Sushma ChakreSushma Chakre
|
news18-kannada Updated:January 12, 2021, 3:31 PM IST
ಸಾಂದರ್ಭಿಕ ಚಿತ್ರ
ಭೂಪಾಲ್ (ಜ. 12): ನಕಲಿ ಆಲ್ಕೋಹಾಲ್ ಸೇವಿಸಿ 12 ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಇನ್ನೂ 6 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿನ ಮಾನ್ಪುರಿ ಪೃಥ್ವಿ ಹಾಗೂ ಪಹಾವಾಲಿ ಗ್ರಾಮಗಳಲ್ಲಿ ಈ ದುರ್ಘಟನೆ ನಡೆದಿದ್ದು, ವಿಷಕಾರಿ ಆಲ್ಕೋಹಾಲ್ ಕುಡಿದು 12 ಜನರು ಮೃತಪಟ್ಟಿದ್ದಾರೆ.
ಮೊರೆನಾ ಜಿಲ್ಲೆಯ ಪಹವಾಲಿ ಗ್ರಾಮದಲ್ಲಿ ಕಳ್ಳಬಟ್ಟಿ ಸೇವಿಸಿ ನಾಲ್ವರು ಮೃತಪಟ್ಟಿದ್ದು, ಮನುಪುರ್ ಜಿಲ್ಲೆಯಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 7 ಜನರ ಸ್ಥಿತಿ ಗಂಭೀರವಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಸ್ಥಳೀಯವಾಗಿ ತಯಾರಿಸಲಾದ ನಕಲಿ ಆಲ್ಕೋಹಾಲ್ ಸೇವಿಸಿದ ಕಾರಣದಿಂದ 12 ಜನರು ಸಾವನ್ನಪ್ಪಿದ್ದಾರೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಸಾಬೀತಾಗಿದೆ. ರಾತ್ರಿ ಮದ್ಯ ಸೇವಿಸಿದ ಕೂಡಲೇ ಅವರೆಲ್ಲರೂ ವಾಂತಿ ಮಾಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಅವರಲ್ಲಿ 10 ಜನರು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಮಾರ್ಗಮಧ್ಯೆ ಸಾವನ್ನಪ್ಪಿದ್ದರು. ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೊರೆನಾ ಜಿಲ್ಲೆಯಾದ್ಯಂತ ಎಲ್ಲೆಡೆ ಕಳ್ಳಬಟ್ಟಿ ತಯಾರಿಸಲಾಗುತ್ತಿದ್ದು, ವಿಷಕಾರಿಯಾಗಿದ್ದ ಅವುಗಳನ್ನು ಸೇವಿಸಿದ ಕಾರಣದಿಂದ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳೀಯವಾಗಿ ತಯಾರಾಗುತ್ತಿರುವ ಮದ್ಯ ತಯಾರಿಕೆಯನ್ನು ನಿಲ್ಲಿಸದಿದ್ದರೆ ಇನ್ನಷ್ಟು ಜನರು ಜೀವ ಕಳೆದುಕೊಳ್ಳಬೇಕಾಗುತ್ತದೆ. ಆದಷ್ಟು ಬೇಗ ಇದಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Published by:
Sushma Chakre
First published:
January 12, 2021, 3:31 PM IST