LPG Cylinder Cashback Offer: ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಿದರೆ 500 ರೂವರೆಗೆ ಕ್ಯಾಷ್ ಬ್ಯಾಕ್

ಪೇಟಿಎಂ ಆಪ್​ನಲ್ಲಿ ನೀವು ಮೊದಲ ಬಾರಿಗೆ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಿದರೆ 500 ರೂ ಕ್ಯಾಷ್ ಬ್ಯಾಕ್ ಪಡೆಯುವ ಅವಕಾಶ ಇದೆ. ಇದು ಒಮ್ಮೆ ಮಾತ್ರದ ಅವಕಾಶವಾಗಿದ್ದು ಪ್ರೋಮೋಕೋಡ್ ಬಳಕೆ ಮಾಡಿದರೆ ಮಾತ್ರ ಕ್ಯಾಷ್ ಬ್ಯಾಕ್ ಸಿಗುತ್ತದೆ.

LPG Cylinder

LPG Cylinder

  • News18
  • Last Updated :
  • Share this:
    ಬೆಂಗಳೂರು: ಎಲ್​ಪಿಜಿ ಸಿಲಿಂಡರ್​ಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಇದು ಬಿಟ್ಟರೆ ನೀವು ಮತ್ತೊಂದು ರೀತಿಯಲ್ಲಿ ಕ್ಯಾಷ್ ಬ್ಯಾಕ್ ಪಡೆಯುವ ಅವಕಾಶ ಇದೆ. ಒಂದು ಸಿಲಿಂಡರ್ ಬುಕಿಂಗ್​ಗೆ 500 ರೂಪಾಯಿವರೆಗೆ ಕ್ಯಾಷ್ ಬ್ಯಾಕ್ ಪಡೆಯಬಹುದು. ಇದು ಪೇಟಿಎಂ ಆ್ಯಪ್​ನಿಂದ ನೀಡಲಾಗಿರುವ ಆಫರ್.

    ನೀವು ಮೊದಲ ಬಾರಿ ಪೇಟಿಎಂ ಆ್ಯಪ್​ನಲ್ಲಿ ಎಲ್​ಪಿಜಿ ಬುಕ್ ಮಾಡಿದರೆ ಈ ಆಫರ್ ಪಡೆಯಬಹುದಾಗಿದೆ. ಇದು ಇಂಡೇನ್, ಎಚ್​ಪಿ ಮತ್ತು ಭಾರತ್ ಗ್ಯಾಸ್ ಮೂರಕ್ಕೂ ಅನ್ವಯವಾಗುತ್ತದೆ.

    ನಿಮ್ಮ ಫೋನ್​ನಿಂದ ಪೇಟಿಎಂ ಆ್ಯಪ್ ಓಪನ್ ಮಾಡಿದರೆ ‘ಬುಕ್ ಸಿಲಿಂಡರ್’ ಆಪ್ಷನ್ ಕಾಣುತ್ತದೆ. ಆಪ್​ನ ಹೋಮ್ ಸ್ಕ್ರೀನ್​ನಲ್ಲಿ ಈ ಆಪ್ಷನ್ ಕಾಣಿಸದಿದ್ದರೆ Show More ಕ್ಲಿಕ್ ಮಾಡಿದರೆ ಪೂರ್ಣ ಪಟ್ಟಿ ಸಿಗುತ್ತದೆ. ಅದರಲ್ಲಿ ಬುಕ್ ಸಿಲಿಂಡರ್ ಕ್ಲಿಕ್ ಮಾಡಬೇಕು. ನಂತರ ಕಾಣಿಸುವ ಭಾರತ್ ಗ್ಯಾಸ್, ಇಂಡೇನ್ ಮತ್ತು ಎಚ್​ಪಿ ಗ್ಯಾಸ್ ಈ ಮೂರರಲ್ಲಿ ಒಂದನ್ನ ಆಯ್ದುಕೊಳ್ಳಬೇಕು. ನಂತರ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಅಥವಾ ಎಲ್​ಪಿಜಿ ಐಡಿಯನ್ನ ನಮೂದಿಸಿ ಮುಂದುವರಿಯಬೇಕು. ಅಲ್ಲಿ ನೀವು ಗ್ರಾಹಕರ ಹೆಸರು, ಎಲ್​ಪಿಜಿ ಐಡಿ ಮತ್ತು ಗ್ಯಾಸ್ ಏಜೆನ್ಸಿ ಹೆಸರನ್ನ ಕಾಣಬಹುದು. ಹಾಗೆಯೇ, ಗ್ಯಾಸ್ ಸಿಲಿಂಡರ್​ನ ದರವನ್ನೂ ಕಾಣಬಹುದು.

    ಇದನ್ನೂ ಓದಿ: COVID-19: ಈಗಿನ ಕೋವಿಡ್ ಸಮಯದಲ್ಲಿ ನೀವು ಬಸ್ ಏರುವ ಮುನ್ನ ಈ ತಪ್ಪುಗಳನ್ನು ಮಾಡಲೇಬೇಡಿ

    ನೀವು Process ಕ್ಲಿಕ್ ಮಾಡಿ ಪೇಮೆಂಟ್ ಮಾಡುವ ಮುನ್ನ FIRSTLPG ಎಂಬ ಪ್ರೋಮೋಕೋಡ್ ಅನ್ನು ಹಾಕಬಹುದು. ಈ ಪ್ರೋಮೋಕೋಡ್ ನಮೂದಿಸಿ ಮಾಡಲಾದ ಪೇಮೆಂಟ್​ಗೆ 500 ರೂಪಾಯಿ ವರೆಗೆ ಕ್ಯಾಷ್ ಬ್ಯಾಕ್ ಅವಕಾಶ ಇರುತ್ತದೆ. ಪ್ರೋಮೋಕೋಡ್ ಹಾಕದಿದ್ದರೆ ಈ ಅವಕಾಶ ಇಲ್ಲ. ಎಲ್ಲರಿಗೂ 500 ರೂ ಕ್ಯಾಷ್ ಬ್ಯಾಕ್ ಸಿಗುವುದಿಲ್ಲ. ಒಂದು ರೂನಿಂದ ಹಿಡಿದು 500 ರೂವರೆಗೆ ಕ್ಯಾಷ್ ಬ್ಯಾಕ್ ಸಿಗುತ್ತದೆ.
    Published by:Vijayasarthy SN
    First published: