Madhya Pradesh Boy: 2 ವರ್ಷದ ತಮ್ಮನ ಶವವನ್ನು ಮಡಿಲಲ್ಲಿ ಹಿಡಿದು ರಸ್ತೆ ಪಕ್ಕ ಕುಳಿತ 8 ವರ್ಷದ ಬಾಲಕ; ಹೃದಯವಿದ್ರಾವಕ ಘಟನೆ

ಸತ್ತ ತಮ್ಮನ ತಲೆಯನ್ನು ಅವನ ಮಡಿಲಲ್ಲಿ ಇಟ್ಟುಕೊಂಡು, ಕಣ್ಣುಗಳು ಅವನ ತಂದೆಯ ಹಿಂದಿರುಗುವಿಕೆಯನ್ನು ನೋಡುತ್ತಿದ್ದವು. ದೇಹವನ್ನು ಮುದ್ದಿಸುತ್ತಾ, ನೊಣಗಳನ್ನು ಓಡಿಸುತ್ತಾ, ಕಣ್ಣೀರು ಅವನ ಕೆನ್ನೆಯ ಮೇಲೆ ಉರುಳಿತ್ತು.

ಅಸಹಾಯಕ ತಂದೆ

ಅಸಹಾಯಕ ತಂದೆ

  • Share this:
ಭೂಪಾಲ್​: ಕೆಲವೊಂದು ಫೋಟೋಗಳು ಮನವನ್ನು ಇನ್ನಿಲ್ಲದಂತೆ ಕಲಕಿಬಿಡುತ್ತವೆ. ಇದೇ ರೀತಿ ಇಡೀ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. 8 ವರ್ಷದ ಬಾಲಕ (8-year-old Gulshan) ತನ್ನ 2 ವರ್ಷದ ತಮ್ಮನ (2-year-old brother Raja) ಶವನ್ನು ಅವಚಿ ಕುಳಿತಿರುವ ಫೋಟೋ ಎಂಥವರ ಕಣ್ಣಾಲಿಗೆಗಳನ್ನೂ ತೇವವಾಗಿಸುತ್ತಿದೆ. ಬಿಳಿ ಬಟ್ಟೆಯಲ್ಲಿ ಸುತ್ತಿರುವ ತಮ್ಮನ ಶವವನ್ನು ಬಿಗಿದಪ್ಪಿ ಹಿಡಿದಿರುವ ಬಾಲಕನ ಕಣ್ಣಿನಲ್ಲಿ ವಿಷಾದ, ಅಸಮಾಯಕತೆ ಮನೆ ಮಾಡಿದೆ. ಹೃದಯವಿದ್ರಾವಕ ಘಟನೆ, ಮಾನವೀಯತೆಯನ್ನು ನಾಚಿಕೆಪಡಿಸುವ ಮತ್ತು ಆರೋಗ್ಯ ಸೌಲಭ್ಯಗಳ ಅವ್ಯವಸ್ಥೆಗೆ ಹಿಡಿದ ಕನ್ನಡಿ ಎಂಬಂಥ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.

ವಾಹನಕ್ಕಾಗಿ ತಂದೆಯ ಅಲೆದಾಟ

ಎಂಟು ವರ್ಷದ ಬಾಲಕ ತನ್ನ ಎರಡು ವರ್ಷದ ಸಹೋದರನ ಶವವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ರಸ್ತೆಬದಿಯಲ್ಲಿ ಕುಳಿತಿರುವುದನ್ನು ಫೋಟೋದಲ್ಲಿ ನೋಡಬಹುದು. ಬಡ ತಂದೆ ತನ್ನ ಮಗನ ಶವವನ್ನು ತೆಗೆದುಕೊಂಡು ಹೋಗಲು ವಾಹನವನ್ನು ಹುಡುಕುತ್ತಾ ಅಲೆದಾಡಿತ್ತಿದ್ದರೆ. 8 ವರ್ಷದ ಮಗ, ಸೋದರನ ಶವನ್ನು ಹಿಡಿದು ರಸ್ತೆ ಬದಿ ಕಾಯುತ್ತಿದ್ದಾರೆ. ಶನಿವಾರ ಮಧ್ಯಪ್ರದೇಶದ ಮೊರೆನಾ ಪಟ್ಟಣದಲ್ಲಿ ಸ್ಥಳೀಯ ಪತ್ರಕರ್ತರೊಬ್ಬರು ಸೆರೆ ಹಿಡಿದ ದೃಶ್ಯಗಳಲ್ಲಿ, 8 ವರ್ಷದ ಗುಲ್ಶನ್ ತನ್ನ 2 ವರ್ಷದ ಸಹೋದರ ರಾಜನ ಶವದೊಂದಿಗೆ ಕುಳಿತಿರುವುದು ಕಂಡುಬಂದಿದೆ. ಅವರ ತಂದೆ ಪೂಜಾರಾಮ್ ಜಾತವ್ ಅವರನ್ನು ಮನೆಗೆ ಕರೆದೊಯ್ಯಲು ವಾಹನಕ್ಕಾಗಿ ಪರದಾಡಿದ್ದಾರೆ.

ಇದನ್ನೂ ಓದಿ: Sheep Arrested: ಇನ್ನೊಬ್ಬರ ಜಮೀನಿನಲ್ಲಿ ಮೇಯುತ್ತಿದ್ದ ಕುರಿಯನ್ನು ಅರೆಸ್ಟ್ ಮಾಡಿದ ಪೊಲೀಸ್, ವಿಡಿಯೋ ವೈರಲ್

ಕೊನೆಯುಸಿರೆಳೆದ 2 ವರ್ಷದ ಸೋದರ

ಅಂಬಾಹ್‌ನ ಬದ್ಫ್ರಾ ಗ್ರಾಮದ ನಿವಾಸಿ ಪೂಜಾರಾಮ್ ಅವರು ತಮ್ಮ 2 ವರ್ಷದ ಮಗನನ್ನು ಆಂಬುಲೆನ್ಸ್‌ನಲ್ಲಿ ಭೋಪಾಲ್‌ನಿಂದ ಉತ್ತರಕ್ಕೆ 450 ಕಿಮೀ ದೂರದಲ್ಲಿರುವ ಮೊರೆನಾ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. 2 ವರ್ಷದ ರಾಜ ರಕ್ತಹೀನತೆ ಮತ್ತು ಅಸ್ಸೈಟ್ಸ್‌ನಿಂದ ಬಳಲುತ್ತಿದ್ದ. ದ್ರವದ ಶೇಖರಣೆಯಿಂದ ಉಂಟಾದ ಹೊಟ್ಟೆಯ ಊತ, ಹೆಚ್ಚಾಗಿ ಯಕೃತ್ತಿನ ಕಾಯಿಲೆಗೆ ಎಡೆಮಾಡಿತ್ತು. ರಾಜ ಚಿಕಿತ್ಸೆಯ ಸಮಯದಲ್ಲಿ ನಿಧನರಾದನು. ಆದರೆ ಅವರನ್ನು ಕರೆತಂದಿದ್ದ ಆಂಬ್ಯುಲೆನ್ಸ್ ಆಗಲೇ ಹಿಂತಿರುಗಿತ್ತು.

ಆಂಬ್ಯುಲೆನ್ಸ್​​ ಗೆ ನೀಡಲು ಹಣ ಇರಲಿಲ್ಲ

30 ಕಿ.ಮೀ ದೂರದಲ್ಲಿರುವ ತನ್ನ ಗ್ರಾಮಕ್ಕೆ ಮೃತದೇಹವನ್ನು ಕೊಂಡೊಯ್ಯಲು ವಾಹನ ಬೇಕೆಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ತಂದೆ ಪೂಜಾರಾಮ್ ಮನವಿ ಮಾಡಿದರು. ಆದರೆ ಅವರು ಆಸ್ಪತ್ರೆಯಲ್ಲಿ ವಾಹನವಿಲ್ಲ ಎಂದು ಹೇಳಿದರು. ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಆಂಬ್ಯುಲೆನ್ಸ್ ನಿರ್ವಾಹಕರೊಬ್ಬರು ₹ 1,500 ಕೇಳಿದರು. ತಾಯಿ ಇಲ್ಲದ 4 ನಾಲ್ಕು ಮಕ್ಕಳ ತಂದೆಗೆ ಈ ಮೊತ್ತವನ್ನು ಭರಿಸುವ ಶಕ್ತಿ ಇರಲಿಲ್ಲ. ಅಸಹಾಯಕ ಪೂಜಾರಾಮ್ ತನ್ನ ಮಗ ರಾಜಾ ದೇಹವನ್ನು ತೆಗೆದುಕೊಂಡು ಆಸ್ಪತ್ರೆಯಿಂದ ನಿರ್ಗಮಿಸಿದರು. ಆತನಿಗೆ ಯಾವುದೇ ವಾಹನ ಸಿಗಲಿಲ್ಲ.

ದೇಹವನ್ನು ಮುದ್ದಿಸುತ್ತಾ, ನೊಣಗಳನ್ನು ಓಡಿಸುತ್ತಾ..

ವಾಹನ ತೆಗೆದುಕೊಂಡು ಬರುವವರೆಗೆ ನೆಹರೂ ಪಾರ್ಕ್‌ನ ಎದುರು ಕಾಯುವಂತೆ ಮಗನಿಗೆ ಹೇಳಿ ತಂದೆ ವಾಹನ ಹುಡುಕಲು ಹೊರಟರು. ಆಗ ಅರ್ಧ ಘಂಟೆಯವರೆಗೆ, ಗುಲ್ಶನ್ ಅಲ್ಲಿಯೇ ಕುಳಿತುಕೊಂಡನು. ಅವನ ಸತ್ತ ತಮ್ಮನ ತಲೆಯನ್ನು ಅವನ ಮಡಿಲಲ್ಲಿ ಇಟ್ಟುಕೊಂಡು, ಕಣ್ಣುಗಳು ಅವನ ತಂದೆಯ ಹಿಂದಿರುಗುವಿಕೆಯನ್ನು ನೋಡುತ್ತಿದ್ದವು. ದೇಹವನ್ನು ಮುದ್ದಿಸುತ್ತಾ, ನೊಣಗಳನ್ನು ಓಡಿಸುತ್ತಾ, ಕಣ್ಣೀರು ಅವನ ಕೆನ್ನೆಯ ಕೆಳಗೆ ಉರುಳುತ್ತದೆ. ಜನಜಂಗುಳಿ ಸೇರುತ್ತೆ, ಆಗ ಯಾರೋ ಅಧಿಕಾರಿಗಳಿಗೆ ಈ ಬಗ್ಗೆ ಸುದ್ದಿ ಮುಟ್ಟಿಸುತ್ತಾರೆ.

ಅಂತಿಮವಾಗಿ, ಒಬ್ಬ ಪೋಲೀಸ್ ಅಧಿಕಾರಿ ಯೋಗೇಂದ್ರ ಸಿಂಗ್ ದೇಹವನ್ನು ಎತ್ತಿಕೊಂಡು, ಗುಲ್ಶನ್ನನ್ನು ಮತ್ತೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಕೊನೆಗೆ ಮನೆಗೆ ತೆರಳಲು ಪೂಜಾರಾಮ್ ಮತ್ತು ಅವರ ಪುತ್ರರಿಗೆ ಆಂಬ್ಯುಲೆನ್ಸ್ ನೀಡಲಾಯಿತು.
Published by:Kavya V
First published: