Google Doodle Lucy Wills: ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಲೂಸಿ ವಿಲ್ಸ್​​ಗೆ ಗೂಗಲ್​ ಡೂಡಲ್​ ಗೌರವ

Todays Google Doodle: 1928ರಲ್ಲಿ ವಿಲ್ಸ್​ ಭಾರತಕ್ಕೆ ಆಗಮಿಸಿದ್ದರು. ಗಾರ್ಮೆಂಟ್​ಗಳಲ್ಲಿ ಕೆಲಸ ಮಾಡುವ ಗರ್ಭಿಣಿಯರಿಗೆ ರಕ್ತಹೀನತೆ ತೀವ್ರವಾಗಿ ಕಾಡುತ್ತಿತ್ತು. ಈ ವಿಚಾರವಾಗಿ ವಿಲ್ಸ್​​ ಸಂಶೋಧನೆ ನಡೆಸಿ ಪ್ರಬಂಧವೊಂದನ್ನು ಮಂಡನೆ ಮಾಡಿದ್ದರು.

Rajesh Duggumane | news18
Updated:May 10, 2019, 10:37 AM IST
Google Doodle Lucy Wills: ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಲೂಸಿ ವಿಲ್ಸ್​​ಗೆ ಗೂಗಲ್​ ಡೂಡಲ್​ ಗೌರವ
ಲೂಸಿ ವಿಲ್ಸ್​ಗೆ ಗೂಗಲ್​ ಗೌರವ ಸಲ್ಲಿಸಿರುವುದು
  • News18
  • Last Updated: May 10, 2019, 10:37 AM IST
  • Share this:
ನವದೆಹಲಿ (ಮೇ 10): ವೈದ್ಯಕೀಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ ಲೂಸಿ ವಿಲ್ಸ್​​ ಅವರ 131 ಜನ್ಮದಿನದ ಹಿನ್ನೆಲೆಯಲ್ಲಿ ಡೂಡಲ್​ ಮೂಲಕ ಗೂಗಲ್​ ಅವರಿಗೆ ಗೌರವ ಸಮರ್ಪಿಸಿದೆ.

1888ರಲ್ಲಿ ವಿಲ್ಸ್​​ ಇಂಗ್ಲೆಂಡ್​ನಲ್ಲಿ ಜನಿಸಿದರು. 1911ರಲ್ಲಿ ಕ್ಯಾಂಬ್ರೀಡ್ಜ್​ ವಿಶ್ವವಿದ್ಯಾಲಯದಲ್ಲಿ ಅವರು ಸಸ್ಯಶಾಸ್ತ್ರ ಹಾಗೂ ಭೂವಿಜ್ಞಾನದಲ್ಲಿ  ಪದವಿ ಪಡೆದರು. ಮೊದಲ ವಿಶ್ವಯುದ್ಧ ನಡೆದಾಗ ಅವರು ಕೇಪ್​ ಟೌನ್​ಗೆ ತೆರಳಿದ್ದರು. ಅಲ್ಲಿ, ಸ್ವ ಇಚ್ಛೆಯಿಂದ ವೈದ್ಯಕೀಯ ಸೇವೆಗೆ ಮುಂದಾದರು. ನಂತರ ಲಂಡನ್​ಗೆ ವಾಪಾಸಾದ ಅವರು ವೈದ್ಯಕೀಯ ವಿಷಯದಲ್ಲಿ ಪದವಿ ಪಡೆದುಕೊಂಡರು.

ವಿಟಾಮಿನ್​ ಫೊಲಿಕ್​ ಆ್ಯಸಿಡ್​ ಕಂಡು ಹಿಡಿದಿದ್ದು ವಿಲ್ಸ್​ ಜೀವಮಾನದ ಶ್ರೇಷ್ಠ ಸಾಧನೆ. ತರಕಾರಿ ಹಾಗೂ ಹಣ್ಣುಗಳಲ್ಲಿ ಕಂಡು ಬರುವ ಬಿ ವಿಟಾಮಿನ್​ನ ಮತ್ತೊಂದು ರೂಪ. ವಿಟಾಮಿನ್​ ಫೊಲಿಕ್​ ಆ್ಯಸಿಡ್ ಗರ್ಭಿಣಿ ಮಹಿಳೆಯರು ಸೇವನೆ ಮಾಡಿದರೆ ಹುಟ್ಟು ಅಂಗ ವೈಕಲ್ಯ ತಡೆಯಬಹುದಾಗಿದೆ.

ಇದನ್ನೂ ಓದಿ: ಖ್ಯಾತ ಬಾಲಿವುಡ್ ನಟಿ ಮಧುಬಾಲಾಗೆ ಗೂಗಲ್ ಡೂಡಲ್ ಗೌರವ

1928ರಲ್ಲಿ ವಿಲ್ಸ್​ ಭಾರತಕ್ಕೆ ಆಗಮಿಸಿದ್ದರು. ಗಾರ್ಮೆಂಟ್​ಗಳಲ್ಲಿ ಕೆಲಸ ಮಾಡುವ ಗರ್ಭಿಣಿಯರಿಗೆ ರಕ್ತಹೀನತೆ ತೀವ್ರವಾಗಿ ಕಾಡುತ್ತಿತ್ತು. ಈ ವಿಚಾರವಾಗಿ ವಿಲ್ಸ್​​ ಸಂಶೋಧನೆ ನಡೆಸಿ ಪ್ರಬಂಧವೊಂದನ್ನು ಮಂಡನೆ ಮಾಡಿದ್ದರು.

First published: May 10, 2019, 10:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading