ಈ ದೇಶದಲ್ಲಿ ಉಚಿತ ಸಾರಿಗೆ ವ್ಯವಸ್ಥೆ; ಇದು ವಿಶ್ವದಲ್ಲೇ ಮೊದಲು

ಆರು ಲಕ್ಷ ಜನಸಂಖ್ಯೆಯಿರುವ ಈ ಐರೋಪ್ಯ ರಾಷ್ಟ್ರದಲ್ಲಿ ಪ್ರತೀ ನಿತ್ಯ ಹೊರದೇಶದಿಂದ ಹಾದುಹೋಗುವವರ ಸಂಖ್ಯೆ 2 ಲಕ್ಷವಿದೆ. ಹೀಗಾಗಿ, ಇಲ್ಲಿ ಟ್ರಾಫಿಕ್ ಕಿರಿಕಿರಿ ಇದ್ದೇ ಇರುತ್ತದೆ.

Vijayasarthy SN | news18india
Updated:December 7, 2018, 4:25 PM IST
ಈ ದೇಶದಲ್ಲಿ ಉಚಿತ ಸಾರಿಗೆ ವ್ಯವಸ್ಥೆ; ಇದು ವಿಶ್ವದಲ್ಲೇ ಮೊದಲು
ಪ್ರಾತಿನಿಧಿಕ ಚಿತ್ರ
Vijayasarthy SN | news18india
Updated: December 7, 2018, 4:25 PM IST
ಬೆಂಗಳೂರು(ಡಿ. 07): ಟ್ರಾಫಿಕ್ ಕಿರಿಕಿರಿ ಹಾಗೂ ವಾಯು ಮಾಲಿನ್ಯ ಎರಡೂ ದೊಡ್ಡ ತಲೆನೋವಿನ ಸಮಸ್ಯೆಗಳೇ. ಲಕ್ಸೆಮ್​ಬರ್ಗ್ ಎಂಬ ಪುಟ್ಟ ದೇಶವೊಂದು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದೆ. ತನ್ನ ಸರಕಾರಿ ಸಾರಿಗೆ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಮುಕ್ತವಾಗಿ ತೆರೆದಿಟ್ಟಿದೆ. ರೈಲು, ಟ್ರ್ಯಾಮು ಮತ್ತು ಬಸ್ಸುಗಳಲ್ಲಿ ಜನರು ಉಚಿತವಾಗಿ ಪ್ರಯಾಣಿಸಬಹುದು. ನೂತನವಾಗಿ ಅಧಿಕಾರಕ್ಕೆ ಬಂದಿರುವ ಕ್ಸೇವಿಯರ್ ಬೆಟ್ಟೆಲ್ ನೇತೃತ್ವದ ಸಮ್ಮಿಶ್ರ ಸರಕಾರವು ಇಂಥ ಯೋಜನೆ ಜಾರಿಗೆ ತರುತ್ತಿದೆ.

ಬೆಂಗಳೂರಿಗಿಂತ ಮೂರ್ನಾಲ್ಕು ಪಟ್ಟಷ್ಟೇ ದೊಡ್ಡದಿರುವ ಹಾಗೂ ಸುಮಾರು 6 ಲಕ್ಷ ಜನಸಂಖ್ಯೆ ಹೊಂದಿರುವ ಐರೋಪ್ಯ ಖಂಡದ ಈ ಪುಟ್ಟ ದೇಶದಲ್ಲಿ ಮೊದಲಿಂದಲೂ ಪ್ರಯಾಣ ದರ ತುಸು ಅಗ್ಗವೇ ಇದೆ. ಮುಂದಿನ ಕೆಲ ತಿಂಗಳುಗಳಲ್ಲಿ ಬಸ್, ರೈಲು ಪ್ರಯಾಣವನ್ನು ಉಚಿತಗೊಳಿಸುವ ನಿರ್ಧಾರಕ್ಕೆ ಬಂದಿದೆ.

ಇದನ್ನೂ ಓದಿ: ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಆಸ್ಪತ್ರೆಗೆ ರವಾನೆ

ಸರಕಾರದ ಈ ಯೋಜನೆ ಜಾರಿಗೆ ಬಂದರೆ, ರೈಲು, ಬಸ್ಸುಗಳಲ್ಲಿ ಯಾವುದೇ ಟಿಕೆಟ್ ವ್ಯವಸ್ಥೆ ಇರುವುದಿಲ್ಲ. ಯಾರು ಬೇಕಾದರೂ ಹತ್ತಿ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದು. ಈ ಕ್ರಮದಿಂದ ಲುಕ್ಸೆಂ ಬರ್ಗ್ ದೇಶದ ಬೊಕ್ಕಸಕ್ಕೆ ವಾರ್ಷಿಕವಾಗಿ ಐದಾರು ಸಾವಿರ ಕೋಟಿ ರೂ ನಷ್ಟವಾಗಬಹುದಾದರೂ ಪರಿಸರದ ದೃಷ್ಟಿಯಿಂದ ಇದು ಪರಿಣಾಮಕಾರಿ ನಡೆಯಾಗಿದೆ. ಹೆಚ್ಚೆಚ್ಚು ಜನರು ಸ್ವಂತ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆ ಬಳಸಿದರೆ ವಾಯು ಮಾಲಿನ್ಯ ಕಡಿಮೆಯಾಗುತ್ತದೆ. ಹಾಗೆಯೇ, ಈ ದೇಶದಲ್ಲಿ ಸದಾ ಕಿರಿಕಿರಿ ತರುವ ಟ್ರಾಫಿಕ್ ಸಮಸ್ಯೆಯೂ ನಿವಾರಣೆಯಾಗುತ್ತೆ. ಬೆಲ್ಜಿಯಂ, ಫ್ರಾನ್ಸ್ ಮತ್ತು ಜರ್ಮನಿಯ ಗಡಿಭಾಗಗಳಿಗೆ ಹೊಂದಿಕೊಂಡಿರುವ ಈ ದೇಶದ ಮೂಲಕ ಪ್ರತಿನಿತ್ಯ ಹಾದು ಹೋಗುವವರ ಸಂಖ್ಯೆ 2 ಲಕ್ಷದಷ್ಟಿದೆ. ಇದು ಈ ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗವಾಗಿದೆ. ಹೀಗಾಗಿ, ಇಲ್ಲಿ ಸದಾ ಟ್ರಾಫಿಕ್ ಸಮಸ್ಯೆ ಇದ್ದೇ ಇರುತ್ತದೆ.

ಈ ವಿಡಿಯೋವನ್ನೂ ನೋಡಿ:

ಯದುವೀರ್ ಪುತ್ರ ಆದ್ಯವೀರ್ ಹುಟ್ಟುಹಬ್ಬ ಆಚರಣೆ
First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ