ತಮಿಳುನಾಡು(ಜೂ.03): ಇಂದು ದ್ರಾವಿಡ ಮುನ್ನೇತ್ರ ಕಳಗಮ್(ಡಿಎಂಕೆ) ಪಕ್ಷದ ಸಂಸ್ಥಾಪಕ ದಿವಂಗತ ಎಂ. ಕರುಣಾನಿಧಿ ಅವರ 98ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕರುಣಾನಿಧಿ ಅವರು 2018ರ ಆಗಸ್ಟ್ 7ರಲ್ಲಿ ನಿಧನರಾದರು. ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಕರುಣಾನಿಧಿ ಅವರ ಪುತ್ರ ಎಂ.ಕೆ.ಸ್ಟಾಲಿನ್, ಚೆನ್ನೈನಲ್ಲಿರುವ ತಮ್ಮ ತಂದೆಯ ಸ್ಮಾರಕಕ್ಕೆ ಭೇಟಿ ನೀಡಿ, ಗೌರವ ಅರ್ಪಿಸಿದರು.
ದ್ರಾವಿಡ ಮುನ್ನೇತ್ರ ಕಳಗಮ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, “ನಮ್ಮ ಹೃದಯದಲ್ಲಿ ಎಂದೆಂದೂ ಅಳಿಸಲಾಗದ ಛಾಪು ಒತ್ತಿರುವ ಕಲಾವಿದನ ಜನ್ಮದಿನವನ್ನು ಆಚರಿಸುತ್ತಿದ್ದೇವೆ” ಎಂದು ಸ್ಟಾಲಿನ್ ಬರೆದುಕೊಂಡಿದ್ದಾರೆ.
ಕರುಣಾನಿಧಿ ಅವರು ಒಟ್ಟು 12 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ ಮತ್ತು ವೈಯಕ್ತಿಕವಾಗಿ ಯಾವತ್ತೂ ಚುನಾವಣೆಯಲ್ಲಿ ಸೋತಿಲ್ಲ. ಅವರು ಕುಲಿತಲೈ ಕ್ಷೇತ್ರವನ್ನು ಪ್ರತಿನಿಧಿಸುವ ಮೂಲಕ, ತಮ್ಮ 33ನೇ ವಯಸ್ಸಿನಲ್ಲಿ ವಿಧಾನಸಭೆಯನ್ನು ಪ್ರವೇಶಿಸಿದರು. ಅವರು 1969-71, 71-76, 89-91, 96-01 ಮತ್ತು 2006-11 ರ ನಡುವೆ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದರು.
1977-89ರ ನಡುವೆ ಒಂದು ದಶಕಗಳ ಕಾಲ ತಮ್ಮ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗದಿದ್ದಾಗ, ಕರುಣಾನಿಧಿಯವರು ತಮ್ಮ ದೃಢ ನಿರ್ಧಾರವನ್ನು ಪ್ರದರ್ಶಿಸಿದ್ದರು. ಆ ಅವಧಿಯಲ್ಲಿ, ಎಐಎಡಿಎಂಕೆಯ ಸಂಸ್ಥಾಪಕ ಮತ್ತು ಅವರ ಪ್ರತಿಸ್ಪರ್ಧಿ ಎಂ.ಜಿ.ರಾಮಚಂದ್ರನ್ ಮುಖ್ಯಮಂತ್ರಿಯಾಗಿದ್ದರು.
ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಅಂತಹ ಪ್ರಯತ್ನದ ದಿನಗಳಲ್ಲಿ, ತಮ್ಮ ಪಕ್ಷದ ಧ್ವಜವನ್ನು ಎತ್ತಿಹಿಡಿದರು ಮತ್ತು ಆಡಳಿತರೂಢ ಎಐಎಡಿಎಂಕೆಯನ್ನು ಗುರಿಯಾಗಿಸಿಕೊಂಡು, ಅನೇಕ ಆಂದೋಲನಗಳನ್ನು ಮಾಡಿದ್ದರು. ನಿರಂತರವಾಗಿ ಎಲ್ಲಾ ಆಗು-ಹೋಗುಗಳ ಮೇಲೆ ಗಮನ ಇಟ್ಟಿದ್ದ ಅವರು, ಪಕ್ಷದ ಮುಖವಾಣಿ ಮುರಸೋಲಿಯಲ್ಲಿ ಕಲೈಂಗಾರ್ ಕಡಿತಮ್ (ಕಾರ್ಯಕರ್ತರಿಗೆ ಕಲೈಂಗಾರ್ ಪತ್ರ) ಮೂಲಕ, ತನ್ನ ಪಕ್ಷದ ಕಾರ್ಯಕರ್ತರ ಜೊತೆ ತೊಡಗಿಕೊಂಡರು. ಅವರು ತಮ್ಮ ನೆಂಜುಕ್ಕು ನೀತಿ ಎಂಬ ಆತ್ಮಚರಿತ್ರೆಯ ಮೂಲಕ , ತಮ್ಮ ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿದರು.
1989ರಲ್ಲಿ ಮತ್ತೆ ಅಧಿಕಾರಕ್ಕೆ ಬಂದು, 1991ರ ಜನವರಿಯಲ್ಲಿ ಪಕ್ಷವನ್ನು ವಜಾಗೊಳಿಸಿದಾಗ ಹಿನ್ನಡೆ ಅನುಭವಿಸಿದರು. 1972ರಲ್ಲಿ ಎಂಜಿಆರ್ ಅವರು ನಿರ್ಗಮಿಸಿದರೂ ಕೂಡ, 1993ರಲ್ಲಿ ವೈಕೋ ಅವರನ್ನು ಉಚ್ಚಾಟನೆಗೊಳಿಸಿದಾಗ ಅವರು ಜಿಲ್ಲಾ ಕಾರ್ಯದರ್ಶಿಗಳು ಸೇರಿದಂತೆ ಪಕ್ಷದ ಸದಸ್ಯರನ್ನು ತನ್ನೊಂದಿಗೆ ಕರೆದುಕೊಂಡು ಹೋದಾಗ, ಕರುಣಾನಿಧಿ ಕಷ್ಟಕರ ಸಮಯವನ್ನು ಎದುರಿಸಬೇಕಾಯಿತು.
1950 ದಶಕದಲ್ಲಿ ಅವರು ಪರಾಶಕ್ತಿ ಮತ್ತು ಮನೋಹರ ಎಂಬ ಜನಪ್ರಿಯ ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದರು, ಅವರ ಕೊನೆಯ ಚಿತ್ರ 2011ರ ಪೊನ್ನಾರ್ ಶಂಕರ್.
ತಮಿಳುನಾಡು ರಾಜಕೀಯದಲ್ಲಿ ಮಾಜಿ ಸಿಎಂಗಳಾದ ಜೆ. ಜಯಲಲಿತಾ ಹಾಗೂ ಕರುಣಾನಿಧಿ ಇಬ್ಬರೂ ರಾಜಕೀಯ ವಿರೋಧಿಗಳಾಗಿದ್ದರು. ಜಯಲಲಿತಾ ಎಐಎಡಿಎಂಕೆ ಪಕ್ಷದ ನೇತೃತ್ವ ವಹಿಸಿದ್ದರೆ, ಕರುಣಾನಿಧಿ ಡಿಎಂಕೆ ಪಕ್ಷದ ಅಧ್ಯಕ್ಷರಾಗಿದ್ದರು. ಒಮ್ಮೆ ಜಯಲಲಿತಾ ಸಿಎಂ ಆದರೆ, ಮತ್ತೊಮ್ಮೆ ಕರುಣಾನಿಧಿ ಸಿಎಂ ಆಗುತ್ತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ