ಮರುಭೂಮಿಯಲ್ಲಿ ನಿರ್ಮಿಸಲಾದ ಈ ಐಷಾರಾಮಿ ಮನೆಯ ಬೆಲೆ ಕೇಳಿದರೆ ನೀವು ಬೆಚ್ಚಿ ಬೀಳುವುದು ಖಂಡಿತ!

ಈ ಅಮೇರಿಕನ್ ಕಂಪನಿಯ ಹೊಸ ಸೃಷ್ಟಿಯು ನಿಮಗೆ ನಿರಾಶೆಗೊಳಿಸುವುದಿಲ್ಲ. ಎಲ್ ಸಿಮೆಂಟೊ ಯುನೊ ಎಂದು ಹೆಸರಿಸಲಾದ ಪ್ರತ್ಯೇಕವಾದ ಐಷಾರಾಮಿ ಮನೆಯು 1.75 ಮಿಲಿಯನ್ ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 12.8 ಕೋಟಿ ರೂಪಾಯಿಗೆ ಮಾರಾಟಕ್ಕಿದೆ.

 • Share this:

  ಈ ಮಹಾ ನಗರಗಳಲ್ಲಿರುವ ಮನೆಗಳನ್ನು ಮತ್ತು ಮನೆಯಲ್ಲಿರುವ ಸೌಲಭ್ಯಗಳನ್ನು ಕಂಡರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ, ಆದರೆ ಇಲ್ಲಿನ ವಾಹನ ದಟ್ಟಣೆಯಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯದಿಂದ ನೀವು ಬೇಸತ್ತು ಹೋಗಿರುತ್ತಿರಿ.ನೀವು ಬೇರೆ ಎಲ್ಲೋ ದೂರದಲ್ಲಿ ಹೋಗಿ ಮನೆ ಮಾಡಿಕೊಂಡು ಇರಲು ಬಯಸುತ್ತೀರಿ.

  ಆದರೆ ಬೇರೆ ಕಡೆಗೆ ಯಾವುದೋ ಪ್ರಕೃತಿಯ ಮಡಿಲಲ್ಲಿ ನಗರಗಳಲ್ಲಿರುವಂತಹ ಮನೆಗಳು ಮತ್ತು ಸೌಲಭ್ಯಗಳು ದೊರೆಯುವುದಿಲ್ಲ. ಆದರೆ ಈಗ ಅಮೇರಿಕಾದ ಕಂಪನಿಯೊಂದು ಒಂದು ವಿನೂತನವಾದ ಐಷಾರಾಮಿ ಮನೆಯನ್ನು ತಯಾರಿಸುತ್ತಿದೆ.

  ಇಲ್ಲಿ ಒಂದು ಆಧುನಿಕ ಮನೆಯಲ್ಲಿರುವಂತಹ ಎಲ್ಲಾ ಸೌಲಭ್ಯಗಳು ಇವೆ, ಆದರೆ ಈ ಮನೆಯನ್ನು ಕ್ಯಾಲಿಫೋರ್ನಿಯಾದ ಜೋಶುವಾ ಟ್ರೀಯ ಮರುಭೂಮಿಯ ಮಧ್ಯದಲ್ಲಿ ನಿರ್ಮಿಸಲಾಗಿದ್ದು, ಈ ಐಷಾರಾಮಿ ಮನೆಯ ಬೆಲೆ ಕೇಳಿದರೆ ನೀವು ಬೆಚ್ಚಿ ಬೀಳುವುದು ಗ್ಯಾರಂಟಿ.

  ಈ ಅಮೇರಿಕನ್ ಕಂಪನಿಯ ಹೊಸ ಸೃಷ್ಟಿಯು ನಿಮಗೆ ನಿರಾಶೆಗೊಳಿಸುವುದಿಲ್ಲ. ಎಲ್ ಸಿಮೆಂಟೊ ಯುನೊ ಎಂದು ಹೆಸರಿಸಲಾದ ಪ್ರತ್ಯೇಕವಾದ ಐಷಾರಾಮಿ ಮನೆಯು 1.75 ಮಿಲಿಯನ್ ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 12.8 ಕೋಟಿ ರೂಪಾಯಿಗೆ ಮಾರಾಟಕ್ಕಿದೆ.

  ಮೊಜಾವೆ ಮರುಭೂಮಿಯಲ್ಲಿ ಐದು ಎಕರೆ ಭೂಮಿಯಲ್ಲಿ ಇರುವ ಪ್ರತ್ಯೇಕ ಮನೆ ದೊಡ್ಡ ಬಂಡೆಗಳು ಮತ್ತು ನೈಸರ್ಗಿಕ ಹುಲ್ಲುಗಾವಲು ಸಸ್ಯವರ್ಗದಿಂದ ಸುತ್ತುವರೆದಿರುವ ಬಂಜರು ಭೂಮಿಯ ಏಕಾಂತ ಪರಿಸರದಲ್ಲಿ ಇದೆ.

  ಕಂಪನಿಯ ಪ್ರಕಾರ, ಮನೆಯನ್ನು ಆರ್‌ಎಸ್‌ಜಿ3ಡಿ ಕಟ್ಟಡ ವ್ಯವಸ್ಥೆಯನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಮನೆಯಲ್ಲಿಯೇ ಒಂದು ಪುಟ್ಟ ಗ್ರಂಥಾಲಯವಿದ್ದು ಮತ್ತು ಕುಳಿತು ಓದಲು ಒಂದು ಪುಟ್ಟ ಜಾಗವೂ ಸಹ ಇದೆ. ಐಷಾರಾಮಿ ಮನೆಯು ಮರುಭೂಮಿ ರಾತ್ರಿಯಲ್ಲಿ ಎಲ್ಇಡಿ ಬಲ್ಬ್ ಗಳ ಬೆಳಕಿನಿಂದ ಹೊಳೆಯುವುದನ್ನು ನೋಡುವುದೇ ಒಂದು ಚಂದ.

  ಕಂಪನಿಯು ಇನ್‌ಸ್ಟಾಗ್ರಾಮ್‌ನಲ್ಲಿ ಈ ಮನೆಯ ಫೋಟೋವನ್ನು ಹಂಚಿಕೊಂಡು "ಈ ಸ್ಥಳವು ತುಂಬಾ ವಿಭಿನ್ನವಾಗಿದೆ ಮತ್ತು ಇದೊಂದು ವಿಶೇಷ ಅವಕಾಶವಾಗಿದೆ. ಬಂಡೆಗಳ ಮಧ್ಯೆ ಇರುವಂತಹ ಅತ್ಯಂತ ವಿಶಿಷ್ಟ ಮನೆ ಒಳಗೆ ಕುಳಿತು ನೀವು ಉದ್ಯಾನವನದಂತಹ ಅನುಭವವನ್ನು ಪಡೆಯುವಿರಿ. 5 ಎಕರೆ ಜಾಗ ನಿಮಗೆ 100 ಎಕರೆಗಿಂತಲೂ ಜಾಸ್ತಿ ಅನ್ನಿಸುತ್ತದೆ” ಎಂದು ಚಿತ್ರ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

  'ಎಲ್ ಸಿಮೆಂಟೊ ಯುನೊ' ಕೆಯುಡಿ ಅಭಿವೃದ್ಧಿಯ ಇತ್ತೀಚಿನ ಸೃಷ್ಟಿಯಾಗಿದ್ದು ಮತ್ತು ಯುಆರ್‌ಬಿಎಆರ್‌ಸಿ ವಾಸ್ತುಶಿಲ್ಪಿಗಳಿಂದ ವಿನ್ಯಾಸಗೊಳಿಸಲಾಗಿದೆ.

  ನಗರ ವಾಸ್ತುಶಿಲ್ಪದ ವಿನ್ಯಾಸಗಳನ್ನು ಆಧರಿಸಿ ಮತ್ತು ಮೆಟ್ರೋ ಮಾದರಿಯಲ್ಲಿ ಕುಡ್ ಡೆವಲಪ್ ಮೆಂಟ್ ನಿರ್ಮಿಸುವ ಪ್ರಕ್ರಿಯೆಯಲ್ಲಿ ಈ ಮನೆಯನ್ನು ಕಾಂಕ್ರೀಟ್ ನಿಂದ ಮಾಡಲಾಗಿದೆ. ಶಾಪಿಂಗ್ ಗೆ ಹೋಗಲು ಅಥವಾ ಜನರನ್ನು ಭೇಟಿಯಾಗಲು ಬಯಸುವ ಯಾರಾದರೂ ಕಾರು ಅಥವಾ ಬೈಕ್ ಸವಾರಿಯನ್ನು ಹೋಗಬಹುದಾಗಿದೆ. ಇದು 2022 ರ ಆರಂಭದಲ್ಲಿ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

  ಇದನ್ನೂ ಓದಿ: Congress: ಕಾಂಗ್ರೆಸ್​ Vs ಕಾಂಗ್ರೆಸ್​; ಇನ್ನೂ ಪುಟಿದೇಳದ ಕೇಂದ್ರ ನಾಯಕತ್ವ: ದುಸ್ಥಿತಿಯಲ್ಲಿ ಹಳೆಯ ಪಕ್ಷ

  ಆಸಕ್ತಿದಾಯಕ ಸಂಗತಿಯೆಂದರೆ, ಸ್ಮಿಥೆರಿಯನ್ಸ್ ಎಂಬ ಬ್ಲ್ಯಾಕ್ ಮಿರರ್ ಸಂಚಿಕೆಯೊಂದರಲ್ಲಿ ತೋರಿಸಲಾದ ಇದೇ ರೀತಿಯ ಒಂದು ಮನೆಯು ಈ ಮರುಭೂಮಿಯಲ್ಲಿರುವ ಮನೆಯನ್ನು ನಿಮಗೆ ನೆನಪಿಸಬಹುದು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: