• Home
  • »
  • News
  • »
  • national-international
  • »
  • Crime News: ಅಮ್ಮ ಮತ್ತು ಆಕೆಯ ಪ್ರಿಯಕರ ಸೇರಿ ಅಪ್ಪನನ್ನು ಕೊಂದರು, 10 ವರ್ಷದ ಮಗನಿಂದ ಬಯಲಾಯ್ತು ಕೊಲೆ ರಹಸ್ಯ!

Crime News: ಅಮ್ಮ ಮತ್ತು ಆಕೆಯ ಪ್ರಿಯಕರ ಸೇರಿ ಅಪ್ಪನನ್ನು ಕೊಂದರು, 10 ವರ್ಷದ ಮಗನಿಂದ ಬಯಲಾಯ್ತು ಕೊಲೆ ರಹಸ್ಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Lucknow Murder Case:ರಂಗೋಲಿ ವಿಚಾರವಾಗಿ ಜ್ಯೋತಿ ಹಾಗೂ ಪ್ರದೀಪ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ತಿಂಗಳ ಹಿಂದೆ ಪ್ರದೀಪ್ ಜ್ಯೋತಿಯನ್ನು ಮನೆಯಿಂದ ಹೊರ ಹಾಕಿದ್ದ. ನಂತರ ಆಕೆ ರಂಗೋಲಿಯೊಂದಿಗೆ ವಾಸಿಸುತ್ತಿದ್ದಳು. ಭಾನುವಾರ ರಾತ್ರಿ ರಂಗೋಲಿ ಮತ್ತು ಜ್ಯೋತಿ ಮನೆಗೆ ಆಗಮಿಸಿ ಪ್ರದೀಪ್ ನನ್ನು ಥಳಿಸಿ ಕೊಂದಿದ್ದಾರೆ. ಬಳಿ ಶವವನ್ನು ಕೊಕ್ಕೆಗೆ ನೇತು ಹಾಕಿದ್ದಾರೆ. ಇಷ್ಟೆಲ್ಲಾ ವಿಚಾರವನ್ನು ಅವರ ಮಗ ಮರೆಯಲ್ಲಿ ನಿಂತು ಗಮನಿಸಿದ್ದಾನೆ.

ಮುಂದೆ ಓದಿ ...
  • News18 Kannada
  • Last Updated :
  • Lucknow, India
  • Share this:

ಲಕ್ನೋ(ನ.01): ರಾಜಧಾನಿ ಲಕ್ನೋದ (Lucknow) ಮೋಹನ್‌ಲಾಲ್‌ಗಂಜ್‌ನಲ್ಲಿ ರೈತ ಪ್ರದೀಪ್ ಹತ್ಯೆ ಪ್ರಕರಣದಲ್ಲಿ ಅವರ 10 ವರ್ಷದ ಮಗ ಆಘಾತಕಾರಿ ವಿಚಾರ ಬಹಿರಂಗಪಡಿಸಿದ್ದಾನೆ. ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಾಯಿ ಹಾಗೂ ಆಕೆಯ ಪ್ರಿಯಕರ ಸೇರಿ ತಂದೆಯನ್ನು ಹೇಗೆ ಕೊಂದಿದ್ದಾರೆ ಎಂದು ತಿಳಿಸಿದ್ದಾನೆ. ನಂತರ ಪೊಲೀಸರು ಮೃತನ ಪತ್ನಿ ಜ್ಯೋತಿ ಹಾಗೂ ಆಕೆಯ ಪ್ರಿಯಕರ ರಂಗೋಲಿ ಸಿಂಗ್ ವಿರುದ್ಧ ಕೊಲೆ ಪ್ರಕರಣ (Murder Case) ದಾಖಲಿಸಿದ್ದರು. ಪೊಲೀಸರು ಜ್ಯೋತಿಯನ್ನು ಬಂಧಿಸಿದ್ದು, ಆಕೆಯ ಪ್ರಿಯಕರ ರಂಗೋಲಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಭಾನುವಾರ ರಾತ್ರಿ ತಾಯಿ ಮತ್ತು ಚಿಕ್ಕಪ್ಪ ಮನೆಗೆ ಬಂದಿದ್ದರು. ಅಪ್ಪನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದು ಬಳಿಕ ಫ್ಯಾನ್‌ಗೆ ಶವವನ್ನು ನೇತು ಹಾಕಿದ್ದಾರೆ ಎಂದು ಮಗ ತಿಳಿಸಿದ್ದಾನೆ. ಈ ಪ್ರಕರಣವನ್ನು ಮೊದಲು ಪೊಲೀಸರು ಆತ್ಮಹತ್ಯೆ ಎಂದು ಪರಿಗಣಿಸಿದ್ದರು. ಆದರೆ ಮಗ ಕೊಟ್ಟ ಹೇಳಿಕೆ ಬಳಿಕ ಕೊಲೆ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: SriRamulu: ನಿನ್ನ ಅಹಂಕಾರ ಜಾಸ್ತಿಯಾಗಿದೆ; ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ರಾಮುಲು ವಾಗ್ದಾಳಿ


11 ವರ್ಷಗಳ ಹಿಂದೆ ವಿವಾಹ


ಗಮನಾರ್ಹವೆಂದರೆ ಪ್ರದೀಪ್ ಮತ್ತು ಜ್ಯೋತಿ 11 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇಬ್ಬರಿಗೂ ಮೂವರು ಮಕ್ಕಳಿದ್ದರು. ಆರಂಭದಲ್ಲಿ ಪ್ರದೀಪ್ ಇ-ರಿಕ್ಷಾ ಓಡಿಸುತ್ತಿದ್ದರು. ನಂತರ ಕೃಷಿ ಆರಂಭಿಸಿದರು. ಈ ನಡುವೆ ರಂಗೋಲಿ ವಿಚಾರವಾಗಿ ಜ್ಯೋತಿ ಹಾಗೂ ಪ್ರದೀಪ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ತಿಂಗಳ ಹಿಂದೆ ಪ್ರದೀಪ್ ಜ್ಯೋತಿಯನ್ನು ಮನೆಯಿಂದ ಹೊರ ಹಾಕಿದ್ದ. ನಂತರ ಆಕೆ ರಂಗೋಲಿಯೊಂದಿಗೆ ವಾಸಿಸುತ್ತಿದ್ದಳು. ಭಾನುವಾರ ರಾತ್ರಿ ರಂಗೋಲಿ ಮತ್ತು ಜ್ಯೋತಿ ಮನೆಗೆ ಆಗಮಿಸಿ ಪ್ರದೀಪ್ ನನ್ನು ಥಳಿಸಿ ಕೊಂದಿದ್ದಾರೆ. ಬಳಿ ಶವವನ್ನು ಕೊಕ್ಕೆಗೆ ನೇತು ಹಾಕಿದ್ದಾರೆ. ಇಷ್ಟೆಲ್ಲಾ ವಿಚಾರವನ್ನು ಅವರ ಮಗ ಮರೆಯಲ್ಲಿ ನಿಂತು ಗಮನಿಸಿದ್ದಾನೆ.


ತಾಯಿಯ ಕುಕೃತ್ಯ ಬಯಲು ಮಾಡಿದ ಮಗ


ಬೆಳಿಗ್ಗೆ ಮಗ ನೆರೆಹೊರೆಯವರ ಬಳಿಗೆ ಬಂದು ತಂದೆಗೆ ಏನೋ ಆಗಿದೆ ಎಂದು ಹೇಳಿದ್ದಾನೆ. ನಂತರ ನೆರೆಹೊರೆಯವರು ಬಂದು ನೋಡಿದಾಗ ಪ್ರದೀಪ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದಾದ ನಂತರ ಪ್ರದೀಪ್ ಸಹೋದರ ಮಹೇಂದ್ರ ಕೂಡ ಸ್ಥಳಕ್ಕೆ ಆಗಮಿಸಿ ಸೋದರಳಿಯನಿಂದ ಸಂಪೂರ್ಣ ಮಾಹಿತಿ ಪಡೆದರು. ಭಾನುವಾರ ರಾತ್ರಿ ತಾಯಿ ಮತ್ತು ಆಕೆಯ ಸ್ನೇಹಿತ ರಂಗೋಲಿ ಬಂದಿದ್ದಾರೆ ಎಂದು ಮಗ ವಶು ಹೇಳಿದ್ದಾನೆ. ಅವನು ತನ್ನ ತಂದೆಯನ್ನು ಹೊಡೆದು. ನಂತರ ಮತ್ತೊಂದು ಕೋಣೆಗೆ ಎಳೆದೊಯ್ದರು. ನಾನು ತಡೆಯಲು ಯತ್ನಿಸಿದಾಗ ತನ್ನನ್ನು ಮತ್ತು ತಂಗಿಯನ್ನು ಕೊಠಡಿಯಲ್ಲಿ ಬಂಧಿಸಲಾಯಿತು ಎಂದಿದ್ದಾನೆ.


ಇದನ್ನೂ ಓದಿ:  Crime News: ಗಂಡನ ಕೊಲೆ ಮಾಡಿಸಿದ್ದ ಹೆಂಡತಿಗಿದ್ದರು ಬಾಯ್‌ ಫ್ರೆಂಡ್ಸ್! ಪತಿ ಮರ್ಮಾಂಗ ಕತ್ತರಿಸಿದವಳ ಹಿಸ್ಟರಿಯೇ ಭಯಾನಕ!


ತಂದೆಯ ಶವದ ಬಳಿ 8 ತಾಸು ಕುಳಿತಿದ್ದ ಮಕ್ಕಳು


ಮಗ ವಶು ಮತ್ತು ಅವನ ತಂಗಿ ಲಾಡೋ ಎಂಟು ತಾಸು ತಂದೆಯ ನೇತಾಡುತ್ತಿದ್ದ ಮೃತದೇಹದ ಬಳಿ ಕುಳಿತಿದ್ದರು. ಭಯ ಹಾಗೂ ರಾತ್ರಿಯಾಗಿದ್ದರಿಂದ ಇಬ್ಬರೂ ಮನೆಯಿಂದ ಹೊರಗೆ ಬಂದಿರಲಿಲ್ಲ. ಮುಂಜಾನೆ, ವಶು ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾನೆ. ಪ್ರದೀಪ್ ಅವರ ಸಹೋದರ ಮಹೇಂದ್ರನ ತಹ್ರೀರ್ ಮತ್ತು ಮಗನ ಹೇಳಿಕೆಯ ಆಧಾರದ ಮೇಲೆ ಜ್ಯೋತಿ ಮತ್ತು ರಂಗೋಲಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಕುಲದೀಪ್ ದುಬೆ ತಿಳಿಸಿದ್ದಾರೆ.

Published by:Precilla Olivia Dias
First published: