ಮೋಸ್ಟ್​ ವಾಂಟೆಡ್​ ಕ್ರಿಮಿನಲ್​​ ಮುನ್ನಾ ಬಜರಂಗಿ ಹತ್ಯೆ: ಯುಪಿ ಜೈಲಿನಲ್ಲಿ ಗುಂಡು ಹಾರಿಸಿ ಕೊಲೆ


Updated:July 9, 2018, 10:35 AM IST
ಮೋಸ್ಟ್​ ವಾಂಟೆಡ್​ ಕ್ರಿಮಿನಲ್​​ ಮುನ್ನಾ ಬಜರಂಗಿ ಹತ್ಯೆ: ಯುಪಿ ಜೈಲಿನಲ್ಲಿ ಗುಂಡು ಹಾರಿಸಿ ಕೊಲೆ

Updated: July 9, 2018, 10:35 AM IST
ನ್ಯೂಸ್ 18 ಕನ್ನಡ

ಲಕ್ನೋ(ಜು.09): ಬಿಜೆಪಿ ಶಾಸಕ ಕೃಷ್ಣಾನಂದ ರಾಯ್​ ಹತ್ಯೆ ಆರೋಪಿ ಮುನ್ನಾ ಬಜರಂಗಿಯನ್ನು ಉತ್ತರ ಪ್ರದೇಶದ ಬಾಗಪತ್​ ಜೈಲಿನಲ್ಲಿ ಹತ್ಯೆಗೈಯಲಾಗಿದೆ. ಒಂದು ಕಾಲದಲ್ಲಿ ಮುಖ್ತಾರ್​ ಅನ್ಸಾರಿಯ ಆಪ್ತ ಹಾಗೂ ಪೂರ್ವಾಂಚಲದಲ್ಲಿ ಗ್ಯಾಂಗ್​ವಾರ್​ನಲ್ಲಿ ಸದ್ದು ಮಾಡಿದ್ದ ಮುನ್ನಾ ಬಜರಂಗಿ, ಬಿಜೆಪಿ ಶಾಸಕ ಕೃಷ್ಣಾನಂದ್​ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಈತನ ವಿರುದ್ಧ ಕೊಲೆ, ದರೋಡೆಯ ಮತ್ತಷ್ಟೂ ಪ್ರಕರಣಗಳು ದಾಖಲಿಸಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಮುನ್ನಾ ಹೆಂಡತಿ ಎಸ್​ಟಿಎಫ್​ ವಿರುದ್ಧ ಆರೋಪ ಹೊರಿಸುತ್ತಾ, ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್​ ಬಳಿ ತನ್ನ ಗಂಡನ ಜೀವಕ್ಕೆ ಅಪಾಯವಿದೆ, ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದರು. ಮುನ್ನ ಆ ಸಂದರ್ಭದಲ್ಲಿ ಝಾನ್ಸಿ ಜೈಲಿನಲ್ಲಿದ್ದ.

ಪ್ರೇಮ್​ ಪ್ರಕಾಶ್ ಸಿಂಗ್​(ಮುನ್ನಾ ಬಜರಂಗಿ)ಯ ಹೆಂಡತಿ ಸೀಮಾ "ನನ್ನ ಗಂಡನ ಜೀವಕ್ಕೆ ಅಪಾಯವಿದೆ. ಯುವಪಿ ಎಸ್​ಟಿಎಫ್​ ಹಾಗೂ ಪೊಲೀಸರು ಅವರ ಎನ್​ಕೌಂಟರ್​ ಮಾಡುವ ತಯಾರಿಯಲ್ಲಿದೆ. ಝಾನ್ಸಿ ಜೈಲಿನಲ್ಲಿ ಮುನ್ನ ಮೇಲೆ ಮಾರಣಾಂತಿಹ ದಾಳಿ ನಡೆಸಲಾಗಿದೆ. ಕೆಲ ಪ್ರಭಾವಿ ನಾಯಕರು ಹಾಗೂ ಅಧಿಕಾರಿಗಳು ಮುನ್ನಾರ ಹತ್ಯೆ ನಡೆಸಲು ಷಡ್ಯಂತ್ರ ರೂಪಿಸಿದ್ದಾರೆಂದು" ಮನವಿ ಮಾಡಿದ್ದರು.


Loading...

ಮುನ್ನಾರ ಶಾರ್ಪ್​ ಶೂಟರ್ಸ್​ ಪೊಲೀಸರ ಬಲೆಗೆ:

ಮೇ 26 ರಂದು ಉತ್ತರ ಪ್ರದೇಶದ ಪೊಲೀಸ್​ ಇಲಾಖೆಯ ಸ್ಪೆಷಲ್​ ಟಾಸ್ಕ್ ಫೋರ್ಸ್​(ಎಸ್​​ಟಿಎಫ್​)ನ ಗೋರಕ್​ಪುರ್​​ ಯೂನಿಟ್​ ಖೋರಾಬಾರ್​ ಕ್ಷೇತ್ರದಲ್ಲಾದ ಹೊಡೆದಾಟದಲ್ಲಿ ಮುನ್ನಾ ಬಜರಂಗಿ ಗ್ಯಾಂಗ್​ನ ಇಬ್ಬರು ಶಾರ್ಪ್​ ಶೂಟರ್​ಗಳನ್ನು ಬಂಧಿಸಿದ್ದರು. ಪೊಲೀಸರ ಬಲೆಗೆ ಸಿಕ್ಕ ಇಬ್ಬರು ದುಷ್ಕರ್ಮಿಗಳು ನೀರಜ್​ ಹತ್ಯಾಕಾಂಡದಲ್ಲಿ ಝಾರ್ಖಂಡ್​ ಜೈಲಿನಲ್ಲಿ ಬಂಧಿಯಾಗಿದ್ದ ಮುನ್ನಾ ಬಜರಂಗಿ ಗ್ಯಾಂಗ್​ ಸದಸ್ಯ ಅಮನ್​ ಸಿಂಗ್​ ಸೂಚನೆಯಂತೆ ಹತ್ಯೆಗಳನ್ನು ಮಾಡುತ್ತಿದ್ದರು.
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...