Love Failure: ಎಲ್ಲವೂ ಪ್ರೀತಿಗಾಗಿ, ಕೇರಳದಲ್ಲಿ ಕಳೆದ 5 ವರ್ಷದಲ್ಲಿ 350 ಯುವತಿಯರ ಸಾವು..!

ಒಟ್ಟು ಪ್ರೇಮ ಪ್ರಕರಣಗಳಲ್ಲಿ, 10 ಹುಡುಗಿಯರನ್ನು ಕೊಲ್ಲಲಾಯಿತು ಮತ್ತು 340 ಹುಡುಗಿಯರು ಪ್ರೀತಿಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೆಲ್ಲವೂ ಘಟಿಸಿರುವುದು ಪ್ರೀತಿಯ ಕಾರಣದಿಂದಾಗಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಪ್ರೀತಿ ಕುರುಡು, ಪ್ರೀತಿ ಮಾಯೆ ಎಂಬ ಮಾತು ಇತ್ತೀಚಿನ ದಿನಗಳಲ್ಲಿ ನಕಾರಾತ್ಮಕವಾಗಿ ಬಿಂಬಿತವಾಗುತ್ತಿದೆ. ಜೊತೆಗೆ ಪ್ರೀತಿಯು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೂ ಕಡಿವಾಣ ಹಾಕುತ್ತಿದೆ. ಪ್ರೀತಿಯಲ್ಲಿ ಯಶಸ್ವಿಯಾದವರಿಗಿಂತ ನೋವಿನ ಅಂತ್ಯ ಕಂಡವರೇ ಹೆಚ್ಚು. ಇದು ಪುರಾಣ ಇತಿಹಾಸದಿಂದ ಹಿಡಿದು ಕಲಿಯುಗದವರೆಗೂ ಮುಂದುವರೆದಿದೆ. ಈ ಹಿಂದೆ ಪಾರು ದೇವದಾಸ್, ರಾಧೆ-ಕೃಷ್ಣ, ರೋಮಿಯೋ-ಜೂಲಿಯಟ್ ಇವರೂ ಪ್ರೇಮ ವೈಫಲ್ಯಕ್ಕೆ ಒಳಗಾದರೂ ಗಾಢ ಪ್ರೇಮಕ್ಕೆ ದ್ಯೋತಕವಾಗಿ ಉಳಿದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹುಡುಗ-ಹುಡುಗಿಯರು ದುರಂತ ಕಾಣುತ್ತಿದ್ದಾರೆ.


ಆಧುನಿಕ ಕಾಲದಲ್ಲಿಯೂ ಈ ಪ್ರೇಮ ವೈಫಲ್ಯದ ಸಂಖ್ಯೆ ಹೆಚ್ಚಾಗುತ್ತಿದೆ. ಕೇರಳದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಪ್ರೀತಿಯ ಬಲೆಗೆ ಸಿಲುಕಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೊಂದು ಕಳವಳಕಾರಿ ಬೆಳವಣಿಗೆ ಎನಿಸಿದೆ. ಹಾಗಾಗಿ ಯಾವುದೇ ಹುಡುಗಿಯೂ ಪ್ರೀತಿಯಲ್ಲಿ ಬೀಳುವ ಬದಲು ಹಲವಾರು ಬಾರಿ ಯೋಚಿಸಬೇಕು. ಕೇರಳ ಸರ್ಕಾರ ಬಿಡುಗಡೆ ಮಾಡಿರುವ ಪ್ರೇಮ ಪ್ರಕರಣದ ಅಂಕಿ ಅಂಶಗಳು ಯುವತಿಯರನ್ನು ಸಾವಿನ ಬಾವಿಗೆ ನೂಕುತ್ತಿದೆ ಎಂದು ಹೇಳಿದೆ.


ಇದನ್ನೂ ಓದಿ:ಸೆಕ್ಸ್​ ಮಾಡುವಾಗ ಕಾಂಡೋಮ್ ಬದಲಿಗೆ ಗಮ್ ಹಚ್ಚಿ ಪ್ರಾಣವನ್ನೇ ಕಳೆದುಕೊಂಡ..!

ಹೌದು, ಕಳೆದ 5 ವರ್ಷಗಳಲ್ಲಿ ಕೇರಳದಲ್ಲಿ 350 ಹುಡುಗಿಯರು/ಮಹಿಳೆಯರ ಸಾವಿಗೆ ಪ್ರೀತಿಯೇ ಕಾರಣ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಒಟ್ಟು ಪ್ರೇಮ ಪ್ರಕರಣಗಳಲ್ಲಿ, 10 ಹುಡುಗಿಯರನ್ನು ಕೊಲ್ಲಲಾಯಿತು ಮತ್ತು 340 ಹುಡುಗಿಯರು ಪ್ರೀತಿಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೆಲ್ಲವೂ ಘಟಿಸಿರುವುದು ಪ್ರೀತಿಯ ಕಾರಣದಿಂದಾಗಿ. ಇತ್ತೀಚೆಗೆ ಮುಕ್ತಾಯಗೊಂಡ ಕೇರಳ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಎಂ ಕೆ ಮುನೀರ್ ಈ ಬಗ್ಗೆ ಪ್ರಶ್ನೆ ಎತ್ತಿದ್ದರು. ಇದಕ್ಕೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಈ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದರು.


ಅಂಕಿ ಅಂಶಗಳ ಪ್ರಕಾರ, ಕಳೆದ ವರ್ಷ ಪ್ರೀತಿಗೆ ಸಂಬಂಧಿಸಿದಂತೆಯೇ ಹೆಚ್ಚಿನ ಸಾವುಗಳು ವರದಿಯಾಗಿವೆ. ಇಬ್ಬರು ಹುಡುಗಿಯರು ಪ್ರೀತಿಯನ್ನು ತಿರಸ್ಕರಿಸಿದ ಪ್ರೇಮಿಗಳಿಂದ ಹತ್ಯೆಗೀಡಾಗಿದ್ದರೆ, 96 ಇತರರು ತಮ್ಮ ಪ್ರೇಮ ವೈಫಲ್ಯದ ನಂತರ ಜೀವ ಕಳೆದುಕೊಂಡಿದ್ದಾರೆ. ಹಿಂದಿನ ವರ್ಷ, ಐದು ಹುಡುಗಿಯರು ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಗಿ ಹುಡುಗರೇ ಆ ಹುಡುಗಿಯರನ್ನು ಹತ್ಯೆಗೈದಿದ್ದರು ಮತ್ತು 88 ಹುಡುಗಿಯರು ಪ್ರೀತಿಯಲ್ಲಿ ವೈಫಲ್ಯದ ಕಾರಣ ಮೃತಪಟ್ಟಿದ್ದರು.


2018ರಲ್ಲಿ 76 ಹುಡುಗಿಯರು ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017ರಲ್ಲಿ, ಪ್ರೇಮ ಸಂಬಂಧಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಮೃತಪಟ್ಟ 83 ಹುಡುಗಿಯರಲ್ಲಿ ಮೂವರನ್ನು ಗೆಳೆಯರೇ ಕೊಂದಿದ್ದಾರೆ. ಮನೋವೈದ್ಯ ಡಾ. ಪಿ ಎನ್ ಸುರೇಶ್ ಕುಮಾರ್ ಅವರು ಈ ಅಂಕಿಅಂಶಗಳನ್ನು ವಿಶ್ಲೇಷಿಸಿ, ಇದು ಜನರ ಮಾನಸಿಕ ಆರೋಗ್ಯವನ್ನು ಬಹಿರಂಗಪಡಿಸುತ್ತವೆ ಎಂದು ಹೇಳಿದರು.


ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

"ಭಾವನಾತ್ಮಕವಾಗಿ ಅಸ್ಥಿರ ವ್ಯಕ್ತಿತ್ವ, ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ಪ್ರೀತಿಯಲ್ಲಿ ವೈಫಲ್ಯದಂತಹ ಸಂದರ್ಭಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಮತ್ತು ಇದು ಕೊಲೆ ಅಥವಾ ಆತ್ಮಹತ್ಯೆಯಂತಹ ತೀವ್ರ ಹಂತಗಳನ್ನು ಆಯ್ಕೆ ಮಾಡಲು ಕಾರಣವಾಗುತ್ತದೆ. ಜನರ ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ಈ ಸಾಮಾಜಿಕ ಕಾಯಿಲೆಗೆ ಒಂದು ಮಟ್ಟಿಗೆ ಪರಿಹಾರವಾಗಬಹುದು ಎಂದು ಹೇಳಿದರು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Latha CG
First published: