ಒಂದೇ ಲಿಂಗದ ಇಬ್ಬರು ಗಂಡ-ಹೆಂಡತಿಯಾಗಿ 8 ವರ್ಷ ಸಂಸಾರ: ಸಾವಿನಿಂದ ಬಯಲಾಯ್ತು ಸತ್ಯ

ಒಂದೇ ಲಿಂಗದ ಇಬ್ಬರು ವ್ಯಕ್ತಿಗಳ ನಡುವೆ ವಯಸ್ಕರ ಒಮ್ಮತದ ಸಂಭೋಗವನ್ನು ಅಪರಾಧ ಎಂದು ಉಲ್ಲೇಖಿಸಿದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377ಅನ್ನು ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್‌ 2018ರಲ್ಲಿ ತೆಗೆದು ಹಾಕಿದೆ.

news18-kannada
Updated:September 12, 2020, 8:50 AM IST
ಒಂದೇ ಲಿಂಗದ ಇಬ್ಬರು ಗಂಡ-ಹೆಂಡತಿಯಾಗಿ 8 ವರ್ಷ ಸಂಸಾರ: ಸಾವಿನಿಂದ ಬಯಲಾಯ್ತು ಸತ್ಯ
ಪ್ರಾತಿನಿಧಿಕ ಚಿತ್ರ.
  • Share this:
ಭೋಪಾಲ್‌ (ಸೆಪ್ಟೆಂಬರ್‌ 10); ಮಧ್ಯಪ್ರದೇಶದ ಸೆಹೋರ್ ಎಂಬ ಸಣ್ಣ ಪಟ್ಟಣದಲ್ಲಿ ಸಲಿಂಗಿ ದಂಪತಿಗಳು ಕಳೆದ ಎಂಟು ವರ್ಷಗಳ ಕಾಲ ಯಾರಿಗೂ ಸಣ್ಣ ಅನುಮಾನವೂ ಬರದಂತೆ ಗಂಡ- ಹೆಂಡತಿಯಾಗಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಕಳೆದ ವಾರ ಇಬ್ಬರೂಆತ್ಮಹತ್ಯೆಗೆ ಶರಣಾಗಿದ್ದು, ಅವರ ಶವ ಪರೀಕ್ಷೆ ನಂತರ ಇಬ್ಬರೂ ಪುರುಷರ ಎಂಬ ವಿಚಾರ ತಿಳಿದು ಸ್ವತಃ ಪೊಲೀಸರೇ ಹೌಹಾರಿದ್ದಾರೆ.

ಇದೀಗ ಪೊಲೀಸರ ಕೈಗೆ ಮರಣೋತ್ತರ ಪರೀಕ್ಷೆ ವರದಿ ಸಿಕ್ಕಿದೆ. ಅಸಲಿಗೆ 2012 ರಲ್ಲಿ ಈ ಜೋಡಿ ವಿವಾಹವಾಗಿತ್ತು. ಆದರೆ, ಎಲ್ಲೂ ಇವರು ತಮ್ಮನ್ನು ಸಲಿಂಗಿಗಳು ಎಂದು ಬಹಿರಂಗಪಡಿಸಿಕೊಳ್ಳದೆ ಭಿನ್ನ ಲಿಂಗೀಯ ಜೋಡಿ ಎಂದೇ ಪ್ರಸ್ತುತಪಡಿಸಿಕೊಂಡಿದ್ದರು. ಹೀಗಾಗಿ ಯಾರೂ ಇವರನ್ನು ಅನುಮಾನಿಸಿರಲಿಲ್ಲ. ಮದುವೆಯಾದ ಎರಡು ವರ್ಷದ ನಂತರ ಒಂದು ಮಗುವನ್ನೂ ಸಹ ಈ ಜೋಡಿ ದತ್ತು ಪಡೆದುಕೊಂಡಿತ್ತು.

ಪ್ರಕರಣದ ಸಂಬಂಧ ಸೆಹೋರ್‌ ಪಟ್ಟಣದ ಪೊಲೀಸ್‌ ಅಧೀಕ್ಷಕ ಸಮೀರ್‌ ಯಾದವ್‌ ನೀಡುವ ಮಾಹಿತಿಯಂತೆ, "ಕಳೆದ ಆಗಸ್ಟ್‌ 11ರಂದು ದಂಪತಿಗಳು ಜಗಳವಾಡಿದ್ದಾರೆ. ಜಗಳ ತಾರಕಕ್ಕೇರಿದ್ದು ಹೆಂಡತಿ ತಾನೇ ಬೆಂಕಿ ಹಚ್ಚಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಆಕೆಯನ್ನು ರಕ್ಷಿಸಲು ಮುಂದಾದ ಗಂಡ ಸಹ ಬೆಂಕಿಗೆ ಈಡಾಗಿದ್ದಾನೆ. ಹೀಗಾಗಿ ತೀವ್ರ ಗಾಯಕ್ಕೆ ಒಳಗಾದ ಇವರನ್ನು ಆಗಸ್ಟ್‌ 12 ರಂದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನಂತರ ಭೋಪಾಲ್‌ಗೂ ಸ್ಥಳಾಂತರಿಸಲಾಗಿದೆ.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೆಂಡತಿ ಆಗಸ್ಟ್ 12 ರಂದೇ ಮೃತಪಟ್ಟಿದ್ದರೆ, ಗಂಡ ಆಗಸ್ಟ್‌ 16ರಂದು ನಿಧನರಾಗಿದ್ದರು. ಹೀಗಾಗಿ ಇಬ್ಬರ ಶವ ಪರೀಕ್ಷೆಯನ್ನೂ ನಡೆಸಲಾಗಿದ್ದು, ಶವ ಪರೀಕ್ಷೆ ನಡೆಸಿದ ವೈದ್ಯರು ತಮ್ಮ ವರದಿಯಲ್ಲಿ ಮೃತಪಟ್ಟ ಇಬ್ಬರೂ ಪುರುಷರೇ ಎಂದು ವರದಿ ನೀಡಿದ್ದಾರೆ. ಇದು ಸಾಮಾನ್ಯವಾಗಿ ಎಲ್ಲರನ್ನೂ ಆಶ್ಚರ್ಯಕ್ಕೆ ಒಳಪಡಿಸಿದೆ. ಅಲ್ಲದೆ, ಈ ಕುರಿತು ಅವರ ಕುಟುಂಬದವರ ಬಳಿ ವಿಚಾರಿಸಲಾಗಿದ್ದು ಅವರೂ ಸಹ ತಮಗೆ ಈ ಬಗ್ಗೆ ತಿಳಿದಿಲ್ಲ ಎಂದು ಮಾಹಿತಿ ನೀಡಿದ್ದಾರೆ” ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಕೇರಳದಲ್ಲಿ ಅಕ್ಟೋಬರ್‌ನಿಂದ ಆರಂಭವಾಗಲಿದೆ ಪ್ರವಾಸೋದ್ಯಮ; ಪ್ರವಾಸಿಗಳನ್ನು ಆಹ್ವಾನಿಸಲು ಭರದ ಸಿದ್ಧತೆ

ಆದರೆ, ಈ ಪ್ರಕರಣದ ಸಂಬಂಧ ಮಾಹಿತಿ ನೀಡಿರುವ ಮೃತ ವ್ಯಕ್ತಿಯ ಸಹೋದರ, "ತನ್ನ ಅಣ್ಣ ಸಲಿಂಗಿಯಾಗಿದ್ದು, ಸಲಿಂಗ ಕಾಮವನ್ನು ಬೆಂಬಲಿಸಿದ್ದ ಅಲ್ಲದೆ, ಭಯಮುಕ್ತ ಜೀವನ ನಡೆಸಲು ಹಾತೊರೆಯುತ್ತಿದ್ದ. ಇದೇ ಕಾರಣಕ್ಕೆ ಸೆಹೋರ್‌ನಲ್ಲಿ ಪ್ರತ್ಯೇಕವಾಗಿ ಜೀವಿಸಲು ಮುಂದಾಗಿದ್ದ" ಎಂದು ತಿಳಿಸಿದ್ದಾರೆ.

ಒಂದೇ ಲಿಂಗದ ಇಬ್ಬರು ವ್ಯಕ್ತಿಗಳ ನಡುವೆ ವಯಸ್ಕರ ಒಮ್ಮತದ ಸಂಭೋಗವನ್ನು ಅಪರಾಧ ಎಂದು ಉಲ್ಲೇಖಿಸಿದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377ಅನ್ನು ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್‌ 2018ರಲ್ಲಿ ತೆಗೆದು ಹಾಕಿದೆ. ಹೀಗಾಗಿ ಪ್ರಸ್ತುತ ಭಾರತದಲ್ಲಿ ಸಲಿಂಗ ವಿವಾಹವನ್ನು ತಡೆಯುವ ಅಥವಾ ಅಪರಾಧೀಕರಿಸುವ ಯಾವುದೇ ಕಾನೂನು ಇಲ್ಲ. ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿರುವ ಪ್ರಕರಣ ಪ್ರಸ್ತುತ ಕೇರಳ ಹೈಕೋರ್ಟ್ನಲ್ಲಿ ಬಾಕಿ ಇದೆ.
Published by: MAshok Kumar
First published: September 10, 2020, 9:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading