ಗಂಡನ ಕನಸು ನನಸಾಗಿಸಲು ಸೇನೆ ಸೇರಿದ ಹೆಂಡತಿ; ಇದು ಹುತಾತ್ಮ ಯೋಧನ ಪತ್ನಿಯ ಮನಕಲಕುವ ಕತೆ

Indian Army: 'ನನ್ನ ರೂಮಿನ ಕಬೋರ್ಡ್​ನಲ್ಲಿ ಇನ್ನೂ ವಿಭೂತಿ ಅವರ ಯೂನಿಫಾರ್ಮ್​ ಇದೆ. ಆತ ಬಳಸುತ್ತಿದ್ದ ಲಿಪ್​ ಬಾಮ್, ಲೈಟರ್, ಆತ ಉಪಯೋಗಿಸುತ್ತಿದ್ದ ಟೂತ್​ ಬ್ರೆಶ್​ ಅನ್ನು ಕೂಡ ಹಾಗೇ ಜೋಪಾನವಾಗಿ ಇಟ್ಟುಕೊಂಡಿದ್ದೇನೆ' ಎನ್ನುತ್ತಾ ಹಳೆಯ ನೆನಪಿಗೆ ಜಾರುತ್ತಾರೆ ನಿತಿಕಾ ಕೌಲ್.

ಹುತಾತ್ಮ ಯೋಧ ವಿಭೂತಿ ದೌಂಡಿಯಾಲ್- ನಿತಿಕಾ ಕೌಲ್

ಹುತಾತ್ಮ ಯೋಧ ವಿಭೂತಿ ದೌಂಡಿಯಾಲ್- ನಿತಿಕಾ ಕೌಲ್

  • Share this:
ನವದೆಹಲಿ (ಫೆ. 19): ಅದು 2019ರ ಫೆಬ್ರವರಿ 18. 8 ತಿಂಗಳ ಹಿಂದೆ ಮದುವೆಯಾಗಿದ್ದ ಗಂಡ ದೇಶ ಕಾಯಲು ವಾಪಾಸ್ ಹೋಗಿದ್ದ. ತನ್ನನ್ನು ನೋಡಲು ವಾಪಾಸ್ ಬಂದೇ ಬರುತ್ತಾನೆ ಎಂದು ಕಾಯುತ್ತಿದ್ದ ಹೆಂಡತಿಯ ನಿರೀಕ್ಷೆ ಆ ದಿನ ಸುಳ್ಳಾಗಿತ್ತು. ಆಕೆಯ ಮುಂದೆ ದೇಶದ ಧ್ವಜ ಹೊದ್ದ ಗಂಡನ ಶವಪೆಟ್ಟಿಗೆಯಿತ್ತು. ಕಣ್ಣಂಚಲ್ಲಿ ನೀರು ತುಂಬಿಕೊಂಡಿದ್ದ ಆಕೆ ಗಂಡನ ಮೃತದೇಹದ ಬಳಿ ಹೋಗಿ, ಶವವಾಗಿ ಮಲಗಿದ್ದ ಆತನ ಕಿವಿಯಲ್ಲಿ 'ಐ ಲವ್ ಯೂ' ಎಂದು ಪಿಸುಗುಟ್ಟಿದ್ದಳು. ಈ ದೃಶ್ಯ ನೋಡಿ ಅಲ್ಲಿ ನೆರೆದಿದ್ದ ಕುಟುಂಬಸ್ಥರ ಮತ್ತು ಸೇನಾ ಸಿಬ್ಬಂದಿಯ ಕಣ್ತುಂಬಿ ಬಂದಿತ್ತು.

ಇಂದಿಗೆ ಸರಿಯಾಗಿ 1 ವರ್ಷದ ಹಿಂದೆ ಪುಲ್ವಾಮದ ಪಿಂಗ್ಲಾದಲ್ಲಿ ಭಾರತೀಯ ಸೇನೆ 12 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಜೈಶ್ ಉಗ್ರ ಸಂಘಟನೆಯ ಕಮಾಂಡರ್ ಸೇರಿದಂತೆ 3 ಉಗ್ರರನ್ನು ಹತ್ಯೆ ಮಾಡಿತ್ತು. ಆದರೆ, ಈ ಎನ್​ಕೌಂಟರ್ ಕಾರ್ಯಾಚರಣೆಯಲ್ಲಿ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್, ಹವಾಲ್ದಾರ್ ಶಿಯೋರಾಮ್, ಸಿಪಾಯಿ ಅಜಯ್ ಕುಮಾರ್ ಹುತಾತ್ಮರಾಗಿದ್ದರು. ಹುತಾತ್ಮ ಯೋಧ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಅವರ ಹೆಂಡತಿ ನಿತಿಕಾ ಕೌಲ್ ತನ್ನ ಗಂಡನ ಮೃತದೇಹದ ಪಕ್ಕದಲ್ಲಿ ಕುಳಿತು, ಐ ಲವ್​ ಯೂ ಎಂದು ಪಿಸುಗುಟ್ಟಿದ್ದ ವಿಡಿಯೋ ವೈರಲ್ ಆಗಿತ್ತು.ಪುಲ್ವಾಮಾ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದ ಮೇಜರ್ ಶಂಕರ್ ದೌಂಡಿಯಾಲ್ ಅವರ ಹೆಂಡತಿ ನಿತಿಕಾಗೆ ಆಗ ಕೇವಲ 27 ವರ್ಷ. ಹೊಸತಾಗಿ ಮದುವೆಯಾಗಿದ್ದ ಅವರು ತಮ್ಮ ಜೀವನದ ಬಗ್ಗೆ ನೂರಾರು ಕನಸು ಕಂಡಿದ್ದರು. ಸೇನೆಯಲ್ಲಿದ್ದ ಗಂಡನ ಬಗ್ಗೆ ಹೆಮ್ಮೆ ಪಟ್ಟಿದ್ದ ನಿತಿಕಾ ಪ್ರತಿದಿನವೂ ಗಂಡನ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ, ಆಕೆಯ ಜೀವನದಲ್ಲಿ ಬರಸಿಡಿಲು ಬಂದು ಅಪ್ಪಳಿಸಿತ್ತು.

ಇದನ್ನೂ ಓದಿ: ಗಂಡನ ಆತ್ಮಕ್ಕೆ ಶಾಂತಿ ನೀಡಲು ಸೇನೆಗೆ ಸೇರಿದ ಹುತಾತ್ಮ ಮೇಜರ್​​ ಮಡದಿ; ಇಲ್ಲಿದೆ ಒಂದು ಅಪರೂಪದ ಪ್ರೇಮಕಥೆ!

ಗಂಡನ ಮೃತದೇಹದ ಮುಂದೆ ನಿಂತು ಸೆಲ್ಯೂಟ್ ಹೊಡೆದಿದ್ದ ನಿಖಿತಾ, ಗಂಡನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕಂಬನಿ ಮಿಡಿದಿದ್ದರು. 'ನೀವು ಎಲ್ಲದಕ್ಕಿಂತ ಹೆಚ್ಚು ನನ್ನನ್ನು ಪ್ರೀತಿಸುತ್ತೀರೆಂದು ಸುಳ್ಳು ಹೇಳಿದ್ದಿರಿ. ನನಗಿಂತಲೂ ಹೆಚ್ಚಾಗಿ ನೀವು ದೇಶವನ್ನು ಪ್ರೀತಿಸುತ್ತಿದ್ದಿರಿ ಎಂಬುದು ನನಗೆ ಗೊತ್ತು. ಅದೇ ಕಾರಣಕ್ಕೆ ಈ ದೇಶಕ್ಕಾಗಿ ನಿಮ್ಮ ಪ್ರಾಣತ್ಯಾಗ ಮಾಡಿದ್ದೀರಿ. ನಾನು ಕೊನೆಯ ಉಸಿರು ಇರುವವರೆಗೂ ನಿಮ್ಮನ್ನು ಪ್ರೀತಿಸುತ್ತಿರುತ್ತೇನೆ' ಎಂದು ಹೇಳಿದ್ದರು. ಗಂಡನ ಹಣೆಗೆ ಮುತ್ತಿಟ್ಟು, ಆತನಿಗೆ ಅಂತಿಮ ವಿದಾಯ ಹೇಳಿದ್ದ ನಿಖಿತಾರನ್ನು ನೋಡಿದ ಆಕೆಯ ಮನೆಯವರು ಮತ್ತು ಸೇನಾ ಸಿಬ್ಬಂದಿ ಭಾವುಕರಾಗಿದ್ದರು.

Love Story of Indian Sodier Pulwama attack after Major Vibhuti shankar Dhoundiyal Death his Wife Nitika Kaul joined Army
ಗಂಡನ ಮೃತದೇಹಕ್ಕೆ ಮುತ್ತಿಟ್ಟಿದ್ದ ನಿತಿಕಾ ಕೌಲ್


ತನ್ನ ಗಂಡ ಬಹಳ ಇಷ್ಟಪಟ್ಟು ಸೇರಿದ್ದ ಸೇನೆಗೆ ಸೇರಿ ತಾನೂ ದೇಶಸೇವೆ ಮಾಡಬೇಕೆಂದು ಅಂದೇ ದಿಟ್ಟ ನಿರ್ಧಾರ ಮಾಡಿದ್ದ ನಿತಿಕಾ ಕೌಲ್ ಆಸೆ ಕೊನೆಗೂ ಈಡೇರಿದೆ. ದೆಹಲಿಯ ಬಹುರಾಷ್ಟ್ರೀಯ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಿತಿಕಾ ಕೌಲ್​ ಅವರು ಸೇನೆಯ ಅಂತಿಮ ಸಂದರ್ಶನ ಎದುರಿಸಿ ಹುದ್ದೆ ಪಡೆದು ಪತಿಯಂತೆ ಉತ್ತಮ ಅಧಿಕಾರಿಯಾಗುವ ಕನಸು ಹೊಂದಿದ್ದಾರೆ. ನಿತಿಕಾ ಕೌಲ್​ ಅವರು ಶಾರ್ಟ್ ಸರ್ವೀಸ್ ಕಮಿಷನ್ (ಎಸ್‌ಎಸ್‌ಸಿ) ಪರೀಕ್ಷೆ ಬರೆದು ಉತ್ತಮ ಅಂಕ ಪಡೆದಿದ್ದಾರೆ. ನಂತರ ಸಂದರ್ಶನ ಎದುರಿಸಿದ್ದಾರೆ. ಸಂದರ್ಶನದಲ್ಲಿ ಉತ್ತಮ ಅಂಕ ಬರುವ ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪುಲ್ವಾಮ ದಾಳಿಯ ಮಾಸ್ಟರ್​ ಮೈಂಡ್​ ಹತ್ಯೆ; ಭಾರತೀಯ ಸೇನೆಗೆ ಧನ್ಯವಾದ ತಿಳಿಸಿದ ಮಂಡ್ಯ ಹುತಾತ್ಮ ಯೋಧನ ಪತ್ನಿ

ಮೆರಿಟ್ ​ಪಟ್ಟಿಯಲ್ಲಿ ಹೆಸರು ಪ್ರಕಟಗೊಂಡ ನಂತರ ಅವರು ಸೇವೆಗೆ ಸೇರ್ಪಡೆಯಾಗಲಿದ್ದಾರೆ. ಗಂಡ ವಿಭೂತಿ ದೌಂಡಿಯಾಲ್ ಸಾವನ್ನಪ್ಪಿದ ನಂತರ ಅಪ್ಪ-ಅಮ್ಮನ ಜೊತೆ ದೆಹಲಿಯಲ್ಲಿ ನೆಲೆಸಿರುವ ನಿತಿಕಾ, ತಾನು ಕೂಡ ಗಂಡನಂತೆ ಸೇನೆಯ ಯೂನಿಫಾರ್ಮ್​ ಧರಿಸಿ, ಆತನ ಆತ್ಮಕ್ಕೆ ಶಾಂತಿ ನೀಡಲು ನಿರ್ಧರಿಸಿದ್ದಾರೆ.

Love Story of Indian Sodier Pulwama attack after Major Vibhuti shankar Dhoundiyal Death his Wife Nitika Kaul joined Army
ಗಂಡ ವಿಭೂತಿ ಜೊತೆ ನಿತಿಕಾ ಕೌಲ್


ಸೊಸೆಯ ಈ ನಿರ್ಧಾರಕ್ಕೆ ಮೇಜರ್ ವಿಭೂತಿ ದೌಂಡಿಯಾಲ್ ಅವರ ಅಪ್ಪ-ಅಮ್ಮ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿತಿಕಾ ಕೌಲ್, ನನ್ನ ಗಂಡನ ಸಾವಿನ ಆಘಾತದಿಂದ ಹೊರಬರಲು ತುಂಬ ಸಮಯ ಬೇಕಾಯಿತು. ಅವರು ಸಾವನ್ನಪ್ಪಿದ 15 ದಿನಗಳ ನಂತರ ನನ್ನ ಕೆಲಸಕ್ಕೆ ಮರಳಿದೆ. ಕೆಲಸಕ್ಕೆ ಹೋಗುವುದು ಕಷ್ಟವಾದರೂ ನೋವು ಮರೆಯಲು ಹಾಗೂ ಕುಟುಂಬ ಪಾಲನೆಗೆ ಕೆಲಸ ಅನಿವಾರ್ಯವಾಗಿತ್ತು. ನಂತರ ಸೇನೆಗೆ ಸೇರಲು ನಿರ್ಧರಿಸಿದ ಕಾರಣ ಕಳೆದ ಸೆಪ್ಟಂಬರ್​ನಲ್ಲಿ ಅರ್ಜಿ ಸಲ್ಲಿಸಿದ್ದೆ. ಈಗ ಮೆರಿಟ್​ ಲೀಸ್ಟ್​ಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತಾನಿನ್ನೂ ಬದುಕಿದ್ದೇನೆಂದು ಹೆಂಡತಿಗೆ ತಿಳಿಸಲು ದಿನವೂ ಹಣ ಡ್ರಾ ಮಾಡುವ ಸೈನಿಕ; ಯೋಧನ ಕತೆ ಫೇಸ್​ಬುಕ್​ನಲ್ಲಿ ವೈರಲ್

ಗಂಡನ ನೆನಪಿನ್ನೂ ಹಸಿಯಾಗಿದೆ:

'ನನ್ನ ರೂಮಿನ ವಾರ್ಡ್​ರೋಬ್​ನಲ್ಲಿ ಇನ್ನೂ ವಿಭೂ ಅವರ ಯೂನಿಫಾರ್ಮ್​ ಇದೆ. ಆಗಾಗ ಅದನ್ನು ಧರಿಸಿ ಕನ್ನಡಿ ಮುಂದೆ ನಿಂತುಕೊಳ್ಳುತ್ತೇನೆ. ಆತ ಹಚ್ಚುತ್ತಿದ್ದ ಲಿಪ್​ ಬಾಮ್, ಲೈಟರ್, ಆತ ಉಪಯೋಗಿಸುತ್ತಿದ್ದ ಟೂತ್​ ಬ್ರೆಶ್​ ಅನ್ನು ಕೂಡ ಹಾಗೇ ಜೋಪಾನವಾಗಿ ಇಟ್ಟುಕೊಂಡಿದ್ದೇನೆ' ಎನ್ನುತ್ತಾ ಹಳೆಯ ನೆನಪಿಗೆ ಜಾರುತ್ತಾರೆ ನಿತಿಕಾ.

Love Story of Indian Sodier Pulwama attack after Major Vibhuti shankar Dhoundiyal Death his Wife Nitika Kaul joined Army
ಮೇಜರ್ ವಿಭೂತಿ ದೌಂಡಿಯಾಲ್ ಫೋಟೋಗೆ ನಮಿಸುತ್ತಿರುವ ನಿತಿಕಾ


ಸೇನೆಗೆ ಸೇರಲು ಪ್ರವೇಶ ಪರೀಕ್ಷೆ ವೇಳೆ ಸಂದರ್ಶನ ಮಂಡಳಿಯವರು ನನ್ನನ್ನು ಸಂದರ್ಶನ ಮಾಡುವಾಗ ಒಂದು ಪ್ರಶ್ನೆ ಕೇಳಿದರು. ನೀವು ವಿಭೂತಿ ದೌಂಡಿಯಾಲ್ ಅವರನ್ನು ಮದುವೆಯಾಗಿ ಎಷ್ಟು ವರ್ಷವಾಗಿತ್ತು? ಎಂಬ ಅವರ ಪ್ರಶ್ನೆಗೆ ನಾನು 2 ವರ್ಷ ಎಂದು ಉತ್ತರಿಸಿದೆ. ಆಗ 'ಆದರೆ, ಅವರು ಸಾಯುವ 8 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು ಎಂದು ನಮಗೆ ಮಾಹಿತಿ ಬಂದಿದೆಯಲ್ಲ' ಎಂದು ಹೇಳಿದರು. ನನ್ನ ಗಂಡ ಈಗ ನನ್ನೊಂದಿಗಿಲ್ಲ ಎಂದ ಮಾತ್ರಕ್ಕೆ ನಮ್ಮ ಸಂಬಂಧವೂ ಅಂತ್ಯವಾಯಿತು ಎಂದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ವಿಭೂ ಈಗ ನನ್ನೊಂದಿಗೆ ದೈಹಿಕವಾಗಿ ಇಲ್ಲದಿರಬಹುದು. ಆದರೆ, ಅವರು ಎಂದೆಂದಿಗೂ ನನ್ನ ಗಂಡನಾಗಿಯೇ ಇರುತ್ತಾರೆ ಎಂದು ಸಂದರ್ಶಕರಿಗೆ ಹೇಳಿದೆ ಎಂದು ನಿತಿಕಾ ತಿಳಿಸಿದ್ದಾರೆ.

ಇದನ್ನೂ ಓದಿ: ಯುದ್ಧ ಬೇಕು ಎನ್ನುವ ಫೇಸ್​ಬುಕ್​ ಹೋರಾಟಗಾರರು ಸೇನೆಗೆ ಸೇರಲು ಸಿದ್ಧರಿದ್ದಾರಾ?; ಮೃತ ಯೋಧನ ಪತ್ನಿಯ ಆಕ್ರೋಶದ ನುಡಿ

Love Story of Indian Sodier Pulwama attack after Major Vibhuti shankar Dhoundiyal Death his Wife Nitika Kaul joined Army
ನಿತಿಕಾ ಕೌಲ್


1 ವರ್ಷದ ಹಾದಿ ಸುಲಭವಾಗಿರಲಿಲ್ಲ:

'ನನ್ನ ಗಂಡ ಬಹಳ ಆಧುನಿಕ ಮನೋಭಾವ ಹೊಂದಿದವರಾಗಿದ್ದರು. ಅವರಿಗೆ ನಾನು ನಾಲ್ಕು ಗೋಡೆ ನಡುವೆ ಕುಳಿತಿರುವುದು ಇಷ್ಟವಾಗುತ್ತಿರಲಿಲ್ಲ. ನಾನು ಅವರಿಗಿಂತ ದೊಡ್ಡ ಸಾಧನೆ ಮಾಡಬೇಕೆಂದು ಯಾವಾಗಲೂ ಹೇಳುತ್ತಿದ್ದರು. ಈ ದೇಶಕ್ಕಾಗಿ ಪ್ರಾಣ ಬಿಟ್ಟ ಅವರ ವೃತ್ತಿಯನ್ನು ನಾನು ನನ್ನ ವೃತ್ತಿಯಾಗಿ ಸ್ವೀಕಾರ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ನೀಡಲು ನಿರ್ಧಾರ ಮಾಡಿದ್ದೇನೆ. ನನ್ನ ಈ ನಿರ್ಧಾರದಿಂದ ಸ್ವರ್ಗದಲ್ಲಿರುವ ನನ್ನ ಗಂಡ ಖಂಡಿತವಾಗಿಯೂ ಖುಷಿಯಾಗಿರುತ್ತಾರೆ ಎಂಬ ನಂಬಿಕೆ ನನ್ನದು. ನನ್ನಿಂದ ಇದು ಸಾಧ್ಯವಿಲ್ಲ ಎನಿಸಿದಾಗಲೆಲ್ಲ ಕಣ್ಣುಮುಚ್ಚಿ ವಿಭೂ ಅವರನ್ನು ನೆನಪಿಸಿಕೊಳ್ಳುತ್ತೇನೆ. ಆಗ ನನ್ನಲ್ಲಿ ವಿಶ್ವಾಸ ಹೆಚ್ಚಾಗುತ್ತದೆ. ಅವರು ನನ್ನೊಡನೆ ಇಲ್ಲದಿದ್ದರೂ ಮಾನಸಿಕವಾಗಿ ನನ್ನ ಜೊತೆಗೆ ನಿಂತು ಕುಟುಂಬವನ್ನು ಮುನ್ನಡೆಸಲು ಸಹಾಯ ಮಾಡುತ್ತಿದ್ದಾರೆ' ಎಂದು ನಿತಿಕಾ ಕೌಲ್ ದೌಂಡಿಯಾಲ್ ಭಾವುಕರಾಗಿ ಈ 1 ವರ್ಷದ ತಮ್ಮ ಬದುಕನ್ನು ಬಿಚ್ಚಿಟ್ಟಿದ್ದಾರೆ.

 
First published: