ಐಷಾರಾಮಿ ಸರಕುಗಳ ಕಂಪನಿ ಮಾಲೀಕರಾದ ಬರ್ನಾಡ್ ಅರ್ನಾಲ್ಟ್ ಮತ್ತು ಅವರ ಕುಟುಂಬ ಆನ್ಲೈನ್ ಇ-ಕಾಮರ್ಸ್ ಫ್ಲಾಟ್ಫಾರ್ಮ್ ಅಮೆಜಾನ್ ಕಂಪನಿ ಸಿಇಒ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ಶ್ರೀಮಂತರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ಸ್ ಪಟ್ಟಿಯ ಪ್ರಕಾರ ಅರ್ನಾಲ್ಟ್ ಮತ್ತು ಅವರ ಕುಟುಂಬದ ನಿವ್ವಳ ಮೌಲ್ಯವು 186.4 ಬಿಲಿಯನ್ ಇದೆ ಎಂದು ಹೇಳಿದೆ.
ಲೂಯಿ ವಿಟಾನ್ ಮೊಯೆಟ್ ಹೆನ್ನೆಸ್ಸಿ (Louis Vuitton Moet Hennessy) ಕಂಪನಿಯ ಮಾಲೀಕರಾದ ಬರ್ನಾಡ್ ಅರ್ನಾಲ್ಟ್ ಮತ್ತು ಅವರ ಕುಟುಂಬ ಷೇರು ಏರಿಕೆಯಿಂದ ತಮ್ಮ ಸಂಪತ್ತನ್ನು 765 ದಶಲಕ್ಷಕ್ಕಿಂತ ಹೆಚ್ಚಿಸಿಕೊಂಡಿದ್ದಾರೆ.
ಲೂಯಿ ವಿಟಾನ್ ಮೊಯೆಟ್ ಹೆನ್ನೆಸ್ಸಿ ಕಂಪನಿ (LVMH) ಫೆಂಡಿ, ಕ್ರಿಶ್ಚಿಯನ್ ಡಿಯೋರ್ ಮತ್ತು ಗಿವೆಂಚಿ ಬ್ರಾಂಡ್ಗಳನ್ನು ಸಹ ಹೊಂದಿದೆ. ಅದರ ಷೇರುಗಳ ಬೆಲೆಗಳು ಹೆಚ್ಚಾದ ನಂತರ ಮಾರುಕಟ್ಟೆ ಬಂಡವಾಳದಲ್ಲಿ ಏರಿಕೆ ಕಂಡುಬಂದಿದೆ. ಇದೇ ಅವರ ಉನ್ನತಕ್ಕೆ ಕಾರಣವಾಗಿದೆ.
ಫೋರ್ಬ್ಸ್ ಪಟ್ಟಿಯ ಪ್ರಕಾರ, 72 ವರ್ಷದ ಬರ್ನಾಡ್ ಮತ್ತು ಅವರ ಕುಟುಂಬ ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆಜಾನ್ ಸಿಇಒ ಬೆಜೋಸ್ ಅವರನ್ನು ಹಿಂದಿಕ್ಕಿದ್ದಾರೆ. ಅವರ ನಿವ್ವಳ ಮೌಲ್ಯವೀಗ 186 ಬಿಲಿಯನ್ ಆಗಿದೆ. ಇನ್ನು ಟೆಸ್ಲಾದ ಎಲೋನ್ ಮಸ್ಕ್ ಅವರ ಸಂಪತ್ತು147.3 ಬಿಲಿಯನ್ ಆಗಿದೆ.
2021ರ ಮೊದಲ ತ್ರೈಮಾಸಿದಲ್ಲಿ ಕಂಪನಿ 14 ಬಿಲಿಯನ್ ಯುರೋ ಆದಾಯವನ್ನು ದಾಖಲಿಸಿಕೊಂಡಿದೆ. , 2020ಕ್ಕೆ ಹೋಲಿಸಿದಾಗ ಶೇ 32 ರಷ್ಟು ವ್ಯತ್ಯಾಸ ಮತ್ತು ಸಾವಯವ ಆಧಾತದ ಮೇಲೆ ಶೇ.30ರಷ್ಟು ಹೆಚ್ಚಾಗಿದೆ. ಜಾಗತಿಕ ಸಾಂಕ್ರಾಮಿಕ ಕೊರೊನಾ ರೋಗದ ತೀವ್ರತೆಯಿಂದ ಕಳೆದ ವರ್ಷ ಕುಸಿತಗೊಂಡಿದ್ದರು ನಂತರ ಬೆಳವಣಿಗೆ ಕಂಡಿದೆ. ಇದೀಗ ಬರ್ನಾಡ್ ಅರ್ನಾಲ್ಟ್ ಮತ್ತು ಕುಟುಂಬ ಆನ್ಲೈನ್ ಇ-ಕಾಮರ್ಸ್ ಫ್ಲಾಟ್ಫಾರ್ಮ್ ಅಮೆಜಾನ್ ಕಂಪನಿ ಸಿಇಒ jeff bezos ಅವರನ್ನು ಹಿಂದಿಕ್ಕಿ ಶ್ರೀಮಂತರ ಸಾಳಿನಲ್ಲಿ ಗುರುತಿಸಿಕೊಂಡಿದ್ದಾರೆ.
A few hours after losing the title to French luxury fashion magnate Bernard Arnault, Jeff Bezos is back at No. 1 after #Amazon’s shares ticked up when markets opened in New York. #bezoshttps://t.co/4cKwCwqVlo
— Forbes Middle East (@Forbes_MENA_) May 25, 2021
-ಲೂಯಿ ವಿಟಾನ್ ಮೊಯೆಟ್ ಹೆನ್ನೆಸ್ಸಿ ಕಂಪನಿ ಹುಟ್ಟುಹಾಕಿದ ಬರ್ನಾಡ್ ಅರ್ನಾಲ್ಟ್ ಮೂಲತಃ ಫ್ರಾನ್ಸ್ನವರಾಗಿದ್ದು, ಮಾರ್ಚ್ 5, 1949 ರಂದು ಜನಿಸಿದರು. ಇವರ ಪೂರ್ಣ ಹೆಸರು ಬರ್ನಾರ್ಡ್ ಜೀನ್ ಎಟಿಯೆನ್ ಅರ್ನಾಲ್ಟ್.
- ಅರ್ನಾಲ್ಟ್ ಉದ್ಯಮಿ ಮಾತ್ರವಲ್ಲದೆ ಮೀಡಿಯಾ ಮಾಲೀಕ ಮತ್ತು ಕಲಾ ಸಂಗ್ರಾಹಕರಾಗಿಯೂ ಗುರುತಿಸಿಕೊಂಡಿದ್ದಾರೆ
- ಮಾಹಿತಿ ಮೇರೆಗೆ ಎರಡು ವಿವಾಹವಾಗಿದ್ದಾರೆ. ಆನ್ ದೇವವ್ರಿನ್ ಅವರನ್ನು 1973ರಲ್ಲಿ ವಿವಾಹವಾಗಿ 1990ರಲ್ಲಿ ವಿಚ್ಛೇದನ ನೀಡುತ್ತಾರೆ. ಹೆಲೀನ್ ಮರ್ಸಿಯರ್ ಅವರನ್ನು 1991ರಂದು ಮದುವೆಯಾಗುತ್ತಾರೆ.
- ಅರ್ನಾಲ್ಟ್ಗೆ 5 ಮಕ್ಕಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ