• Home
 • »
 • News
 • »
 • national-international
 • »
 • Lt General Anil Chauhan: ಭಾರತದ ಹೊಸ CDS ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಯಾರು? ಇಲ್ಲಿದೆ ವಿವರ

Lt General Anil Chauhan: ಭಾರತದ ಹೊಸ CDS ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಯಾರು? ಇಲ್ಲಿದೆ ವಿವರ

ಭಾರತದ ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ನೇಮಕ

ಭಾರತದ ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ನೇಮಕ

ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ಹೊಸ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನಾಗಿ ನೇಮಿಸಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಕಾರ್ಯನಿರ್ವಹಣೆಯಲ್ಲಿ ಒಗ್ಗೂಡುವಿಕೆಯನ್ನು ತರುವ ಮತ್ತು ದೇಶದ ಒಟ್ಟಾರೆ ಮಿಲಿಟರಿ ಪರಾಕ್ರಮವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಭಾರತದ ನೂತನ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಎಂದರೆ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ಬುಧವಾರದಂದು ನೇಮಕ ಮಾಡಲಾಗಿದೆ.

ಮುಂದೆ ಓದಿ ...
 • Share this:

  ನವದೆಹಲಿ(ಸೆ.29): ಜನರಲ್ ಬಿಪಿನ್ ರಾವತ್ (Gen Bipin Rawat) ಅವರು ಹೆಲಿಕಾಪ್ಟರ್ ಅಪಘಾತದಲ್ಲಿ (Chopper Crash) ಸಾವನ್ನಪ್ಪಿದ ಒಂಬತ್ತು ತಿಂಗಳ ನಂತರ, ಕೇಂದ್ರ ಸರ್ಕಾರ ಬುಧವಾರ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) (Lt General Anil Chauhan (retired) ಅವರನ್ನು ಹೊಸ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನಾಗಿ (Chief of Defence Staff) ನೇಮಿಸಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಕಾರ್ಯನಿರ್ವಹಣೆಯಲ್ಲಿ ಒಗ್ಗೂಡುವಿಕೆಯನ್ನು ತರುವ ಮತ್ತು ದೇಶದ ಒಟ್ಟಾರೆ ಮಿಲಿಟರಿ ಪರಾಕ್ರಮವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಭಾರತದ ನೂತನ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಎಂದರೆ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ಬುಧವಾರದಂದು ನೇಮಕ ಮಾಡಲಾಗಿದೆ.


  9 ತಿಂಗಳ ನಂತರ ಹೊಸ ಸಿಡಿಎಸ್ ನೇಮಕ


  ಜನರಲ್ ಬಿಪಿನ್ ರಾವತ್ ಅವರ ನಿಧನದ ನಂತರ ಸಿಡಿಎಸ್ ಹುದ್ದೆ ಖಾಲಿಯಾಗಿತ್ತು ಮತ್ತು ಒಂಬತ್ತು ತಿಂಗಳ ನಂತರ ಈ ನೇಮಕಾತಿ ನಡೆದಿದೆ ಅಂತ ಹೇಳಬಹುದು. ಲೆಫ್ಟಿನೆಂಟ್ ಜನರಲ್ ಚೌಹಾಣ್ ಅವರು ತಮ್ಮ ಪೂರ್ವಾಧಿಕಾರಿ ಜನರಲ್ ರಾವತ್ ಅವರ ನಿಧನದ ನಂತರ ಖಾಲಿ ಇರುವ ಭಾರತದ ಉನ್ನತ ಮಿಲಿಟರಿ ಹುದ್ದೆಯನ್ನು ಅಲಂಕರಿಸಿದ ಎರಡನೇ ವ್ಯಕ್ತಿಯಾಗಿದ್ದಾರೆ.


  ಸುಮಾರು 40 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು ಹಲವಾರು ಕಮಾಂಡ್, ಸಿಬ್ಬಂದಿ ಮತ್ತು ಅನೇಕ ನೇಮಕಾತಿಗಳನ್ನು ನಿರ್ವಹಿಸಿದ್ದಾರೆ, ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ದಂಗೆ ನಿಗ್ರಹ ಕಾರ್ಯಾಚರಣೆಗಳಲ್ಲಿ ವ್ಯಾಪಕ ಸೇವೆ ಸಲ್ಲಿಸಿ ಅನುಭವ ಪಡೆದವರಾಗಿದ್ದಾರೆ.


  ಹೊಸದಾಗಿ ನೇಮಕಗೊಂಡಿರುವ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.


  • 1961 ರ ಮೇ 18 ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರು 1981 ರಲ್ಲಿ ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್ ಗೆ ನೇಮಕಗೊಂಡರು.

  • ಅವರು ಕೋಲ್ಕತ್ತಾದ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದರು ಮತ್ತು ಅವರನ್ನು ಒಬ್ಬ ಒಳ್ಳೆಯ ಸೈನಿಕನಾಗಿ ರೂಪಿಸಿದ್ದಕ್ಕಾಗಿ ಆ ನಗರಕ್ಕೆ ಆ ಗೌರವ ಸಲ್ಲಲೇಬೇಕು ಎಂದು ಹೇಳುತ್ತಾರೆ ಹೊಸ ಸಿಡಿಎಸ್.

  • ಅವರು ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಡೆಹ್ರಾಡೂನ್ ನ ಇಂಡಿಯನ್ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

  • ಮೇಜರ್ ಜನರಲ್ ದರ್ಜೆಯಲ್ಲಿ, ಅನಿಲ್ ಚೌಹಾಣ್ ಅವರು ಉತ್ತರ ಕಮಾಂಡ್ ನ ನಿರ್ಣಾಯಕ ಬಾರಾಮುಲಾ ಸೆಕ್ಟರ್ ನಲ್ಲಿ ಪದಾತಿಸೈನ್ಯದ ವಿಭಾಗದ ಕಮಾಂಡರ್ ಆಗಿ ಕೆಲಸ ಮಾಡಿದ್ದಾರೆ.

  • ನಂತರ ಲೆಫ್ಟಿನೆಂಟ್ ಜನರಲ್ ಆಗಿ, ಅವರು ಈಶಾನ್ಯದಲ್ಲಿ ಕಾರ್ಪ್ಸ್ ಅನ್ನು ನಿಯಂತ್ರಿಸಿದರು ಮತ್ತು ನಂತರ ಸೆಪ್ಟೆಂಬರ್ 2019 ರಿಂದ ಪೂರ್ವ ಕಮಾಂಡ್ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ನೇಮಕವಾದರು. ಮೇ 2021 ರಲ್ಲಿ ಸೇವೆಯಿಂದ ನಿವೃತ್ತರಾಗುವವರೆಗೆ ಅಧಿಕಾರ ವಹಿಸಿಕೊಂಡರು.

  • ಈ ಕಮಾಂಡ್ ನೇಮಕಾತಿಗಳ ಜೊತೆಗೆ, ಅವರು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಜವಾಬ್ದಾರಿ ಸೇರಿದಂತೆ ಪ್ರಮುಖ ಸಿಬ್ಬಂದಿ ನೇಮಕಾತಿಗಳನ್ನು ಸಹ ನೋಡಿಕೊಂಡರು.

  • ಇಷ್ಟೇ ಅಲ್ಲದೆ ಲೆಫ್ಟಿನೆಂಟ್ ಜನರಲ್ ಚೌಹಾಣ್ (ನಿವೃತ್ತ) ಅಂಗೋಲಾಕ್ಕೆ ವಿಶ್ವಸಂಸ್ಥೆಯ ನಿಯೋಗದಲ್ಲೂ ಸಹ ಸೇವೆ ಸಲ್ಲಿಸಿದ್ದರು.

  • ಅವರು ಮೇ 31, 2021 ರಂದು ಭಾರತೀಯ ಸೇನೆಯಿಂದ ನಿವೃತ್ತರಾದರು.


  ನಿವೃತ್ತಿ ನಂತರವೂ ಚೌಹಾಣ್ ರಾಷ್ಟ್ರೀಯ ಭದ್ರತೆ ವಿಷಯಗಳಲ್ಲಿ ತೊಡಗಿಸಿಕೊಂಡರು


  ಸೈನ್ಯದಿಂದ ನಿವೃತ್ತರಾದ ನಂತರವೂ, ಅವರು ರಾಷ್ಟ್ರೀಯ ಭದ್ರತೆ ಮತ್ತು ವ್ಯೂಹಾತ್ಮಕ ವಿಷಯಗಳಿಗೆ ಕೊಡುಗೆ ನೀಡುವುದನ್ನು ಮುಂದುವರಿಸಿದರು.


  ಲೆಫ್ಟಿನೆಂಟ್ ಜನರಲ್ ಚೌಹಾಣ್ (ನಿವೃತ್ತ) ಅವರಿಗೆ ಸೇನೆಯಲ್ಲಿ ಅವರ ವಿಶಿಷ್ಟ ಮತ್ತು ಗೌರವಾನ್ವಿತ ಸೇವೆಗಾಗಿ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ್ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕವನ್ನು ನೀಡಲಾಯಿತು.

  Published by:Precilla Olivia Dias
  First published: