೆಗೊಳಗಾಗಿದ್ದರು.

ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಕೋವಿಡ್ -19 ಮೂರನೇ ಅಲೆಯನ್ನು ತಡೆಗಟ್ಟಲು 'ಯಜ್ಞ ಚಿಕಿತ್ಸೆ' ನಡೆಸಲು ಸಲಹೆ ನೀಡಿದ್ದಾರೆ. ಇಂದೋರ್ ನಗರದಲ್ಲಿ ಹೊಸ ಕೋವಿಡ್-ಕೇರ್ ಸೆಂಟರ್ ಉದ್ಘಾಟನೆಯ ಸಂದರ್ಭದಲ್ಲಿ ಅವರು ಈ ವಿಲಕ್ಷಣ ಸಲಹೆ ನೀಡಿದ್ದಾರೆ. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಉಷಾ ಠಾಕೂರ್, ಜನರು ಕೋವಿಡ್ -19 ಅನ್ನು ಅಂತ್ಯಗೊಳಿಸುವ ಸಲುವಾಗಿ 'ಯಜ್ಞ ಚಿಕಿತ್ಸೆ' ಮತ್ತು ತಮ್ಮ ಪರಿಸರವನ್ನು ಶುದ್ಧೀಕರಿಸಬೇಕು. ಯಜ್ಞ ಚಿಕಿತ್ಸೆ ಗಾಳಿಯನ್ನು ಶುದ್ಧೀಕರಿಸುವ ಒಂದು ಸಾಂಪ್ರದಾಯಿಕ ತಂತ್ರವಾಗಿದೆ. ಮೂರನೆಯ ಕೊರೊನಾ ಅಲೆ ನಿಶ್ಚಿತವಾಗಿದೆ. ಆದರೆ, ನಾಲ್ಕು ದಿನಗಳ ಕಾಲ ಯಜ್ಞ ಮಾಡಿದರೆ, ಈ ಬಿಕ್ಕಟ್ಟನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದೂ ಹೇಳಿದ್ದಾರೆ.

ಅಲ್ಲದೆ, “ಹಿಂದಿನ ಕಾಲದಲ್ಲಿ, ನಮ್ಮ ಪೂರ್ವಜರು ಸಾಂಕ್ರಾಮಿಕ ರೋಗಗಳನ್ನು ತೊಡೆದುಹಾಕಲು ಯಜ್ಞ ಚಿಕಿತಾವನ್ನು ಮಾಡುತ್ತಿದ್ದರು. ನಾವೆಲ್ಲರೂ ಪರಿಸರವನ್ನು ಶುದ್ಧೀಕರಿಸೋಣ, ಇದರಿಂದ ಕೋವಿಡ್‌ನ ಮೂರನೇ ಅಲೆ ಭಾರತವನ್ನು ಮುಟ್ಟುವುದೇ ಇಲ್ಲ'' ಎಂದು ಸಚಿವೆ ಉಷಾ ಠಾಕೂರ್ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಜತೆಗೆ, ತಜ್ಞರ ಪ್ರಕಾರ, ಮೂರನೇ ಅಲೆಯು ಮೊದಲು ಮಕ್ಕಳ ಮೇಲೆ ದಾಳಿ ಮಾಡುತ್ತದೆ. ಇದಕ್ಕಾಗಿ, ಮಧ್ಯಪ್ರದೇಶ ಸರ್ಕಾರ ಸಂಪೂರ್ಣ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ನಾವು ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ನಿವಾರಿಸುತ್ತೇವೆ" ಎಂದು ಅವರು ಹೇಳಿದರು.

ಕೊರೊನಾ ವಿಚಾರದಲ್ಲಿ ಈ ರೀತಿ ಟೀಕೆ ಇದೇ ಮೊದಲಲ್ಲ..!
ಆದರೆ, ಸಾರ್ವಜನಿಕವಾಗಿ ಮಾಸ್ಕ್‌ ಧರಿಸದಿರುವುದು, ಕೊರೊನಾ ವೈರಸ್‌ ಬಗ್ಗೆ ಅವೈಜ್ಞಾನಿಕ ಹಕ್ಕುಗಳನ್ನು ನೀಡುವುದು ಮತ್ತು ಸಾಂಕ್ರಾಮಿಕ ರೋಗವನ್ನು ‘ನಿಭಾಯಿಸುವ’ ಪ್ರಯತ್ನದಲ್ಲಿ ಸಾರ್ವಜನಿಕ ಗಿಮಿಕ್‌ಗಳನ್ನು ಪ್ರದರ್ಶಿಸಿದ ಕಾರಣಕ್ಕಾಗಿ ಉಷಾ ಠಾಕೂರ್ ಟೀಕೆಗೆ ಒಳಗಾಗಿರುವುದು ಇದೇ ಮೊದಲಲ್ಲ.

ಕಳೆದ ತಿಂಗಳು ಮಧ್ಯ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಇಂದೋರ್ ವಿಮಾನ ನಿಲ್ದಾಣದಲ್ಲಿ ಮಾಸ್ಕ್‌ ಧರಿಸದೆ ಕೋವಿಡ್‌ ದೂರವಿರಿಸಲು ಪ್ರತಿಮೆಯೊಂದರ ಮುಂದೆ ಪೂಜೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಠಾಕೂರ್ ವಿಮಾನ ನಿಲ್ದಾಣದಲ್ಲಿ ದೇವಿ ಅಹಿಲ್ಯ ಬಾಯಿ ಹೋಲ್ಕರ್‌ ಅವರ ಪ್ರತಿಮೆಯ ಮುಂದೆ ಚಪ್ಪಾಳೆ ತಟ್ಟಿ ಹಾಡುವಾಗ ಪೂಜೆಯನ್ನು ಮಾಡುತ್ತಿರುವುದು ಕಂಡುಬಂತು.ಹಸುವಿನ ಸಗಣಿ ಸುಟ್ಟರೆ ಮನೆಸ್ಯಾನಿಟೈಸ್‌ ಆಗುತ್ತೆ..!
ಮಾರ್ಚ್ 8 ರಂದು ಇಂದೋರ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಉಷಾ ಠಾಕೂರ್, ಕೊರೊನಾ ವೈರಸ್‌ ವಿರುದ್ಧ ರಕ್ಷಣೆಗಾಗಿ ವೈದಿಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಹಸುವಿನ ಸಗಣಿಯನ್ನು ಸುಡುವುದು ಅಂದರೆ ಹವನ (ಧಾರ್ಮಿಕ ಸುಡುವಿಕೆ) ಮಾಡಿದರೆ ಮನೆಯನ್ನು 12 ಗಂಟೆಗಳ ಕಾಲ ಸ್ಯಾನಿಟೈಸ್‌ ಮಾಡಿದಂತೆ ಆಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, "ಇದು ವಿಜ್ಞಾನ" ಎಂದೂ ಅವರು ಆ ಸಮಯದಲ್ಲಿ ಹೇಳಿದ್ದರು.

ಮಾಸ್ಕ್ ಧರಿಸಲ್ಲ..!
ಮಧ್ಯ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಸಾರ್ವಜನಿಕವಾಗಿ ಮಾಸ್ಕ್‌ ಧರಿಸಲ್ಲ ಎಂದು ಹಲವರು ಟವರ ವಿರುದ್ಧ ಟೀಕೆ ಮಾಡಿದ್ದಾರೆ. ಕಳೆದ ತಿಂಗಳು, ಅವರು ಫೇಸ್ ಮಾಸ್ಕ್ ಧರಿಸದೆ ಬಾಗ್ಲಿಯ ಕೋವಿಡ್-ಕೇರ್ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಅಲ್ಲದೆ, ಈ ಹಿಂದೆ ಪ್ರತಿದಿನ ‘ಯಜ್ಞ’ಮಾಡುವುದರಿಂದ ಮತ್ತು ವೈರಸ್‌ನಿಂದ ರಕ್ಷಿಸಿಕೊಳ್ಳಲು ಹನುಮಾನ್ ಚಾಲಿಸಾವನ್ನು ನಿಯಮಿತವಾಗಿ ಪಠಿಸುತ್ತಿದ್ದ ಕಾರಣ ಮಾಸ್ಕ್‌ಧರಿಸುವ ಅಗತ್ಯವಿಲ್ಲ ಎಂದು ಉಷಾ ಠಾಕೂರ್ ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು.

ವಿವಾದಗಳು ಇದೇ ಮೊದಲಲ್ಲ..!
ಇನ್ನು, ಕೊರೊನಾ ವೈರಸ್‌ ವಿಚಾರದಲ್ಲಿ ಮಾತ್ರವಲ್ಲ ಈ ಮೊದಲು ಬೇರೆ ವಿಚಾರಗಳ ಬಗ್ಗೆಯೂ ಇವರು ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಎಲ್ಲಾ ಭಯೋತ್ಪಾದಕರು ಮತ್ತು ಮೂಲಭೂತವಾದಿಗಳು ಒಂದಲ್ಲಾ ಒಂದು ಹಂತದಲ್ಲಿ ಮದರಸಾಗಳಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಹೇಳಿದ್ದರು. ಅಲ್ಲದೆ, ಹರಿದಿರುವ ಜೀನ್ಸ್ ಧರಿಸುವುದು ಅಪಶಕುನಕ್ಕೆ ಕಾರಣವಾಗಿದೆ ಎಂದು ಈ ವರ್ಷದ ಆರಂಭದಲ್ಲಿ ಉತ್ತರಾಖಂಡ್ ಸಿಎಂ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಮಧ್ಯ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಷಾ ಠಾಕೂರ್‌ ಬೆಂಬಲಿಸಿದ್ದರು.

ಈ ಮಧ್ಯೆ, ಮಧ್ಯ ಪ್ರದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಲೇ ಇದ್ದು, ಈ ಹಿನ್ನೆಲೆ ಭೋಪಾಲ್ ಆಡಳಿತವು ಮೇ 17 ರವರೆಗೆ ಈ ಪ್ರದೇಶದಲ್ಲಿ ಲಾಕ್‌ಡೌನ್‌ ವಿಸ್ತರಿಸಿದೆ. ವೈಜ್ಞಾನಿಕವಾಗಿ ಮ್ಯೂಕಾರ್‌ಮೈಕೋಸಿಸ್ ಎಂದು ಕರೆಯಲ್ಪಡುವ ಬ್ಲ್ಯಾಕ್‌ ಫಂಗಸ್‌ ಮಧ್ಯಪ್ರದೇಶದ ಕೋವಿಡ್ -19 ರೋಗಿಗಳಿಗೆ ಹೊಸ ತಲೆನೋವಾಗಿ ಹೊರಹೊಮ್ಮಿದೆ. ಹಲವಾರು ರಾಜ್ಯಗಳು ಇತ್ತೀಚಿನ ದಿನಗಳಲ್ಲಿ ಈ ಸ್ಥಿತಿಯನ್ನು ವರದಿ ಮಾಡಿವೆ. ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ಕನಿಷ್ಠ ಏಳು ಪ್ರಕರಣಗಳನ್ನು ವರದಿ ಮಾಡಿದ್ದು, ಸರ್ಕಾರದ ಹಮೀಡಿಯಾ ಆಸ್ಪತ್ರೆಯಲ್ಲಿ 6 ಮಂದಿ ದಾಖಲಾಗಿದ್ದರೆ, ಒಬ್ಬ ರೋಗಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಾಟಿಯಾ ಮತ್ತು ಶಿವಪುರಿ ಮಧ್ಯ ಪ್ರದೇಶದ ತಾಜಾ ಹಾಟ್‌ಸ್ಪಾಟ್‌ಗಳಾಗಿ ಹೊರಹೊಮ್ಮಿದ್ದು, ಸಿಎಂ ಶಿವರಾಜ್ ಸಿಂಗ್ ಚೌಹಾಣ್‌ ಈ ಜಿಲ್ಲೆಗಳಲ್ಲಿ ವಿಶೇಷ ಗಮನ ಹರಿಸಲು ಆದೇಶಿಸಿದ್ದಾರೆ.
Published by: Sushma Chakre
First published: May 13, 2021, 3:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories