ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಮಹೇಂದ್ರ ಸಿಂಗ್​ ಧೋನಿ: ಯೋಧನ ದಿರಿಸಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ಮಹಿ


Updated:April 3, 2018, 11:31 AM IST
ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಮಹೇಂದ್ರ ಸಿಂಗ್​ ಧೋನಿ: ಯೋಧನ ದಿರಿಸಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ಮಹಿ

Updated: April 3, 2018, 11:31 AM IST
ಶಿವರಾಜ್​, ನ್ಯೂಸ್ 18 ಕನ್ನಡ

ನವದೆಹಲಿ(ಎ.03): ಟೀಂ ಇಂಡಿಯಾ ಕ್ರಿಕೆಟರ್​ ಮಹೇಂದ್ರ ಸಿಂಗ್​ ಧೋನಿ ಸೇನಾ ಯೋಧನಾಗಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ರು. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಿಪಾಯಿಯಂತೆ ಖಡಕ್​ ಹೆಜ್ಜೆ ಹಾಕಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅಕ್ಷರಶಃ ಸೇನಾ ಯೋಧರಾಗಿದ್ರು. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಧೋನಿ, ಯೋಧನ ದಿರಿಸಿನಲ್ಲಿ ಕಾಣಿಸಿಕೊಂಡು, ಕೆಲ ಕಾಲ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.


Loading...

ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಕ್ಯಾಪ್ಟನ್​ ಕೂಲ್ ಹಾನರರಿ ಲೆಫ್ಟಿನೆಂಟ್ ಕರ್ನಲ್ ಕೂಡ ಆಗಿದ್ದಾರೆ. ಹೀಗಾಗಿ, ಲೆಫ್ಟಿನೆಂಟ್​ ಕರ್ನಲ್​ ಡ್ರೆಸ್​ನಲ್ಲಿ ಆಗಮಿಸಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ರು. ಧೋನಿಯ ಈ ಹೊಸ ಲುಕ್​ಗೆ ಸಭಿಕರು ಚಪ್ಪಾಳೆ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ರು.
First published:April 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...