ಮದುವೆಗೆ ಒಪ್ಪದ ಯುವತಿಗೆ ಕಾದಿತ್ತು ಶಾಕ್; ನಡುರಸ್ತೆಯಲ್ಲೇ ಪ್ರೇಯಸಿಯ ಎದೆಗೆ ಚಾಕುವಿನಿಂದ ಇರಿದ ಯುವಕ

ಆರೋಪಿ ಸಚಿನ್ ಯುವತಿಯ ಅಕ್ಕನ ಗಂಡನ ತಮ್ಮ. ಅಕ್ಕನ ಮನೆಗೆ ಆಗಾಗ ಹೋಗಿ ಬರುತ್ತಿದ್ದ ಯುವತಿಯನ್ನು ನೋಡಿ ಸಚಿನ್ ಆಕರ್ಷಿತನಾಗಿದ್ದ. ಆಕೆಯನ್ನು ಪ್ರೀತಿಸುತ್ತಿದ್ದ ಸಚಿನ್ ತನ್ನನ್ನು ಮದುವೆಯಾಗಲು ಒತ್ತಾಯಿಸಿದ್ದ.

Sushma Chakre | news18-kannada
Updated:January 19, 2020, 12:22 PM IST
ಮದುವೆಗೆ ಒಪ್ಪದ ಯುವತಿಗೆ ಕಾದಿತ್ತು ಶಾಕ್; ನಡುರಸ್ತೆಯಲ್ಲೇ ಪ್ರೇಯಸಿಯ ಎದೆಗೆ ಚಾಕುವಿನಿಂದ ಇರಿದ ಯುವಕ
ಪ್ರಾತಿನಿಧಿಕ ಚಿತ್ರ
  • Share this:
ಘಜಿಯಾಬಾದ್ (ಜ. 19): ತನ್ನನ್ನು ಮದುವೆಯಾಗಲು ಒಪ್ಪದ ನರ್ಸಿಂಗ್ ವಿದ್ಯಾರ್ಥಿನಿಯ ಎದೆಗೆ ಚಾಕುವಿನಿಂದ ಇರಿದು, ನಡು ರಸ್ತೆಯಲ್ಲೇ ಕೊಲ್ಲಲು ಪ್ರಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಾಘ್​ಪತ್​ನವರಾದ ಯುವಕ-ಯುವತಿ ಮೊದಲಿನಿಂದಲೂ ಒಬ್ಬರಿಗೊಬ್ಬರು ಪರಿಚಯಸ್ಥರಾಗಿದ್ದರು. 21 ವರ್ಷದ ಆ ಯುವತಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಳು. ಆರೋಪಿ ಸಚಿನ್ ಯುವತಿಯ ಅಕ್ಕನ ಗಂಡನ ತಮ್ಮ. ಅಕ್ಕನ ಮನೆಗೆ ಆಗಾಗ ಹೋಗಿ ಬರುತ್ತಿದ್ದ ಯುವತಿಯನ್ನು ನೋಡಿ ಸಚಿನ್ ಆಕರ್ಷಿತನಾಗಿದ್ದ. ಆಕೆಯನ್ನು ಪ್ರೀತಿಸುತ್ತಿದ್ದ ಸಚಿನ್ ತನ್ನನ್ನು ಮದುವೆಯಾಗಲು ಒತ್ತಾಯಿಸಿದ್ದ. ಆದರೆ, ಮದುವೆಯಾಗಲು ಇಷ್ಟವಿಲ್ಲದ ಯುವತಿ ಆತನ ಪ್ರೀತಿಯನ್ನು ತಿರಸ್ಕರಿಸಿದ್ದಳು.

ಇದನ್ನೂ ಓದಿ: ಧಾರವಾಡದ ಜೈಲಿನಲ್ಲಿ ಹೈಡ್ರಾಮ; ರುಚಿಯಾದ ಊಟ ಕೊಡದಿದ್ದಕ್ಕೆ ತೆಂಗಿನ ಮರವೇರಿ ಕುಳಿತ ಕೈದಿ

ಶುಕ್ರವಾರ ಇಬ್ಬರೂ ಭೇಟಿಯಾದಾಗ ಮತ್ತೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಸಚಿನ್​ಗೆ ನಿರಾಸೆ ಕಾದಿತ್ತು. ಇದರಿಂದ ಹತಾಶನಾದ ಸಚಿನ್ ನಡುರಸ್ತೆಯಲ್ಲೇ ಆಕೆಯ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿಯಲು ಹೋದಾಗ ರಸ್ತೆಯಲ್ಲಿ ಹೋಗುತ್ತಿದ್ದವರು ಆಕೆಯನ್ನು ಕಾಪಾಡಿ, ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸಚಿನ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
First published:January 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ