Pakistan Honeytrap: ಭಾರತೀಯ ಯೋಧರಿಗೆ ಹನಿಟ್ರ್ಯಾಪ್ ಬಲೆ ಬೀಸ್ತಿದೆ ಪಾಕ್​ನ ISI, ಬಯಲಾಯ್ತು ಮೋಸದಾಟ!

ಮಿಲಿಟರಿ ಅಧಿಕಾರಿಗಳು ಮತ್ತು ಜವಾನರನ್ನು ಸಿಹಿ ಮಾತು ಮತ್ತು ವಿಡಿಯೋ ಕಾಲ್ ಮಾಡಿ ಬಲೆಗೆ ಬೀಳಿಸುವ ವಿಧಾನವೇ ಮಾಡ್ಸ್ ಆಪರೇಂಡಿ ವಿಧಾನ. ಇದೇ ಹನಿಟ್ರ್ಯಾಪ್ ನ ಸುಳಿಗೆ ಸಿಲುಕಿ ದೇಶದ ಗುಪ್ತಚರ ಮಾಹಿತಿಯನ್ನು ಶೇರ್ ಮಾಡಿ ಕಂಬಿ ಹಿಂದೆ ಬಿದ್ದಿರುವ ಯೋಧನ ಕಹಾನಿ. ಜೊತೆಗೆ ಪಾಕಿಸ್ತಾನ ಯಾವ ರೀತಿ ಹನಿಟ್ರ್ಯಾಪ್ ಮೂಲಕ ಭಾರತದ ಗುಪ್ತಚರ ಮಾಹಿತಿಯನ್ನ ಕಲೆ ಹಾಕುತ್ತಿದೆ ಎಂಬುದನ್ನು ಇಲ್ಲಿ ನೋಡೋಣ.

ಪಾಕಿಸ್ತಾನ ಐಎಸ್ ಐ ಗೂಢಚಾರಿಕೆ ಹನಿಟ್ರ್ಯಾಪ್

ಪಾಕಿಸ್ತಾನ ಐಎಸ್ ಐ ಗೂಢಚಾರಿಕೆ ಹನಿಟ್ರ್ಯಾಪ್

  • Share this:
    ಹನಿಟ್ರ್ಯಾಪ್ (Honeytrap) ಅಂದ ಕೂಡಲೇ ಎಲ್ಲರ ಕಣ್ಣರಳುತ್ತದೆ. ಎಂಥೆಂತವರು ಈ ಮೋಸದ ಜಾಲಕ್ಕೆ (Fraud Network) ಸಿಲುಕಿಲ್ಲ ಹೇಳಿ? ಈಗ ದೇಶದ್ರೋಹಿಗಳು, ಪಾಪಿಸ್ತಾನ (Pakistan) ಕೂಡ ಭಾರತವನ್ನು (India) ಮಣಿಸಲು ಹನಿಟ್ರ್ಯಾಪ್ ಎಂಬ ನೀಚ ಕೃತ್ಯಕ್ಕೆ ಕೈ ಹಾಕಿದೆ. ಆಶ್ಚರ್ಯ ಆಗ್ತಿದ್ಯಾ? ಆದ್ರೆ ಇದು ಕಠು ಸತ್ಯ. ಸುಂದರ ಹುಡುಗಿಯರನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್ ಬಲೆ ಹೆಣೆಯಲಾಗ್ತಿದೆ. ಅವರ ಗುರಿ ಭಾರತದ ಮಿಲಿಟರಿ ಅಧಿಕಾರಿಗಳು ಮತ್ತು ಜವಾನರು. ಈ ಹನಿಟ್ರ್ಯಾಪ್ ಆಟದ ವಿಧಾನವನ್ನ ಮಾಡ್ಸ್ ಆಪರೇಂಡಿ ವಿಧಾನ ಎಂದು ಕರೆಯಲಾಗ್ತಿದೆ. ಅಂದ್ರೆ ಮಿಲಿಟರಿ ಅಧಿಕಾರಿಗಳು ಮತ್ತು ಜವಾನರನ್ನು ಸಿಹಿ ಮಾತು ಮತ್ತು ವಿಡಿಯೋ ಕಾಲ್ ಮಾಡಿ ಬಲೆಗೆ ಬೀಳಿಸುವ ವಿಧಾನವಾಗಿದೆ.

    ಪಾಕಿಸ್ತಾನ ಐಎಸ್ ಐ ಹನಿಟ್ರ್ಯಾಪ್ ಬಲೆ

    ಇದೇ ಹನಿಟ್ರ್ಯಾಪ್ ನ ಸುಳಿಗೆ ಸಿಲುಕಿ, ದೇಶದ ಗುಪ್ತಚರ ಮಾಹಿತಿಯನ್ನು ಶೇರ್ ಮಾಡಿ, ಕಂಬಿ ಹಿಂದೆ ಬಿದ್ದಿರುವ ಯೋಧನ ಕಹಾನಿ ಜೊತೆಗೆ ಪಾಕಿಸ್ತಾನ ಯಾವ ರೀತಿ ಹನಿಟ್ರ್ಯಾಪ್ ಮೂಲಕ ಭಾರತದ ಗುಪ್ತಚರ ಮಾಹಿತಿಯನ್ನ ಕಲೆ ಹಾಕುತ್ತಿದೆ ಎಂಬುದನ್ನು ಇಲ್ಲಿ ನೋಡೋಣ.

    ಭಾರತೀಯ ಸೇನೆಯ ಸೈನಿಕರೊಬ್ಬರಿಗೆ ಒಬ್ಬ ಹುಡುಗಿ ಕರೆ ಮಾಡ್ತಾಳೆ. ಕರೆ ಮಾಡಿದಾಕೆ ಬೇರೆ ಯಾರಿಗೋ ಕಾಲ್ ಮಾಡೋಕೆ ಹೋಗಿ ನಿಮಗೆ ಬಂತು ಎಂದು ರಾಂಗ್ ನಂಬರ್ ನಾಟಕವಾಡ್ತಾಳೆ. ಅಲ್ಲಿಂದ ಶುರುವಾಯ್ತು ಹನಿಟ್ರ್ಯಾಪ್ ಕಥೆ.

    ಪಾಕಿಸ್ತಾನ ಐಎಸ್ ಐ ಹನಿಟ್ರ್ಯಾಪ್ ಬಲೆಗೆ ಬಿದ್ದ ಯೋಧ

    ಹೀಗೆ ಪಾಕಿಸ್ತಾನ ಹನಿಟ್ರ್ಯಾಪ್ ಗಾಗಿ ನೇಮಕ ಮಾಡಿದ್ದ ಹುಡುಗಿ ರಾಂಗ್ ನಂಬರ್ ಎಂದು ಭಾರತೀಯ ಯೋಧನಿಗೆ ಕರೆ ಮಾಡಿ, ಅಲ್ಲಿಂದ ಮಾತುಕತೆ ಮುಂದುವರೆಸ್ತಾಳೆ. ತುಂಬಾ ಪರಿಚಯದವಳೇನೋ ಎಂಬಂತೆ ಸಿಹಿಯಾಗಿ ಮಾತನಾಡಿ, ಯೋಧನ ಮನಸ್ಸು ಗೆಲ್ತಾಳೆ.

    ಭಾರತೀಯ ಸೇನೆಯ ಘಟಕಕ್ಕೆ ಪೋಸ್ಟಿಂಗ್ ಆದ ನಂತರ 24 ವರ್ಷದ ಜವಾನ ಪ್ರದೀಪ್ ಎಂಬುವವರ ಮೊಬೈಲ್ ಫೋನ್‌ಗೆ ಒಂದು ದಿನ ಹುಡುಗಿಯೊಬ್ಬಳು ಕರೆ ಮಾಡ್ತಾಳೆ.

    ಹುಡುಗಿ: ನೀವು ಸಂದೀಪ್ ಅಲ್ವಾ ಮಾತನಾಡ್ತಿರೋದು?

    ಪ್ರದೀಪ್: ನಾನು ಸಂದೀಪ್ ಅಲ್ಲ.. ನೀವು ಯಾರು?

    ಹುಡುಗಿ: ಯಾಕೆ ತಮಾಷೆ ಮಾಡ್ತಿ. ನೀನು ಸಂದೀಪನೆ, ನಂಗೊತ್ತು.

    ಪ್ರದೀಪ್: ನಿಜವಾಗಿಯೂ ನಾನು ಸಂದೀಪ್ ಅಲ್ಲ. ನೀವ್ಯಾರು?

    ಹುಡುಗಿ: ನಾನು ಸಂದೀಪ್ ನ ಗೆಳತಿ ಮಾತನಾಡ್ತಿರೋದು. ನೀವು ಸಂದೀಪ್ ಅಲ್ಲ ಅಂದ್ರೆ ನಿಮ್ಮ ವಾಟ್ಸಾಪ್ ನಂಬರ್ ಹೇಳಿ. ನಾನು ಈಗ್ಲೇ ವೀಡಿಯೊ ಕಾಲ್ ಮಾಡ್ತೀನಿ.

    ಹೀಗೆ ಶುರುವಾದ ಒಂದು ಚಿಕ್ಕ ಸಂಭಾಷಣೆಯ ನಂತರ ಯೋಧ ಪ್ರದೀಪ್ ಏನಾಗ್ತಿದೆ ಎಂದು ಸಾಕಷ್ಟು ಗೊಂದಲದಲ್ಲಿ ಮುಳುಗಿದ್ದ. ನಂತರ ಅವರ ವಾಟ್ಸ್ಯಾಪ್ ಗೆ ಹುಡುಗಿ ವಿಡಿಯೋ ಕಾಲ್ ಮಾಡ್ತಾಳೆ.

    ಹುಡುಗಿ: ಕ್ಷಮಿಸಿ ನೀವು ನನ್ನ ಗೆಳೆಯ ಅಲ್ಲ. ನಿಮಗೆ ಸುಮ್ಮನೇ ತೊಂದರೆ ಕೊಟ್ಟೆ. ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ಭಾವಿಸಿದ್ದೆ. ಅದಕ್ಕೇ ನಿಮಗೆ ಫೋನ್ ಮಾಡಿದೆ.

    ಇದನ್ನೂ ಓದಿ: ಹಿಜಾಬ್ ವಿವಾದ; ಸುಪ್ರೀಂಕೋರ್ಟ್​ ಕೇಳಿದ ಮಹತ್ವದ ಪ್ರಶ್ನೆಗಳಿವು

    ಪ್ರದೀಪ್: ಸರಿ. ನಾನು ಸಂದೀಪ್ ಅಲ್ಲ ಅಂತಾ ನಿಮಗ್ಎ ಗೊತ್ತಾಯ್ತಲ್ಲಾ? ನಿಮಗೆ ನನ್ನ ನಂಬರ್ ಹೇಗೆ ಸಿಕ್ಕಿತು?

    AMC ಮುಂಬೈ ವಿಭಾಗದಲ್ಲಿ ಲೆಫ್ಟಿನೆಂಟ್ ಹುದ್ದೆಯಲ್ಲಿದ್ದೇನೆಂದು ನಂಬಿಸಿದ್ದ ಹುಡುಗಿ

    ಹುಡುಗಿ: ನಾನು ಭಾರತೀಯ ಸೇನೆಯ ಮೆಡಿಕಲ್ ಕಾರ್ಪ್ಸ್‌ನಲ್ಲಿದ್ದೇನೆ ಅಂದರೆ AMC ಮುಂಬೈ ವಿಭಾಗದಲ್ಲಿ ಲೆಫ್ಟಿನೆಂಟ್ ಹುದ್ದೆಯಲ್ಲಿದ್ದೇನೆ. ನಾನು ಮುಂಬೈನಲ್ಲಿ ತರಬೇತಿ ಪಡೆಯುತ್ತಿದ್ದಾಗ  ನನ್ನ ಸ್ನೇಹಿತರೊಬ್ಬರು ಈ ನಂಬರ್ ಕೊಟ್ಟಿದ್ರು. ಮುಂಬೈನಲ್ಲಿ ನಾನು AMC ತರಬೇತಿ ಪಡೆಯುತ್ತಿದ್ದಾಗ ಮುಂದೆ ಕೆಲಸಕ್ಕೆ ಸಹಾಯ ಬೇಕಾಗುತ್ತದೆ ಎಂದಿದ್ದೆ. ಅವರು ನಿಮ್ಮ ನಂಬರ್ ಕೊಟ್ಟಿದ್ದರು.

    ಪ್ರದೀಪ್: ಅಲ್ಲಿ ನನ್ನ ನಂಬರ್ ಹೇಗೆ ಶೇರ್ ಆಯಿತು? ನಾನು ಯಾವತ್ತೂ ಅಲ್ಲಿಗೆ ಹೋಗಿಲ್ಲ.

    ಹುಡುಗಿ: ಭಾವನಾತ್ಮಕವಾಗಿ ಮಾತನಾಡುತ್ತಾ.. ನೋಡಿ ನಾನು ಕೆಲಸ ಪಡೆಯೋಕೆ ತುಂಬಾ ಕಷ್ಟ ಪಟ್ಟಿದ್ದೇನೆ. ನನಗೆ ತಂದೆ ಮತ್ತು ಸಹೋದರರಿಲ್ಲ. ತಾಯಿ ಮತ್ತು ನಾನು ಇಬ್ಬರೇ ಇರೋದು. ಎಷ್ಟು ಕಷ್ಟ ಪಟ್ಟು ಈ ಕೆಲಸ ಪಡೆದಿದ್ದೇನೆ. ನೀವ್ ನಂಗೆ ತುಂಬಾ ಪ್ರಶ್ನೆ ಕೇಳುತ್ತಿದ್ದೀರಿ.

    ಮೋಹದ ಬಲೆ ಬೀಸಿದ್ದ ಹುಡುಗಿ

    ಹೀಗೆ ನಯವಾಗಿ, ನಾಜೂಕಾಗಿ ಮಾತನಾಡಿದ ಅನಾಮಧೇಯ ಹುಡುಗಿ, ಯೋಧನ ಜೊತೆ ಮಾತು ಮುಂದುವರೆಸಿದಳು. ತನ್ನ ಜಾಲದಲ್ಲಿ ಆತನನ್ನು ಬೀಳಿಸಿಕೊಂಡು ಅನೇಕ ರಹಸ್ಯ ಮಾಹಿತಿ ಸಂಗ್ರಹಿಸತೊಡಗಿದಳು. ಆಕೆಯ ಮೋಹದ ಜಾಲಕ್ಕೆ ಸಿಲುಕಿದ್ದ ಯೋಧ ಸೇನಾ ಘಟಕಕ್ಕೆ ಸಂಬಂಧಿಸಿದ ಅನೇಕ ಗುಪ್ತಚರ ಮತ್ತು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದ.

    ಪಾಕಿಸ್ತಾನ ಹನಿಟ್ರ್ಯಾಪ್ ಹುಡುಗಿ ಮೊದಲೇ ಯೋಧನಿಗೆ ತಾನು AMC ತರಬೇತುದಾರಳು ಎಂದು ಹೇಳಿಕೊಂಡಿದ್ದು, ಭಾರತೀಯ ಸೇನೆಯ AMC ಘಟಕದ ಜೊತೆ ತಾನೂ ಸಂಬಂಧ ಹೊಂದಿದ್ದಾಗಿ ನಂಬಿಸಿದ್ದಳು. ಪ್ರಸ್ತುತ ಬೆಂಗಳೂರಿನ ಏರ್ ಫೋರ್ಸ್ ಘಟಕದಲ್ಲಿ ಎಎಂಸಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದು, ಕೆಲಸ ಕಲಿಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು.

    ಪಾಕಿಸ್ತಾನಿ ಸೇನೆಯ ಗೂಢಚಾರಿಕೆಗೆ ನೇಮಕವಾಗಿದ್ದ ಹುಡುಗಿ ರಿಯಾ

    ಆದರೆ ಆ ಹುಡುಗಿ ಪಾಕಿಸ್ತಾನಿ ಸೇನೆಯ ಗೂಢಚಾರಿಕೆಗೆಂದು ನೇಮಕ ಆಗಿದ್ದಳು. ಪಾಕಿಸ್ತಾನ ಗುಪ್ತಚರ ಸಂಸ್ಥೆ ಮತ್ತು ಅಲ್ಲಿನ ಸೇನೆ ಹನಿಟ್ರ್ಯಾಪ್ ಗೆ ಈ ಹುಡುಗಿಯನ್ನು ನೇಮಕ ಮಾಡಿತ್ತು. ಅವರ ಮುಖ್ಯ ಕೆಲಸವೆಂದರೆ ಭಾರತೀಯ ಸೇನೆಯ ಸೈನಿಕರನ್ನು ಬಲೆಗೆ ಬೀಳಿಸಿ, ಅವರಿಂದ ಗುಪ್ತಚರ ಮತ್ತು ಸೂಕ್ಷ್ಮ ಮಾಹಿತಿ ಸಂಗ್ರಹಿಸುವುದು ಆಗಿದೆ.

    ಹುಡುಗಿ ತನ್ನ ಹೆಸರು ರಿಯಾ ಎಂದು ಹೇಳಿಕೊಂಡಿದ್ದಳು. ಯೋಧ ಪ್ರದೀಪ್ ಜೊತೆ ಸ್ನೇಹ ಸಂಪಾದಿಸಿದ್ದ ಆಕೆ ದಿನವೂ ವಿಡಿಯೋ ಕಾಲ್ ಮಾಡಿ ಮಾತನಾಡ್ತಿದ್ದಳು. ರಿಯಾ ಆಗಾಗ್ಗೆ ಸೇನಾ ಸಮವಸ್ತ್ರದಲ್ಲಿ ಕಚೇರಿಯಲ್ಲಿ ಕುಳಿತು ಯೋಧ ಪ್ರದೀಪ್ ಜೊತೆ ಗಂಟೆಗಟ್ಟಲೆ ಮಾತನಾಡಿ, ನಂಬಿಸಿದ್ದಳು. ಹೀಗೆ ನಯವಾಗಿ ಕತ್ತಿ ಮಸೆದಿದ್ದ ಆಕೆ ಯೋಧನ ಜೊತೆ ಪ್ರೀತಿಯ ನಾಟಕ ಶುರು ಮಾಡಿದ್ದಳು. ವಿಡಿಯೋ ಕಾಲ್ ಮಾಡಿ ಬಟ್ಟೆ ಕಳಚಿ ಪ್ರದೀಪ್ ನನ್ನು ಮೋಹಿಸುವುದು, ಓಲೈಸುತ್ತಿದ್ದಳು. ಆಕೆಯ ಸೌಂದರ್ಯ ಮತ್ತು ಶೈಲಿಯ ಷಡ್ಯಂತ್ರದಲ್ಲಿ ಯೋಧ ಸಿಲುಕಿದ್ದ.

    ಯೋಧ ಪ್ರದೀಪ್, ಜನವರಿ 14 ಮತ್ತು 15 ರಂದು ವಾರ್ಷಿಕ ವ್ಯಾಯಾಮಕ್ಕಾಗಿ ಜೈಸಲ್ಮೇರ್‌ನ ಲಾಠಿ ಗ್ರಾಮಕ್ಕೆ ಹೋಗಿದ್ದರು. ಒಂದು ವಾರದ ನಂತರ ಅಲ್ಲಿಂದ ಮರಳಿದ್ದರು. ಅಲ್ಲಿಯೂ ಅವರು ಪ್ರತಿದಿನ ಸಂಜೆ ರಿಯಾ ಜೊತೆ ಮಾತನಾಡ್ತಿದ್ರು. ತಮ್ಮ ಘಟಕದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ವಿಷಯವನ್ನು ಆಕೆಗೆ ಹೇಳುತ್ತಿದ್ದ.

    ಘಟಕಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಚಿತ್ರ ಪಡೆದಿದ್ದ ಹುಡುಗಿ

    ಕ್ರಮೇಣ ರಿಯಾ ಯೋಧ ಪ್ರದೀಪ್ ನಿಂದ ಅನೇಕ ಮಾಹಿತಿ ಮತ್ತು ಫೋಟೋ ಶೇರ್ ಮಾಡುವಂತೆ ಹೇಳಿದ್ದಳು. ತನ್ನ ಘಟಕದಲ್ಲಿ ಕೆಲಸ ಮಾಡುವ ಹುಡುಗಿಯೊಬ್ಬಳು ಜಗಳವಾಡಿಕೊಂಡಿದ್ದಾಳೆ. ಹಾಗಾಗಿ ಆಕೆಗೆ ಶಿಕ್ಷೆಯಾಗಿ ಕ್ಲರ್ಕ್ ಕೆಲಸ ನೀಡಲಾಗಿದೆ. ಅವಳಿಗೆ ಸಹಾಯಕ್ಕಾಗಿ ಯೋಧ ಪ್ರದೀಪ್ ಅವರ ಘಟಕಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಚಿತ್ರ ಕಳುಹಿಸುವಂತೆ ರಿಯಾ ಕೇಳಿದ್ದಳು. ಆಕೆಯ ಮಾತು ನಂಬಿದ್ದ ಯೋಧ ಪ್ರದೀಪ್ ತಾವು ಎಲ್ಲೆಲ್ಲಿ ಪೋಸ್ಟಿಂಗ್ ಆಗುತ್ತೋ ಅಲ್ಲಿಯ ಪ್ರತಿ ಮಾಹಿತಿಯನ್ನು ಹಂಚಿಕೊಂಡಿದ್ದರು.

    ದಾಖಲೆಗಳ ಚಿತ್ರಗಳನ್ನು ಪಡೆದಿದ್ದಳು

    ಪ್ರದೀಪ್ ಜೋಧ್‌ಪುರಕ್ಕೆ ಹಿಂತಿರುಗಿದ್ದರು. ಆದರೆ ಪಾಕಿಸ್ತಾನ ಐಎಸ್‌ಐ ಪತ್ತೇದಾರಿ ರಿಯಾ, ತನ್ನ ಘಟಕದಲ್ಲಿರುವ ಗುಮಾಸ್ತನ ಕೆಲಸಕ್ಕೆ ಕೆಲವು ದಾಖಲೆಗಳ ಛಾಯಾಚಿತ್ರಗಳು ಬೇಕೆಂದು ಹೇಳಿ ಶೇರ್ ಮಾಡುವಂತೆ ಮಾಡಿದ್ದಳು. ಪ್ರದೀಪ್, ಅವಳಿಗೆ ರಹಸ್ಯವಾಗಿ ಎರಡು ಭಾಗಗಳಲ್ಲಿ ಹಲವಾರು ಪುಟಗಳ ಚಿತ್ರಗಳನ್ನು ಕಳುಹಿಸಿದ್ದರು.

    ಅಲ್ಲಿನ ಕ್ಷಿಪಣಿ ಘಟಕದ ಬ್ಯಾಟರಿ ಕೊಠಡಿಯಲ್ಲಿಟ್ಟಿದ್ದ ದಾಖಲೆಗಳ ಚಿತ್ರಗಳನ್ನು ತೆಗೆದು ರಿಯಾಗೆ ಕಳುಹಿಸಿದ್ದಾರೆ. ಅಲ್ಲಿದ್ದ ಕಂಪ್ಯೂಟರ್ ನ ಹಲವು ಸ್ಕ್ರೀನ್ ಶಾಟ್ ಗಳನ್ನೂ ಕಳುಹಿಸಿದ್ದರು. ಸಾಮರ್ಥ್ಯ, ಸ್ಥಳ ಸೇರಿದಂತೆ ಹಲವು ಗುಪ್ತಚರ ಮತ್ತು ಸೂಕ್ಷ್ಮ ಮಾಹಿತಿ ಇತ್ತು.

    ಮೇ 21 ರಂದು ಯೋಧ ಪ್ರದೀಪ್‌ ಬಂಧನ

    ಪ್ರದೀಪ್‌ ನ ವಾಟ್ಸಾಪ್ ಒಟಿಪಿ ಪಡೆದುಕೊಂಡ ಪಾಕಿಸ್ತಾನ ಐಎಸ್‌ಐ ಪತ್ತೇದಾರಿ ರಿಯಾ, ಪ್ರೀತಿಯ ಕಥೆ ಕಟ್ಟಿ ಅನೇಕ ಮಾಹಿತಿ ಪಡೆದಿದ್ದಳು. ಇತ್ತ ಮೇ 21 ರಂದು ಪ್ರದೀಪ್‌ನನ್ನು ಬಂಧಿಸಲಾಯಿತು. ಒಂದು ದಿನ ದೆಹಲಿಗೆ ಭೇಟಿಯಾಗಲು ರಿಯಾಗೆ ಪ್ರದೀಪ್ ಕರೆ ಮಾಡಿದ್ದರು. ಆದರೆ ರಿಯಾ ಆ ಜಾಗಕ್ಕೆ ಬರಲಿಲ್ಲ. ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.

    ಮಾರ್ಚ್ ತಿಂಗಳಿನಿಂದ ರಾಜಸ್ಥಾನ ಪೊಲೀಸ್‌ನ ಭದ್ರತಾ ವಿಭಾಗದ ರಾಡಾರ್‌ನಲ್ಲಿದ್ದಿದ್ದ ಪ್ರದೀಪ್ ಫೋನ್ ಮೇಲೆ ಪೊಲೀಸರು ಕಣ್ಗಾವಲಿನಲ್ಲಿಟ್ಟಿದ್ದರು. ಮೇ 21 ರಂದು ಜೈಪುರದಲ್ಲಿ ವಿಚಾರಣೆಗೆ ಕರೆಸಿ ನಂತರ ಬಂಧಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ ಪ್ರದೀಪ್ ಗೊತ್ತಿದ್ದೋ, ಗೊತ್ತಿಲ್ಲದೆಯೋ ಭಾರತೀಯ ಸೇನೆಯ ಕೆಲ ಮಾಹಿತಿ ನೀಡಿದ್ದ.

    ಸೇನೆಯ ಅಧಿಕೃತ ಸ್ವರೂಪ, ಅದಕ್ಕೆ ಸಂಬಂಧಿಸಿದ ಚಿಹ್ನೆಗಳು, ಕ್ಷಿಪಣಿ ಘಟಕದ ರಹಸ್ಯ ಮಾಹಿತಿ ಸೇರಿದಂತೆ ಎಲ್ಲ ವಿಷಯಗಳನ್ನು ಪಾಕಿಸ್ತಾನಿ ಗೂಢಚಾರರಿಗೆ ನೀಡಿದ್ದ. ISI ಮತ್ತು ಪಾಕ್ ಸೇನೆಯ ಹನಿಟ್ರ್ಯಾಪ್ ಆಟದ ಜಾಲ ಪತ್ತೆಯಾಯಿತು.

    ISI ಮತ್ತು ಪಾಕ್ ಸೇನೆಯ ಹನಿಟ್ರ್ಯಾಪ್ ಆಟದ ಜಾಲ

    ಪಾಕಿಸ್ತಾನ ಗುಪ್ತಚರ ಸಂಸ್ಥೆ ISI ಮತ್ತು ಪಾಕಿಸ್ತಾನದ ಮಿಲಿಟರಿ ಗುಪ್ತಚರ ಇಲಾಖೆ, ಸುಂದರ ಹುಡುಗಿಯರನ್ನು ಗೂಢಚಾರರಾಗಿ ನೇಮಿಸಿ, ಭಾರತೀಯ ಸೈನಿಕರು ಮತ್ತು ಅಧಿಕಾರಿಗಳನ್ನು ಬಲೆಗೆ ಬೀಳಿಸುತ್ತಾರೆ. ನಂತರ ಅವರಿಂದ ಮಾಹಿತಿ ಕಲೆ ಹಾಕುವ ಬಗ್ಗೆ ಸರಿಯಾದ ತರಬೇತಿ ನೀಡಲಾಗುತ್ತದೆ.

    ಪಾಕಿಸ್ತಾನದ ಹನಿಟ್ರ್ಯಾಪ್ ರಾಕೆಟ್‌ನ ಏಳು ಮಾಡ್ಯೂಲ್‌ಗಳು

    ಹನಿಟ್ರ್ಯಾಪ್ ರಾಕೆಟ್‌ನ ಏಳು ಮಾಡ್ಯೂಲ್‌ಗಳು ಪಾಕಿಸ್ತಾನಕ್ಕೆ ಸಂಬಂಧಿಸಿವೆ. ಇದು ಭಾರತೀಯ ಏಜೆನ್ಸಿಗಳ ತನಿಖೆಯಲ್ಲಿ ಹೊರಬಿದ್ದಿರುವ ಅಂಶ. ಗುಪ್ತಚರ ಮೂಲಗಳ ಪ್ರಕಾರ, ಪಾಕಿಸ್ತಾನವು ಈ ಕಾರ್ಯಕ್ಕಾಗಿ ಏಳು ಮಾಡ್ಯೂಲ್‌ಗಳನ್ನು ಸಿದ್ಧಪಡಿಸಿದೆ. ಇದರಲ್ಲಿ 25 ಕ್ಕೂ ಹೆಚ್ಚು ಹುಡುಗಿಯರು ವಿವಿಧ ಸಮಯಗಳಲ್ಲಿ, ವಿವಿಧ ಪಾತ್ರಗಳಲ್ಲಿ ಭಾರತೀಯ ಸೈನಿಕರು ಮತ್ತು ಅಧಿಕಾರಿಗಳನ್ನು ಗುರಿಯಾಗಿಸಿದ್ದಾರೆ.

    ಹನಿಟ್ರ್ಯಾಪ್ ಗೆ ಸುಂದರ ಹುಡುಗಿಯರ ನೇಮಕ

    ಸುಂದರ ಹುಡುಗಿಯರು ಮತ್ತು ಲೈಂಗಿಕ ಕಾರ್ಯಕರ್ತೆಯರನ್ನು ಗೂಢಚಾರಿಕೆಗೆ ಪಾಕಿಸ್ತಾನ ನೇಮಿಸುತ್ತಿದೆ. ಪಾಕಿಸ್ತಾನ ISI ಮತ್ತು ಪಾಕಿಸ್ತಾನದ ಮಿಲಿಟರಿ ಗುಪ್ತಚರ ಕರಾಚಿ, ಲಾಹೋರ್ ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿ ಈ ಕೆಲಸಕ್ಕೆ ಸುಂದರ ಹುಡುಗಿಯರು ಮತ್ತು ಲೈಂಗಿಕ ಕಾರ್ಯಕರ್ತರನ್ನು ಸಿದ್ಧಪಡಿಸುತ್ತದೆ. ಈ ಹುಡುಗಿಯರ ಆಯ್ಕೆ ಮಾಡುವ ಮೊದಲ ಅಳತೆ ಅವರ ಸೌಂದರ್ಯ.

    ಕಣ್ಗಾವಲು ತರಬೇತಿ ಸಮಯದಲ್ಲಿ, ಮಿಲಿಟರಿ ಗುಪ್ತಚರ ಅಧಿಕಾರಿಗಳಿಗೆ ಭಾರತೀಯ ಪಡೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಧಿಕಾರಿಗಳ ಶ್ರೇಣಿ, ಘಟಕದ ಬಗ್ಗೆ ಮಾಹಿತಿ ಮತ್ತು ಅವರ ಸ್ಥಳವನ್ನು ಹೇಳಲಾಗುತ್ತದೆ.

    ಹನಿಟ್ರ್ಯಾಪ್ ಹುಡುಗಿಯರಿಗೆ ವಿಶೇಷ ತರಬೇತಿ ನೀಡುತ್ತಿದೆ ಪಾಕಿಸ್ತಾನ

    ಹನಿಟ್ರ್ಯಾಪ್ ಹುಡುಗಿಯರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಪಾಕಿಸ್ತಾನಿ ಹನಿಟ್ರ್ಯಾಪ್‌ ಪಿತೂರಿಯಲ್ಲಿ ಭಾರತೀಯ ಸೇನೆ, ಜವಾನರು ಮತ್ತು ವಾಯುಪಡೆ, ನೌಕಾಪಡೆ, ಡಿಆರ್‌ಡಿಒ, ರೈಲ್ವೆ ಮತ್ತು ಬಿಎಸ್‌ಎಫ್‌ಗೆ ಸೇರಿದ ಅಧಿಕಾರಿಗಳನ್ನು ಗುರಿಯಾಗಿಸಲಾಗಿದೆ. ಈ ಸಂಪೂರ್ಣ ಕಾರ್ಯಾಚರಣೆಯಲ್ಲಿ ಹನಿಟ್ರ್ಯಾಪ್ ಹುಡುಗಿಯರನ್ನು ಸಾಕಷ್ಟು ಟ್ರೇನ್ ಮಾಡಲಾಗುತ್ತಿದೆ. ತರಬೇತಿ ನಂತರ ಹುಡುಗಿಗೆ ಆರ್ಮಿ ಕ್ಯಾಂಟ್ ಅಥವಾ ಕಾಲೇಜಿನಲ್ಲಿ ಕೊಠಡಿ ನೀಡಲಾಗುತ್ತದೆ.

    ಹುಡುಗಿ ತಾನು ಹಿಂದೂ ಎಂಬಂತೆ ನಟಿಸುತ್ತಾಳೆ. ದೇವರ ಚಿತ್ರಗಳು ಗೋಡೆಯ ಮೇಲಿರುತ್ತವೆ. ಪೂಜಾ ಸಾಮಗ್ರಿಗಳನ್ನು ಇಡಲಾಗಿದೆ. ಭಾರತೀಯ ಉಡುಗೆಯನ್ನೇ ಹುಡುಗಿಯರು ಧರಿಸುತ್ತಾರೆ. ವೀಡಿಯೊ ಕರೆ ಮಾಡಿದಾಗ ತಾವು ಹಿಂದೂಗಳು ಎಂದು ಮನವರಿಕೆ ಮಾಡುತ್ತಾರೆ.

    ಭಾರತೀಯ ಯೋಧರು, ಅಧಿಕಾರಿಗಳೇ ಮೇನ್ ಟಾರ್ಗೆಟ್

    ಹನಿಟ್ರ್ಯಾಪ್ ನ ಈ ವಿಧಾನವನ್ನು ಮಾಡ್ಸ್ ಆಪರೇಂಡಿ ವಿಧಾನ ಅಂದರೆ ಅಧಿಕಾರಿಗಳು ಮತ್ತು ಜವಾನರನ್ನು ಬಲೆಗೆ ಬೀಳಿಸುವ ವಿಧಾನ ಎಂದು ಹೇಳಲಾಗಿದೆ. ರಾಂಗ್ ನಂಬರ್ ನಿಂದ ಆರಂಭವಾಗಿ, ಸ್ನೇಹ, ಪ್ರೀತಿ, ಕಟ್ಟು ಕಥೆಯ ಮೂಲಕ ಶುರುವಾಗುತ್ತದೆ. ಪಾಕಿಸ್ತಾನಿ ಹನಿಟ್ರ್ಯಾಪ್ ರಾಕೆಟ್‌ನಲ್ಲಿ ಭಾಗಿಯಾಗಿರುವ ಈ ಹುಡುಗಿಯರು ಮೊದಲು ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಐಡಿಗಳನ್ನು ಸೃಷ್ಟಿಸುತ್ತಾರೆ.

    ಅಲ್ಲಿ ಸೈನಿಕರು ಮತ್ತು ಅಧಿಕಾರಿಗಳನ್ನು ಹುಡುಕುತ್ತಾರೆ. ಮತ್ತು ನಂತರ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಯೋಜನೆಯ ಪ್ರಕಾರ, ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಆದ ಕೂಡಲೇ ಸಂಭಾಷಣೆ, ಸ್ನೇಹ, ಪ್ರೀತಿ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಮದುವೆಯ ಭರವಸೆ ನೀಡಲಾಗುತ್ತದೆ. ನಗ್ನ ಮಾತುಕತೆ ನಡೆಸ್ತಾರೆ. ನಂತರ ಅಧಿಕಾರಿಯಿಂದ ಗೌಪ್ಯ ಮಾಹಿತಿ ಸಂಗ್ರಹಿಸುತ್ತಾರೆ.

    ಮಾಹಿತಿ ಅಥವಾ ಫೋಟೋ ನೀಡಲು ನಿರಾಕರಿಸಿದರೆ, ಈ ಗೂಢಚಾರರು ಬ್ಲ್ಯಾಕ್‌ಮೇಲ್ ಮಾಡ್ತಾರೆ. ಇದಕ್ಕಾಗಿ, ಈ ಹುಡುಗಿಯರು ಮೊದಲು WhatsApp ನ OTP ಪಡೆದುಕೊಳ್ಳುತ್ತಾರೆ. ಮತ್ತು ನಂತರ ಅದೇ ಸಂಖ್ಯೆಯೊಂದಿಗೆ ಚಾಟ್ ಮಾಡುತ್ತಾರೆ. ಸಂಖ್ಯೆಯು ಭಾರತದ STD ಕೋಡ್ +91 ನೊಂದಿಗೆ ಪ್ರಾರಂಭವಾಗುತ್ತದೆ. ಚಾಟ್ ಮಾಡುವ ಹುಡುಗಿ ಕೂಡ ಭಾರತದವಳೇ ಎಂದು ತೋರುತ್ತದೆ. ಈ ಕೆಲಸಕ್ಕಾಗಿ ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಏಳು ಮಾಡ್ಯೂಲ್‌ಗಳಿವೆ.

    ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಏಳು ಮಾಡ್ಯೂಲ್ಸ್

    ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI

    ಸೇನಾ ಗುಪ್ತಚರ ಲಾಹೋರ್

    ಪಾಕಿಸ್ತಾನ ಮಿಲಿಟರಿ ಗುಪ್ತಚರ ಘಟಕ 412

    ISI ಕರಾಚಿ

    ಮಲಿರ್ ಕ್ಯಾಂಟ್ ಘಟಕ

    ಪಾಕಿಸ್ತಾನ್ ಏರ್‌ಫೋರ್ಸ್ 552 ಮಾಡ್ಯೂಲ್

    ಚಕ್ಲಾಲಾ ಕ್ಯಾಂಟ್ ರಾವಲ್ಪಿಂಡಿ

    ಇದನ್ನೂ ಓದಿ: ನಾನು ಪ್ರಧಾನಿ ಸ್ಥಾನದ ಆಕಾಂಕ್ಷಿಯಲ್ಲ ಅಂದ್ರು ನಿತೀಶ್ ಕುಮಾರ್! ಬಿಹಾರ ಸಿಎಂ ಮನದಲ್ಲಿ ಏನಿದೆ?

    ಒಳಗೊಂಡಿವೆ. ಪ್ರಸ್ತುತ, ಹನಿಟ್ರ್ಯಾಪ್‌ನ ಈ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ಈಗ ಭಾರತೀಯ ಸೇನೆ ಸೇರಿದಂತೆ ನಮ್ಮ ದೇಶದ ಎಲ್ಲಾ ಸೂಕ್ಷ್ಮ ಘಟಕಗಳು ಇದಕ್ಕಾಗಿ ಸೈನಿಕರು ಮತ್ತು ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಜಾಗೃತಿ ಮೂಡಿಸಲು ಪ್ರಾರಂಭಿಸಿವೆ. ಇದರಿಂದ ಅವರು ಗಡಿಯಾಚೆ ಕುಳಿತಿರುವ ಆ ಹುಡುಗಿಯರ ಜಾಲದಲ್ಲಿ ಸಿಲುಕಿಕೊಳ್ಳುವುದಿಲ್ಲ ಮತ್ತು ದೇಶದ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.

    ಕೃಪೆ: ಆಜ್ ತಕ್
    Published by:renukadariyannavar
    First published: