ಆತ್ಮಹತ್ಯೆಗೆ ಯತ್ನಿಸಿದ ಯುವ ಪ್ರೇಮಿಗಳಿಗೆ ಆಸ್ಪತ್ರೆಯಲ್ಲೇ ವಿವಾಹ..!

ಇದನ್ನೆಲ್ಲವನ್ನು ನೋಡಿದ ಕುಟುಂಬದವರಿಗೆ ಇವರಿಬ್ಬರ ಪ್ರೀತಿಯ ಆಳ ಗೊತ್ತಾಗಿದೆ. ರೇಷ್ಮಾ ಮತ್ತು ನವಾಜ್​ ಒಬ್ಬರನೊಬ್ಬರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವುದು ಅರಿವಿಗೆ ಬಂದಿದೆ.

zahir | news18
Updated:January 12, 2019, 7:18 PM IST
ಆತ್ಮಹತ್ಯೆಗೆ ಯತ್ನಿಸಿದ ಯುವ ಪ್ರೇಮಿಗಳಿಗೆ ಆಸ್ಪತ್ರೆಯಲ್ಲೇ ವಿವಾಹ..!
ಸಾಂದರ್ಭಿಕ ಚಿತ್ರ
zahir | news18
Updated: January 12, 2019, 7:18 PM IST
ಪ್ರೀತಿಸುತ್ತಿದ್ದ ಯುವ ಜೋಡಿಯೊಂದು ಆತ್ಮಹತ್ಯೆಗೆ ಯತ್ನಿಸಿ ವಿವಾಹವಾದ ಅಪರೂಪದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗನನ್ನು ವಿವಾಹವಾಗಲು ಕುಟುಂಬದವರು ಸಮ್ಮತಿಸಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಳು. ಹುಡುಗಿಯ ಮನೆಯವರು ತನ್ನನ್ನು ವರನಾಗಿ ಸ್ವೀಕರಿಸಲ್ಲ ಎಂಬುದನ್ನು ಅರಿತ ಹುಡುಗ ಕೂಡ ಇತ್ತ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ನವಾಜ್ ಮತ್ತು ರೇಷ್ಮಾ ಕಳೆದು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ರೇಷ್ಮಾರನ್ನು ಮದುವೆ ಮಾಡಿಸಲು ವರನ ಹುಡುಕಾಟದಲ್ಲಿ ತೊಡಗಿದ್ದರು. ಮದುವೆಗಾಗಿ ಎಲ್ಲ ತಯಾರಿಗಳು ನಡೆಯುತ್ತಿದ್ದರಿಂದ ರೇಷ್ಮಾ ಕೂಡ ಹೆದರಿದ್ದಾಳೆ. ತನ್ನ ಪ್ರೀತಿಯ ವಿಷಯವನ್ನು ಮನೆಯವರಿಗೆ ತಿಳಿಸಿದರೂ ಅವರು ನವಾಜ್​ನೊಂದಿಗೆ ವಿವಾಹಕ್ಕೆ ಒಪ್ಪಿರಲಿಲ್ಲ. ಇದರಿಂದ ಮನನೊಂದು ಇನ್ನೊಬ್ಬನ ಜೊತೆ ಬಾಳಲಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ್ದಳು.

ಇದನ್ನೂ ಓದಿ: ನಿವೃತ್ತಿ ಬಳಿಕ ಮತ್ತೆಂದೂ ಬ್ಯಾಟ್​ ಎತ್ತಲಾರೆ ವಿರಾಟ್​ ಕೊಹ್ಲಿ ಅಚ್ಚರಿಯ ಹೇಳಿಕೆ

ಇದನ್ನು ಕಂಡ ಕುಟುಂಬದವರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಬಂದ ಪ್ರಿಯಕರ ನವಾಜ್​ ತನ್ನ ಪ್ರಿಯತಮೆ ಬದುಕುಳಿಯುವುದಿಲ್ಲ ಎಂದರಿತು ಆಸ್ಪತ್ರೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಆದರೆ ಅದೃಷ್ಟವಶಾತ್ ಇಬ್ಬರು ಪ್ರಾಣಪಾಯದಿಂದ ಬದುಕುಳಿದರು.

Loading...ಇದನ್ನೂ ಓದಿ: ಕೇವಲ 1400 ರೂ. ಉಳಿತಾಯ ಮಾಡಿ, ಕೆಲಸಕ್ಕೆ ಸೇರುವ ಮುನ್ನ 1 ಕೋಟಿ ರೂ. ನಿಮ್ಮದಾಗಿಸಿ..!

ಇದನ್ನೆಲ್ಲವನ್ನು ನೋಡಿದ ಕುಟುಂಬದವರಿಗೆ ಇವರಿಬ್ಬರ ಪ್ರೀತಿಯ ಆಳ ಗೊತ್ತಾಗಿದೆ. ರೇಷ್ಮಾ ಮತ್ತು ನವಾಜ್​ ಒಬ್ಬರನೊಬ್ಬರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವುದು ಅರಿವಿಗೆ ಬಂದಿದೆ. ಹೀಗಾಗಿ ಎರಡು ಕುಟುಂಬಗಳು ಸೇರಿ ಮಾತುಕತೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲದೇ ಚಿಕಿತ್ಸೆಯ ಮೂಲಕ ಚೇತರಿಸಿಕೊಳ್ಳುತ್ತಿದ್ದ ಜೋಡಿಗೆ ಆಸ್ಪತ್ರೆಯಲ್ಲಿ ಮದುವೆ ಮಾಡಿಸಿ, ಆಶಿರ್ವದಿಸಿದ್ದಾರೆ.

ಇದನ್ನೂ ಓದಿ: ಒಂದು ಬ್ರೆಡ್​ ಬೆಲೆ 1 ಲಕ್ಷ ರೂ: ಇಲ್ಲಿ ಬಡವರೂ ಕೂಡ ಕೋಟ್ಯಾಧಿಪತಿಗಳು..!

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...