Lufthansa Pilot Strike: ಈ ವಾರವೂ ನಡೆಯಲಿದೆ ಲುಫ್ಥಾನ್ಸಾ ಪೈಲಟ್‌ಗಳ ಮುಷ್ಕರ! ಪ್ರಯಾಣಿಕರ ಪರದಾಟ

ಲುಫ್ಥಾನ್ಸಾ ಏರ್‌ಲೈನ್‌

ಲುಫ್ಥಾನ್ಸಾ ಏರ್‌ಲೈನ್‌

ಲುಫ್ಥಾನ್ಸಾದಲ್ಲಿನ ಪೈಲಟ್‌ಗಳ ಮುಷ್ಕರವು ಏರ್‌ಲೈನ್‌ನ ಪ್ರಯಾಣಿಕರು ಹಾಗೂ ಸರಕು ವಿಭಾಗದ ಪೈಲಟ್‌ಗಳ ಮೇಲೆ ಪರಿಣಾಮ ಬೀರುತ್ತದೆ ಎಂದು 5,000 ಕ್ಕಿಂತಲೂ ಹೆಚ್ಚು ಪೈಲಟ್‌ಗಳ ಗುಂಪು ಹೊಂದಿರುವ ಯೂನಿಯನ್, ವೆರಿನಿಗುಂಗ್ ಕಾಕ್‌ಪಿಟ್ (ವಿಸಿ) ಹೇಳಿದೆ. ಬುಧವಾರ ಮತ್ತು ಗುರುವಾರ ಪ್ರಯಾಣಿಕರ ಪೈಲಟ್‌ಗಳು ಮತ್ತು ಕಾರ್ಗೋ (ಸರಕು) ಪೈಲಟ್‌ಗಳು ಬುಧವಾರದಿಂದ ಶುಕ್ರವಾರದವರೆಗೆ ಮುಷ್ಕರ ನಡೆಸಲಿದ್ದಾರೆ.

ಮುಂದೆ ಓದಿ ...
  • Share this:

ಜರ್ಮನಿಯ (Germany) ವಿಮಾನಯಾನ ಸಂಸ್ಥೆ ಲುಫ್ಥಾನ್ಸಾದಲ್ಲಿನ ಪೈಲಟ್‌ಗಳು (Lufthansa Pilots) ಈ ವಾರವೂ ತಮ್ಮ ಮುಷ್ಕರವನ್ನು ನಡೆಸಲಿದ್ದಾರೆ ಎಂಬುದಾಗಿ ಕಾರ್ಮಿಕ ಒಕ್ಕೂಟವು ತಿಳಿಸಿದ್ದು ವೇತನ ವಿವಾದಕ್ಕೆ ಕಾರಣವಾಗಿರುವ ಮುಷ್ಕರದಿಂದಾಗಿ ಪ್ರಯಾಣಿಕರು ಇನ್ನಷ್ಟು ತೊಂದರೆಗೀಡಾಗುತ್ತಿದ್ದಾರೆ. ಮುಷ್ಕರವನ್ನು (Strike) ಅನುಸರಿಸಿ ಸಂಸ್ಥೆಯು ನೂರಾರು ವಿಮಾನಗಳನ್ನು (airplanes) ರದ್ದುಗೊಳಿಸಿತು. ಪ್ರಸ್ತುತ ಮುಷ್ಕರವು ಏರ್‌ಲೈನ್‌ನ ಪ್ರಯಾಣಿಕರು ಹಾಗೂ ಸರಕು ವಿಭಾಗದ ಪೈಲಟ್‌ಗಳ ಮೇಲೆ ಪರಿಣಾಮ ಬೀರುತ್ತದೆ ಎಂದು 5,000 ಕ್ಕಿಂತಲೂ ಹೆಚ್ಚು ಪೈಲಟ್‌ಗಳ ಗುಂಪು ಹೊಂದಿರುವ ಯೂನಿಯನ್ (Union), ವೆರಿನಿಗುಂಗ್ ಕಾಕ್‌ಪಿಟ್ (ವಿಸಿ) ಹೇಳಿದೆ. ಬುಧವಾರ ಮತ್ತು ಗುರುವಾರ ಪ್ರಯಾಣಿಕರ ಪೈಲಟ್‌ಗಳು ಮತ್ತು ಕಾರ್ಗೋ (ಸರಕು) ಪೈಲಟ್‌ಗಳು ಬುಧವಾರದಿಂದ ಶುಕ್ರವಾರದವರೆಗೆ ಮುಷ್ಕರ ನಡೆಸಲಿದ್ದಾರೆ.


ವೇತನ ವಿವಾದಕ್ಕಾಗಿ ನಡೆಯುತ್ತಿರುವ ಮುಷ್ಕರ
ವೆರಿನಿಗುಂಗ್ ಕಾಕ್‌ಪಿಟ್ (ವಿಸಿ) ತನ್ನ 5,000 ಕ್ಕೂ ಹೆಚ್ಚು ಪೈಲಟ್‌ಗಳಿಗೆ ಈ ವರ್ಷ 5.5% ವೇತನ ಹೆಚ್ಚಳ ಮತ್ತು ಅದರ ನಂತರ ಸ್ವಯಂಚಾಲಿತ ಹಣದುಬ್ಬರ ಪರಿಹಾರವನ್ನು ನೀಡುವಂತೆ ಒತ್ತಾಯಿಸುತ್ತಿದೆ. ಸಾಧ್ಯವಾದಷ್ಟು ಬೇಗನೇ ಮಾತುಕತೆಗೆ ಮರಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂಬುದಾಗಿ ಲುಫ್ಥಾನ್ಸ ವಕ್ತಾರರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿಸಿ ಯ ಬೇಡಿಕೆಗಳಿಗೆ ಸಂಬಂಧಿಸಿದ ವೆಚ್ಚದ ಏರಿಕೆಯನ್ನು ನಮಗೆ ಭರಿಸಲಾಗುವುದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.


ಸಿಬ್ಬಂದಿ ಕೊರತೆಯಿಂದ ಸಾವಿರಾರು ವಿಮಾನಗಳು ರದ್ದು
ಮುಷ್ಕರಗಳು ಹಾಗೂ ಸಿಬ್ಬಂದಿ ಕೊರತೆಯಿಂದ ಈಗಾಗಲೇ ಲುಫ್ಥಾನ್ಸಾ ಸೇರಿದಂತೆ ಹಲವಾರು ವಿಮಾನ ಯಾನ ಸಂಸ್ಥೆಗಳು ಸಾವಿರಾರರು ವಿಮಾನಗಳನ್ನು ರದ್ದುಗೊಳಿಸಿವೆ. ಅದೇ ರೀತಿ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ದೀರ್ಘ ಅವಧಿಗಳ ಸರತಿ ಸಾಲಿಗೆ ಕಾರಣವಾಗಿದೆ. ಇದರಿಂದ ಕೋವಿಡ್-19 ರ ನಂತರ ರಜಾದಿನಗಳನ್ನು ಆನಂದಿಸಬೇಕೆಂದುಕೊಂಡವರಿಗೆ ನಿರಾಶೆಯನ್ನುಂಟು ಮಾಡಿದೆ.


ಮೇಲಿಂದ ಮೇಲೆ ಸರಣಿ ಮುಷ್ಕರ
ಭದ್ರತಾ ಸಿಬ್ಬಂದಿಗಳು ಹಾಗೂ ಭೂ ಸಿಬ್ಬಂದಿಗಳಿಂದ ವೇತನಕ್ಕಾಗಿ ಈಗಾಗಲೇ ಲುಫ್ಥಾನ್ಸ ಮುಷ್ಕರವನ್ನು ಎದುರಿಸಿದೆ. ಪೈಲಟ್‌ಗಳ ಮುಷ್ಕರವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲಾ ಅಗತ್ಯ ಕೆಲಸಗಳನ್ನು ಸಂಸ್ಥೆ ಮಾಡುತ್ತಿದೆ ಎಂದು ಏರ್‌ಲೈನ್ ಹೇಳಿಕೊಂಡಿದೆ. ಅದಾಗ್ಯೂ ವಾರಾಂತ್ಯದಲ್ಲಿ ವಿಮಾನಗಳ ರದ್ದುಪಡಿಸುವಿಕೆ ಹಾಗೂ ಹಾರಾಟದಲ್ಲಿ ಉಂಟಾಗುವ ವಿಳಂಬಗಳನ್ನು ತಳ್ಳಿಹಾಕುವಂತಿಲ್ಲ ಎಂಬುದನ್ನು ತಿಳಿಸಿದೆ. ಇನ್ನು ಏರ್‌ಲೈನ್‌ನ ಷೇರುಗಳು 3.5 % ಕುಸಿತವನ್ನು ಕಂಡಿದೆ.


ಇದನ್ನೂ ಓದಿ: Airfare: ವಿಮಾನ ಪ್ರಯಾಣ ದರದಲ್ಲಿ ಭಾರೀ ಕಡಿತ; ಬೇಗ ಫ್ಲೈಟ್​ ಬುಕ್​ ಮಾಡಿ


ಲುಫ್ಥಾನ್ಸ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯ ಮೈಕೆಲ್ ನಿಗ್ಗೆಮನ್ ಹೇಳುವಂತೆ ಮುಷ್ಕರವು ಗ್ರಹಿಸಲಾಗದೇ ಇರುವಂತಹ ಸಂಭವವಾಗಿದೆ ಹಾಗೂ ಏರ್‌ಲೈನ್‌ನ ಉತ್ತಮ ಹಾಗೂ ಸಮತೋಲಿತ ಕೊಡುಗೆಯನ್ನು ತಪ್ಪಿಸಿದೆ ಎಂದಿದ್ದಾರೆ. ಲುಫ್ಥಾನ್ಸವು 18-ತಿಂಗಳ ಅವಧಿಯಲ್ಲಿ ಎರಡು ಹಂತಗಳಲ್ಲಿ ತಿಂಗಳಿಗೆ ಒಟ್ಟು 900 ಯುರೋಗಳಷ್ಟು ($901.35) ಹೆಚ್ಚಿನ ಮೂಲ ವೇತನವನ್ನು ನೀಡಿತು ಮತ್ತು ಕಾಕ್‌ಪಿಟ್ ಸಿಬ್ಬಂದಿಗೆ ಕನಿಷ್ಠ ಗುಂಪು ಗಾತ್ರವನ್ನು ಖಾತರಿಪಡಿಸುವ ಒಪ್ಪಂದವನ್ನು ನೀಡಿದೆ.


ಮುಂದಿನ ಸೂಚನೆಯವರೆಗೆ ಚಾರ್ಟರ್ ಏರ್‌ಲೈನ್ ಕಾಂಡೋರ್‌ನೊಂದಿಗಿನ ದೀರ್ಘಾವಧಿಯ ಸಹಕಾರ ಒಪ್ಪಂದಗಳನ್ನು ಲುಫ್ಥಾನ್ಸದೊಂದಿಗೆ ಅಂತಿಮಗೊಳಿಸುವುದನ್ನು ಜರ್ಮನಿಯ ಕಾರ್ಟೆಲ್ ಕಚೇರಿ ನಿಷೇಧಿಸಿದೆ. ರಾಷ್ಟ್ರೀಯ ವಾಹಕವು ಕಾಂಡೋರ್‌ಗೆ ದೀರ್ಘ-ಪ್ರಯಾಣದ ಮಾರ್ಗಗಳಲ್ಲಿ ಸ್ಪರ್ಧಿಸುವುದನ್ನು ತಡೆಯುತ್ತಿದೆ ಎಂದು ಸಂಸ್ಥೆ ಹೇಳಿದೆ. ಕಾರ್ಟೆಲ್ ಕಛೇರಿಯ ನಿರ್ಧಾರವನ್ನು ಗಮನಿಸಿರುವುದಾಗಿ ಲುಫ್ಥಾನ್ಸ ಹೇಳಿದೆ. ಆದಾಗ್ಯೂ, ನಾವು ಬುಂಡೆಸ್ಕಾರ್ಟೆಲ್ಲಮ್ಟ್‌ನ [ಫೆಡರಲ್ ಕಾರ್ಟೆಲ್ ಆಫೀಸ್] ದೃಷ್ಟಿಕೋವನ್ನು ಹಂಚಿಕೊಳ್ಳುವುದಿಲ್ಲ ಹಾಗಾಗಿ ನಿರ್ಧಾರವನ್ನು ನ್ಯಾಯಾಂಗ ಪರಿಶೀಲನೆಗೆ ಸಲ್ಲಿಸುತ್ತೇವೆ ಎಂದು ತಿಳಿಸಿದೆ.


ಅಸಹಾಯಕರಾದ ಪ್ರಯಾಣಿಕರು
ಮುಷ್ಕರದ ಪರಿಣಾಮದಿಂದಾಗಿ ನವದೆಹಲಿಯ ಇಂದಿರಾಗಾಂಧಿ ಇಂಟರ್‌ನ್ಯಾಶನಲ್ (ಐಜಿಐ) ವಿಮಾನ ನಿಲ್ದಾಣದ ಟರ್ಮಿನಲ್ -3 ನಲ್ಲಿ ಸುಮಾರು 700 ಪ್ರಯಾಣಿಕರು ಅಸಹಾಯಕರಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಪ್ರಯಾಣಿಕರ ಸಂಬಂಧಿಕರು ನಿಲ್ದಾಣದ ಹೊರಗೆ ಜಮಾಯಿಸಿದ್ದು ಮರುಪಾವತಿ ಇಲ್ಲವೇ ಪರ್ಯಾಯ ವ್ಯವಸ್ಥೆಗೆ ಒತ್ತಾಯಿಸುತ್ತಿದ್ದಾರೆ ಎಂದು ಪೊಲೀರು ತಿಳಿಸಿದ್ದಾರೆ.


ಇದನ್ನೂ ಓದಿ:  Bengaluru Rains: ಮಳೆ ಎಫೆಕ್ಟ್; ಬೆಂಗಳೂರಲ್ಲಿ ವಿಮಾನ ಹಾರಾಟ ವ್ಯತ್ಯಯ


ಫ್ರಾಂಕ್‌ಫರ್ಟ್‌ಗೆ 300 ಪ್ರಯಾಣಿಕರು ಹಾಗೂ ಮ್ಯೂನಿಚ್‌ಗೆ 400 ಪ್ರಯಾಣಿಕರನ್ನೊಳಗೊಂಡ ಲುಫ್ಥಾನ್ಸಾದ ಎರಡು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

First published: