60 ವರ್ಷ ಹಳೆಯ ವಿಸ್ಕಿ 1 ಮಿಲಿಯನ್ ಪೌಂಡ್​​​ಗೆ ಹರಾಜು..!

ಇಂಗ್ಲೆಂಡ್ ನಲ್ಲಿ ನಡೆದ ಹರಾಜುವೊಂದರಲ್ಲಿ ಒಂದು ಬಾಟಲ್ ವಿಸ್ಕಿ ಬರೋಬ್ಬರಿ 1 ಮಿಲಿಯನ್ ಪೌಂಡ್​ಗೆ ಹರಾಜಾಗಿದೆ.

ಮಕಲ್ಲನ್ 1926 ಫೈನ್​

ಮಕಲ್ಲನ್ 1926 ಫೈನ್​

 • Share this:
  ಒಂದು ಬಾಟಲಿ ಮದ್ಯದ ಬೆಲೆ ಅಬ್ಬಬ್ಬಾ ಅಂದರೆ ಎಷ್ಟಿರಬಹುದು? ವಿದೇಶಿ ಮದ್ಯ ಆಗಿದ್ದರೆ ಅದರ ಬೆಲೆ ಜಾಸ್ತಿಯೇ ಇರುತ್ತದೆ. ಆದರೆ ಇಂಗ್ಲೆಂಡ್ ನಲ್ಲಿ ನಡೆದ ಹರಾಜುವೊಂದರಲ್ಲಿ ಒಂದು ಬಾಟಲ್ ವಿಸ್ಕಿ ಬರೋಬ್ಬರಿ 1 ಮಿಲಿಯನ್ ಪೌಂಡ್​ಗೆ ಹರಾಜಾಗಿದೆ. ಇನ್ನು ಈ ಹರಾಜು ಪ್ರಕ್ರಿಯೆಯಲ್ಲಿ ಖಾಸಗಿ ಸಂಗ್ರಹದಲ್ಲಿದ್ದ ಸುಮಾರು 3,900 ವಿಸ್ಕಿ ಬಾಟಲಿಗಳು ಬರೋಬ್ಬರಿ 6.7 ಮಿಲಿಯನ್ ಪೌಂಡ್ ಗೆ ಹರಾಜಾಗಿವೆ.

  ‘ಮಕಲ್ಲನ್ 1926 ಫೈನ್’ ಸುಮಾರು ಒಂದು ಶತಮಾನದ ಹಿಂದೆ ಬಟ್ಟಿ ಇಳಿಸಿದ ದ್ರವವನ್ನು ಹೊಂದಿರುವ ಮತ್ತು ಸುಮಾರು 60 ವರ್ಷಗಳಷ್ಟು ಹಳೆಯದಾದ ಅಪರೂಪದ ವಿಸ್ಕಿಯಾಗಿದೆ. ‘ಫೈನ್ ಅಂಡ್ ರೇರ್’ ಲೇಬಲ್ ಹೊಂದಿರುವ ವಿಶ್ವದ 14 ವಿಸ್ಕಿಗಳಲ್ಲಿ ಇದು ಕೂಡ ಒಂದಾಗಿದೆ. ಹರಾಜಿನಲ್ಲಿ ಒಟ್ಟು 6.7 ಮಿಲಿಯನ್ ಫೌಂಡ್ ಮೊತ್ತಕ್ಕೆ ಮಾರಾಟವಾದ 3,900 ಖಾಸಗಿ ಸಂಗ್ರಹದ ಮದ್ಯಗಳ ಪೈಕಿ ‘ಮಕಲ್ಲನ್ 1926 ಫೈನ್’ ವಿಸ್ಕಿಯೊಂದೇ 6 ಅಂಕಿಗಳ ಮೊತ್ತವನ್ನು ಗಿಟ್ಟಿಸಿಕೊಂಡು ದಾಖಲೆ ನಿರ್ಮಿಸಿದೆ.

  Whiskey Flavour: ವಿಸ್ಕಿ ಫ್ಲೇವರ್ ಯಾವುದರ ಮೇಲೆ ಅವಲಂಬನೆ ಆಗಿರುತ್ತದೆ ಗೊತ್ತಾ?

  ಹರಾಜಿನಲ್ಲಿ ಕಂಡ ಇತರ ಗಮನಾರ್ಹ ವಿಸ್ಕಿಗಳಲ್ಲಿ ‘ಬಾಲ್ವೆನಿ 1961 ವಿಂಟೇಜ್ ಕ್ಯಾಸ್ಕ್’ ಮತ್ತು 64 ವರ್ಷದಷ್ಟು ಹಳೆಯದಾದ ‘ಡಲ್ಲಾಸ್ ಧು 1921 ಪ್ರೈವೇಟ್ ಕ್ಯಾಸ್ಕ್’ ಸೇರಿವೆ. ಇದು ಸ್ಕಾಟ್ಲೆಂಡ್‌ನ ‘ಲೋಸ್ಟ್’ ಡಿಸ್ಟಿಲರಿಗಳಲ್ಲಿ ಒಂದಾದ ಐತಿಹಾಸಿಕ ಮಾಲ್ಟ್ ಆಗಿದೆ. ಆನ್‌ಲೈನ್ ಹರಾಜಿನ ಅಂತಿಮ ದಿನದಂದು 54 ವಿವಿಧ ದೇಶಗಳ ಒಟ್ಟು 1,557 ಬಿಡ್ಡರ್ ಗಳು ಭಾಗವಹಿಸಿದ್ದರು. ಅನೇಕ ವಿಸ್ಕಿ ಬಾಟಲಿಗಳು ನಂಬಲಾಗದ ಮೊತ್ತಕ್ಕೆ ಹರಾಜಾಗಿ ಗಮನ ಸೆಳೆದವು.

  ಇದೇ ಮೊದಲ ಬಾರಿಗೆ ಸೆಕೆಂಡರಿ ಮಾರ್ಕೆಟ್ ನ ಹರಾಜಿನಲ್ಲಿ ಅತ್ಯಧಿಕ ಮೌಲ್ಯಕ್ಕೆ ಮಾರಾಟವಾದ ಖಾಸಗಿ ಸಂಗ್ರಹದಲ್ಲಿದ್ದ ವಿಸ್ಕಿ ಎಂಬ ಹೆಗ್ಗಳಿಕೆಯನ್ನು ‘ಮಕಲ್ಲನ್ 1926 ಫೈನ್’ ಹೊಂದಿದೆ. ‘ವಿವಿಧ ರೀತಿಯ ವಿಸ್ಕಿಗಳ ಪರಿಪೂರ್ಣ ಸಂಗ್ರಹವನ್ನು ಹೊಂದಿರುವ ವ್ಯಕ್ತಿಗೆ ಈ ಹರಾಜನ್ನು ಸಮರ್ಪಿಸಲಾಗಿದೆ’ ಎಂದು ವಿಸ್ಕಿ ಹರಾಜು ಕಾರ್ಯಕ್ರಮದ ಮುಖ್ಯಸ್ಥ ಇಯಾನ್ ಮೆಕ್‌ಕ್ಲೂನ್ ಹೇಳಿದ್ದಾರೆ. ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾದ ವಿಸ್ಕಿ ಇತಿಹಾಸದ ಪುಟ ಸೇರುತ್ತದೆ. ಇದು ವಿಸ್ಕಿ ಹರಾಜುದಾರರಿಗೆ ಮಾತ್ರವಲ್ಲದೇ ವಿಸ್ಕಿ ಉದ್ಯಮಕ್ಕೂ ಸಹ ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ.
  Published by:Harshith AS
  First published: