ಮೋದಿ ಸರ್ಕಾರ ಟೀಕಿಸಲು ಜನ ಹೆದರುತ್ತಿದ್ದಾರೆ; ಚರ್ಚೆಗೀಡಾಯ್ತು ಅಮಿತ್​​ ಶಾ ಮುಂದೆ ರಾಹುಲ್​​ ಬಜಾಜ್ ನೀಡಿದ ಹೇಳಿಕೆ

Rahul Bajaj: ಕಾಂಗ್ರೆಸ್​ ನೇತೃತ್ವದ ಯುಪಿಎ-2 ಸರ್ಕಾರ ಅವಧಿಯಲ್ಲಿ ನಾವು ಯಾರನ್ನು ಬೇಕಾದರೂ ಟೀಕಿಸಬಹುದಿತ್ತು. ಆದರೀಗ, ಬಿಜೆಪಿ ಸರ್ಕಾರವನ್ನು ಯಾರು ಟೀಕಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ- ರಾಹುಲ್​​ ಬಜಾಜ್​​

news18-kannada
Updated:December 2, 2019, 11:38 AM IST
ಮೋದಿ ಸರ್ಕಾರ ಟೀಕಿಸಲು ಜನ ಹೆದರುತ್ತಿದ್ದಾರೆ; ಚರ್ಚೆಗೀಡಾಯ್ತು ಅಮಿತ್​​ ಶಾ ಮುಂದೆ ರಾಹುಲ್​​ ಬಜಾಜ್ ನೀಡಿದ ಹೇಳಿಕೆ
ಉದ್ಯಮಿ ರಾಹುಲ್​​ ಬಜಾಜ್​​
  • Share this:
ನವದೆಹಲಿ(ಡಿ.01): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಟೀಕಿಸಲು ಜನ ಹೆದರುತ್ತಿದ್ಧಾರೆ ಎಂದು ಪ್ರಖ್ಯಾತ ಉದ್ಯಮಿ ರಾಹುಲ್​​ ಬಜಾಜ್ ಆತಂಕ ವ್ಯಕ್ತಪಡಿಸಿರುವ ವಿಡಿಯೋ ಈಗ ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ಚರ್ಚೆಗೀಡಾಗಿದೆ. ಮುಂಬೈನಲ್ಲಿ ಎಕನಾಮಿನ್​​​ ಟೈಮ್ಸ್ ಆಯೋಜಿಸಿದ್ದ ‘ಇಟಿ ಅವಾರ್ಡ್ಸ್​‘​ ಕಾರ್ಯಕ್ರಮದಲ್ಲಿ​ ಕೇಂದ್ರ ಗೃಹ ಸಚಿವ ಅಮಿತ್​​ ಶಾರ ಮುಂದೆಯೇ ಬಜಾಜ್​​ ಗ್ರೂಪ್​​ ಮಾಲೀಕ ರಾಹುಲ್​​ ಬಜಾಜ್ ಈ ರೀತಿ ಹೇಳಿಕೆ ನೀಡಿದ್ದರು ರಾಹುಲ್​​ ಬಜಾಜ್​​​ ಹೇಳಿಕೆ ಸಾಮಾಜಿಕ ಜಾಲತಾಣದಲ್ಲೀಗ ಟ್ರೆಂಡ್​ ಆಗಿದೆ.

ಕಾಂಗ್ರೆಸ್​ ನೇತೃತ್ವದ ಯುಪಿಎ-2 ಸರ್ಕಾರ ಅವಧಿಯಲ್ಲಿ ನಾವು ಯಾರನ್ನು ಬೇಕಾದರೂ ಟೀಕಿಸಬಹುದಿತ್ತು. ಆದರೀಗ, ಬಿಜೆಪಿ ಸರ್ಕಾರವನ್ನು ಯಾರು ಟೀಕಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಾವ್ಯಾರಾದರೂ ಮೋದಿ ಸರ್ಕಾರವನ್ನು ಟೀಕಿಸಿದರೆ, ನೀವು ಮೆಚ್ಚುತ್ತೀರಿ ಎಂಬ ಭರವಸೆ ಮೂಡುತ್ತಿಲ್ಲ ಎಂದು ರಾಹುಲ್​​ ಬಜಾಜ್​​ ಆತಂಕ ವ್ಯಕ್ತಪಡಿಸಿದ್ದರು.

ಪ್ರಧಾನಿ ಮೋದಿ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಹಾಗೆಯೇ ನಿಮ್ಮ ಸರ್ಕಾರದಲ್ಲಿ ಕೆಲವು ಆತಂಕಕಾರಿ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಧ್ವನಿಯೆತ್ತಲು ಉದ್ಯಮ ರಂಗದ ಯಾರೊಬ್ಬರು ಮುಂದಾಗುತ್ತಿಲ್ಲ ಎಂದರು. ಇದೆ ವೇಳೆ ಸಂಸದೆ ಪ್ರಜ್ಞಾ ಸಿಂಗ್​​​​ರನ್ನು ಕ್ಷಮಿಸುವುದಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಅದಾದ ಬಳಿಕವೂ ನೀವು ಪ್ರಜ್ಞಾ ಸಿಂಗ್​​ರನ್ನು ರಕ್ಷಣಾ ಸಮಿತಿಯ ಸದಸ್ಯೆಯನ್ನಾಗಿ ಆಯ್ಕೆ ಮಾಡಿದ್ರಿ ಎಂದು ಹೇಳಿದರು. ಅಲ್ಲದೇ ಭಾರತದಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗಳ ಬಗ್ಗೆಯೂ ರಾಹುಲ್​​ ಬಜಾಜ್​​ ಆತಂಕ ವ್ಯಕ್ತಪಡಿಸಿದರು. ಈ ವೇಳೆ ರಾಹುಲ್​​ ಬಜಾಜ್​​ಗೆ ಅಮಿತ್​​ ಶಾಸ ಸ್ಥಳದಲ್ಲೇ ಉತ್ತರ ನೀಡಿದರು.

ಇದನ್ನೂ ಓದಿ: ಡಿ.10ಕ್ಕೆ ಬಿಜೆಪಿ ಸರ್ಕಾರ ಬೀಳಲಿದೆ; ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರಲಿದೆ; ಶಾಸಕ ಕೆ.ವೈ ನಂಜೇಗೌಡ

ಹೀಗೆ ರಾಹುಲ್​​ ಬಜಾಜ್​​ ಮಾತಾಡಿರುವ ವಿಡಿಯೋ ಈಗ ಭಾರೀ ವೈರಲ್​​ ಆಗಿದೆ. ರಾಹುಲ್​​ ಬಜಾಜ್​​ ಹೇಳಿಕೆಗೀಗ ಪರ-ವಿರೋಧದ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ರಾಹುಲ್​​ ಬಜಾಜ್​​ ಅವರೇ ನೀವು ಯುಪಿಎ ಸರ್ಕಾರದಲ್ಲಿ ಯಾರನ್ನು ಬೇಕಾದರೂ ಟೀಕಿಸಬಹುದಿತ್ತು ಎಂದು ಹೇಳಿದ್ದೀರಿ. ಕಾಂಗ್ರೆಸ್​ ಮತ್ತು ಸೋನಿಯಾ ಗಾಂಧಿಯವರನ್ನು ನೀವು ಟೀಕಿಸಿದ ವಿಡಿಯೋ ಅಥವಾ ಲೇಖನ ತೋರಿಸಿ ಎಂದು ಅಭಿಷೇಕ್​​​ ಎಂಬುವರು ಟ್ವೀಟ್​​ ಮಾಡಿದ್ಧಾರೆ.ಒಬ್ಬ ಒಳ್ಳೆಯ ಉದ್ಯಮಿಯಾಗಲು ಮೋದಿ ಸರ್ಕಾರಕ್ಕಿಂತ ಮತ್ತೊಂದು ಸರ್ಕಾರ ಸಿಗುವುದಿಲ್ಲ. ರಾಹುಲ್​ ಬಜಾಜ್​​​ ಹೇಳಿಕೆ ಸುತ್ತ ಸಾಕಷ್ಟು ಚರ್ಚೆ ನಡೆಯುತ್ತಿದೆ. ರಾಹುಲ್​​ ಬಜಾಜ್​​ ಕಾಂಗ್ರೆಸ್​ ಸರ್ಕಾರದಿಂದ ಸಾಕಷ್ಟು ಲಾಭ ಪಡೆದುಕೊಂಡಿದ್ದಾರೆ. ಹಾಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಮತ್ತೋರ್ವ ಉದ್ಯಮಿ ಅಖಿಲೇಶ್​​ ಮಿಶ್ರಾ ಟ್ವೀಟ್​​​ ಮೂಲಕ ಕುಟುಕಿದ್ದಾರೆ.ಗೋಡ್ಸೆಯಿಂದ ಇಲ್ಲಿಯವರೆಗೂ ದೇಶದಲ್ಲಿ ಭಯದ ವಾತವರಣ ನಿರ್ಮಾಣವಾಗುತ್ತಿರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿ ತ್​​ ಶಾಗೆ ನೇರ ಪ್ರಶ್ನಿಸಿದ್ದಾರೆ. ರಾಹುಲ್​ ಬಜಾಜ್​​ ಧೈರ್ಯ ಮೆಚ್ಚಲೇಬೇಕು ಎಂದು ನಿಖಿಲ್​​ ಕೀರ್ನಳ್ಳಿ ಎಂಬುವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


First published:December 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ