Tokyo Olympics:ಭಾರತಕ್ಕೆ ಮತ್ತೊಂದು ಪದಕ ಖಾತ್ರಿ ಪಡಿಸಿದ ಬಾಕ್ಸರ್​ ಲವ್ಲಿನಾ

ಭಾರತದ ಬಾಕ್ಸರ್‌‌‌ ಲವ್ಲಿನಾ ಬೊರ್ಗೊಹೈನ್‌

ಭಾರತದ ಬಾಕ್ಸರ್‌‌‌ ಲವ್ಲಿನಾ ಬೊರ್ಗೊಹೈನ್‌

ಕಳೆದ ವರ್ಷ ಕೋವಿಡ್ -19 ನಿಂದ ಯುರೋಪ್‌ ತರಬೇತಿ ಪ್ರವಾಸವನ್ನು ತಪ್ಪಿಸಿಕೊಂಡಿದ್ದರು. ಭಾರತದ ಹಿಂದಿನ ಬಾಕ್ಸಿಂಗ್ ಪದಕಗಳು ವಿಜೇಂದರ್ ಸಿಂಗ್ (2008) ಮತ್ತು ಎಂ ಸಿ ಮೇರಿ ಕೋಮ್ (2012) ಮೂಲಕ ಬಂದಿವೆ. ಇಬ್ಬರೂ ಕಂಚಿನ ಪದಕಗಳನ್ನು ಗೆದ್ದಿದ್ದಾರೆ ಮತ್ತು ಬೊರ್ಗೊಹೈನ್ ಬೆಳ್ಳಿ ಅಥವಾ ಚಿನ್ನ ಗೆಲ್ಲುವ ವಿಶ್ವಾಸ ಮೂಡಿದೆ.

ಮುಂದೆ ಓದಿ ...
 • Share this:

  ಟೋಕಿಯೊ ಒಲಿಂಪಿಕ್ಸ್‌ನ ಮಹಿಳೆಯರ 69 ಕೆಜಿ ಬಾಕ್ಸಿಂಗ್ ಸ್ಪರ್ಧೆಯ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಅವರು ತಮ್ಮ ಗೆಲುವಿನೊಂದಿಗೆ ಭಾರತಕ್ಕೆ ಮತ್ತೊಂದು ಪದಕವನ್ನು ಖಾತ್ರಿ ಪಡಿಸಿದ್ದಾರೆ.


  ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ಖಚಿತಗೊಂಡಿದೆ. ಭಾರತದ ಬಾಕ್ಸರ್‌‌‌ ಲವ್ಲಿನಾ ಬೊರ್ಗೊಹೈನ್‌ ಅವರು ಈ ಹಿಂದಿನ ವಿಶ್ವ ಚಾಂಪಿಯನ್‌ ಚೀನಾದ ತೈಪೆಯ ಚೆನ್ ನಿಯೆನ್ ಚಿನ್ ಅವರನ್ನು ಸೋಲಿಸಿ ಮಹಿಳಾ ವೆಲ್ಟರ್‌ವೈಟ್ (69 ಕೆಜಿ) ವಿಭಾಗದ ಸೆಮಿಫೈನಲ್‌ಗೆ ಶುಕ್ರವಾರ ತಲುಪಿದ್ದಾರೆ. ಈ ಮೂಲಕ ಅವರು ಭಾತರಕ್ಕೆ ಕಂಚಿನ ಪದಕವನ್ನು ಖಾತ್ರಿ ಪಡಿಸಿದ್ದಾರೆ.


  ಲವ್ಲಿನಾ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ತೈಪೆಯ ನಿಯೆನ್-ಚಿನ್ ಚೆನ್ ಅವರನ್ನು 4-1 ಅಂತರದಿಂದ ಸೋಲಿಸಿದರು ಮತ್ತು ಸೆಮಿಫೈನಲ್‌ನಲ್ಲಿ ಟರ್ಕಿಯ ಬುಸೆನಾಜ್ ಸುರ್ಮೆನೆಲಿಯನ್ನು ಎದುರಿಸಲಿದ್ದಾರೆ.


  ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದಿರುವ 23 ವರ್ಷದ ಲವ್ಲಿನಾ ಅವರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ. ಅಸ್ಸಾಂ ರಾಜ್ಯದವರಾಗಿರುವ ಬಾಕ್ಸರ್ ಲವ್ಲಿನಾ ಅವರಿಗೆ ಚಿನ್ನದ ಪದಕ ಪಡೆಯಲು ಇನ್ನು ಎರಡು ಪಂದ್ಯಗಳು ಬಾಕಿಯಿವೆ. ಸಮೀಫೈನಲ್‌ ಪ್ರವೇಶಿಸಿರುವ ಅವರು ಒಂದು ಪಂದ್ಯವನ್ನು ಗೆದ್ದರೆ ಚಿನ್ನಕ್ಕಾಗಿ ಸೆಣಸಲಿದ್ದಾರೆ.


  ಕಳೆದ ವರ್ಷ ಕೋವಿಡ್ -19 ನಿಂದ ಯುರೋಪ್‌ ತರಬೇತಿ ಪ್ರವಾಸವನ್ನು ತಪ್ಪಿಸಿಕೊಂಡಿದ್ದರು. ಭಾರತದ ಹಿಂದಿನ ಬಾಕ್ಸಿಂಗ್ ಪದಕಗಳು ವಿಜೇಂದರ್ ಸಿಂಗ್ (2008) ಮತ್ತು ಎಂ ಸಿ ಮೇರಿ ಕೋಮ್ (2012) ಮೂಲಕ ಬಂದಿವೆ. ಇಬ್ಬರೂ ಕಂಚಿನ ಪದಕಗಳನ್ನು ಗೆದ್ದಿದ್ದಾರೆ ಮತ್ತು ಬೊರ್ಗೊಹೈನ್ ಬೆಳ್ಳಿ ಅಥವಾ ಚಿನ್ನ ಗೆಲ್ಲುವ ವಿಶ್ವಾಸ ಮೂಡಿದೆ.


  ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಗುತ್ತಿರುವ ಮೂರನೇ ಪದಕ ಇದಾಗಿದೆ. ಭಾರತದ ಹಿಂದಿನ ಬಾಕ್ಸಿಂಗ್ ಪದಕಗಳು ವಿಜೇಂದರ್ ಸಿಂಗ್ (2008) ಮತ್ತು ಎಂಸಿ ಮೇರಿ ಕೋಮ್ (2012) ಮೂಲಕ ಬಂದಿವೆ. ಈ ಇಬ್ಬರೂ ಕಂಚಿನ ಪದಕಗಳನ್ನು ಗೆದ್ದಿದ್ದು, ಲವ್ಲೀನಾ ಅವರಿಗೆ ಅವಬ್ಬರಿಗಿಂತಲೂ ಉತ್ತಮ ಸಾಧನೆ ಮಾಡುವ ಅವಕಾಶವಿದೆ.


  ಗುರುವಾರ ನಡೆದ ಬ್ಯಾಡ್ಮಿಂಟನ್‌‌ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ಅವರನ್ನು ನೇರ ಪಂದ್ಯಗಳಲ್ಲಿ ಸೋಲಿಸಿದ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇಂದು ಅವರು ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಕ್ವಾರ್ಟರ್‌ ಪೈನಲ್‌ನಲ್ಲಿ ಎದುರಿಸಲಿದ್ದಾರೆ.

   ಪುರುಷರ ಸೂಪರ್‌ ಹೆವಿ ವೈಟ್‌ ಬಾಕ್ಸಿಂಗ್‌ನಲ್ಲಿ ಗುರುವಾರದಂದು ಭಾರತದ ಸತೀಶ್ ಕುಮಾರ್ ಅವರು ಜಮೈಕಾದ ರಿಕಾರ್ಡೊ ಬ್ರೌನ್ ವಿರುದ್ಧ 4: 1 ರ ಸುತ್ತಿನಲ್ಲಿ ಗೆದ್ದು, ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಭಾನುವಾರದಂದು ಉಜ್ಬೇಕಿಸ್ತಾನದ ಬಾಖೋದಿರ್‌ ಜಲಾಲೋವ್ ಅವರನ್ನು ಎದುರಿಸಲಿದ್ದಾರೆ.
  ಅಲ್ಲದೆ ಗುರುವಾರ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆಯಲ್ಲಿ ಅತನು ದಾಸ್ ಅವರು 2012 ರ ಚಾಂಪಿಯನ್‌ ದಕ್ಷಣ ಕೊರಿಯಾದ ಓಹ್ ಜಿನ್ ಹೈಕಿನ್ ಅವರನ್ನು ಸೋಲಿಸಿ ಪ್ರೀ ಕ್ವಾಟರ್‌ ಫೈನಲ್‌ಗೆ ತಲುಪಿದ್ದಾರೆ. ಅವರ ಮುಂದಿನ ಪಂದ್ಯ ಶನಿವಾರ ಜಪಾನಿನ ತಕಹಾರು ಫುರುಕವ ಅವರ ವಿರುದ್ದ ನಡೆಯಲಿದೆ.


  ಟೋಕಿಯೊ ಒಲಿಂಪಿಕ್‌ನಲ್ಲಿ 49 ಕೆಜಿ ವೈಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಮಣಿಪುರ ಮೂಲದ ಮಿರಾಬಾಯಿ ಚಾನು ಅವರು ಬೆಳ್ಳಿ ಗೆದ್ದುಕೊಂಡಿದ್ದರು. ಇದರ ನಂತರ ಭಾರತಕ್ಕೆ ಬಾಕ್ಸರ್‌‌‌ ಲವ್ಲಿನಾ ಬೊರ್ಗೊಹೈನ್‌ ಮೂಲಕ ಎರಡನೆ ಪದಕ ಖಚಿತಗೊಂಡಿದೆ.


  ಇದನ್ನೂ ಓದಿ: ದೆಹಲಿಗೆ ಬಸವರಾಜ್ ಬೊಮ್ಮಾಯಿ ಮೊದಲ ಭೇಟಿ; ಸಿಎಂಗೆ ಸಿಗದ ಭವ್ಯ ಸ್ವಾಗತ! 4 ಗಂಟೆಗೆ ಪ್ರಧಾನಿ ನಿವಾಸಕ್ಕೆ ಬೊಮ್ಮಾಯಿ  ಈ ಹಿಂದೆ ನಡೆದ ಪಂದ್ಯದಲ್ಲಿ, ಸಿಮ್ರಂಜಿತ್ ಕೌರ್ (60 ಕೆಜಿ) ಥೈಲ್ಯಾಂಡ್‌ನ ಸುಡಾಪೋರ್ನ್ ಸೀಸೊಂಡೀ ವಿರುದ್ಧ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಬೇಗನೆ ನಿರ್ಗಮಿಸಿದರು. ನಾಲ್ಕನೇ ಶ್ರೇಯಾಂಕಿತ 26 ವರ್ಷದ ಭಾರತೀಯ ಮಹಿಳೆ, 5-5ರಿಂದ ಹಿನ್ನಡೆ ಸಾಧಿಸಿದರು. ಆರಂಭಿಕ ಸುತ್ತಿನಲ್ಲಿ ಪ್ರಭಾವಶಾಲಿಯಾಗಿ ಆಟ ಆಡಿದರೂ ನಂತರ ಎದುರಾಳಿಯ ಪಂಚ್​ಗಳಿಂದ ತಪ್ಪಿಸಿಕೊಳ್ಳು ಆಗಲಿಲ್ಲ. ಆದ ಕಾರಣ ಪಂದ್ಯ ಕೈಚೆಲ್ಲ ಬೇಕಾಯಿತು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು