ಸೋತರೂ ಸರ್ಕಾರಿ ನಿವಾಸ ಖಾಲಿ ಮಾಡದ 27 ಮಾಜಿ ಸಂಸದರು: ನೀರು, ವಿದ್ಯುತ್, ಗ್ಯಾಸ್​​ ಸ್ಥಗಿತಗೊಳಿಸಿದ ಕೇಂದ್ರ

ಪ್ರತಿಷ್ಠಿತ ಲ್ಯೂಟೆನ್ಸ್ ದೆಹಲಿ ಪ್ರದೇಶದಲ್ಲಿರುವ ಸರ್ಕಾರಿ ನಿವಾಸಗಳಲ್ಲಿ ಇನ್ನೂ 27 ಮಂದಿ ಮಾಜಿ ಸಂಸದರು ಉಳಿದುಕೊಂಡಿದ್ದಾರೆ. ಇವರಿಗೆ ಮನೆ ಖಾಲಿ ಮಾಡಲು ಏಳು ದಿನಗಳ ಗಡುವು ನೀಡಲಾಗಿದೆ. 

news18-kannada
Updated:October 15, 2019, 5:12 PM IST
ಸೋತರೂ ಸರ್ಕಾರಿ ನಿವಾಸ ಖಾಲಿ ಮಾಡದ 27 ಮಾಜಿ ಸಂಸದರು: ನೀರು, ವಿದ್ಯುತ್, ಗ್ಯಾಸ್​​ ಸ್ಥಗಿತಗೊಳಿಸಿದ ಕೇಂದ್ರ
ಪ್ರಧಾನಿ ಮೋದಿ
  • Share this:
ಬೆಂಗಳೂರು(ಅ.15): ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಮೇಲೂ ಸರ್ಕಾರಿ ನಿವಾಸ ಖಾಲಿ ಮಾಡದ 27 ಮಾಜಿ ಸಂಸದರಿಗೆ ನೀರು, ವಿದ್ಯುತ್, ಗ್ಯಾಸ್​​ ಸರಬರಾಜು ಸ್ಥಗಿತಗೊಳಿಸಿ ಸಂಸತ್‍ನ ವಸತಿ ಸಮಿತಿ ಆದೇಶ ಹೊರಡಿಸಿದೆ. ಮುಂದಿನ ಒಂದು ವಾರದೊಳಗೆ ಸರ್ಕಾರಿ ನಿವಾಸ ಖಾಲಿ ಮಾಡಬೇಕು ಎಂದು ಸಂಸತ್‍ನ ವಸತಿ ಸಮಿತಿ ಅಧ್ಯಕ್ಷ ಸಿ.ಆರ್​​ ಪಾಟೀಲ್ ಮಾಜಿ ಸಂಸದರಿಗೆ ಖಡಕ್​​ ಸೂಚನೆ ನೀಡಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ಸಹಾಯ ದೆಹಲಿ ಪೊಲೀಸ್​​ ಆಯುಕ್ತರಿಗೆ ಸಿ.ಆರ್​​ ಪಾಟೀಲ್​​ ಪತ್ರ ಬರೆದಿದ್ದಾರೆ.

ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗಿ ಸುಮಾರು ಆರು ತಿಂಗಳು ಕಳೆದಿದೆ. ಆದರೆ, ಇಲ್ಲಿಯವರೆಗೂ ಮಾಜಿ ಸಂಸದರು ನೂತನ ಸಂಸದರಿಗೆ ಸರ್ಕಾರಿ ನಿವಾಸ ಬಿಟ್ಟು ಕೊಡದೇ ವಾಸ್ತವ್ಯ ಮುಂದುವರೆಸಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಒಂದು ವಾರದಲ್ಲಿ ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಮಾಜಿ ಸಂಸದರಿಗೆ ಸೂಚಿಸಿದೆ. ಹಾಗಾಗಿಯೇ ಸರ್ಕಾರಿ ನಿವಾಸಗಳಿಗೆ ನೀಡಿದ್ದ ನೀರು, ಗ್ಯಾಸ್ ಹಾಗೂ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎರಡನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಸರ್ಕಾರದ ನಿಯಮದ ಪ್ರಕಾರ ಸೋತ ಮೇಲೆ ಮಾಜಿ ಸಂಸದರು ನೂತನ ಸಂಸದರಿಗೆ ಒಂದು ವಾರದಲ್ಲಿ ಬಿಟ್ಟುಕೊಡಬೇಕು. ಆದರೀ, ಈ ಅವಧಿ ಮೀರಿ ತಿಂಗಳು ಕಳೆದರೂ ಇನ್ನೂ ನಿವಾಸ ಖಾಲಿ ಮಾಡಿಲ್ಲ.

ಇದನ್ನೂ ಓದಿ: ಗರಡಿಮನೆಯಿಂದ ರಾಜಕೀಯಕ್ಕೆ ಬಂದ ಮಹಿಳಾ ಕುಸ್ತಿಪಟು; ಬಬಿತಾ ಪೊಗಟ್​​ಗೆ ಪ್ರಧಾನಿ ಮೋದಿ ಸ್ವಾಗತ

ಪ್ರತಿಷ್ಠಿತ ಲ್ಯೂಟೆನ್ಸ್ ದೆಹಲಿ ಪ್ರದೇಶದಲ್ಲಿರುವ ಸರ್ಕಾರಿ ನಿವಾಸಗಳಲ್ಲಿ ಇನ್ನೂ 27 ಮಂದಿ ಮಾಜಿ ಸಂಸದರು ಉಳಿದುಕೊಂಡಿದ್ದಾರೆ. ಇವರಿಗೆ ಮನೆ ಖಾಲಿ ಮಾಡಲು ಏಳು ದಿನಗಳ ಗಡುವು ನೀಡಲಾಗಿದೆ. ಮೂರು ದಿನದೊಳಗೆ ನೀರು ಮತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಸೂಚನೆ ನೀಡಿದೆ.

ಮಾಜಿ ಸಂಸದರು ಸರ್ಕಾರಿ ನಿವಾಸವನ್ನು ಖಾಲಿ ಮಾಡದ ಕಾರಣಕ್ಕೆ ಹೊಸ ಸಂಸದರಿಗೆ ವಸತಿ ಕಲ್ಪಿಸುವುದು ಕಷ್ಟವಾಗಿದೆ. ಸದ್ಯ ನೂತನ ಸಂಸದರು ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ಸಂಸತ್‍ನ ವಸತಿ ಸಮಿತಿ ಅಧ್ಯಕ್ಷ ಸಿ.ಆರ್.ಪಾಟೀಲ್ ತಿಳಿಸಿದ್ದಾರೆ.
----------
First published:October 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading