Eco-Friendly Refrigerator: ಹಣ್ಣು, ತರಕಾರಿಗಳನ್ನು ತಾಜಾವಾಗಿರಿಸುತ್ತೆ ಈ ಪರಿಸರ ಸ್ನೇಹಿ ಫ್ರಿಡ್ಜ್!

ಆಗೆಲ್ಲಾ ಈಗಿನ ತರಹ ವಿದ್ಯುತ್ ಬಳಕೆಯ ಫ್ರಿಡ್ಜ್ ಗಳಿರಲಿಲ್ಲ. ಈ ಮಣ್ಣಿನ ಮಡಕೆಗಳೆ ಫ್ರಿಡ್ಜ್ ನ ಕೆಲಸವನ್ನು ಮಾಡುತ್ತಿದ್ದವು. ಆ ಫ್ರಿಡ್ಜ್ ನಷ್ಟೆ ನೀರನ್ನು ತಂಪಾಗಿರಿಸುತ್ತಿತ್ತು ಈ ಮಡಕೆಗಳು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಒಂದು ದೊಡ್ಡ ಅನುಕೂಲತೆ ಎಂದರೆ ಈ ಮಡಕೆಗಳಿಗೆ ಯಾವುದೇ ರೀತಿಯ ವಿದ್ಯುತ್ ಬೇಕಾಗಿಲ್ಲ. ಇಲ್ಲಿ ಒಬ್ಬ ಕುಂಬಾರರು ಅಂತಹದೇ ಒಂದು ಜೇಡಿಮಣ್ಣಿನಿಂದ ಮಡಕೆಯನ್ನು ತಯಾರಿಸಿದ್ದಾರೆ ನೋಡಿ.

ಪರಿಸರ ಸ್ನೇಹಿ ಫ್ರಿಡ್ಜ್

ಪರಿಸರ ಸ್ನೇಹಿ ಫ್ರಿಡ್ಜ್

  • Share this:
ನಾವು ಚಿಕ್ಕವರಾಗಿದ್ದಾಗ ಅಜ್ಜ-ಅಜ್ಜಿಯ ಮನೆಗೆ ಬೇಸಿಗೆ ರಜೆಯಲ್ಲಿ (Holiday) ಹೋದಾಗ ಅಲ್ಲಿ ದಿನವಿಡೀ ಬಿಸಿಲಿನಲ್ಲಿ ಆಟವಾಡಿ ದಣಿದು ಬಾಯಾರಿ ಬಂದು ತಂಪು ನೀರು (Cold Water) ಕುಡಿಯಬೇಕು ಎಂದೆನಿಸಿದರೆ ಅಲ್ಲೇ ಮನೆಯ ಒಂದು ಮೂಲೆಯಲ್ಲಿರುವ ಜೇಡಿಮಣ್ಣು ಅಥವಾ ಮಣ್ಣಿನ ಮಡಕೆಗಳ (Clay Pots) ಕಡೆಗೆ ಓಡಿ ಹೋಗಿ ಅದರೊಳಗಿದ್ದ ತಂಪಾದ ನೀರನ್ನು ಕುಡಿಯುತ್ತಿದ್ದೆವು. ಆಗೆಲ್ಲಾ ಈಗಿನ ತರಹ ವಿದ್ಯುತ್ ಬಳಕೆಯ ಫ್ರಿಡ್ಜ್ ಗಳಿರಲಿಲ್ಲ. ಈ ಮಣ್ಣಿನ ಮಡಕೆಗಳೆ ಫ್ರಿಡ್ಜ್ ನ (Fridge) ಕೆಲಸವನ್ನು ಮಾಡುತ್ತಿದ್ದವು. ಆ ಫ್ರಿಡ್ಜ್ ನಷ್ಟೆ ನೀರನ್ನು ತಂಪಾಗಿರಿಸುತ್ತಿತ್ತು ಈ ಮಡಕೆಗಳು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಒಂದು ದೊಡ್ಡ ಅನುಕೂಲತೆ ಎಂದರೆ ಈ ಮಡಕೆಗಳಿಗೆ ಯಾವುದೇ ರೀತಿಯ ವಿದ್ಯುತ್ ಬೇಕಾಗಿಲ್ಲ. ಇಲ್ಲಿ ಒಬ್ಬ ಕುಂಬಾರರು ಅಂತಹದೇ ಒಂದು ಜೇಡಿಮಣ್ಣಿನಿಂದ ಮಡಕೆಯನ್ನು ತಯಾರಿಸಿದ್ದಾರೆ ನೋಡಿ.

ಹೌದು.. ತಮಿಳುನಾಡಿನ ಕೊಯಂಬತ್ತೂರಿನ ಕರುಮತ್ತಂಪಟ್ಟಿಯ ಕುಂಬಾರರಾದ ಎಂ.ಶಿವಸಾಮಿ ಅವರು ಇಂತಹದೇ ಒಂದು ಮಡಕೆಯನ್ನು ತಯಾರಿಸಿದ್ದಾರೆ ನೋಡಿ, ಇದರಲ್ಲಿ ನೀವು ತರಕಾರಿಗಳನ್ನು ಮತ್ತು ಮೊಸರನ್ನು ಸಹ ಇರಿಸಬಹುದಂತೆ, ಅದು ಸಹ ತುಂಬಾನೇ ತಾಜವಾಗಿರುತ್ತವೆ ಅಂತ ಅವರೇ ಹೇಳುತ್ತಾರೆ.

ವಿದ್ಯುತ್ ಬಳಕೆಯಿಲ್ಲದೆ ತರಕಾರಿಗಳನ್ನು ತಾಜಾವಾಗಿರಿಸುತ್ತದೆ
ತನ್ನ ಜೀವನದುದ್ದಕ್ಕೂ ಜೇಡಿಮಣ್ಣಿನ ವಸ್ತುಗಳನ್ನು ನಿರ್ಮಿಸಿದ ನಂತರ, 70 ವರ್ಷದ ಅವರು ತಮ್ಮ ಜ್ಞಾನ ಮತ್ತು ಪರಿಣತಿಯನ್ನು ಬಳಸಿಕೊಂಡು ಜನರಿಗೆ ಸುಸ್ಥಿರವಾಗಿ ಬದುಕಲು ಸಹಾಯ ಮಾಡುವ ಸಾಧನವೊಂದನ್ನು ನಿರ್ಮಿಸಲು ನಿರ್ಧರಿಸಿದರು. ಹೀಗೆ ಆಲೋಚಿಸುತ್ತಿರುವಾಗ 2020 ರಲ್ಲಿ, ಅವರು ಮಣ್ಣಿನಿಂದ ಪರಿಸರ ಸ್ನೇಹಿ ರೆಫ್ರಿಜರೇಟರ್ ಅನ್ನು ನಿರ್ಮಿಸಿದರು, ಅದು ವಿದ್ಯುತ್ ಬಳಕೆಯಿಲ್ಲದೆ ತರಕಾರಿಗಳನ್ನು ನಾಲ್ಕು ದಿನಗಳವರೆಗೆ ತಾಜಾವಾಗಿರಿಸುತ್ತದೆ ಎಂದು ಅವರು ಹೇಳುತ್ತಾರೆ.

ಅವರು ದೊಡ್ಡ ಸಿಲಿಂಡರಾಕಾರದ ಮಣ್ಣಿನ ಮಡಕೆಯನ್ನು ಬಳಸಿದರು ಮತ್ತು ಅದಕ್ಕೆ ಎರಡು ವೈಶಿಷ್ಟ್ಯಗಳನ್ನು ಸೇರಿಸಿದರು. ಅದರ ಮುಂಭಾಗದಲ್ಲಿ ನಲ್ಲಿ ಮತ್ತು ಹಿಂಭಾಗದಲ್ಲಿ ನೀರನ್ನು ಹಾಕಲು ಒಂದು ಔಟ್ ಲೆಟ್ ಅನ್ನು ಮಾಡಿದರು. ಒಂದು ಸಣ್ಣ ಮಡಕೆಯು ಆ ದೊಡ್ಡ ಮಡಕೆಯ ಒಳಗೆ ಅಚ್ಚುಕಟ್ಟಾಗಿ ಕುಳಿತು ಕೊಳ್ಳುತ್ತದೆ, ಅದರ ಮೇಲೆ ಮುಚ್ಚಳ ಹೋಗುತ್ತದೆ, ಅಲ್ಲಿ ನೀವು ನಿಮ್ಮ ತರಕಾರಿಗಳನ್ನು ಮತ್ತು ಮೊಸರನ್ನು ಸಹ ಇಡಬಹುದು.

ಎರಡು ರೂಪಾಂತರಗಳನ್ನು ಒಳಗೊಂಡಿರುವ ಫ್ರಿಡ್ಜ್
"ನೀವು ದೊಡ್ಡ ಮಡಕೆಗೆ ಸುಮಾರು 15 ಲೀಟರ್ ನೀರನ್ನು ಸುರಿಯುತ್ತೀರಿ ಮತ್ತು ಅದು ತಂಪಾಗಿರುವುದರಿಂದ, ಅದು ನಿಮ್ಮ ತರಕಾರಿಗಳು ಮತ್ತು ಹಣ್ಣುಗಳನ್ನು ತಂಪಾಗಿರಿಸುತ್ತದೆ. ಸರಿಯಾಗಿ ಸಂಗ್ರಹಿಸಿದರೆ, ಅವು ನಾಲ್ಕು ದಿನಗಳವರೆಗೆ ತಾಜಾವಾಗಿರುತ್ತವೆ. ಮೊಸರು, ಹಾಲು ಮತ್ತು ಮೊಟ್ಟೆಗಳನ್ನು ಸಂರಕ್ಷಿಸಲು ನೀವು ಇದನ್ನು ಬಳಸಬಹುದು" ಎಂದು ಶಿವಸ್ವಾಮಿ ಹೇಳುತ್ತಾರೆ.

ಇದನ್ನೂ ಓದಿ: Belagavi Bags: ಯೂರೋಪ್​ ಮಹಿಳೆಯರ ಬೆನ್ನ ಮೇಲೆ ನಮ್ಮ ಬೆಳಗಾವಿ!

ಈ ಪರಿಸರ ಸ್ನೇಹಿ ರೆಫ್ರಿಜರೇಟರ್ ನಲ್ಲಿ ಎರಡು ರೂಪಾಂತರಗಳಿವೆ. ಒಂದು 1.5 ಅಡಿ ಉದ್ದ ಮತ್ತು ಇನ್ನೊಂದು 2 ಅಡಿ ಉದ್ದದಾಗಿದೆ. ಅವುಗಳ ಬೆಲೆ ಕ್ರಮವಾಗಿ 1,700 ಮತ್ತು 1,800 ರೂಪಾಯಿಗಳಾಗಿದ್ದು, ಇದುವರೆಗೆ 100ಕ್ಕೂ ಹೆಚ್ಚು ಫ್ರಿಡ್ಜ್ ಗಳನ್ನು ಮಾರಾಟ ಮಾಡಿರುವುದಾಗಿ ಅವರು ಹೇಳುತ್ತಾರೆ.

ಜನರಿಗೆ ಅನುಕೂಲವಾಗಲು ಈ ಪರಿಸರ ಸ್ನೇಹಿ ಫ್ರಿಡ್ಜ್
ಕುಂಬಾರರ ಕುಟುಂಬದಿಂದ ಬಂದ ಶಿವಸ್ವಾಮಿ ಅವರ ಬಳಿ ಜೇಡಿಮಣ್ಣಿನಿಂದ ಮಾಡಿದ ಉತ್ಪನ್ನಗಳು ಹೇರಳವಾಗಿವೆ. ಅವರ ಮನೆ ಅಂಗಡಿ ಮತ್ತು ಗೋದಾಮಿಗೆ ಒಮ್ಮೆ ಭೇಟಿ ನೀಡಿದರೆ ಸಾಕು, ಅಲ್ಲಿ ಅನೇಕ ರೀತಿಯ ಉತ್ಪನ್ನಗಳಿವೆ. ಅಲ್ಲಿ ಅವರು 150ಕ್ಕೂ ಹೆಚ್ಚು ರೀತಿಯ ಮಣ್ಣಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಈ ಅಂಗಡಿಯನ್ನು ತಿರುನೀಲಕಂದರ್ ಸ್ಟೋರ್ಸ್ ಎಂದು ಕರೆಯಲಾಗುತ್ತದೆ ಮತ್ತು ಕಳೆದ 50 ವರ್ಷಗಳಿಂದ ಇದನ್ನು ನಡೆಸುತ್ತಿದ್ದಾರೆ. "ಈ ಹಿಂದೆ ನನ್ನ ತಂದೆಯ ಕಾಲದಲ್ಲಿ, ನಾವು ಮಣ್ಣಿನ ದೀಪಗಳು ಮತ್ತು ಮಡಕೆಗಳನ್ನು ಮಾತ್ರ ತಯಾರಿಸುತ್ತಿದ್ದೆವು. ಆದರೆ ನಾವು ಜನರ ಅಗತ್ಯಗಳಿಗೆ ಅನುಗುಣವಾಗಿ ಈ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಬೇಕಾಯಿತು" ಎಂದು ಶಿವಸ್ವಾಮಿ ಹೇಳುತ್ತಾರೆ.

ಶಿವಸ್ವಾಮಿ ಅವರು ಮಣ್ಣಿನ ಕಡಾಯಿಗಳು, ಪಾತ್ರೆಗಳು, ಲೋಟಗಳು, ಬಾಟಲಿಗಳು, ಜಗ್ ಗಳು ಮತ್ತು ಅಡುಗೆ ಮಡಕೆಗಳನ್ನು ಸಹ ತಯಾರಿಸಿ ಮಾರಾಟ ಮಾಡುತ್ತಾರೆ.

ಈ ಫ್ರಿಡ್ಜ್ ಬಗ್ಗೆ ಶಿವಸ್ವಾಮಿಯವರು ಹೇಳಿದ್ದು ಹೀಗೆ
ಫ್ರಿಡ್ಜ್ ತಯಾರಿಸುವ ಪ್ರಕ್ರಿಯೆಯನ್ನು ವಿವರಿಸುತ್ತಾ, ಅವರು ಮೂರು ಸ್ಥಳಗಳಿಂದ ಜೇಡಿಮಣ್ಣನ್ನು ತೆಗೆದುಕೊಂಡು ಬಂದು ಅದನ್ನು ಅವರು ಸರಿಯಾದ ಸ್ಥಿರತೆಗೆ ಬೆರೆಸಿ ತಯಾರಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು. ಆ ಮಣ್ಣನ್ನು ಚೆನ್ನಾಗಿ ಕಲಸಿಕೊಂಡ ನಂತರ ಫ್ರಿಡ್ಜ್ ನ ಪ್ರತಿಯೊಂದು ತುಂಡನ್ನು ತಯಾರಿಸುತ್ತಾರೆ, ನಂತರ ಅದನ್ನು ನೆರಳಿನಲ್ಲಿ ಒಣಗಿಸಲಾಗುತ್ತದೆ. ಹತ್ತು ರೆಫ್ರಿಜರೇಟರ್ ಗಳನ್ನು ತಯಾರಿಸಲು ಇವರಿಗೆ ಒಂದು ತಿಂಗಳು ಸಮಯ ಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:  Startup: ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾ ಸ್ವಂತ ಉದ್ದಿಮೆ ಶುರು ಮಾಡಿ ಯಶಸ್ಸಿನ ಪಥ ಹಿಡಿದ ದಂಪತಿ

ಶಿವಸ್ವಾಮಿ ಈ ಫ್ರಿಡ್ಜ್ ಅನ್ನು ನಿರ್ಮಿಸಲು ಮತ್ತೊಂದು ಕಾರಣವೆಂದರೆ, ಬಾಲ್ಯದಲ್ಲಿ ಅವರ ಮನೆಯಲ್ಲಿ ಇಂತಹದ್ದೇನು ಇರಲಿಲ್ಲ. "ನಾವು ಹೊಲಗಳಿಂದ ತಾಜಾ ಆಹಾರವನ್ನು ಪಡೆಯುತ್ತಿದ್ದೆವು" ಎಂದು ಅವರು ಹೇಳುತ್ತಾರೆ. "ಇದು ನಮ್ಮ ಆರೋಗ್ಯದ ಗುಟ್ಟು ಕೂಡ ಆಗಿತ್ತು. ಈ ಫ್ರಿಡ್ಜ್ ನೊಂದಿಗೆ, ಕನಿಷ್ಠ ಕೆಲವು ಜನರು ತಮ್ಮ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು ಮತ್ತು ನೀವು ತರಕಾರಿಗಳನ್ನು ನಾಲ್ಕು ದಿನಗಳಿಗಿಂತ ಹೆಚ್ಚು ಕಾಲ ಇಡಲು ಸಾಧ್ಯವಿಲ್ಲದ ಕಾರಣ, ನೀವು ಅವುಗಳನ್ನು ಬಳಸುವವರೆಗೆ ಅವು ತಾಜಾವಾಗಿರುತ್ತವೆ" ಎಂದು ಅವರು ಹೇಳುತ್ತಾರೆ.

ಫ್ರಿಡ್ಜ್ ಖರೀದಿಸಿದ ಗ್ರಾಹಕರು ಹೇಳಿದ್ದು ಹೀಗೆ
"ನಾವು ಹೆಚ್ಚು ಸುಸ್ಥಿರ ಜೀವನಶೈಲಿಯತ್ತ ಸಾಗುತ್ತಿದ್ದೇವೆ ಮತ್ತು ಕೊಯಂಬತ್ತೂರಿನ ಹೊರವಲಯದಲ್ಲಿ ಫಾರ್ಮ್‌ಹೌಸ್ ಹೊಂದಿದ್ದೇವೆ, ಅಲ್ಲಿ ನಾವು ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಹೋಗುತ್ತೇವೆ. ನಾವು ಆ ಮನೆಗೆ ಪರಿಸರ ಸ್ನೇಹಿ ಫ್ರಿಡ್ಜ್ ಅನ್ನು ಖರೀದಿಸಿದ್ದೇವೆ ಮತ್ತು ಇದು ತುಂಬಾನೇ ದೊಡ್ಡ ಬದಲಾವಣೆ ಸಹ ತಂದಿದೆ. ಆನಂತರ ನಾವು ಮತ್ತೊಂದು ಫ್ರಿಡ್ಜ್ ಖರೀದಿಸಿಲ್ಲ. ಮಣ್ಣಿನ ಫ್ರಿಡ್ಜ್ ನಲ್ಲಿ ಸಂಗ್ರಹಿಸಿದ ನಂತರ ಹೊರ ಹೊಮ್ಮುವ ತರಕಾರಿಗಳ ವಾಸನೆಯನ್ನು ನಾನು ತುಂಬಾನೇ ಇಷ್ಟ ಪಡುತ್ತೇನೆ. ನಾವು ಈಗ ನಗರದಲ್ಲಿರುವ ನಮ್ಮ ಮನೆಗೂ ಮತ್ತೊಂದು ಖರೀದಿಸಲು ಯೋಜಿಸಿದ್ದೇವೆ ಮತ್ತು ನಿಧಾನವಾಗಿ ಸಾಮಾನ್ಯ ಫ್ರಿಡ್ಜ್ ಅನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತೇವೆ" ಎಂದು ಗ್ರಾಹಕ ರೇವತಿ ವೆಂಕಟ್ ಹೇಳುತ್ತಾರೆ.

"ತಮ್ಮ ಆರೋಗ್ಯ ಹದಗೆಡಲು ಪ್ರಾರಂಭಿಸುತ್ತಿದ್ದಂತೆ, ಹೆಚ್ಚಿನ ಜನರು ಈಗ ಹಳೆಯ ಅಭ್ಯಾಸಗಳತ್ತ ಸಾಗುತ್ತಿದ್ದಾರೆ. ನಾವು ಹುಟ್ಟಿದಾಗಿನಿಂದಲೂ ಸರಳ ಜೀವನವನ್ನು ಅನುಸರಿಸುತ್ತಿದ್ದೇವೆ ಮತ್ತು ಆರೋಗ್ಯವಾಗಿದ್ದೇವೆ. ಮಣ್ಣಿನ ಮಡಕೆಗಳು ಮತ್ತು ಅವುಗಳಲ್ಲಿ ಅಡುಗೆ ಮಾಡುವ ಪ್ರಯೋಜನಗಳ ಬಗ್ಗೆ ಜನರು ಈಗ ಕಲಿಯುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಜನರು ಸುಸ್ಥಿರವಾಗಿ ಬದುಕಲು ಸಹಾಯ ಮಾಡಲು, ನಾನು ಈ ಫ್ರಿಡ್ಜ್ ಅನ್ನು ನಿರ್ಮಿಸಿದ್ದೇನೆ" ಎಂದು ಶಿವಸ್ವಾಮಿ ಅವರು ಹೇಳುತ್ತಾರೆ.

ಆದಾಗ್ಯೂ, ಕುಂಬಾರರ ಕೊರತೆಯಿಂದಾಗಿ, ಅವರು ಹೆಚ್ಚಿನ ಫ್ರಿಡ್ಜ್ ಗಳು ಮತ್ತು ಇತರ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಈ ಕೆಲವು ವರ್ಷಗಳಲ್ಲಿ ಈ ರೀತಿಯ ಮಣ್ಣಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿರುವುದಂತೂ ನಿಜ ಎಂದು ಶಿವಸ್ವಾಮಿ ಅವರು ಹೇಳುತ್ತಾರೆ.

ಜನರಿಗೆ ಉಪಯುಕ್ತವಾದ ಪರಿಸರಸ್ನೇಹಿ ಫ್ರಿಡ್ಜ್ 
"ನನಗೆ ಈ ಕೆಲಸದಲ್ಲಿ ಮೊದಲು ನಾಲ್ಕು ಜನರು ಸಹಾಯ ಮಾಡುತ್ತಿದ್ದರು, ಈಗ ಅವರಲ್ಲಿ ಇಬ್ಬರು ಮಾತ್ರ ಕೆಲಸದಲ್ಲಿ ಮುಂದುವರೆದಿದ್ದಾರೆ ಮತ್ತು ಅವರು ಸಹ ವಯಸ್ಸಾದವರು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಯಾವ ಯುವಕರೂ ಕುಂಬಾರಿಕೆ ಮಾಡಲು ಬರುತ್ತಿಲ್ಲ. ಈ ಕೆಲಸದಲ್ಲಿ ನಮ್ಮ ಕೈಗಳು ಕೊಳಕಾಗುವುದರಿಂದ ಕುಂಬಾರಿಕೆ ಕೆಲಸದ ಬಗ್ಗೆ ಅವರಿಗೆ ಒಂದು ಬೇರೆ ರೀತಿಯ ಭಾವನೆ ಮೂಡಿದೆ. ಅದಕ್ಕಾಗಿಯೇ ನಾವು ನಮ್ಮ ಉತ್ಪಾದನೆಯನ್ನು ಸೀಮಿತಗೊಳಿಸಬೇಕಾಗಿದೆ" ಎಂದು ಅವರು ತುಂಬಾ ನೋವಿನಿಂದ ಹೇಳುತ್ತಾರೆ.

ಇದನ್ನೂ ಓದಿ: Business Idea: ಈ ಬ್ಯುಸಿನೆಸ್​ ನಿಮ್ಗೆಲ್ಲಾ ಗೊತ್ತಿರೋದೇ! ಮನೆಯಲ್ಲೇ ಶುರು ಮಾಡಿ ಅಸಲು ಬಿಟ್ಟು 40 ಸಾವಿರ ಗಳಿಸಿ

"ಆದರೆ ನಾನು ಮಾತ್ರ ನಾನು ಮಾಡುವ ಕೆಲಸಕ್ಕೆ ಕಟ್ಟುನಿಟ್ಟಾಗಿರುತ್ತೇನೆ ಮತ್ತು ನಾನು ಮಡಕೆಗಳು ಮತ್ತು ದೀಪಗಳನ್ನು ಮಾತ್ರ ತಯಾರಿಸುತ್ತೇನೆ ಎಂದು ಹೇಳಿದರೆ, ನಷ್ಟ ನನ್ನದು. ಗ್ರಾಹಕರ ಅಗತ್ಯಗಳಿಗೆ ಹೊಂದಿಕೊಳ್ಳುವ ಮೂಲಕ ಮತ್ತು ಅವರಿಗೆ ಪ್ರಯೋಜನವಾಗುವಂತಹ ಸೃಷ್ಟಿಗಳನ್ನು ಮಾಡುವ ಮೂಲಕ, ನಾನು ಸಹ ನಾಲ್ಕು ಕಾಸು ಸಂಪಾದನೆ ಮಾಡುತ್ತಿದ್ದೇನೆ. ಇಷ್ಟೇ ಅಲ್ಲದೆ ಜನರ ಆರೋಗ್ಯದ ಬಗ್ಗೆ ನಮ್ಮದೊಂದು ಕಾಳಜಿ ಸಹ ಇದೆ ಮತ್ತು ಇದು ಪರಿಸರ ಸ್ನೇಹಿ ಸಹ ಆಗಿದೆ. ಹಾಗಾಗಿ ಈ ಕೆಲಸ ನನಗೆ ತುಂಬಾನೇ ಸಂತೃಪ್ತಿಯನ್ನು ತಂದು ಕೊಟ್ಟಿದೆ" ಎಂದು ಅವರು ಹೇಳುತ್ತಾರೆ.

ಈಗಂತೂ ಹೆಚ್ಚಿನ ಜನರು ಈ ಮಣ್ಣಿನ ಮಡಕೆಗಳನ್ನು ಹೆಚ್ಚಾಗಿಯೇ ಖರೀದಿ ಮಾಡುತ್ತಿದ್ದಾರೆ ಎಂದು ಶಿವಸ್ವಾಮಿ ಅವರು ಹೇಳುತ್ತಾರೆ. "ನಮ್ಮ ಹೆತ್ತವರು ಮತ್ತು ಅಜ್ಜ-ಅಜ್ಜಿಯರಂತೆ ಬದುಕಲು ನಾವು ಮುಂದಾಗಬೇಕು ಮತ್ತು ಆಸ್ಪತ್ರೆಗೆ ನೀಡುವ ಭೇಟಿಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು" ಎಂದು ಅವರು ಅಭಿಪ್ರಾಯ ಪಡುತ್ತಾರೆ.
Published by:Ashwini Prabhu
First published: