HOME » NEWS » National-international » LPG CYLINDERS RATE HIKED SHARPLY IN BANGALORE DELHI MUMBAI KOLKATA CHENNAI FROM TODAY SCT

LPG Cylinder Price: ಗ್ರಾಹಕರಿಗೆ ಕಹಿಸುದ್ದಿ; ಇಂದಿನಿಂದ ಎಲ್​ಪಿಜಿ ಸಿಲಿಂಡರ್ ಬೆಲೆ ಭಾರೀ ಹೆಚ್ಚಳ

LPG Cylinder Price Today: ಬೆಂಗಳೂರು ಸೇರಿದಂತೆ ದೇಶದ ಎಲ್ಲ ಮೆಟ್ರೋ ನಗರಗಳಲ್ಲಿ ಇಂದಿನಿಂದ ಸಬ್ಸಿಡಿರಹಿತ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

Sushma Chakre | news18-kannada
Updated:February 12, 2020, 1:05 PM IST
LPG Cylinder Price: ಗ್ರಾಹಕರಿಗೆ ಕಹಿಸುದ್ದಿ; ಇಂದಿನಿಂದ ಎಲ್​ಪಿಜಿ ಸಿಲಿಂಡರ್ ಬೆಲೆ ಭಾರೀ ಹೆಚ್ಚಳ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಫೆ. 12): ಗಗನಕ್ಕೇರಿದ್ದ ತರಕಾರಿ ಮತ್ತು ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈರುಳ್ಳಿ, ತರಕಾರಿಗಳ ದರ ಹೆಚ್ಚಳದಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಇದೀಗ ಮತ್ತೊಂದು ಶಾಕ್ ಕಾದಿದೆ. ಅಡುಗೆ ಅನಿಲದಲ್ಲಿ ಭಾರೀ ಹೆಚ್ಚಳವಾಗಿದ್ದು, ಎಲ್​ಪಿಜಿ ಸಿಲಿಂಡರ್​ಗಳಿಗೆ ಸರಾಸರಿ ಶೇ. 20ರಷ್ಟು ಏರಿಕೆಯಾಗಿದೆ.

ಬೆಂಗಳೂರು ಸೇರಿದಂತೆ ದೇಶದ ಎಲ್ಲ ಮೆಟ್ರೋ ನಗರಗಳಲ್ಲಿ ಇಂದಿನಿಂದ ಸಬ್ಸಿಡಿರಹಿತ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ. ಇದಕ್ಕೂ ಮೊದಲು ಗ್ಯಾಸ್ ಸಿಲಿಂಡರ್​ಗಳ ಬೆಲೆಯಲ್ಲಿ 19 ರೂ. ಏರಿಕೆಯಾಗಿತ್ತು. ಇದೀಗ ಮತ್ತೆ ಹೆಚ್ಚಳವಾಗಿರುವ ಸಿಲಿಂಡರ್ ಬೆಲೆಯಿಂದ ಗ್ರಾಹಕರ ಮೇಲೆ ಮತ್ತಷ್ಟು ಹೊರೆ ಬಿದ್ದಂತಾಗಿದೆ. ಸರಾಸರಿ ಒಟ್ಟಾರೆ ಶೇ. 20ರಷ್ಟು ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ಏರಿಕೆಯಾದಂತಾಗಿದೆ.

ಇದನ್ನೂ ಓದಿ: ಗೆಲುವಿನ ಸಂಭ್ರಮದಲ್ಲಿದ್ದ ಆಪ್ ಶಾಸಕನ ಕಾರಿನ ಮೇಲೆ ಗುಂಡಿನ ದಾಳಿ; ಕಾರ್ಯಕರ್ತ ಸಾವು

ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ಮೆಟ್ರೋ ನಗರಗಳಲ್ಲಿ ಹೆಚ್ಚಳವಾಗಿದೆ. ದೆಹಲಿಯಲ್ಲಿ 14.2 ಕೆ.ಜಿ. ತೂಕದ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ 858.50 ರೂ. (144.50 ರೂ. ಹೆಚ್ಚಳ) ಇದೆ. ಕೊಲ್ಕತಾದಲ್ಲಿ 896 ರೂ. (149 ರೂ. ಹೆಚ್ಚಳ), ಮುಂಬೈನಲ್ಲಿ 829.50 (145 ರೂ. ಹೆಚ್ಚಳ), ಹಾಗೂ ಚೆನ್ನೈನಲ್ಲಿ 881 ರೂ. (147 ರೂ. ಹೆಚ್ಚಳ) ಆಗಿದೆ. ಬೆಂಗಳೂರಿನಲ್ಲಿ ಇಂಡೇನ್ ಗ್ಯಾಸ್ ಸಿಲಿಂಡರ್ ಬೆಲೆ 850ರ ಗಡಿ ದಾಟಿದೆ.


ಇದನ್ನೂ ಓದಿ: ಖಾತೆ ಹಂಚಿಕೆ ಬೆನ್ನಲ್ಲೇ ಆಫೀಸ್ ಕಿರಿಕ್; ವಿಧಾನಸೌಧದ ಕೊಠಡಿಗೆ ಪಟ್ಟುಹಿಡಿದ ಬಿ.ಸಿ. ಪಾಟೀಲ್

19 ಕೆ.ಜಿ. ತೂಕದ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯಲ್ಲೂ ಏರಿಕೆಯಾಗಿದೆ. ದೆಹಲಿಯಲ್ಲಿ 1,466 ರೂ, ಕೊಲ್ಕತಾದಲ್ಲಿ 1,540.50 ರೂ, ಮುಂಬೈನಲ್ಲಿ 1,416 ರೂ, ಚೆನ್ನೈನಲ್ಲಿ 1,589.50 ರೂ. ನಿಗದಿಗೊಳಿಸಲಾಗಿದೆ. ಈ ಮೂಲಕ 2019ರ ಸೆಪ್ಟೆಂಬರ್ ನಂತರ ದೇಶದಲ್ಲಿ 6ನೇ ಬಾರಿಗೆ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯಲ್ಲಿ ಹೆಚ್ಚಳವಾದಂತಾಗಿದೆ. 2020ರ ಜನವರಿ 1ರಂದು ಎಲ್​ಪಿಜಿ ದರದಲ್ಲಿ ಹೆಚ್ಚಳವಾಗಿತ್ತು. ಅದಾಗಿ 40 ದಿನದಲ್ಲಿ ಮತ್ತೆ ಹೆಚ್ಚಳವಾಗುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.

ಜನವರಿ 1ರಂದು ದೆಹಲಿಯಲ್ಲಿ ಎಲ್​ಪಿಜಿ ಸಿಲಿಂಡರ್​ ಬೆಲೆ 19 ರೂ , ಮುಂಬೈನಲ್ಲಿ 19.5 ರೂ. ಏರಿಕೆಯಾಗಿತ್ತು. ಕೊಲ್ಕತ್ತಾದಲ್ಲಿ ಗ್ಯಾಸ್ ಸಿಲಿಂಡರ್​​​​​ ಬೆಲೆ 21.5 ರೂ. ಹಾಗೂ ಚೆನ್ನೈನಲ್ಲಿ 20 ರೂ. ಹೆಚ್ಚಿಸಲಾಗಿತ್ತು. ಇದೀಗ ಮತ್ತೊಮ್ಮೆ ಬೆಲೆಯನ್ನು ಹೆಚ್ಚಿಸಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ತಿಳಿಸಿದೆ.
First published: February 12, 2020, 12:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories