ಭಾರತದಲ್ಲಿ ಪ್ರೇಮ ವಿವಾಹದ (Love Marriage) ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕುವಂತಹ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ನೀಡಿದ್ದು, ಹೆಚ್ಚಿನ ವಿಚ್ಛೇದನಗಳು (Divorce) ಉದ್ಭವವಾಗುವುದೇ ಪ್ರೇಮ ವಿವಾಹಗಳಿಂದ ಎಂದು ತಿಳಿಸಿದೆ. ದೇಶದಲ್ಲಿ ನಡೆಯುವ ಬಹುತೇಕ ವಿಚ್ಛೇದನಗಳು ಪ್ರೇಮವಿವಾಹಗಳ ಪರಿಣಾಮ ಎಂದು ಸುಪ್ರೀಂ ಕೋರ್ಟ್ (Supreme Court) ಪ್ರತಿಪಾದಿಸಿದೆ. ಹೆಚ್ಚಿನ ಯುವಜನತೆ ವಿಚ್ಛೇದನ ಪ್ರಕರಣಗಳನ್ನೆದುರಿಸುತ್ತಿದ್ದು ಇದಕ್ಕೆ ಕಾರಣವೇ ಪ್ರೇಮ ವಿವಾಹ ಎಂಬುದಾಗಿ ಈ ಹಿಂದೆಯೂ ಹೇಳಿಕೆ ನೀಡಿತ್ತು.
ವಿಚ್ಛೇದನಕ್ಕೆ ಪ್ರೇಮ ವಿವಾಹವೇ ಕಾರಣ
ಬಿಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರ ದ್ವಿಸದಸ್ಯ ಪೀಠವು ವೈವಾಹಿಕ ವಿವಾದದಿಂದ ಉದ್ಭವಿಸಿದ ವರ್ಗಾವಣೆ ಅರ್ಜಿಯ ವಿಚಾರಣೆ ನಡೆಸುತ್ತಿದ್ದು, ಅರ್ಜಿದಾರ ದಂಪತಿಗಳದ್ದು ಪ್ರೇಮ ವಿವಾಹವಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿಚ್ಛೇದನ ಪ್ರಕ್ರಿಯೆಯನ್ನು ಮುಂದುವರಿಸುವುದಕ್ಕೂ ಮುನ್ನ ಮಧ್ಯಸ್ಥಿಕೆಗೆ ನ್ಯಾಯಾಲಯ ಮುಂದಾಗಿದ್ದು, ಪತಿಯು ಮಧ್ಯಸ್ಥಿಕೆಗೆ ನಕಾರ ವ್ಯಕ್ತಪಡಿಸಿದ್ದಾರೆ ಎಂಬುದು ತಿಳಿದುಬಂದಿದೆ. ತದನಂತರ ಇತ್ತೀಚಿನ ತೀರ್ಪಿನ ಅನ್ವಯ ದಂಪತಿಗಳಿಗೆ ವಿಚ್ಛೇದನವನ್ನು ನೀಡುತ್ತದೆ ಎಂದು ತಿಳಿಸಿದೆ.
ದಂಪತಿಗಳನ್ನು ಒಗ್ಗೂಡಿಸಲು ಪ್ರಯತ್ನಿಸಿರುವ ನ್ಯಾಯಾಲಯ
ಮೇ 1 ರಂದು, ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್, ಸಂಜೀವ್ ಖನ್ನಾ, ಎಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆ ಕೆ ಮಹೇಶ್ವರಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವುದು “ಸಾರ್ವಜನಿಕ ನೀತಿಯ ತತ್ವಗಳನ್ನು ಉಲ್ಲಂಘಿಸುವುದಿಲ್ಲ” ಎಂದು ಹೇಳಿದೆ.
ಇದನ್ನೂ ಓದಿ: ಹಾರ ಬದಲಿಸಿಕೊಳ್ಳುವಾಗ ಮದುವೆ ನಿಲ್ಲಿಸಿದ ವಧು! ಆಕೆ ಕೊಟ್ಟ ಕಾರಣ ಕೇಳಿದ್ರೆ ಶಾಕ್ ಆಗ್ತೀರ?
ಈ ತಿಂಗಳ ಆರಂಭದಲ್ಲಿ, ಸುಪ್ರೀಂ ಕೋರ್ಟ್ ದಂಪತಿಗಳನ್ನು ಒಗ್ಗೂಡಿಸಲು ಸಾಧ್ಯವಾಗದೇ ಇರುವ ವಿಫಲತೆಯ ಆಧಾರದ ಮೇಲೆ ವಿವಾಹವನ್ನು ವಿಸರ್ಜಿಸಬಹುದು ಎಂದು ತಿಳಿಸಿದೆ.
ವಿಚ್ಛೇದನಕ್ಕೆ ಸಮ್ಮತಿ ನೀಡಿದ ಸುಪ್ರೀಂ ಕೋರ್ಟ್
ನ್ಯಾಯಮೂರ್ತಿ ಎಸ್‌ಕೆ ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಒಪ್ಪಿಗೆಯ ಪಕ್ಷಗಳ ನಡುವಿನ ವಿವಾಹವನ್ನು ಸುಪ್ರೀಂ ಕೋರ್ಟ್ ವಿಸರ್ಜಿಸಬಹುದು ಎಂದು ಹೇಳಿದೆ.
ಇದಲ್ಲದೆ, ಹಿಂದೂ ವಿವಾಹ ಕಾಯ್ದೆಯಡಿ ಸೂಚಿಸಲಾದ ಆರು ತಿಂಗಳ ಅವಧಿಯನ್ನು ಷರತ್ತುಗಳಿಗೆ ಒಳಪಟ್ಟು ವಿನಿಯೋಗಿಸಬಹುದು ಎಂದು ನ್ಯಾಯಾಲಯವು ತೀರ್ಪು ನೀಡಿದೆ. ಸಂವಿಧಾನದ 142 ನೇ ವಿಧಿಯು ತನ್ನ ಮುಂದೆ ಬಾಕಿ ಇರುವ ಯಾವುದೇ ವಿಷಯದಲ್ಲಿ ಸಂಪೂರ್ಣ ನ್ಯಾಯಯುತವಾದ ತೀರ್ಪು ನೀಡಲು ನ್ಯಾಯಾಲಯದ ಆದೇಶಗಳು, ತೀರ್ಪುಗಳು ಮತ್ತು ಆದೇಶಗಳ ಜಾರಿಯೊಂದಿಗೆ ವ್ಯವಹರಿಸುತ್ತದೆ ಎಂದರು.
ಕೋರ್ಟ್‌ಗೆ ಖಾತ್ರಿಪಡಿಸಬೇಕಾದ ಅಂಶಗಳೇನು?
ಸುದೀರ್ಘ ನ್ಯಾಯಾಂಗ ಪ್ರಕ್ರಿಯೆಗಳಿಗಾಗಿ ಕೌಟುಂಬಿಕ ನ್ಯಾಯಾಲಯಗಳಿಗೆ ಅವರನ್ನು ಉಲ್ಲೇಖಿಸದೆ ದಂಪತಿಗಳ ಪರಸ್ಪರ ಒಪ್ಪಿಗೆಯ ನಡುವಿನ ವಿವಾಹಗಳನ್ನು ವಿಸರ್ಜಿಸಲು ಆರ್ಟಿಕಲ್ 142 ರ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಲು ಸಂಬಂಧಿಸಿದ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ವಿವಾಹವು ಸರಿಪಡಿಸಲಾಗದಂತೆ ಮುರಿದುಹೋಗಿದೆ ಎಂಬುದನ್ನು ಮೊದಲು ದೃಢೀಕರಿಸುವುದು ಅಗತ್ಯವಾಗಿದ್ದು ವಿವಾಹದ ನಂತರ ದಂಪತಿಗಳು ಹೇಗಿದ್ದರು ಎಷ್ಟು ಕಾಲ ಸಹಬಾಳ್ವೆ ನಡೆಸಿದ್ದಾರೆ ಹಾಗೂ ಇಬ್ಬರೂ ಪರಸ್ಪರ ನಡೆಸಿರುವ ದೋಷಾರೋಪಣೆಗಳೇನು ಎಂಬುದನ್ನು ಪರಿಗಣಿಸಬೇಕು ಎಂದು ಪೀಠ ತಿಳಿಸಿದೆ.
ವಿಚ್ಛೇದನವೊಂದೇ ದಾರಿ ಎಂದು ತಿಳಿಸಿರುವ ನ್ಯಾಯಾಲಯ
ದಂಪತಿಗಳನ್ನು ಒಗ್ಗೂಡಿಸುವುದು ಕಾರ್ಯಸಾಧ್ಯವಲ್ಲ ಅಂತೆಯೇ ಭಾವನಾತ್ಮಕವಾಗಿ ನಿಸ್ತೇಜವಾಗಿದೆ ಎಂಬುದು ನ್ಯಾಯಾಲಯಕ್ಕೆ ಮನವರಿಕೆಯಾಗಬೇಕು ಹಾಗೂ ತೃಪ್ತಿಪಡಿಸಬೇಕು ತದನಂತರವೇ ವಿವಾಹವನ್ನು ವಿಸರ್ಜಿಸುವುದೊಂದೇ ಪರಿಹಾರ ಎಂದು ನ್ಯಾಯಾಲಯ ತೀರ್ಮಾನಿಸುತ್ತದೆ ಎಂದು ಪೀಠ ತಿಳಿಸಿದೆ.
ಮದುವೆಯು ಸರಿಪಡಿಸಲಾಗದಂತೆ ಮುರಿದುಹೋಗಿದೆ ಎಂಬುದನ್ನು ವಾಸ್ತವಿಕವಾಗಿ ನಿರ್ಧರಿಸಬೇಕು ಮತ್ತು ದೃಢವಾಗಿ ಸ್ಥಾಪಿಸಬೇಕು ಎಂಬ ಅಂಶವನ್ನು ಖಾತ್ರಿಪಡಿಸಿದೆ. ವಿವಾಹವನ್ನು ಉಳಿಸಲು ಮಾಡಿರುವ ಎಲ್ಲಾ ಪ್ರಯತ್ನಗಳು ವಿಫಲಗೊಂಡರೆ ದಂಪತಿಗಳನ್ನು ಒಗ್ಗೂಡಿಸುವ ಯಾವುದೇ ಸಾಧ್ಯತೆಗಳು ಯಶಸ್ವಿಯಾಗದೇ ಇದ್ದರೆ ವಿಚ್ಛೇದನವೊಂದೇ ದಾರಿ ಎಂದು ನ್ಯಾಯಾಲಯ ತಿಳಿಯಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ