ನಿವೃತ್ತ ಸಿಜೆಐ ರಂಜನ್ ಗೊಗೋಯ್ ರಾಜ್ಯಸಭೆಗೆ ನಾಮನಿರ್ದೇಶನ ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ದೂರು ದಾಖಲು

2018 ಅಕ್ಟೋಬರ್ 3 ರಂದು ದೇಶದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೋಯ್ ಅವರು ಅಧಿಕಾರ ಸ್ವೀಕರಿಸಿದ್ದರು. 2019ರ ನವೆಂಬರ್ 17ರಂದು ನಿವೃತ್ತಿ ಹೊಂದಿದ್ದರು.

ನ್ಯಾ.ರಂಜನ್ ಗೋಗೊಯ್

ನ್ಯಾ.ರಂಜನ್ ಗೋಗೊಯ್

 • Share this:
  ನವದೆಹಲಿ(ಮಾ.18): ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಮೂರ್ತಿ ರಂಜನ್ ಗೊಗೋಯ್​​ರನ್ನು ರಾಜ್ಯಸಭೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಾಮನಿರ್ದೇಶನ ಮಾಡಿದನ್ನು ಪ್ರಶ್ನಿಸಿ ದೂರು ನೀಡಲಾಗಿದೆ. ರಾಜ್ಯಸಭೆಗೆ ರಂಜನ್ ಗೊಗೋಯ್​​ರ ನಾಮನಿರ್ದೇಶನ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಹಿರಿಯ ಲೇಖಕಿ ಮತ್ತು ಆರ್ಗ್ ಸಂಸ್ಥೆ ಸ್ಥಾಪಕರಾದ ಮಧು ಪೂರ್ಣಿಮಾ ಕಿಶ್ವಾರ್ ದೂರು ದಾಖಲಿಸಿದ್ದಾರೆ.

  ಎರಡು ದಿನಗಳ ಹಿಂದೆಯಷ್ಟೇ ಮಾ.16ನೇ ತಾರೀಕಿನಂದು ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್​​ರನ್ನು ರಾಜ್ಯಸಭೆಗೆ ನಾಮ‌ನಿರ್ದೇಶನ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದರು.

  2018 ಅಕ್ಟೋಬರ್ 3 ರಂದು ದೇಶದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೋಯ್ ಅವರು ಅಧಿಕಾರ ಸ್ವೀಕರಿಸಿದ್ದರು. 2019ರ ನವೆಂಬರ್ 17ರಂದು ನಿವೃತ್ತಿ ಹೊಂದಿದ್ದರು.

  ಇದನ್ನೂ ಓದಿ: ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್​​​ ಗೊಗೋಯ್​ ರಾಜ್ಯಸಭೆಗೆ ನಾಮನಿರ್ದೇಶನ

  ಕಳೆದ ವರ್ಷ ನವೆಂಬರ್ 9ನೇ ತಾರೀಕು ಶತಮಾನಗಳ ಹಿಂದಿನ ಪ್ರಕರಣ ಅಯೋಧ್ಯೆ ವಿವಾದವನ್ನು ಗೊಗೋಯ್​ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ಬಗೆಹರಿಸಿತ್ತು.

  ಮೂಲತಃ ಅಸ್ಸಾಂನವರಾದ ರಂಜನ್ ಗೊಗೋಯ್​​ ಅವರು ಅಸ್ಸಾಂನ ಮಾಜಿ ಸಿಎಂ ಕೇಶವ್ ಚಂದ್ರ ಗೊಗೋಯ್​​ ಅವರ ಪುತ್ರರಾಗಿದ್ದು, ಈಶಾನ್ಯ ರಾಜ್ಯದ ಮೊದಲ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

   

   
  First published: