Viral Video: ಶಿಕ್ಷಣ ಅಧಿಕಾರಿಗೆ ಚಪ್ಪಲಿ ಹಾರ ಹಾಕಿದ ಜನ..! ಈ ಘಟನೆಯ ಹಿಂದಿನ ಕಾರಣ ಗೊತ್ತೇ..?

ಈ ವಿಡಿಯೋದಲ್ಲಿ ಒಬ್ಬ ಜಿಲ್ಲಾ ಶಿಕ್ಷಣ ಅಧಿಕಾರಿಗೆ ಜನರು ಹಾರ ಹಾಕಿ ಸನ್ಮಾನ ಮಾಡಿದ್ದಾರೆ, ಕೆಲವು ಸೆಕೆಂಡಿನ ನಂತರ ಹಾಕಿದ ಹಾರ ಚಪ್ಪಲಿ ಹಾರವೆಂದು ಗೊತ್ತಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೆಲವೊಮ್ಮೆ ಜನರು ನಮಗೆ ಮಾಡಿದ್ದು ಸನ್ಮಾನವೋ, ಅವಮಾನವೋ (Humiliating) ಎಂದು ತಿಳಿದುಕೊಳ್ಳುವಷ್ಟರಲ್ಲಿಯೇ ಆ ಘಟನೆ ನಡೆದು ಹೋಗಿ ನಾವು ಜನರ ಮಧ್ಯದಲ್ಲಿ ಅವಮಾನಕ್ಕೆ (Shame) ಗುರಿಯಾಗಿರುತ್ತೇವೆ. ಹೆಚ್ಚಿನ ಸಂದರ್ಭದಲ್ಲಿ ನಾವು ನಮ್ಮಿಂದ ತಿಳಿದೋ ಅಥವಾ ತಿಳಿಯದೆ ಯಾವುದಾದರೊಂದು ತಪ್ಪು ನಡೆದು ಹೋಗಿರುತ್ತದೆ ಮತ್ತು ಅದರಿಂದ ಜನರು (People) ನೋವನ್ನು ಅನುಭವಿಸಿರುತ್ತಾರೆ. ಕೆಲವೊಮ್ಮೆ ಏನು ತಪ್ಪು ಮಾಡದೆ (Perception) ಇದ್ದರೂ ವ್ಯಕ್ತಿಗಳ ಗ್ರಹಿಕೆ ತಪ್ಪಾಗಿದ್ದು ಅವಮಾನಗಳು (Insult) ನಡೆದು ಹೋಗುತ್ತವೆ. ಇದೆಲ್ಲಾ ಈಗೇಕೆ ಹೇಳುತ್ತಿದ್ದೇವೆ ಎಂದು ನಿಮಗೆ ಅನ್ನಿಸಬಹುದು, ಬನ್ನಿ ಹಾಗಾದರೆ ಇಲ್ಲಿ ಇಂತಹದೇ ಒಂದು ಘಟನೆ ನಡೆದಿದೆ ಅದರ ಬಗ್ಗೆ ತಿಳಿಯೋಣ.

ಚಪ್ಪಲಿ ಹಾರ ಸನ್ಮಾನ
ಈ ಘಟನೆ ನಡೆದಿದ್ದು ಪಂಜಾಬ್ ರಾಜ್ಯದಲ್ಲಿರುವ ಲೂಧಿಯಾನ ನಗರದಲ್ಲಿ ಎಂದು ಹೇಳಲಾಗುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ತುಣುಕು ತುಂಬಾನೇ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ಜಿಲ್ಲಾ ಶಿಕ್ಷಣ ಅಧಿಕಾರಿಗೆ ಜನರು ಹಾರ ಹಾಕಿ ಸನ್ಮಾನ ಮಾಡಿದ್ದಾರೆ, ಕೆಲವು ಸೆಕೆಂಡಿನ ನಂತರ ಹಾಕಿದ ಹಾರ ಚಪ್ಪಲಿ ಹಾರವೆಂದು ಗೊತ್ತಾಗಿದೆ.

ಈ ವಿಡಿಯೋವನ್ನು ಪತ್ರಕರ್ತರೊಬ್ಬರು ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ಶಿಕ್ಷಣ ಅಧಿಕಾರಿಗೆ ಈ ಅವಮಾನ ಆಗಿದ್ದು ಏಕೆ ಗೊತ್ತೇ? ಪೋಷಕರ ಸಮಿತಿಯೊಂದು ನೀಡಿದ ದೂರನ್ನು ಈ ಶಿಕ್ಷಣ ಅಧಿಕಾರಿ ತನ್ನ ಕಿವಿಯ ಮೇಲೆ ಸಹ ಹಾಕಿಕೊಂಡಿರಲಿಲ್ಲವಂತೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Thick rubber Shoes: ಮಿಂಚಿನ ಹೊಡೆತದಿಂದ 14ರ ಪೋರನನ್ನ ರಕ್ಷಿಸಿದ ಆತನ ಶೂ

ದೂರು ದಾಖಲು
ಈ ಶಿಕ್ಷಣ ಅಧಿಕಾರಿಗೆ ತನಗೆ ಹಾಕಿದ್ದು ಚಪ್ಪಲಿ ಹಾರವೆಂದು ತಾನು ಫೋಟೋಗೆ ಪೋಸ್ ನೀಡುವಾಗ ಗೊತ್ತಾಗಿದೆಯಂತೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಅದಕ್ಕೆ “ತಮ್ಮ ದೂರನ್ನು ಕೇಳಿಸಿಕೊಳ್ಳದ ಶಿಕ್ಷಣ ಅಧಿಕಾರಿಗೆ ಲೂಧಿಯಾನ ಪೋಷಕರ ಸಮಿತಿಯಿಂದ ಚಪ್ಪಲಿ ಹಾರ ಹಾಕಲಾಯಿತು, ಆದರೆ ಆ ಅಧಿಕಾರಿಗೆ ತನಗೆ ಹಾಕಿದ್ದು ಚಪ್ಪಲಿ ಹಾರವೆಂದು ಕೆಲವು ಸೆಕೆಂಡಿನ ನಂತರ ಗೊತ್ತಾಗಿ ತನ್ನನ್ನು ಈ ರೀತಿಯಾಗಿ ಅವಮಾನ ಮಾಡಿದ ಜನರ ವಿರುದ್ಧ ಈಗ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ” ಎಂದು ಶೀರ್ಷಿಕೆಯಲ್ಲಿ ಬರೆದಿರುವುದನ್ನು ನಾವು ನೋಡಬಹುದಾಗಿದೆ.

ವಿಡಿಯೋ ನೋಡಿ:

ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯ ಮೀಮ್ಸ್‌ಗಳನ್ನು ಹಾಕುವುದರೊಂದಿಗೆ ಪ್ರತಿಕ್ರಿಯಿಸಿದ್ದಾರೆ. “ತುಂಬಾನೇ ಚೆನ್ನಾಗಿತ್ತು ಈ ಫೋಟೋಶೂಟ್, ನಮಗೆ ನಗದೇ ಇರಲು ಸಾಧ್ಯವೇ ಆಗಲಿಲ್ಲ” ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರೊಬ್ಬರು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು “ಆ ಅಧಿಕಾರಿಯ ಟೇಬಲ್ ಮೇಲೆ ಕಾಯಕವೇ ಕೈಲಾಸ ಎಂದು ಬರೆದಿದೆ” ಎಂದು ಪ್ರತಿಕ್ರಿಯಿಸಿದರು.

ವಿಧ್ಯಾರ್ಥಿಗಳಿಗೆ ಕಿರುಕುಳ ಆರೋಪ
ಈ ಘಟನೆ ನಡೆದಿದ್ದು ಏಕೆ ಅಂತೀರಾ? ಈ ಜಿಲ್ಲಾ ಶಿಕ್ಷಣ ಅಧಿಕಾರಿ ತುಂಬಾನೇ ಭ್ರಷ್ಟ ಅಧಿಕಾರಿ ಆಗಿದ್ದು, ಜನರ ದುಡಿಮೆಯ ಹಣವನ್ನು ನೀಡಲು ಕೇಳುತ್ತಿದ್ದನಂತೆ ಎಂದು ಹೇಳಲಾಗುತ್ತಿದೆ. ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಲೂಧಿಯಾನ ಪೋಷಕರ ಸಮಿತಿ ಒಂದು ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ಶಿಕ್ಷಕರ ಬಗ್ಗೆ ದೂರನ್ನು ನೀಡಿದ್ದರು, ಆದರೆ ಈ ಶಿಕ್ಷಣ ಅಧಿಕಾರಿ ಅವರ ವಿಚಾರಣೆ ನಡೆಸಲು ಒಂದು ವಾರ ಸಮಯ ತೆಗೆದುಕೊಂಡಿದ್ದು, ಅಂತಹ ವಿಚಾರದ ವಿಚಾರಣೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಸಿಬ್ಬಂದಿಯೇ ಹೇಳುತ್ತಾರೆ.

ಇದನ್ನೂ ಓದಿ: ಶಾಲೆಗಳಿಂದ ಭವಿಷ್ಯದ ಒಲಿಂಪಿಕ್ ಸ್ಟಾರ್​ಗಳನ್ನ ಹೆಕ್ಕಿ ತೆಗೆಯಲು ಸರ್ಕಾರ ಯೋಜನೆ

ನಂತರ ಸರ್ಕಾರವು ತನ್ನ ಶಿಕ್ಷಕನ ತಪ್ಪನ್ನು ಮರೆ ಮಾಚಿಕೊಳ್ಳಲು ಆ ಶಿಕ್ಷಕನನ್ನು ಇದರಿಂದ ಪಾರು ಮಾಡಲು ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಯಿತು. ಇಂತಹ ಜಿಲ್ಲಾ ಶಿಕ್ಷಣ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸಮಿತಿಯು ಒತ್ತಾಯಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಶಿಕ್ಷಣ ಅಧಿಕಾರಿ ವಿಚಾರಣೆ ವರದಿಯನ್ನು ಮೇಲಿನ ಅಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
Published by:vanithasanjevani vanithasanjevani
First published: