ವಾಜಪೇಯಿಯೊಂದಿಗೆ ನೆರಳಿನಂತಿರುತ್ತಿದ್ದ ಶಿವಕುಮಾರ್​ ಯಾರು ಗೊತ್ತಾ? ಇಲ್ಲಿದೆ ಸೀಕ್ರೆಟ್​!


Updated:August 17, 2018, 4:22 PM IST
ವಾಜಪೇಯಿಯೊಂದಿಗೆ ನೆರಳಿನಂತಿರುತ್ತಿದ್ದ ಶಿವಕುಮಾರ್​ ಯಾರು ಗೊತ್ತಾ? ಇಲ್ಲಿದೆ ಸೀಕ್ರೆಟ್​!
ಶಿವಕುಮಾರ್​ ಪಾರೀಕ್​ರೊಂದಿಗೆ ಅಟಲ್​ ಬಿಹಾರಿ ವಾಜಪೇಯಿ
  • Share this:
ನ್ಯೂಸ್​ 18 ಕನ್ನಡ

ಲಕ್ನೋ(ಆ.17): ಅದೊಂದು ರಕ್ತ ಸಂಬಂಧವಲ್ಲದಿದ್ದರೂ, ಧೃಡ ಹಾಗೂ ಅಛಲ ಸಂಬಂಧವಾಗಿತ್ತು. ಇಂತಹ ಸಂಬಂಧ ಹೊಂದಿದ್ದ ಆ ಗೆಳೆಯರು ಬೇರಾರೂ ಅಲ್ಲ, ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಹಾಗೂ ಅವರೊಂದಿಗೆ ಬರೋಬ್ಬರಿ 60 ವರ್ಷಗಳ ಕಾಲ ನೆರಳಿನಂತಿದ್ದ ಜಯ್ಪುರದ ಶಿವಕುಮಾರ್​ ಪಾರೀಕ್​. ಶಿವಕುಮಾರ್​ ಪಾರೀಕ್​ ಹಲವಾರು ವರ್ಷಗಳಿಂದ ಅಟಲ್​ ಬಿಹಾರಿ ವಾಜಪೇಯಿಯವರ ಆಪ್ತ ಸಹಾಯಕ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಶಿವಕುಮಾರ್​ ಪಾರೀಕ್​ರಿಗೆ ತಮ್ಮ ನಾಯಕ ತಮ್ಮನ್ನು, ಈ ಲೋಕವನ್ನು ಬಿಟ್ಟು ಶಾಶ್ವತವಾಗಿ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆಂಬ ಅಸಮಾಧಾನವಿದೆ.

ಶಿವಕುಮಾರ್​ ಕೇವಲ ವಾಜಪೇಯಿಯವರ ಆಪ್ತ ಸಹಾಯಕರಾಗಿರಲಿಲ್ಲ. ಬದಲಾಗಿ ಅವರ ಪ್ರತಿಯೊಂದು ರಾಜಕೀಯ ಏಳು ಬೀಳುಗಳಿಗೆ ಸಾಕ್ಷಿಯಾಗಿದ್ದವರು. ವಾಜಪೇಯಿಯವರ ಅನುಪಸ್ಥಿತಿಯಲ್ಲಿ ಹಲವಾರು ವರ್ಷಗಳ ಕಾಲ ಶಿವಕುಮಾರ್​ರವರೇ ಲಕ್ನೋ ಸಂಸದೀಯ ಕ್ಷೇತ್ರವನ್ನು ನೋಡಿಕೊಂಡಿದ್ದರು. ಎಲ್ಲಯವರೆಗೂ ವಾಜಪೇಯಿ ಆರೋಗ್ಯವಂತರಾಗಿದ್ದರೋ ಅಲ್ಲಯವರೆಗೆ ಅವರೆಲ್ಲಾ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಶಿವಕುಮಾರ್​ ಭಾಗವಹಿಸಿದ್ದರು. ಆದರೆ ಯಾವಾಗ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಅನಾರೋಗ್ಯಕ್ಕೀಡಾಗಿ ರಾಜಕೀಯ ಹಾಗೂ ಸಾಮಾಜಿಕ ಜೀವನದಿಂದ ದೂರ ಸರಿದರೋ ಅಂದಿನಿಂದ ಶಿವಕುಮಾರ್​ರವರೇ ಅವರ ದಿನಚರಿ ನೋಡಿಕೊಳ್ಳುತ್ತಿದ್ದಾರೆ.

ವಾಜಪೇಯಿಯವರ ಅನಾರೋಗ್ಯದ ಕುರಿತಾಗಿ ಮಾತನಾಡಿದ ಶಿವಕುಮಾರ್​ರವರು 'ಅನಾರೋಗ್ಯಕ್ಕೀಡಾದ ಬಳಿಕ ವಾಜಪೇಯಿಯವರು ಬಹಳ ಕಡಿಮೆ ಮಾತನಾಡುತ್ತಿದ್ದರು, ಆದರೆ ಅವರು ಕಂಡಿದ್ದ ಭವಿಷ್ಯದ ಕನಸು ಮಾತ್ರ ಅದೇ ಆಗಿತ್ತು. ಅವರು ಅನಾರೋಗ್ಯಕ್ಕೀಡಾಗಿದ್ದರೂ ಅಂದಿನ ಧಾಟಿಯಲ್ಲೇ ಮಾತನಾಡಲು ಬಯಸುತ್ತಿದ್ದರು ಆದರೆ ಮಾತುಗಳು ತೊದಲುತ್ತಿದ್ದವು. ಹೀಗಾಗಿ ಅವರು ಹೆಚ್ಚಾಗಿ ಸನ್ನೆಗಳ ಮೂಲಕವೇ ಮಾತನಾಡುತ್ತಿದ್ದರು. ಯಅವುದಾದರೂ ವಸ್ತು ಬೇಕಿದ್ದರೆ ಆಕಡೆ ಬೊಟ್ಟು ಮಾಡಿ ತಂದು ಕೊಡುವಂತೆ ಹೇಳುತ್ತಿದ್ದರು. ನನಗೆ ಈಗಲೂ ಭಾರತೀಯ ರಾಜಕೀಯದ ಹುಲಿ ಜೀವಂತವಾಗಿದ್ದಾರೆಂದು ಅನಿಸುತ್ತದೆ, ಅವರು ನಮ್ಮನ್ನಗಲಿ ಹೋಗಲು ಸಾಧ್ಯವಿಲ್ಲ" ಎಂದಿದ್ದಾರೆ.

ಭಾರತದ ಮಾಜಿ ಪ್ರಧಾನಿ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಗುರುವಾರ ಸಂಜೆ 05.05ಕ್ಕೆ ನಿಧನರಾಗಿದ್ದಾರೆ. ಅವರ ನಿಧನದಿಂದಾಗಿ ಆಡಳಿತ ಪಕ್ಷ ಸೇರಿದಂತೆ ವಿಪಕ್ಷ ಹಾಗೂ ದೇಶದಾದ್ಯಂತ ಶೋಕದ ಛಾಯೆ ಮೂಡಿದೆ.
First published:August 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading