ವಿಜಯ್ ಮಲ್ಯಗೆ ಮುಂಬೈನಲ್ಲಿ ರೆಡಿಯಾಗಿದೆ ಐಷಾರಾಮಿ ಜೈಲು!

news18
Updated:August 25, 2018, 9:28 AM IST
ವಿಜಯ್ ಮಲ್ಯಗೆ ಮುಂಬೈನಲ್ಲಿ ರೆಡಿಯಾಗಿದೆ ಐಷಾರಾಮಿ ಜೈಲು!
news18
Updated: August 25, 2018, 9:28 AM IST
ನ್ಯೂಸ್ 18 ಕನ್ನಡ

ಮುಂಬೈ (ಆಗಸ್ಟ್ 25): ಭಾರತದ ಜೈಲುಗಳು ತಮ್ಮನ್ನು ಇರಿಸಲು ಯೋಗ್ಯವಾಗಿಲ್ಲ ಎಂದು ಸಾವಿರಾರು ಕೋಟಿ ರೂ.ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮಲ್ಯ ಆರೋಪಕ್ಕೆ ಪ್ರತಿಯಾಗಿ ಸಿಬಿಐ ಮುಂಬೈನ ಅರ್ಥರ್ ರೋಡಿನಲ್ಲಿರುವ ಜೈಲಿನ ವಿಡಿಯೋವನ್ನು ಬ್ರಿಟನ್​ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟಿದೆ.

ಭಾರತದ ಜೈಲುಗಳು ಸ್ವಚ್ಛತೆಯಿಂದ ಕೂಡಿಲ್ಲ, ಕತ್ತಲೆಯ ಕೋಣೆಗಳು ಎಂದು ವಿಜಯ್​ ಮಲ್ಯ ಆರೋಪ ಮಾಡಿದ್ದರು. ಹೀಗಾಗಿ ಭಾರತದ ಜೈಲುಗಳ ಸ್ವಚ್ಛತೆಯ ವಿಡಿಯೋ ಕಳುಹಿಸುವಂತೆ ಬ್ರಿಟನ್ ನ್ಯಾಯಾಲಯ ಭಾರತದ ಅಧಿಕಾರಿಗಳಿಗೆ ಹೇಳಿತ್ತು. ಅದರಂತೆ ಇದೀಗ ಜೈಲಿನ ವಿಡಿಯೋವನ್ನು ಕಳುಹಿಸಲಾಗಿದ್ದು, ಜೈಲು ಕೋಣೆಯಲ್ಲಿ ಯಾವೆಲ್ಲ ವ್ಯವಸ್ಥೆ ಇದೆ ಎಂಬುದನ್ನು ತಿಳಿಸಿದೆ.

ಮಲ್ಯ ಉಳಿದುಕೊಳ್ಳುವ ಮುಂಬೈ ಅರ್ಥರ್​ ರೋಡಿನಲ್ಲಿರುವ ಜೈಲಿನ ಬರಾಕ್ 12 ನಂಬರಿನ ಕೋಣೆಯಲ್ಲಿ ಟೀವಿ, ಅಟ್ಯಾಚ್ಡ್ ವೆಸ್ಟರ್ನ್​ ಟಾಯ್ಲೆಟ್, ಹಾಸಿಗೆ, ಸ್ನಾನದ ಕೋಣೆ, ಸೂರ್ಯನ ಬೆಳಕಿನಲ್ಲಿ ನಡೆದಾಡಲು ದೊಡ್ಡದಾದ ಬಾಲ್ಕನಿ, ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ. ಕೋಣೆಗೆ ಹಳದಿ ಬಣ್ಣ ಬಳಿಯಲಾಗಿದ್ದು, ಐಷಾರಾಮಿ ಹೋಟೆಲ್​ನ ಕೊಠಡಿಯಂತೆ ಸಿಂಗರಿಸಲಾಗಿದೆ.

ಸಾವಿರಾರು ಕೋಟಿ ರೂ.ವಂಚಿಸಿ ಲಂಡನ್​ಗೆ ಪರಾರಿಯಾಗಿರುವ ವಿಜಯ್ ಮಲ್ಯ ಅವರನ್ನು ಹಸ್ತಾಂತರ ಮಾಡುವಂತೆ ಕೋರಿ ಭಾರತ, ಲಂಡನ್​ ಸರ್ಕಾರವನ್ನು ಕೋರಿತ್ತು. ಅದಕ್ಕೆ ಅಲ್ಲಿನ ಸರ್ಕಾರ ಕೂಡ ಒಪ್ಪಿತ್ತು. ಈ ನಡುವೆ ಅಲ್ಲಿನ ಕೋರ್ಟ್​ಗೆ ಹಾಜರಾದ ವಿಜಯ್​ ಮಲ್ಯ ಭಾರತದ ಕೋರ್ಟ್​ಗಳು ಕತ್ತಲ ಕೋಣೆಗಳು, ಅವು ತಮ್ಮನ್ನು ಇರಿಸಲು ಯೋಗ್ಯವಾಗಿಲ್ಲ ಎಂದು ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ನ್ಯಾಯಾಲಯ ಭಾರತದ ಜೈಲಿನ ವಿಡಿಯೋ ಕಳುಹಿಸಿಕೊಡುವಂತೆ ಕೇಳಿತ್ತು. ಇದೀಗ ಭಾರತ ಜೈಲಿನ ವಿಡಿಯೋವನ್ನು ಕಳುಹಿಸಿಕೊಟ್ಟಿದ್ದು, ಸುಖದ ಸುಪತ್ತಿಗೆ ಮೇಲೆ ಮಲಗಿದ್ದ ಮಲ್ಯ ಜೈಲಿನಲ್ಲಿ ಖೈದಿಯಾಗುವ ದಿನಗಳು ಬಹಳ ದೂರ ಇಲ್ಲ. ವಿಜಯ್ ಮಲ್ಯರನ್ನು ಯಾವಾಗ ಭಾರತಕ್ಕೆ ಹಸ್ತಾಂತರ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...