ಲಿವಿಂಗ್​ ರಿಲೇಷನ್​ಶಿಪ್​ನಲ್ಲಿ ಅಕ್ರಮ ಸಂಬಂಧದ ಘಾಟು: ಪ್ರೇಯಸಿಯ ಖಾಸಗಿ ಭಾಗಕ್ಕೆ ಖಾರದ ಪುಡಿ ಹಚ್ಚಿ ಕೊಲೆ

Love Sex Dhoka - Extramarital Affair News: ಭಗ್ನ ಪ್ರೇಮಿಯೊಬ್ಬ ತನ್ನ ಪ್ರೇಯಸಿ ಇನ್ನೊಬ್ಬನೊಡನೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಮೇಲೆ ಹುಡುಗಿಯ ಖಾಸಗಿ ಭಾಗಕ್ಕೆ ಖಾರದ ಪುಡಿ ಹಚ್ಚಿ, ತಲೆ ಮೇಲೆ ಕಲ್ಲು ಹಾಕಿ ಸಾಯಿಸಿರುವ ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  (Love Sex Deceit): ಪ್ರೀತಿ, ಪ್ರೇಮ, ವಂಚನೆ ಎಂಬುದು ಅದೆಷ್ಟೋ ಕೊಲೆ ಪ್ರಕರಣಗಳಿಗೆ ಕಾರಣವಾಗಿರುತ್ತವೆ. ಪ್ರೀತಿಸಿದ ಹುಡುಗಿ ಅಥವಾ ಹುಡುಗ ಇನ್ನೊಬ್ಬರನ್ನು ಪ್ರೀತಿಸುವುದು ಅಥವಾ ಲೈಂಗಿಕ ಸಂಬಂಧ ಹೊಂದುವುದರ ಬಗ್ಗೆ ತಿಳಿದು ಅದೆಷ್ಟೋ ಕೊಲೆಗಳು ನಡೆದುಹೋಗಿವೆ. ಇದೇ ರೀತಿಯ ಮತ್ತೊಂದು ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. ಬೇಡ ಬೇಡ ಎಂದರೂ ತಾನು ಮನೆಯಲ್ಲಿ ಇರದಾಗ ಪರ ಪುರುಷನ ಜತೆ ಸಂಪರ್ಕ ಹೊಂದಿದ್ದಳು (Love Sex Dhoka) ಎಂಬ ಅನುಮಾನದ ಮೇಲೆ ಪ್ರೇಯಸಿಯನ್ನು ಹಿಂಸಿಸಿ, ತಲೆಯ ಮೇಲೆ ಕಲ್ಲುಹಾಕಿ ಸಾಯಿಸಿದ ನಂತರ ಖಾಸಗಿ ಭಾಗಕ್ಕೆ ಖಾರದ ಪುಡಿ ಹಚ್ಚಿ ಹೋದ ವಿಕೃತ ಘಟನೆ ಮಧ್ಯಪ್ರದೇಶದ ಜಬಲ್​ಪುರ್​ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಪಪ್ಪು ಗಧೆವಾಲ್​ ಎಂದು ಗುರುತಿಸಲಾಗಿದ್ದು, ಘಟನೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದ, ಆದರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಜಬಲ್​ಪುರ್​ನ ಹೆಚ್ಚುವರಿ ಎಸ್​ಪಿ ಗೋಪಾಲ್​ ಖಂಡೇಲ್​ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಗ್ವಾರಿಘಾಟ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಸಂತ್ರಸ್ತೆಯನ್ನು ಶಾಲಿನಿ ಎಂದು ಗುರುತಿಸಲಾಗಿದ್ದು, ಮೃತಳ ಶರೀರ ಆರೋಪಿ ಗೋಪಾಲ್​ನ ಮನೆಯೊಳಗೆ ಪತ್ತೆಯಾಗಿದೆ.

  ದಪ್ಪ ಕಲ್ಲೊಂದು ಯುವತಿಯ ಶವದ ಪಕ್ಕದಲ್ಲಿ ಬಿದ್ದಿದ್ದು, ರಕ್ತದ ಕುರುಹಗಳು ಕಲ್ಲಿನ ಮೇಲಿದೆ. ಯುವತಿಯ ತಲೆಯನ್ನು ಕಲ್ಲಿನಿಂದ ಜೋರಾಗಿ ಜಜ್ಜಲಾಗಿದೆ. ಜತೆಗೆ ಪಕ್ಕದಲ್ಲಿ ಪತ್ರವೊಂದನ್ನು ಬರೆದಿಡಲಾಗಿದ್ದು, ಅದರಲ್ಲಿ ಪ್ರೀತಿಯಲ್ಲಿ ಮೋಸ ಮಾಡಿದರೆ ಹೀಗೇ ಆಗುತ್ತದೆ ಎಂದು ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಇದನ್ನೂ ಓದಿ: Crime News: ಅಂಗಡಿ ಮಾಲೀಕನ ಹೆಂಡತಿ ಜೊತೆ ಮಲಗಲು 10 ಸಾವಿರ ಆಫರ್​ ಕೊಟ್ಟ 80 ವರ್ಷದ ಮುದುಕ: ಆಮೇಲೇನಾಯ್ತು?

  ಇಬ್ಬರೂ ಲಿವಿಂಗ್​ ರಿಲೇಷನ್​ಶಿಪ್​ನಲ್ಲಿದ್ದರು (Living Relationship):

  ವಿಚಾರಣೆ ವೇಳೆ ಸ್ಥಳೀಯರು ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ ಶಾಲಿನಿ ಮತ್ತು ಪಪ್ಪು ಗಧೆವಾಲ್​ ಇಬ್ಬರೂ ಲಿವಿಂಗ್​ ರಿಲೇಷನ್​ಶಿಪ್​ನಲ್ಲಿ ಇದ್ದರು. ಆದರೆ ಇತ್ತೀಚೆಗೆ ಗಧೆವಾಲ್​ ಮನೆಯಲ್ಲಿ ಇಲ್ಲದ ವೇಳೆ ವೀರ್​ ಎಂಬ ಇನ್ನೊಬ್ಬ ಹುಡುಗನ ಜೊತೆ ಶಾಲಿನಿ ಸಂಪರ್ಕ (Extramarital Affair) ಮಾಡುತ್ತಿದ್ದಳು. ಇದರ ಬಗ್ಗೆ ತಿಳಿದ ನಂತರ ಪಪ್ಪು ಸಿಟ್ಟಿಗೆದ್ದಿದ್ದಾನೆ. ಯುವತಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದಂದುಕೊಂಡು ಆಕೆಯನ್ನು ಕೊಲೆ ಮಾಡಿ, ತನ್ನ ಸಿಟ್ಟನ್ನು ಯುವತಿಯ ಖಾಸಗಿ ಭಾಗದ ಮೇಲೆ ಖಾರದ ಪುಡಿ ಲೇಪಿಸುವ ಮೂಲಕ ತೋರಿಸಿದ್ದಾನೆ. ಜತೆಗೆ ಹೆಣದ ಜೊತೆ ಇದ್ದ ಪತ್ರದಲ್ಲೂ ಪ್ರೀತಿಯಲ್ಲಿ ಮೋಸ ಸಹಿಸುವುದಿಲ್ಲ ಎಂದು ಬರೆದಿರುವುದು, ಈ ಅನುಮಾನಕ್ಕೆ ಪುಷ್ಠಿ ನೀಡಿದೆ. ಇದೀಗ ಪಪ್ಪುವನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಘಟನೆಯಾದ ಕೆಲವು ಗಂಟೆಗಳ ಅಂತರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

  ಲವ್​ - ಸೆಕ್ಸ್​ - ದೋಖಾ (Love Sex Deceit):

  ವಿಚಾರಣೆ ವೇಳೆ ಮಾಡಿದ ಕೊಲೆಯನ್ನು ಒಪ್ಪಿಕೊಂಡಿರುವ ಪಪ್ಪು, ಹಲವು ಬಾರಿ ಪರಪುರುಷರೊಂದಿಗೆ ಮಾತನಾಡಬೇಡ ಎಂದರೂ ಆಕೆ ಕೇಳಲಿಲ್ಲ. ಆಕೆ ಆಗಾಗ ಬೇರೆಯವರ ಮನೆಗೂ ಹೋಗುತ್ತಿದ್ದ ಬಗ್ಗೆ ನನಗೆ ತಿಳಿಯಿತು, ಅದಕ್ಕಾಗಿ ನನ್ನ ದಾರಿಯಿಂದ ಆಕೆಯನ್ನು ದೂರ ಮಾಡಲು ಸಾಯಿಸಿದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  ಇದನ್ನೂ ಓದಿ: ಗಂಡ - ಹೆಂಡತಿ ಸೇರಿ ಮಾಡಿದರು ಮಹಿಳೆಯ ಅತ್ಯಾಚಾರ: ನಂತರ ಕೊಲೆಮಾಡಿ ಕಳ್ಳತನ

  ಕೊಲೆ ನಡೆದ ರಾತ್ರಿ, ಶಾಲಿನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿ, ಖಾರದ ಪುಡಿ ಹಚ್ಚಿ ಅಲ್ಲೇ ಮಲಗಿದ್ದ. ಮರುದಿನ ಬೆಳಗ್ಗೆ ಏನೂ ನಡೆದಿಲ್ಲ ಎಂಬಂತೆ ಮನೆಯಿಂದ ಕೆಲಸಕ್ಕೆ ಹೋಗಿದ್ದ. ಅಕ್ಕಪಕ್ಕದ ಮನೆಯವರು ಆಕೆ ಆಚೆ ಬರದನ್ನು ಗಮನಿಸಿ ನೋಡಿದಾಗ, ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು. ಇದರ ಜತೆಗೆ ವಿಚಾರಣೆ ವೇಳೆ ತಿಳಿದ ಮಾಹಿತಿಯ ಪ್ರಕಾರ ಶಾಲಿನಿಗೆ ಈಗಾಗಲೇ ಮದುವೆಯಾಗಿತ್ತು ಆದರೆ ಗಂಡನನ್ನು ತೊರೆದು ಪಪ್ಪು ಜೊತೆ ವಾಸವಿದ್ದಳು ಎನ್ನಲಾಗಿದೆ.
  Published by:Sharath Sharma Kalagaru
  First published: