Viral Video: ಲಕ್ನೋ ಹುಡುಗಿ ಕ್ಯಾಬ್‌ ಡ್ರೈವರ್‌ಗೆ ಹೊಡೆಯುತ್ತಿದ್ದರೂ ಆ ಚಾಲಕ ಸುಮ್ಮನಿದ್ದದ್ದು ಏಕೆ ಗೊತ್ತಾ..?

ಆಕೆ ನನ್ನ ಮೊಬೈಲ್ ಅನ್ನು ಮುರಿದುಹಾಕಿದರು. ಅದು ನನಗೆ ಕೆಲಸ ಕೊಟ್ಟ ಮಾಲೀಕರದ್ದು. ನನ್ನ ಕಾರಿಗೂ ಹಾನಿಯಾಗಿದೆ. ನಾನು ಸುಮಾರು 60,000 ರೂಪಾಯಿ ನಷ್ಟ ಅನುಭವಿಸಿದೆ'' ಎಂದು ಅವರು ಬೇಸರದಿಂದ ಹೇಳಿದ್ದಾರೆ

ಕ್ಯಾಬ್​ ಚಾಲಕನಿಗೆ ಹೊಡೆದ ಮಹಿಳೆ

ಕ್ಯಾಬ್​ ಚಾಲಕನಿಗೆ ಹೊಡೆದ ಮಹಿಳೆ

  • Share this:
ಉತ್ತರ ಪ್ರದೇಶ (Uttar Pradesh) ಲಕ್ನೋದಲ್ಲಿನ ಬ್ಯುಸಿಯಾಗಿರುವ ಟ್ರಾಫಿಕ್ ಸಿಗ್ನಲ್​ ಬಳಿ ಕ್ಯಾಬ್ ಚಾಲಕನಿಗೆ ಮಹಿಳೆಯೊಬ್ಬರು ಪದೇ ಪದೇ ಕಪಾಳಕ್ಕೆ ಹೊಡೆಯುತ್ತಿದ್ದ ವಿಡಿಯೋ ಕೆಲ ಸಮಯದ ಹಿಂದೆ ವೈರಲ್‌ (Viral Video) ಆಗಿತ್ತು. ಈಗಲೂ ಸಹ ಆ ವಿಡಿಯೋ ನೋಡಿದರೆ ಕಣ್ಣು ಮುಚ್ಚದಂತೆ ನೋಡುತ್ತಾರೆ. ಈ ವಿಡಿಯೋ ಬಗ್ಗೆ ಈಗ ಆ ಮಹಿಳೆ ಮತ್ತು ಚಾಲಕ ಇಬ್ಬರೂ ಬೇರೆ ಬೇರೆ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದು, ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಿದ್ದಾರೆ. ಮಾಧ್ಯಮವೊಂದರ ಜೊತೆಗಿನ ಒಂದು ಸಂಭಾಷಣೆಯಲ್ಲಿ, ಚಾಲಕ ಶಹಾದತ್ ಅಲಿ ಕಪಾಳ ಮೋಕ್ಷ ಮಾಡಿಸಿಕೊಂಡರೂ ಏಕೆ ತಾನು ಹಿಂಸೆಯ ಹಾದಿಗೆ ಇಳಿಯಲಿಲ್ಲ. ಅಂದರೆ ನಾನು ಏಕೆ ಆಕೆಗೆ ತಿರುಗಿಸಿ ಹೊಡೆಯಲಿಲ್ಲ ಎಂದು ವಿವರಿಸಿದ್ದಾರೆ.

"ನನ್ನ ಮನೆಯಲ್ಲಿ, ನನ್ನ ಹೆತ್ತವರು ಮಹಿಳೆಗೆ ಹೊಡೆಯುವುದರನ್ನು ನನಗೆ ಕಲಿಸಿಲ್ಲ. ನಾನು ತುಂಬಾ ಒಳ್ಳೆಯ ಕುಟುಂಬದಿಂದ ಬಂದವನು. ನನ್ನ ತಾಯಿ ಎಂದಿಗೂ ಮಹಿಳೆಯನ್ನು ಹೊಡೆಯಬಾರದೆಂದು ನನಗೆ ಕಲಿಸಿದ್ದಾರೆ. ಸ್ವರ್ಗವು ತಾಯಿಯ ಪಾದದಲ್ಲಿದೆ, ಅದು ನಿಮಗೆ ತಿಳಿದಿದೆ'' ಎಂದು ಅವರು ಹೇಳಿದ್ದಾರೆ. ಖಾಸಗಿ ವಾಹಿನಿಯೊಂದಿಗೆ ಈ ಘಟನೆಯ ಕುರಿತಾಗಿ ಅವರು ವಿವರಿಸಿರುವುದು ಹೀಗೆ.

State Government increase Taxi travel price in all over state include bangalore
ಸಾಂದರ್ಭಿಕ ಚಿತ್ರ


"ಆಕೆ ನನ್ನ ಮೊಬೈಲ್ ಅನ್ನು ಮುರಿದುಹಾಕಿದರು. ಅದು ನನಗೆ ಕೆಲಸ ಕೊಟ್ಟ ಮಾಲೀಕರದ್ದು. ನನ್ನ ಕಾರಿಗೂ ಹಾನಿಯಾಗಿದೆ. ನಾನು ಸುಮಾರು 60,000 ರೂಪಾಯಿ ನಷ್ಟ ಅನುಭವಿಸಿದೆ'' ಎಂದು ಅವರು ಬೇಸರದಿಂದ ಹೇಳಿದ್ದಾರೆ.

ಇದನ್ನೂ ಓದಿ: ತನ್ನ ಇನ್​ಸ್ಟಾಗ್ರಾಂನಿಂದ ಸಹೋದರಿ ರಂಗೋಲಿಯನ್ನು ಅನ್‌ಫಾಲೋ ಮಾಡುತ್ತೇನೆಂದ Kangana Ranaut..!

ಆದರೆ, ಕ್ಯಾಬ್​ ಚಾಲಕನಿಗೆ ಹೊಡೆದ ಆಕೆ ಹೇಳುವುದೇ ಬೇರೆ. ತಾನು ಹಲವಾರು ರೋಗಗಳಿಂದ ಬಳಲುತ್ತಿದ್ದೇನೆ ಮತ್ತು ಎರಡು ವರ್ಷಗಳಿಂದ ಕಿಡಿಗೇಡಿಗಳ ಗುಂಪಿನಿಂದ ಕಿರುಕುಳಕ್ಕೊಳಗಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಜುಲೈ 31 ರಂದು ಲಕ್ನೋದಲ್ಲಿ ಬ್ಯುಸಿಯಾಗಿರುವ ಅಡ್ಡರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಕ್ಯಾಬ್ ಚಾಲಕನನ್ನು ನಿರ್ದಯವಾಗಿ ಥಳಿಸಿದ ವಿಡಿಯೋ ವೈರಲ್‌ ಆದಾಗ ಅಂತರ್ಜಾಲದಲ್ಲಿ ಹುಡುಗಿಯ ಬಂಧನಕ್ಕೆ ಒತ್ತಾಯಿಸಲಾಯ್ತು. ನಂತರ, ಪೊಲೀಸರು ಹುಡುಗಿಯ ವಿರುದ್ಧ ದೂರು ದಾಖಲಿಸಿದ್ದರು. ಆರಂಭದಲ್ಲಿ, ಪೊಲೀಸರು ಚಾಲಕನ ವಿರುದ್ಧವೇ ಹಲವು ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ, ನಂತರ ಅವರನ್ನು ಬಿಡುಗಡೆ ಮಾಡಲಾಯ್ತು.

ಇದನ್ನೂ ಓದಿ: Defamation Case: ಬಂಧನದ ಭೀತಿಯಲ್ಲಿ ಬಾಲಿವುಡ್ ​ನಟಿ Kangana Ranaut

ಆ ಮಹಿಳೆ ಬರೋಬ್ಬರಿ 22 ಬಾರಿ ಕ್ಯಾಬ್‌ ಚಾಲಕನ ಕಪಾಳಕ್ಕೆ ಹೊಡೆದಿರುವುದು ವಿಡಿಯೋದಲ್ಲಿ ದಾಖಲಾಗಿತ್ತು. ಆದರೂ ಪೊಲೀಸರು ಆಕೆಯನ್ನು ಬಂಧಿಸದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವು ಚರ್ಚೆಗಳು ನಡೆದಿವೆ. ಪ್ರಿಯದರ್ಶಿನಿ ನಾರಾಯಣ್ ಯಾದವ್ ಎಂಬ ಮಹಿಳೆ, ಟ್ಯಾಕ್ಸಿ ಚಾಲಕ ಸಾದತ್ ಅಲಿ ಸಿದ್ದಿಕಿ ತನ್ನ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಮಹಿಳೆ ಈ ರೀತಿ ಹೊಡೆದಿದ್ದಾರೆ. ಇಬ್ಬರೂ ನಂತರ ಪರಸ್ಪರ ವಿರುದ್ಧ ದೂರುಗಳನ್ನು ಸಲ್ಲಿಸಿದ್ದಾರೆ. ಉತ್ತರ ಪ್ರದೇಶ ರಾಜಧಾನಿ ಲಖನೌನ ಕೃಷ್ಣಾ ನಗರದಲ್ಲಿ ಈ ಘಟನೆ ವರದಿಯಾಗಿತ್ತು.

ಇದನ್ನೂ ಓದಿ: ಸೀಮಂತಕ್ಕೂ ಮೊದಲು ಫೋಟೋಶೂಟ್​ಗೆ ಪೋಸ್​ ಕೊಟ್ಟ Nikhil Kumaraswamy-Revathi

ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ, ಆ ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅವಕಾಶವಿಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೆ, ಪೊಲೀಸರು ತಮ್ಮ ಕೆಲಸ ಸರಿಯಾಗಿ ಮಾಡಿದ್ದರೆ, ನಾನು ಈ ರೀತಿ ಹೊಡೆಯುತ್ತಿರಲಿಲ್ಲ ಎಂದು ಪೊಲೀಸರ ವಿರುದ್ಧವೂ ಟೀಕೆ ಮಾಡಿದ್ದರು.
Published by:Anitha E
First published: