#Love Story: ಕರುಣಾನಿಧಿಯ ಪ್ರೇಮಪ್ರಕರಣಗಳು ಮತ್ತು ವೈವಾಹಿಕ ಜೀವನ


Updated:August 8, 2018, 7:42 AM IST
#Love Story: ಕರುಣಾನಿಧಿಯ ಪ್ರೇಮಪ್ರಕರಣಗಳು ಮತ್ತು ವೈವಾಹಿಕ ಜೀವನ

Updated: August 8, 2018, 7:42 AM IST
ನ್ಯೂಸ್​ 18 ಕನ್ನಡ 

ಚೆನ್ನೈ (ಆ. 8): ವಿದ್ಯಾರ್ಥಿ ಚಳವಳಿ, ಸಾಮಾಜಿಕ ಹೋರಾಟ, ಸಿನೆಮಾ ರಂಗದ ಪಯಣ, ರಾಜಕೀಯದ ಏಳು - ಬೀಳು, ಏರಿದ ಉನ್ನತ ಹುದ್ದೆಗಳು ಎಲ್ಲವುಗಳ ಆಚೆಗೆ ಕರುಣಾನಿಧಿಯವರ ವೈಯಕ್ತಿಕ ಜೀವನ ರಂಗು ಹೊಂದಿತ್ತು. ತಮಿಳುನಾಡಿನ ಆರಾಧ್ಯ ದೈವ, ದ್ರಾವಿಡ ಚಳವಳಿಯ ಕಡೆಯ ಕೊಂಡಿ ಕಲೈಙರ್​ ಕರುಣಾನಿಧಿಯವರ ರಸಮಯ ಬದುಕಿನ ಚಿತ್ರಣ ಇಲ್ಲಿದೆ.

60ರ ದಶಕd ಕೊನೆಯಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿದ್ದ ಮುಥುವೇಲು ಕರುಣಾನಿಧಿಯವರ ಬಳಿ "ಸರ್ಕಾರದಿಂದ ಅಧಿಕೃತವಾಗಿ ನೀವು ಬಾಡಿಗೆ ಪಡೆದು ನೆಲೆಸುತ್ತಿರುವ ಆಲಿವರ್​ ರಸ್ತೆಯಲ್ಲಿರುವ ಆ ಕಟ್ಟಡದಲ್ಲಿ ನಿಮ್ಮೊಂದಿಗಿರುವವರು ಯಾರು?" ಎಂಬ ವಿಚಿತ್ರವಾದ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಸಂದರ್ಭದಲ್ಲಿ ಪ್ರಶ್ನಿಸಿದವರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸಿದ್ದ ಕರುಣಾನಿಧಿ, ಅಲ್ಲಿ ನನ್ನ ಮಗಳು ಕನಿಮೋಳಿಯ ತಾಯಿ ವಾಸಿಸುತ್ತಿದ್ದಾರೆ ಎಂದಿದ್ದರು. ಇದಾದ ಬಳಿಕ ರಜತಿ ಅಮ್ಮಲ್​ರನ್ನು ಅವರ ಅಧಿಕೃತ ಪತ್ನಿ ಎನ್ನಲಾಯಿತು. ಇದಾದ ಬಳಿಕ ಯಾರೊಬ್ಬರೂ ಕರುಣಾನಿಧಿಯ ಬಳಿ ಇಂತಹ ಪ್ರಶ್ನೆ ಕೇಳಲಿಲ್ಲ.

ಕಳೆದ ಕೆಲ ದಶಕಗಳಿಂದ ಕರುಣಾನಿಧಿಯವರ ದಿನಚರಿ ಕಣ್ಣಿಗೆ ಕಟ್ಟುವಂತಿತ್ತು. ಅವರು ಸಿಜೆಐ ಕಾಲೊನಿಯ ಐಷಾರಾಮಿ ಬಂಗಲೆಯಲ್ಲಿ ರಜತಿ ಅಮ್ಮಲ್​ ಜೊತೆಗೆ ರಾತ್ರಿ ಕಳೆಯುತ್ತಿದ್ದರು. ಬೆಳಗಾಗುತ್ತಿದ್ದಂತೆಯೇ ತಮ್ಮ ಹೆಂಡತಿ ದಯಾಲ್​ ಅಮ್ಮಲ್​ ಇದ್ದ ಗೋಪಾಲ್​ಪುರ್​ನಲ್ಲಿದ್ದ ಅಧಿಕೃತ ನಿವಾಸಕ್ಕೆ ತೆರಳುತ್ತಿದ್ದರು.

ತಮಿಳುನಾಡು ರಾಜಕಾರಣದಲ್ಲಿ, ರಾಜಕೀಯ ಮುಖಂಡರಿಗೆ ಒಂದಕ್ಕಿಂತ ಹೆಚ್ಚು ಹೆಂಡತಿಯರಿರುವ ಪರಂಪರೆ ಇದೆ, ಇದನ್ನು ಅಲ್ಲಿನ ಜನರು "ಚಿನ್ನವೀಡು" ಎನ್ನುತ್ತಾರೆ. ಆದರೆ ಹಿಂದೂ ಆ್ಯಕ್ಟ್​ ಅನ್ವಯ ಕಾನೂನಾತ್ಮಕವಾಗಿ ಒಂದಕ್ಕಿಂತ ಹೆಚ್ಚು ವಿವಾಹವಾಗುವುದು ಅಪರಾಧವಾಗಿದೆ. ಆದರೆ ಕರುಣಾನಿಧಿಗೆ ಈ ವಿಚಾರವಾಗಿ ಯಾವತ್ತೂ ಸಮಸ್ಯೆ ಎದುರಾಗಿಲ್ಲ. ಅವರು ತಮ್ಮ ಜೀವನದಲ್ಲಿ ಮೂವರನ್ನು ಮದುವೆಯಾಗಿದ್ದಾರೆ. ಇವರಲ್ಲಿ ಇಬ್ಬರನ್ನು ಸಕಲ ಸಂಪ್ರದಾಯದಂತೆ ವಿವಾಹವಾಗಿದ್ದರೆ, ಒಬ್ಬರನ್ನು ಅನ್ಯ ಪರಂಪರೆಯನ್ವಯ ಮದುವೆಯಾಗಿದ್ದರು.

ಆ ದಿನಗಳಲ್ಲಿ ದುಬಾರಿ ಸ್ಕ್ರಿಪ್ಟ್​ ರೈಟರ್​ ಆಗಿದ್ದರು:

ಕರುಣಾನಿಧಿಯವರು ತಮ್ಮ 20 ನೇ ವಯಸ್ಸಿನಲ್ಲಿ ತಮಿಳು ಸಿನಿಮಾ ಕ್ಷೇತ್ರದಲ್ಲಿ ಸ್ಕ್ರಿಪ್ಟ್​ ರೈಟರ್​ ಆಗಿ ಕೆಲಸ ಆರಂಭಿಸಿದ್ದು, ನೋಡ ನೋಡುತ್ತಿದ್ದಂತೆಯೇ ಅವರೊಬ್ಬ ಪ್ರಖ್ಯಾತ ಬರಹಗಾರರಾಗಿ ಮಾರ್ಪಾಡಾಗಿದ್ದರು. ಅವರಿಗೆ ಆ ಕಾಲದಲ್ಲಿ ಒಂದು ತಿಂಗಳಿಗೆ 10 ರೂಪಾಯಿ ವೇತನ ಸಿಗುತ್ತಿತ್ತು. ಯುವಕರಾಗಿದ್ದ ಕರುಣಾನಿಧಿಯವರೊಳಗೆ ಆ ದಿನಗಳಲ್ಲಿ ವಿಭಿನ್ನವಾದ ಉತ್ಸಾಹ ಹಾಗೂ ಹುಮ್ಮಸ್ಸಿತ್ತು. ಒಂದು ರೀತಿಯಲ್ಲಿ ಅವರು ಇಡೀ ದಕ್ಷಿಣ ಭಾರತದ ಸಿನಿಮಾಗಳಿಗೆ ಸ್ಕ್ರಿಪ್ಟ್​ ಬರೆಯುತ್ತಿದ್ದರೆಂದೇ ಹೇಳಬಹುದು. ಸಿನಿಮಾ ನಟ, ನಟಿಯ ಹಾಗೂ ನಿರ್ಮಾಪಕರೊಂದಿಗೆ ಸಮಯ ಕಳೆಯುತ್ತಿದ್ದ ಕರುಣಾನಿಧಿಯವರು, ಬಿಡುವು ಸಿಗುತ್ತಿದ್ದಂತೆಯೇ ರಾಜಕೀಯದ ನಾಯಕರೆಂದೇ ಹೇಳಲಾಗುವ ಸಿ. ಅಣ್ಣಾದೊರೆಯವರನ್ನೂ ಭೇಟಿಯಾಗಿ ಬರುತ್ತಿದ್ದರು. ಅಣ್ಣಾದೊರೆಯಿಂದ ಬಹಳಷ್ಟು ಪ್ರಭಾವಿತರಾಗಿದ್ದ ಕರುಣಾನಿಧಿಯವರು ಅವರ ಆಂದೋಲನಗಳಲ್ಲೂ ಪಾಲ್ಗೊಳ್ಳುತ್ತಿದ್ದರು.
Loading...

ನೀಳಕಾಯದ ಪದ್ಮಾವತಿ ಇಷ್ಟವಾದರು:

ಈ ನಡುವೆ ಕರುಣಾನಿಧಿಗೆ ನೀಳಕಾಯದ ಹಾಗೂ ಆಕರ್ಷಕ ಕಣ್ಣುಗಳುಳ್ಳ ಪದ್ಮಾವತಿ ಅಮ್ಮಾಯ್ಯರ್​ ಇಷ್ಟವಾದರು. ಪದ್ಮಾವತಿಯ ಅಣ್ಣ ಜಯರಾಮನ್​ ದಕ್ಷಿಣ ಸಿನಿಮಾ ಭಾರತದ ಸಿನಿಮಾ ಕ್ಷೇತ್ರದ ಪ್ರಖ್ಯಾತ ಗಾಯಕರಾಗಿದ್ದರು. ಬಹುಶಃ 1945-46ರಲ್ಲಿ ಕರುಣಾನಿಧಿ ಪದ್ಮಾವತಿಯನ್ನು ವಿವಾಹವಾಗಿದ್ದರು. ಇಬ್ಬರು ಬಹಳ ಖುಷಿಯಾಗಿದ್ದರು. ಜೀವನ ಬಹಳಷ್ಟು ಸಂತೋಷದಿಂದ ಸಾಗುತ್ತಿದ್ದು, ಇಬ್ಬರಿಗೂ ಗಂಡುಮಗುವೊಂದು ಜನಿಸಿತು. ಈ ಮಗುವಿಗೆ ಎಂ. ಕೆ ಮುತ್ತು ಎಂದು ನಾಮಕರಣ ಮಾಡಿದರು. ಆದರೆ ಈ ಮಧ್ಯೆ ಪದ್ಮಾವತಿ ಗಂಭೀರ ಕಾಯಿಲೆಗೊಳಗಾದರು. ಇದರಿಂದಾಗಿ 1948ರಲ್ಲಿ ಕೊನೆಯುಸಿರೆಳೆದರು. ಇದು ಕರುಣಾನಿಧಿಗೆ ಬಹುದೊಡ್ಡ ಶಾಕ್​ ಆಗಿತ್ತು. ಇದಾದ ಬಳಿಕ ಅವರು ತಮ್ಮ ಜೀವನವನ್ನು ಅಣ್ಣಾದೊರೆಯೊಂದಿಗೆ ಕಳೆಯಲು ನಿರ್ಧರಿಸಿದರು, ಆದರೆ ಹಾಗಾಗಲಿಲ್ಲ.

ಕರುಣಾನಿಧಿಯ ಮೊದಲ ಹೆಂಡತಿ ಪದ್ಮಾವತಿ


ಎರಡನೇ ಮದುವೆ...

ನಾಲ್ಕು ವರ್ಷಗಳ ಬಳಿಕ 1952 ರಲ್ಲಿ ಅವರ ಹೆತ್ತವರು ದಯಾಲು ಅಮ್ಮಲ್​ರೊಂದಿಗೆ ಅವರ ಮದುವೆ ಮಾಡಿಸಿದರು. ಈ ನಡುವೆ ದುಬಾರಿ ಸ್ಕ್ರಿಪ್ಟ್​ ರೈಟರ್​ ಆಗಿದ್ದ ಕರುಣಾನಿಧಿ ನಿಧಾನವಾಗಿ ಅಣ್ಣಾದೊರೆಯವರ ರಾಜಕೀಯ ಚಳವಳಿಯಲ್ಲಿ ಹೆಚ್ಚಿನ ಸಮಯ ಕಳೆಯಲಾರಂಭಿಸಿದರು. ದಯಾಲುರವರಿಗೆ ಇವರಿಂದ ಮೂವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಮಗು ಹೀಗೆ ಒಟ್ಟು ನಾಲ್ವರು ಮಕ್ಕಳಾದರು(ಎಂ. ಕೆ. ಅಳಗಿರಿ, ಎಂ. ಕೆ ಸ್ಟಾಲಿನ್​, ಎಂ. ಕೆ ತಮಿಳಾರಸು ಹಾಗೂ ಸೆಲ್ವಿ). ಇದೊಂದು ಪರಿಪೂರ್ಣ ಕುಟುಂಬವಾಗಿತ್ತು. ಈ ವೇಳೆಗಾಗಲೇ ಕರುಣಾನಿಧಿ ರಾಜಕೀಯವೆಂಬ ಹಡಗಿನಲ್ಲಿ ಅಣ್ಣಾದೊರೆಯೊಂದಿಗೆ ತಮ್ಮ ಪ್ರಯಾಣ ಆರಂಭಿಸಿದ್ದರು, ದಿನಗಳೆಯುತ್ತಿದ್ದಂತೆಯೇ ಅವರು ಅಣ್ಣಾದೊರೆಯವರ ಅತ್ಯಂತ ವಿಶ್ವಾಸನೀಯ ಸಹೋದ್ಯೋಗಿಯಾದರು.

ಕರುಣಾನಿಧಿಯ ಎರಡನೇ ಹೆಂಡತಿ ದಯಾಲು ಅಮ್ಮಲ್


ನಾಟಕ ತಂಡದ ಆ ಆಕರ್ಷಕ ಯುವತಿ...

ಸಮಯ ಮುಂದೆ ಸಾಗುತ್ತಿತ್ತು. ಅದು 60ರ ದಶಕದ ನಡುವೆ ನಡೆದ ವಿಚಾರ. ಆಗ ತಮಿಳುನಾಡಿನಲ್ಲಿ ಚುನಾವಣೆ ನಡೆಯುತ್ತಿತ್ತು. ಕರುಣಾನಿಧಿ ಸಂಪೂರ್ಣವಾಗಿ ತಮ್ಮ ರಾಜಕೀಯ ಗುರುವಿನೊಂದಿಗೆ ತಮ್ಮನ್ನು ತಾವು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಅದೇ ಚುನಾವಣೆಯಲ್ಲಿ ಎಐಎಡಿಎಂಕೆ ಚುನಾವಣಾ ಪಕ್ಷದೊಂದಿಗೆ ಒಂದು ನಾಟಕ ತಂಡವೂ ಸೇವೆ ನೀಡುತ್ತಿತ್ತು. ಈ ತಂಡದಲ್ಲಿ ರಜತಿ ಎಂಬ ಆಕರ್ಷಕ ಯುವತಿ ಇದ್ದಳು, ಆಕೆಯ ಅಭಿನಯವೇ ಅತ್ಯಂತ ಮನಮೋಹಕವಾಗಿತ್ತು. ಈ ಯುವತಿಯಲ್ಲಿದ್ದ ಅದ್ಯಾವುದೋ ಕಾಣದ ಶಕ್ತಿ ಕರುಣಾನಿಧಿಯವರನ್ನು ಆಕರ್ಷಿಸಿತ್ತು.

ಹೊಸ ಪ್ರೇಮ ಸಂಬಂಧದ ವದಂತಿಗಳು ಹಬ್ಬಲಾರಂಭಿಸಿದವು...

ಚುನಾವಣೆಯ ಬಳಿಕ ಇಬ್ಬರೂ ನಿರಂತರವಾಗಿ ಭೇಟಿ ಮಾಡಲಾರಂಭಿಸಿದರು. ಇದರ ಪ್ರಭಾವ ಅವರ ಕೌಟುಂಬಿಕ ಬದುಕಿನ ಮೇಲೂ ಬೀಳಲಾರಂಭಿಸಿತು. ದಿನಗಳೆದಂತೆ ರಜತಿ ಹಾಗೂ ಕರುಣಾನಿಧಿಯವರ ಪ್ರೇಮ ಸಂಬಂಧದ ಸುದ್ದಿ ವ್ಯಾಪಿಸಲಾರಂಭಿಸಿತ್ತು. ಆ ಸಂದರ್ಭದಲ್ಲಿ ಕರುಣಾನಿಧಿಯವರು ಇತ್ತ ದಯಾಲು ಅಮ್ಮಲ್​ರನ್ನೂ ಬಿಡಲು ಇಷ್ಟಪಡಲಿಲ್ಲ, ಅತ್ತ ರಜತಿಯವರನ್ನೂ ತಮ್ಮ ಜೀವನದಲ್ಲಿ ಬರಮಾಡಿಕೊಳ್ಳುವ ಇಚ್ಛೆ ಹೊಂದಿದ್ದರು. ಆದರೆ ಅವರ ಅಣ್ಣ ಅಕ್ಕಂದಿರು ಇದನ್ನು ವಿರೋಧಿಸಿದರು. ಆದರೆ ಕರುಣಾನಿಧಿ ತಾವೇನು ಮಾಡಬೇಕೆಂಬುವುದನ್ನು ನಿರ್ಧರಿಸಿದ್ದರು. ಅವರ ರಾಜಕೀಯ ಗುರು ಅಣ್ಣಾದೊರೆ ಈ ವಿಚಾರದಲ್ಲಿ ಅವರನ್ನು ಬೆಂಬಲಿಸಿದರು.

ರಜತಿ ಅಮ್ಮಲ್​ ಜೊತೆ ಮೂರನೇ ಮದುವೆಯಾದ ಕರುಣಾನಿಧಿ


ವಿಭಿನ್ನವಾಗಿತ್ತು ಮೂರನೇ ಮದುವೆ...

ಆ ದಿನಗಳಲ್ಲಿ 'ದ್ರಾವಿಡ ಮುನ್ನೇತ್ರಂ ಕಳಗಂ' ಪಕ್ಷವು 'ಸ್ವಯಂ ಮರ್ಯಾದಾ ಕಲ್ಯಾಣಂ' ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಮೂಲಕ ಯಾವುದೇ ಕೋರ್ಟ್​ಗೆ ತೆರಳಿ ಅಥವಾ ದೇವಸ್ಥಾನದ ಅರ್ಚಕರನ್ನು ಕರೆದು ಮಂತ್ರ ಜಪಿಸುವ ಮೂಲಕ ಮದುವೆಯಾಗುವ ಪರಂಪರೆಯನ್ನು ಅನುಸರಿಸಲಿಲ್ಲ. ಬದಲಾಗಿ ಪಕ್ಷದ ಹಲವಾರು ಹಿರಿಯರ ಸಮ್ಮುಖದಲ್ಲಿ ಜೀವಮಾನವಿಡೀ ಜೊತೆಯಾಗಿರುತ್ತೇವೆಂದು ಪ್ರತಿಜ್ಞೆ ಮಾಡಿ, ಅವರ ಆಶೀರ್ವಾದ ಪಡೆದರು. ಈ ಮೂಲಕ ಸಯಾಲು ಅಮ್ಮಲ್​ ಹೆಂಡತಿಯಾದರೆ, ರಜತಿ ಅಮ್ಮಲ್​ ಸಂಗಾತಿಯಾದರು. ಈ ಮದುವೆ 1966 ಹಾಗೂ 1967 ರ ನಡುವೆ ನಡೆದಿತ್ತು.

ಕರುಣಾನಿಧಿಯೊಂದಿಗೆ ಇಬ್ಬರು ಹೆಂಡತಿಯರು


ಅವರು 21 ವರ್ಷದ ಯುವತಿಯಾಗಿದ್ದರೆ, ಇವರು 42 ವರ್ಷದ ಪುರುಷ...

ಆ ಸಂದರ್ಭದಲ್ಲಿ ರಜತಿಗೆ ಹೆಚ್ಚೆಂದರೆ 20-21 ಪ್ರಾಯವಾಗಿರಬಹುದು. ಕರುಣಾನಿಧಿ ಅವರಿಗಿಂತ 21 ವರ್ಷ ದೊಡ್ಡವರಾಗಿದ್ದರು. ಮದುವೆಯಾದ ಒಂದು ವರ್ಷದೊಳಗೆ ಅಂದರೆ 1968 ರಲ್ಲಿ ಕನಿಮೋಳಿ ಜನಿಸಿದ್ದರು. ಕಾನೂನಾತ್ಮಕವಾಗಿ ದಯಾಲು ಅವರ ಹೆಂಡತಿಯಾಗಿದ್ದರೂ, ಜಗತ್ತಿನ ದೃಷ್ಟಿಯಲ್ಲಿ ಇಬ್ಬರೂ ಅವರ ಹೆಂಡತಿಯರು. ಇಬ್ಬರು ಹೆಂಡತಿಯರು ಏಕಕಾಲದಲ್ಲಿ ಕರುಣಾನಿಧಿ ಭಾಗವಹಿಸುತ್ತಿದ್ದ ಸಾರ್ವಜನಿಕ ಸಭೆಗಳಲ್ಲಿ ಕಾಣಸಿಗುತ್ತಿದ್ದರು. ಹೀಗಿದ್ದರೂ ಇಬ್ಬರು ಹೆಂಡತಿಯರ ಮಕ್ಕಳ ನಡುವೆ ಒಂದು ರೀತಿಯ ಭಿನ್ನಾಭಿಪ್ರಾಯ ಮೊದಲಿನಿಂದಲೂ ಕಂಡುಬಂದಿದೆ. ಇವರ್ಯಾರೂ ಸಾರ್ವಜನಿಕ ಸಭೆಗಳಲ್ಲಿ ಅಷ್ಟಾಗಿ ಒಂದೇ ವೇದಿಕೆಯಲ್ಲಿ ಕಂಡು ಬಂದಿಲ್ಲ. ಕರುಣಾನಿಧಿಯ ಬಳಿಕ ಉತ್ತರಾಧಿಕಾರಿಯಾಗುವ ಇಚ್ಛೆಯೇ ಸಂಬಂಧಗಳ ನಡುವೆ ಬಿರುಕು ಮೂಡುವಂತೆ ಮಾಡಿದೆ ಎನ್ನಲಾಗುತ್ತದೆ.

ಇಷ್ಟೆಲ್ಲಾ ಏರಿಳಿತಗಳನ್ನು ಹೊಂದಿರುವ ವರ್ಣರಂಜಿತ ವ್ಯಕ್ತಿತ್ವ ಇಂದಿಗೆ ಕೊನೆಯಾಗಿದೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ