ಐಸಿಯುನಲ್ಲಿದ್ದ 7 ಕೊರೋನಾ ರೋಗಿಗಳು ಆಮ್ಲಜನಕ ಕೊರತೆಯಿಂದ ಸಾವು

ಜೋಗೇಶ್ವರಿ ಆಸ್ಪತ್ರೆಯಲ್ಲಿ ಕೇವಲ ಒಂದುವರೆ ಗಂಟೆಯಲ್ಲಿ 7 ಕೊರೋನಾ ರೋಗಿಗಳು ಮೃತಪಟ್ಟಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್​ಗಳು ಅಚ್ಚರಿ ವ್ಯಕ್ತಪಡಿಸಿದ್ದು, ಈ ರೀತಿಯ ಘಟನೆ ಹಿಂದೆಂದೂ ನಡೆದೇ ಇರಲಿಲ್ಲ ಎಂದಿದ್ದಾರೆ.

news18-kannada
Updated:May 31, 2020, 1:43 PM IST
ಐಸಿಯುನಲ್ಲಿದ್ದ 7 ಕೊರೋನಾ ರೋಗಿಗಳು ಆಮ್ಲಜನಕ ಕೊರತೆಯಿಂದ ಸಾವು
ಪ್ರಾತಿನಿಧಿಕ ಚಿತ್ರ
  • Share this:
ಮುಂಬೈ (ಮೇ 31): ಮಹಾರಾಷ್ಟ್ರಕ್ಕೆ ಕೊರೋನಾ ವೈರಸ್​ ದುಸ್ವಪ್ನದಂತೆ ಕಾಡುತ್ತಲೇ ಇದೆ. ಕಳೆದ ಎರಡು ತಿಂಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಈ ಮಧ್ಯೆ ಐಸಿಯುನಲ್ಲಿದ್ದ ಕೊರೋನಾ ರೋಗಿಗಳು ಆಮ್ಲಜನಕ ಇಲ್ಲದೆ ಮೃತಪಡುತ್ತಿದ್ದು, ಅಲ್ಲಿನ ಆಸ್ಪತ್ರೆ ವೈದ್ಯರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಜೋಗೇಶ್ವರಿ ಆಸ್ಪತ್ರೆಯಲ್ಲಿ ಕೇವಲ ಒಂದುವರೆ ಗಂಟೆಯಲ್ಲಿ 7 ಕೊರೋನಾ ರೋಗಿಗಳು ಮೃತಪಟ್ಟಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್​ಗಳು ಅಚ್ಚರಿ ವ್ಯಕ್ತಪಡಿಸಿದ್ದು, ಈ ರೀತಿಯ ಘಟನೆ ಹಿಂದೆಂದೂ ನಡೆದೇ ಇರಲಿಲ್ಲ ಎಂದಿದ್ದಾರೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ನಮ್ಮ ಬಳಿ ಸರಿಯಾದ ಉಪಕರಣ ಇಲ್ಲ. ಇದು ರೋಗಿಗಳು ಮೃತಪಡಲು ಪ್ರಮುಖ ಕಾರಣ. ಸರಿಯಾದ ಕಿಟ್​ಗಳನ್ನು ಪೂರೈಕೆ ಮಾಡಿದರೆ ನಾವು ರೋಗಿಗಳನ್ನು ಬದುಕಿಸಬಹುದು. ಇಲ್ಲದಿದ್ದರೆ ಅವರು ಮೃತಪಡುತ್ತಾರೆ ಎನ್ನುತ್ತಾರೆ ನರ್ಸ್​ಗಳು.

ಇದನ್ನೂ ಓದಿ: ಕೋವಿಡ್​​-19 ವಿರುದ್ಧ ಹೋರಾಟದಲ್ಲಿ ದೇಶದ ಪ್ರತಿಯೊಬ್ಬರ ಪಾತ್ರವಿದೆ - ಪ್ರಧಾನಿ ನರೇಂದ್ರ ಮೋದಿ

ಇನ್ನು, ಈ ಬಗ್ಗೆ ಮಾತನಾಡುವ ವೈದ್ಯರು ಈ ಆಸ್ಪತ್ರೆಯಲ್ಲಿ ಕೆಲಸ ಮಾಡಲ ಇಷ್ಟವೇ ಇಲ್ಲ ಎನ್ನುವ ಮಾತನ್ನು ಹೇಳುತ್ತಾರೆ. ಸರಿಯಾದ ಆಮ್ಲಜನಕ ಪೂರೈಕೆ ಇಲ್ಲ. ಇಂಥ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದು ತುಂಬಾನೇ ಕಷ್ಟ. ನಂತರ ನಾವು ತಪ್ಪನ್ನು ಹೊರಬೇಕಾಗುತ್ತದೆ. ಇದು ಅಸಾಧ್ಯ ಎನ್ನುತ್ತಾರೆ ವೈದ್ಯರು.
First published: May 31, 2020, 1:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading