ಭೋಪಾಲ್: 9 ನೇ ತರಗತಿ ಓದುತ್ತಿದ್ದ 13 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿ ಎಂಟು ದಿನಗಳಲ್ಲಿ ಎರಡು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ 8 ಜನರನ್ನು ಮಧ್ಯಪ್ರದೇಶ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಐಪಿಸಿ ಸೆಕ್ಷನ್ 376 (ಡಿ) (ಸಾಮೂಹಿಕ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಎಂಟು ಆರೋಪಿಗಳಾದ ಆಕಾಶ್ ಸಿಂಗ್, ರಾಹುಲ್ ಕುಶ್ವಾಹ, ಪರಸ್ ಸೋನಿ, ಮನು ಕೆವಾಟ್, ಓಂಕರ್ ರೈ, ಐತೇಂದ್ರ ಸಿಂಗ್, ರಜನೀಶ್ ಚೌಧರಿ ಮತ್ತು ರೋಹಿತ್ ಯಾದವ್ ಎಂದು ಪೊಲೀಸರು ಗುರುತಿಸಿದ್ದಾರೆ. ಎಲ್ಲಾ ಆರೋಪಿಗಳು 20 ರಿಂದ 30 ವರ್ಷದೊಳಗಿನವರಾಗಿದ್ದು, ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಘಟನೆಯಿಂದಾಗಿ ಬಾಲಕಿ ಆಘಾತಕ್ಕೆ ಒಳಗಾಗಿದ್ದು, ಆಕೆಗೆ ಕೌನ್ಸಿಲಿಂಗ್ ನೀಡಲಾಗುತ್ತಿದೆ ಎಂದು ಉಮರಿಯಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶಹವಾಲ್ ತಿಳಿಸಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶಹವಾಲ್, "9 ನೇ ತರಗತಿ ವಿದ್ಯಾರ್ಥಿನಿ ಹುಡುಗಿ ತನ್ನ ತಂದೆಯೊಂದಿಗೆ ಜಬಲ್ಪುರದಲ್ಲಿ ಇದ್ದಾಳೆ. ಆದರೆ, ಆಕೆ ಕಳೆದ ಡಿಸೆಂಬರ್‌ನಲ್ಲಿ ತಾಯಿಯನ್ನು ಭೇಟಿಯಾಗಲು ಜಬಲ್ಪುರದಿಂದ ಉಮರಿಯಾಕ್ಕೆ ಬಂದಿದ್ದಳು. ಬಾಲಕಿ ಮತ್ತೆ ಜಬಲ್‌ಪುರಕ್ಕೆ ಹೋಗುವಾಗ, ಆಕಾಶ್ ಸಿಂಗ್ ಎಂಬ ವ್ಯಕ್ತಿಯನ್ನು ಜನವರಿ 1 ರಂದು ಉಮರಿಯಾದಲ್ಲಿ ಭೇಟಿಯಾಗಿದ್ದಾಳೆ. ಜನವರಿ 4 ರಂದು ಆಕಾಶ್ ಸಿಂಗ್ ಮತ್ತೆ ಅವಳನ್ನು ಸಂಪರ್ಕಿಸಿ ಹತ್ತಿರದ ಉಪಾಹಾರ ಗೃಹಕ್ಕೆ ಕರೆದೊಯ್ದಿದ್ದಾನೆ.
ಈ ವೇಳೆ ಆಕಾಶ್ ಸಿಂಗ್ ಧಾಬಾ ಮಾಲೀಕ ಪ್ಯಾರಾಸ್ ಸೋನಿ ಮತ್ತು ಓಂಕರ್ ರೈ ಎಂಬನೊಂದಿಗೆ ಸೇರಿ ಜನವರಿ 4 ರಂದು ಉಮೇರಿಯಾದ ಸೋನಿಯ ಧಾಬಾದಲ್ಲಿ ಮೊದಲ ಬಾರಿಗೆ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾರೆ. ಭಯದಿಂದ, ಅವಳು ಈ ಘಟನೆಯನ್ನು ಯಾರಿಗೂ ಹೇಳಿಕೊಳ್ಳಲಿಲ್ಲ.
ನಂತರ ಶಹವಾಲ್, ಆಕಾಶ್ ಸಿಂಗ್ ಮತ್ತು ರಾಹುಲ್ ಎಂಬ ಮೂವರು ತಮ್ಮ ಕೃತ್ಯಕ್ಕೆ ಕ್ಷಮೆ ಕೇಳುವ ಸೋಗಿನಲ್ಲಿ ಜನವರಿ 11 ರಂದು ಉಮರಿಯಾ ಮಾರುಕಟ್ಟೆಯಲ್ಲಿ ಮತ್ತೆ ಆಕೆಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಬಾಲಕಿಯನ್ನು ಕಾಡಿಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅಲ್ಲಿಂದ ಆಕೆಯನ್ನು ದಾಭಾಗೆ ಕರೆದೊಯ್ದು ರಾತ್ರಿ ಇಡೀ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ.
ನಂತರ, ಪರಾಸ್ ಸೋನಿ ಮತ್ತು ಇತರ ನಾಲ್ವರು ಅವಳ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಾಲಕಿ ತನ್ನನ್ನು ಬಿಟ್ಟುಬಿಡುಂತೆ ಆರೋಪಿಗಳಲ್ಲಿ ವಿನಂತಿಸಿದಳು. ಅತ್ಯಾಚಾರ ಎಸಗಿ ಮರುದಿನ ಬಾಲಕಿಯನ್ನು ಟ್ರಕ್‌ನಲ್ಲಿ ಆಕೆಯ ಮನೆಗೆ ಕಳುಹಿಸಲಾಗಿದೆ. ಈ ವೇಳೆ ತನಗೆ ನಡೆದ ಆಘಾತವನ್ನು ಆಕೆ ಟ್ರಕ್ ಚಾಲಕ ರೋಹಿತ್ ಯಾದವ್ ಜೊತೆ ಹಂಚಿಕೊಂಡಿದ್ದಾಳೆ.
ಇದನ್ನೂ ಓದಿ: ಕಲಬುರ್ಗಿ: ಸಹೋದರರ ಜೋಡಿ ಕೊಲೆ ಪ್ರಕರಣ, ಮಹಾಗಾಂವ ಪೊಲೀಸರಿಂದ ಆರೋಪಿ ಬಂಧನ
ಆದರೆ, ಆತ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಬದಲು ಆತನೂ ಆಕೆಯ ಮೇಲೆ ಅತ್ಯಚಾರ ಎಸಗಿ ಉಮರಿಯಾ-ಕಾಟ್ನಿ ರಸ್ತೆಯ ಟೋಲ್ ಪ್ಲಾಜಾ ಬಳಿ ಬಿಟ್ಟು ಹೋಗಿದ್ದಾನೆ. ಬಾಲಕಿ ಅಲ್ಲಿಂದ ಮತ್ತೊಂದು ಟ್ರಕ್‌ನಲ್ಲಿ ಹೇಗೋ ಜನವರಿ 13 ರಂದು ತನ್ನ ಮನೆಗೆ ತಲುಪಿದ್ದಾಳೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶಹವಾಲ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ