ಆಮ್ ಆದ್ಮಿ (AAP) ಪಕ್ಷಕ್ಕೆ ಸೇರಿದ ಕೆಲವೇ ಗಂಟೆಗಳಲ್ಲಿ ದೆಹಲಿ ಕಾಂಗ್ರೆಸ್ (Congress) ಉಪಾಧ್ಯಕ್ಷ ಅಲಿ ಮೆಹದಿ ಅವರು ತಮ್ಮ ಹಳೆಯ ಪಕ್ಷಕ್ಕೆ ಮರಳಿದ್ದಾರೆ. ಈ ಬಗ್ಗೆ ಇಂದು ಮುಂಜಾನೆ ಅಲಿ ಮೆಹದಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ನಾನು ದೊಡ್ಡ ತಪ್ಪು ಮಾಡಿದೆ ಎಂದು ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕ ಗಾಂಧಿ (Priyanka Gandhi) ಹಾಗೂ ಕ್ಷೇತ್ರದ ಜನತೆಯೊಂದಿಗೆ ಕ್ಷಮೆಯಾಚಿಸಿದ್ದಾರೆ.
ಎಎಪಿಗೆ ಸೇರಿದ್ದ ಮೂವರು ಕೈ ನಾಯಕರು ವಾಪಸ್
ಇದೇ ವೇಳೆ ತಮ್ಮೊಂದಿಗೆ ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಮುಸ್ತಫಾಬಾದ್ನಿಂದ ನೂತನವಾಗಿ ಆಯ್ಕೆಯಾಗಿದ್ದ ಕೌನ್ಸಿಲರ್ಗಳಾದ ಸಬಿಲಾ ಬೇಗಂ ಮತ್ತು ಬ್ರಿಜ್ಪುರಿಯಿಂದ ನಾಜಿಯಾ ಖಾತೂನ್ ಕೂಡ ಕಾಂಗ್ರೆಸ್ಗೆ ಮರು ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಮಧ್ಯರಾತ್ರಿ ವೀಡಿಯೋ ಪೋಸ್ಟ್ ಮಾಡಿ ಕ್ಷಮೆ ಕೇಳಿದ ಮೆಹದಿ
ಶನಿವಾರ ಮಧ್ಯರಾತ್ರಿ 1:25 ಕ್ಕೆ ಟ್ವಿಟ್ಟರ್ನಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ಅಲಿ ಮೆಹದಿ ಅವರು, ನಾನು ದೊಡ್ಡ ತಪ್ಪು ಮಾಡಿದೆ. ಈ ತಪ್ಪಿಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ನನ್ನ ಕ್ಷೇತ್ರದ ಜನರಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ತಂದೆ ಕಳೆದ 40 ವರ್ಷದಿಂದ ಕಾಂಗ್ರೆಸ್ನಲ್ಲಿದ್ದಾರೆ. ರಾಹುಲ್ ಗಾಂಧಿಗೆ ಜಿಂದಾಬಾದ್ ಎಂದು ಹೇಳುವ ಮೂಲಕ ಕೈ ಮುಗಿದು ಕ್ಷಮೆಯಾಚಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ये आस्तीन का 'सांप' कितने में बिका? @alimehdi_inc pic.twitter.com/IDShk18XjN
— Manu Jain (@ManuJain_MJ) December 9, 2022
Brijpuri से councilor Naziya khatoon, Mustafabad से councilor Sabila Begum aur 300 वोट से हारा हमारा ब्लॉक अध्यक्ष अलीम अंसारी मेरे साथ कॉंग्रेस के राहुल जी प्रियंका जी के कार्यकर्ता थे ,है और रहेंगे..... Rahul Gandhi zindabad 🙏 pic.twitter.com/KiwMb5p07X
— Ali Mehdi🇮🇳 (@alimehdi_inc) December 9, 2022
मैं राहुल गांधी जी का कार्यकर्ता हू 🙏 pic.twitter.com/sA9LPuk0kn
— Ali Mehdi🇮🇳 (@alimehdi_inc) December 9, 2022
ಜೊತೆಗೆ ಇತರ ಕೌನ್ಸಿಲರ್ಗಳಿಗೆ ಇದೇ ರೀತಿಯ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವಂತೆ ಮನವಿ ಮಾಡಿದ್ದಾರೆ.
ಈ ಕ್ಷೇತ್ರದ ಜನತೆ ನನಗೆ ಮತ್ತು ನನ್ನ ತಂದೆಗೆ ಮತ ಹಾಕಿದ್ದಾರೆ ಹೊರತು ಬೇರೆ ಯಾವುದೇ ಪಕ್ಷಕ್ಕೆ ಮತ ಹಾಕಿಲ್ಲ. ಅವರು ನಮ್ಮನ್ನೇ ನಂಬಿದ್ದಾರೆ. ಅದಕ್ಕಾಗಿ ನಾನು ಆಪ್ ಅನ್ನು ಸಂಪರ್ಕಿಸಿದೆ. ನನ್ನ ಏಕೈಕ ಕಾಳಜಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ನನ್ನ ತಂದೆ ಸಾಕಷ್ಟು ಕಾಲ ಈ ಕ್ಷೇತ್ರದ ಶಾಸಕರಾಗಿದ್ದರು. ಆದರೆ ಬಿಜೆಪಿ ವಿಧಾನಸಭೆಯಲ್ಲಿ ಗೆದ್ದಾಗ ಎಲ್ಲಾ ಅಭಿವೃದ್ಧಿ ಕೆಲಸಗಳು ನಿಂತುಹೋದವು. ಈ ಕ್ಷೇತ್ರದಲ್ಲಿ ಕೆಲಸಗಳು ವೇಗವಾಗಿ ನಡೆಯಬೇಕಾಗಿತ್ತು. ಈ ಉದ್ದೇಶದಿಂದ ನಾನು ಎಎಪಿಗೆ ಸೇರುವ ಮೂರ್ಖ ಹೆಜ್ಜೆ ಇಟ್ಟಿದೆ. ಎಎಪಿ ಸೇರಿದ ನಂತರ ಅವರು ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಬಹುದು ಅಂದುಕೊಂಡಿದ್ದೆ. ಆದರೆ ಅಲ್ಪಸಂಖ್ಯಾತರ ವಿಚಾರದಲ್ಲಿ ಅವರ ನಿಲುವು ಬದಲಾಗಿಲ್ಲ. ನಮ್ಮ ಹೋರಾಟ ಕೇವಲ ಅಭಿವೃದ್ಧಿಗಾಗಿ ಅಲ್ಲ, ಉಳಿವಿಗಾಗಿ ಎಂದು ನನ್ನ ಕ್ಷೇತ್ರದ ಜನತೆ ಹೇಳಿದ್ದಾರೆ. ಹಾಗಾಗಿ ನಾನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದಿದ್ದಾರೆ.
ವೀಡಿಯೋಗೆ ಕಾಂಗ್ರೆಸ್ನ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್ಘರ್ಹಿ ಪ್ರತಿಕ್ರಿಯೆ
ಇನ್ನೂ ಈ ವೀಡಿಯೋಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ನ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್ಘರ್ಹಿ ಅವರು, ರಾತ್ರಿ ಎರಡು ಗಂಟೆಯಾಗಿದೆ. ಈಗ ಮುಸ್ತಫಾಬಾದ್ನಿಂದ ಕಾಂಗ್ರೆಸ್ನಲ್ಲಿ ಗೆದ್ದಿದ್ದ ಅಲಿ ಮಹದಿ ಪಕ್ಷಕ್ಕೆ ಮರಳಿದ್ದಾರೆ. ಅವರನ್ನು ಎಎಪಿ ಪಕ್ಷಕ್ಕೆ ಸೇರಿಕೊಳ್ಳುವಂತೆ ವಂಚಿಸಲಾಗಿದೆ. ಆದರೆ ಕೆಲವು ಗಂಟೆಗಳಲ್ಲಿಯೇ ತಮ್ಮ ತಪ್ಪನ್ನು ಸರಿಪಡಿಸಕೊಂಡು ಅಲಿ ಮೆಹದಿ ಈಗ ಮತ್ತೆ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ ಎಂದಿದ್ದಾರೆ.
ये आस्तीन का 'सांप' कितने में बिका? @alimehdi_inc pic.twitter.com/IDShk18XjN
— Manu Jain (@ManuJain_MJ) December 9, 2022
ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಅಲಿ ಮೆಹದಿ, ಮುಸ್ತಫಾಬಾದ್ ಕ್ಷೇತ್ರದಲ್ಲಿ ಗೆದ್ದ ಸಬಿಲಾ ಬೇಗಂ, ಬ್ರಿಜ್ಪುರಿ ಕ್ಷೇತ್ರದಲ್ಲಿ ಗೆದ್ದ ನಾಜಿಯಾ ಖಾತೂನ್ ಮತ್ತು 300 ಮತಗಳಿಂದ ಸೋತಿದ್ದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಲೀಮ್ ಅನ್ಸಾರಿ ಶುಕ್ರವಾರ ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಪಕ್ಷ ತೊರೆದಿದ್ದಕ್ಕಾಗಿ ಈ ಮೂವರು ನಾಯಕರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಭಾರತೀಯ ಯುವ ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ಉಸ್ತುವಾರಿ ಮನು ಜೈನ್, ಮೆಹದಿ ಅವರನ್ನು "ಹಾವು" ಎಂದು ಟೀಕಿಸಿದ್ದರು ಮತ್ತು ಪಕ್ಷ ತೊರೆಯಲು ಎಷ್ಟು ಹಣ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ