• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Doraemon: 4 ಅಂತಸ್ತಿನ ಕಟ್ಟಡ ಕುಸಿದರೂ ಬಚಾವಾದ ಬಾಲಕ, ಡೋರೆಮಾನ್‌ ಕಾರ್ಟೂನ್‌ ನೋಡಿ ಕಲಿತ ಟ್ರಿಕ್ಸ್‌ನಿಂದ ಅಪಾಯದಿಂದ ಪಾರಾದ ಪೋರ!

Doraemon: 4 ಅಂತಸ್ತಿನ ಕಟ್ಟಡ ಕುಸಿದರೂ ಬಚಾವಾದ ಬಾಲಕ, ಡೋರೆಮಾನ್‌ ಕಾರ್ಟೂನ್‌ ನೋಡಿ ಕಲಿತ ಟ್ರಿಕ್ಸ್‌ನಿಂದ ಅಪಾಯದಿಂದ ಪಾರಾದ ಪೋರ!

ಲಕ್ನೋ ಕಟ್ಟಡ ದುರಂತ

ಲಕ್ನೋ ಕಟ್ಟಡ ದುರಂತ

ಮಂಗಳವಾರ ಲಕ್ನೋದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಮೂವರು ಮೃತಪಟ್ಟಿದ್ದರು. ದುರಂತದಲ್ಲಿ ಸ್ಥಳೀಯ ರಾಜಕಾರಣಿಯೊಬ್ಬರ ಆರು ವರ್ಷದ ಮಗ ಮುಸ್ತಫಾ ಪವಾಡ ಸದೃಶವಾಗಿ ಜೀವ ಉಳಿದುಕೊಂಡಿದ್ದಾರೆ. ಈ ಮಗು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದು ಟಿವಿಯಲ್ಲಿ ಕಾರ್ಟೂನ್ ಶೋನಲ್ಲಿ ಕಲಿತ ಟ್ರಿಕ್ಸ್​ ಬಳಸಿಕೊಂಡು ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Lucknow, India
  • Share this:

ಲಕ್ನೋ: ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಕ್ನೋದಲ್ಲಿ ನಾಲ್ಕು ಅಂತಸ್ಥಿನ ಕಟ್ಟಡ ಕುಸಿದು (Lucknow Building Collapse) ಬಿದ್ದು ಮೂವರು ಸಾವನ್ನಪ್ಪಿದ್ದು, ಹಲವು ಮಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಗಾಯಗೊಂಡಿದ್ದರು. ಲಕ್ನೋದ ಹಜರತ್ ಗಂಜ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಮಂಗಳವಾರ ರಾತ್ರಿ ಕುಸಿದು ಬಿದ್ದಿತ್ತು. ಈ ಘಟನೆಯಲ್ಲಿ 6 ವರ್ಷದ ಪುಟ್ಟ ಬಾಲಕವೊಂದು ಪವಾಡ ಸದೃಶವಾಗಿ ಪಾರಾಗಿದೆ. ಅದು ಟಿವಿಯಲ್ಲಿ ಪ್ರಸಾರವಾಗುವ ಡೋರೆಮಾನ್ (Doraemon) ಕಾರ್ಟೂನ್ ಶೋನ ಉಪಾಯವನ್ನು ಬಳಸಿಕೊಂಡು ತನ್ನ ಜೀವವನ್ನು ತಾನೇ ಉಳಿಸಿಕೊಂಡಿದ್ದಾನೆ.


ಬಹುಮಹಡಿ ಕಟ್ಟಡದ ಕುಸಿತದಿಂದ ಇಬ್ಬರು ಸಾವನ್ನಪ್ಪಿದ್ದರು.  ಸಮಾಜವಾದಿ ಪಕ್ಷದ ವಕ್ತಾರ ಅಬ್ಬಾಸ್ ಹೈದರ್ ಅವರ ಪತ್ನಿ ಉಝ್ಮಾ ಹೈದರ್ ಮತ್ತು ತಾಯಿ ಬೇಗಂ ಹೈದರ್ ಸೇರಿ ಮೂವರು ಸಾವನ್ನಪ್ಪಿದ್ದರು. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆ ನಡೆಸಿ 16 ಮಂದಿಯನ್ನ ರಕ್ಷಿಸಿದ್ದರು. ಘಟನೆ ಸಂಬಂಧ ಕಟ್ಟದ ಮಾಲಿಕರಾದ ಎಸ್‌ಪಿ ಶಾಸಕ ಶಾಹಿದ್ ಮಂಜೂರ್ ಅವರ ಪುತ್ರ ನವಾಜಿಶ್‌ ನನ್ನು ಮೀರತ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.


ಡೋರೆಮಾನ್ ಟ್ರಿಕ್ಸ್ ಬಳಸಿ ಜೀವ ಉಳಿಸಿಕೊಂಡ ಬಾಲಕ


ದುರಂತದಲ್ಲಿ ಸ್ಥಳೀಯ ರಾಜಕಾರಣಿಯೊಬ್ಬರ ಆರು ವರ್ಷದ ಮಗ ಮುಸ್ತಫಾ ಪವಾಡ ಸದೃಶವಾಗಿ ಜೀವ ಉಳಿದುಕೊಂಡಿದ್ದಾರೆ. ಈ ಮಗು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದು ಒಂದು ಟಿವಿಯಲ್ಲಿ ಕಾರ್ಟೂನ್ ಶೋನಲ್ಲಿ ಕಲಿತ ಟ್ರಿಕ್ಸ್​ನಿಂದ ಎಂದರೆ ನಂಬಲೇಬೇಕು ಮತ್ತು ಆಶ್ಚರ್ಯ ಕೂಡ. ಮುಸ್ತಾಫ ಡೋರೆಮಾನ್ ಶೋನಲ್ಲಿ ಮೂಲಕ ಕಲಿತ ಟ್ರಿಕ್ಸ್​ ಅನ್ನ ಅನಿಸರಿಸಿ ತಾನು ರಕ್ಷಿಸಿಕೊಂಡಿದ್ದಾನೆ. ಡೋರೆಮಾನ್​ ಶೋನಲ್ಲಿ ಭೂಕಂಪದ ಸಂದರ್ಭದಲ್ಲಿ ಬಳಸಿದ್ದ ಟ್ರಿಕ್ಸ್​ಅನ್ನ ಮುಸ್ತಾಫ ದುರಂತದ ವೇಳೆ ಅನುಸರಿಸಿದ್ದಾನೆ.


ಇದನ್ನೂ ಓದಿ: ಸೂರ್ಯನನ್ನು ಬರಿ ಕಣ್ಣಿನಿಂದ ನೋಡಬಹುದು ಗೊತ್ತಾ? ಇದು ಹೇಗೆ ಸಾಧ್ಯ ಅಂತ ಕೇಳ್ತೀರಾ? ಇಲ್ಲೊಬ್ರು ಸಾಧನೆ ಮಾಡಿದ್ದಾರೆ ನೋಡಿ.


ಭೂಕಂಪನ ಸಂಭವಿಸಿದಾಗ ಏನು ಮಾಡಬೇಕೆಂಬುದನ್ನ ನೆನಪಿನಲ್ಲಿತ್ತು


ಕಟ್ಟಡವು ಹಠಾತ್ತನೆ ನಡುಗಿದಂತದಾಗ ನಾನು ಟಿವಿ ನೋಡುತ್ತಿದ್ದೆ. ಹಿಂದಿನ ದಿನ, ನಗರದಲ್ಲಿ ಲಘು ಕಂಪನದ ಅನುಭವವಾಗಿತ್ತು. ಆ ಸಂದರ್ಭದಲ್ಲಿ ಭೂಕಂಪ ಸಂಭವಿಸಿದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿಷಯಗಳ ಬಗ್ಗೆ ಡೋರೆಮನ್​ ಶೋನಲ್ಲಿ ನೋಡಿದ್ದು ನನಗೆ ನೆನಪಾಯಿತು. ಕಟ್ಟಡ ಕಂಪಿಸಿದಾಗ ಭೂಕಂಪವೇ ಸಂಭವಿಸಿದೆ ಎಂದು ನಾನು ಭಾವಿಸಿದೆ" ಎಂದು ಮುಸ್ತಾಫ ಹೇಳಿದ್ದಾನೆ.




ಕಾರ್ಟೂನ್ ಶೋ ಟ್ರಿಕ್ಸ್ ನೆನಪಾಯಿತು


"ಕಟ್ಟಡ ನಡುಗಿದಂತಾಯಿತು, ಆ ಸಂದರ್ಭದಲ್ಲಿ ನಾನು ಭಯಭೀತನಾಗಿದ್ದೆ ಆದರೆ ನಾನು ಕಾರ್ಟೂನ್ ಶೋ 'ಡೋರೆಮನ್' ನ ಸಂಚಿಕೆಯೊಂದನ್ನ ನೆನಪಿಸಿಕೊಂಡೆ. ಇದರಲ್ಲಿ ನೋಬಿತಾ ( ವೆಬ್​ ಸಿರೀಸ್​ನ ಕೇಂದ್ರ ಪಾತ್ರದಾರಿ) ಭೂಕಂಪದ ಸಮಯದಲ್ಲಿ ಮನೆಯ ಮೂಲೆಗಳಲ್ಲಿ ಅಥವಾ ಹಾಸಿಗೆಯ ಕೆಳಗೆ ಆಶ್ರಯ ಪಡೆದು ತನ್ನನ್ನು ತಾನು ರಕ್ಷಿಸಿಕೊಳ್ಳುವವುದನ್ನು ನೋಡಿದ್ದೆ. ನಾನೂ ಕೂಡ ಒಂದು ಸೆಕೆಂಡ್ ವ್ಯರ್ಥ ಮಾಡದೆ, ಹಾಸಿಗೆಯ ಕೆಳಗೆ ಮಲಗಿಕೊಂಡೆ" ಎಂದು ಮುಸ್ತಫಾ ಮಾಧ್ಯಮವೊಂದಕ್ಕೆ ತನ್ನ ಕಥೆಯನ್ನು ವಿವರಿಸಿದ್ದಾನೆ.


ಕ್ಷಣದಲ್ಲಿ ಇಡೀ ಕಟ್ಟ ಕುಸಿಯಿತು


ಕಟ್ಟಡ ಕುಸಿಯುವ ಜೋರು ಶಬ್ಧ ಬಂದಾಗ ಅಮ್ಮ ಕಿರುಚುತ್ತಾ ಓಡಿ ಬರುತ್ತಿರುವುದನ್ನ ನಾನು ನೋಡಿದೆ. ಆದರೆ ಕ್ಷಣಮಾತ್ರದಲ್ಲಿ ಇಡೀ ಕಟ್ಟ ಕುಸಿಯಿತು ಮತ್ತು ಸುತ್ತಾ ಕತ್ತಲು ಕವಿಯಿತು. ಘಟನೆ ನಡೆದ ನಂತರ ನಾನು ಪ್ರಜ್ಞಾಹೀನನಾಗಿರಲಿಲ್ಲ. ಸುತ್ತಮುತ್ತಲಿನ ಜನರು ನನ್ನ ತಂದೆ ಮತ್ತು ತಾಯಿಗಾಗಿ ಕಿರುಚುತ್ತಿದ್ದರು. ಅವರು ಅಳುವುದು ನನಗೆ ಕೇಳಿಸುತ್ತಿತ್ತು. ನಂತರ ಕೆಲವು ಜನರು ನನ್ನನ್ನು ಎಲ್ಲೋ ಕರೆದುಕೊಂಡು ಹೋದದ್ದು ನನಗೆ ನೆನಪಿದೆ ಎಂದು ತಿಳಿಸಿದ್ದಾನೆ.


 lucknow building collapse a 6 year old boy uses ideas of cortoon film to save himself
ಲಕ್ನೋದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ


ತಾಯಿ-ಅಜ್ಜಿ ಸಾವು


ವರದಿಯ ಪ್ರಕಾರ ಘಟನೆ ನಡೆದಾಗ ಮುಸ್ತಾಫ ತಂದೆ ಅಬ್ಬಾಸ್​ ಹೈದರ್​ ಮನೆಯಲ್ಲಿರಲಿಲ್ಲ. ಆದರೆ ಹಿರಿಯ ಕಾಂಗ್ರೆಸ್​ ಮುಖಂಡರಾಗಿರುವ ಬಾಲಕನ ಅಜ್ಜ ಅಮೀರ್ ಹೈದರ್​ ಸ್ಥಳದಲ್ಲಿದ್ದರು. ಅವರೂ ಕೂಡ ಈ ದುರ್ಘಟನೆಯಲ್ಲಿ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಆದರೆ ದುರಾದೃಷ್ಟವಶಾತ್ ಬಾಲಕನ ತಾಯಿ ಉಝ್ಮಾ ಹೈದರ್​(30) ಹಾಗೂ ಅಜ್ಜಿ ಬೇಗಂ ಹೈದರ್​(87) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Published by:Rajesha B
First published: