Fake News in FaceBook| 2019ರ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು; ಸತ್ಯ ಬಿಚ್ಚಿಟ್ಟ ಫೇಸ್​ಬುಕ್

2019 ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇವಲ ಮೂರು ವಾರಗಳಲ್ಲಿ ಹೊಸ ಬಳಕೆದಾರರು ಸುಳ್ಳು ಸುದ್ದಿಗಳನ್ನು, ಪ್ರಚೋದನಕಾರಿ ಚಿತ್ರಗಳನ್ನು ಅತಿ ಹೆಚ್ಚು ಹಂಚಿಕೊಂಡಿದ್ದಾರೆ ಎಂದು ಫೇಸ್​ಬುಕ್ ವರದಿ ನೀಡಿದೆ.

ಫೇಸ್​ಬುಕ್.

ಫೇಸ್​ಬುಕ್.

 • Share this:
  ನವ ದೆಹಲಿ (ಅಕ್ಟೋಬರ್​ 25); 2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Election 2019) ಬಿಜೆಪಿ (BJP) ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಬಹುಮತದೊಂದಿಗೆ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೆ ಏರಿತ್ತು. ಆದರೆ, ಈ ವೇಳೆ ಬಿಜೆಪಿ ಐಟಿ ಸೆಲ್​ (BJP IT Cell) ಸಾಮಾಜಿಕ ಜಾಲತಾಣಗಳನ್ನು (Social Media) ಬಳಸಿಕೊಂಡು ಸಾಕಷ್ಟು ಸುಳ್ಳು ಸುದ್ದಿಗಳನ್ನು (Fake News) ಹರಡಿತ್ತು. ಈ ಮೂಲಕ ಮತಗಳನ್ನು ಪಡೆದಿತ್ತು ಎಂಬ ಆರೋಪ ಇದೆ. ಹಲವು ಪ್ರಗತಿಪರ ಹೋರಾಟಗಾರರು ಮತ್ತು ಸಂಘನೆಗಳು ಕಳೆದ ಹಲವು ವರ್ಷಗಳಿಂದ ಈ ಬಗ್ಗೆ ಗಂಭೀರ ಆರೋಪಗಳನ್ನು ಮುಂದಿಡುತ್ತಲೇ ಇವೆ. ಆದರೆ, ಮೊದಲ ಬಾರಿಗೆ ಮೌನ ಮುರಿದಿರುವ ಫೇಸ್​ಬುಕ್ (FaceBook), 2019ರ ಫೆಬ್ರುವರಿಯಲ್ಲಿ ಹೇಗೆ ಭಾರತದಲ್ಲಿ ಫೇಕ್‌ನ್ಯೂಸ್‌ಗಳು ಶರವೇಗದಲ್ಲಿ ಹರಿದಾಡಿವೆ ಎಂದು ಹೇಳಿಕೊಂಡಿದೆ. ಕೇವಲ 21 ದಿನಗಳಲ್ಲಿ ಭಾರತದಲ್ಲಿ ಆಲ್ಗರಿದಂ ಹೇಗೆ ವೇಗವಾಗಿ ಬೆಳೆದಿತ್ತು ಎಂಬುದನ್ನು ಫೇಸ್‌ಬುಕ್‌ ಸಂಸ್ಥೆ ಪರಿಶೀಲಿಸಿದ್ದು, ಫೇಸ್‌ಬುಕ್‌ ಸಿಬ್ಬಂದಿಗಳು ಈ ಬಗ್ಗೆ ದಿಗ್ಭ್ರಾಂತರಾಗಿದ್ದಾರೆ ಎನ್ನಲಾಗಿದೆ.

  ಫೇಸ್​ಬುಕ್ ಹೇಳಿರುವುದು ಏನು?

  "2019 ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇವಲ ಮೂರು ವಾರಗಳಲ್ಲಿ ಹೊಸ ಬಳಕೆದಾರರು ಸುಳ್ಳು ಸುದ್ದಿಗಳನ್ನು, ಪ್ರಚೋದನಕಾರಿ ಚಿತ್ರಗಳನ್ನು ಅತಿ ಹೆಚ್ಚು ಹಂಚಿಕೊಂಡಿದ್ದಾರೆ. ಶಿರಚ್ಛೇದದ ಗ್ರಾಫಿಕ್‌ ಫೋಟೋಗಳು, ಪಾಕಿಸ್ತಾನದ ಮೇಲೆ ಭಾರತದ ನಡೆಸಿದೆ ಎನ್ನಲಾದ ವೈಮಾನಿಕ ದಾಳಿಯ, ಹಿಂಸಾಕೃತ್ಯದ ಗ್ರಾಫಿಕ್‌ ಫೋಟೋಗಳನ್ನು ಹರಿಬಿಡಲಾಯಿತು. ಪಾಕಿಸ್ತಾನದಲ್ಲಿ 300 ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂಬ ನಕಲಿ ಸುದ್ದಿಯನ್ನು ಹಂಚಿದ ಒಂದು ಗುಂಪು ನಗೆಪಾಟಲಿಗೆ ಈಡಾಗಿತ್ತು" ಎಂದು ಫೇಸ್‌ಬುಕ್‌ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

  ಸಂಶೋಧನಾ ಟಿಪ್ಪಣಿಯಲ್ಲಿ ಏನಿದೆ?

  ವಿಷಲ್‌ಬ್ಲೋವರ್‌‌ (ನಕಲಿ ಖಾತೆಗಳನ್ನು ಪತ್ತೆ ಹಚ್ಚುವವವರು) ಫ್ರಾನ್ಸ್‌ ಹೌಗನ್‌ ನೀಡಿರುವ 46 ಪುಟಗಳ ಸಂಶೋಧನಾ ಟಿಪ್ಪಣಿಯಲ್ಲಿ, "ನನ್ನ ಜೀವಿತಾವಧಿಯಲ್ಲಿ ನೋಡಿರದಿದ್ದಷ್ಟು ಸತ್ತವರ ಫೋಟೋಗಳನ್ನು ಕೇವಲ ಮೂರು ವಾರಗಳಲ್ಲಿ ನೋಡಿದೆ" ಎಂದು ಸಿಬ್ಬಂದಿಯೊಬ್ಬರು ಹೇಳಿರುವುದನ್ನು ಉಲ್ಲೇಖಿಸಲಾಗಿದೆ.

  ಟ್ರಯಲ್ ಖಾತೆಯು ಜೈಪುರದಲ್ಲಿ ವಾಸಿಸುವ ಮತ್ತು ಹೈದರಾಬಾದ್‌ನ 21 ವರ್ಷದ ಮಹಿಳೆಯ ಪ್ರೊಫೈಲ್ ಅನ್ನು ಬಳಸಿದೆ. ಬಳಕೆದಾರರು ಫೇಸ್‌ಬುಕ್‌ ಶಿಫಾರಸು ಮಾಡಿದ ಅಥವಾ ಆ ಶಿಫಾರಸುಗಳ ಮೂಲಕ ಕಾಣಿಸಿಕೊಂಡ ಪೇಜ್‌ಗಳನ್ನು, ಗುಂಪುಗಳನ್ನು ಮಾತ್ರ ಅನುಸರಿಸಿರುವುದು ತಿಳಿದುಬಂದಿದೆ. ಸಂಶೋಧನಾ ಟಿಪ್ಪಣಿಯ ಲೇಖಕರು ಈ ಅನುಭವವನ್ನು 'ಸಮಗ್ರತೆಯ ದುಃಸ್ವಪ್ನ' ಎಂದು ಕರೆದಿದ್ದಾರೆ.

  ಕಂಪನಿಯ ಬೆಳವಣಿಗೆಯು ಭಾರತ, ಇಂಡೋನೇಷಿಯ, ಬ್ರೆಜಿಲ್‌ನಂತಹ ದೇಶದಲ್ಲಿ ಹೆಚ್ಚಾಗಿದೆ. ಅಲ್ಲಿ ಮೂಲಭೂತ ಮೇಲ್ವಿಚಾರಣೆಗೆ ಭಾಷಾ ಕೌಶಲ್ಯ ಹೊಂದಿರುವ ಜನರನ್ನು ನೇಮಿಸಿಕೊಳ್ಳಲು ಕಂಪನಿ ಹೆಣಗಾಡುತ್ತಿದೆ. 22 ಅಧಿಕೃತ ಭಾಷೆಗಳನ್ನು ಹೊಂದಿರುವ 1.3 ಬಿಲಿಯನ್ ಜನರಿರುವ ಭಾರತದಲ್ಲಿ ಈ ಸವಾಲು ವಿಶೇಷವಾಗಿ ತೀವ್ರವಾಗಿದೆ. ಫೇಸ್‌ಬುಕ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿನ ಕಂಟೆಂಟ್‌ನ ಉಸ್ತುವಾರಿಯನ್ನು ಆಕ್ಸೆಂಚರ್‌ನಂತಹ ಕಂಪನಿಗಳ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡುತ್ತದೆ.

  ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ಮುಂದಾದ ಫೇಸ್​ಬುಕ್;

  "ಹಿಂದಿ ಮತ್ತು ಬಂಗಾಳಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ದ್ವೇಷದ ಭಾಷಣವನ್ನು ಕಂಡುಹಿಡಿಯಲು ತಂತ್ರಜ್ಞಾನದ ಮೇಲೆ ನಾವು ಗಣನೀಯವಾಗಿ ಹೂಡಿಕೆ ಮಾಡಿದ್ದೇವೆ" ಎಂದು ಫೇಸ್‌ಬುಕ್ ವಕ್ತಾರರು ಹೇಳಿದ್ದಾರೆ. "ಪರಿಣಾಮವಾಗಿ ಜನರು ನೋಡುವ ದ್ವೇಷದ ಭಾಷಣದ ಪ್ರಮಾಣವನ್ನು ನಾವು ಈ ವರ್ಷ ಅರ್ಧದಷ್ಟು ಕಡಿಮೆ ಮಾಡಿದ್ದೇವೆ. ಇಂದು ಅದು ಶೇ.0.05 ಕ್ಕೆ ಇಳಿದಿದೆ" ಎಂದು ಕಂಪನಿ ಹೇಳಿಕೊಂಡಿದೆ.

  "ಮುಸ್ಲಿಮರು ಸೇರಿದಂತೆ ಹಿಂದುಳಿದ ಗುಂಪುಗಳ ವಿರುದ್ಧ ದ್ವೇಷ ಭಾಷಣವು ಜಾಗತಿಕವಾಗಿ ಹೆಚ್ಚುತ್ತಿದೆ. ಆದ್ದರಿಂದ ನಾವು ನಿಯಮ ಜಾರಿಗೊಳಿಸುವಿಕೆಯನ್ನು ಸುಧಾರಿಸುತ್ತಿದ್ದೇವೆ. ದ್ವೇಷದ ಮಾತುಗಳು ಆನ್‌ಲೈನ್‌ನಲ್ಲಿ ಹುಟ್ಟಿಕೊಳ್ಳುವುತ್ತಿರುವುದರಿಂದ ನಮ್ಮ ನೀತಿಗಳನ್ನು ನವೀಕರಿಸಲು ಬದ್ಧರಾಗಿರುತ್ತೇವೆ" ಎಂದು ಫೇಸ್‌ಬುಕ್‌ ಹೇಳಿದೆ.

  ವರದಿಯ ಪ್ರಕಾರ, ಹೊಸ ಬಳಕೆದಾರ ಪರೀಕ್ಷಾ ಖಾತೆಯನ್ನು ಫೆಬ್ರವರಿ 4, 2019ರಂದು ಸಂಶೋಧನಾ ತಂಡವು ಭಾರತದಲ್ಲಿ ಪ್ರವಾಸ ಕೈಗೊಂಡಿದ್ದ ಸಮಯದಲ್ಲಿ ರಚಿಸಲಾಗಿದೆ. ಪರೀಕ್ಷಾ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ ಪೋಸ್ಟ್‌ಗಳನ್ನು ಒಳಗೊಂಡಂತೆ ಫೇಸ್‌ಬುಕ್ ಶಿಫಾರಸು ಮಾಡಿದ ವಿಷಯವನ್ನು ಅನ್ವೇಷಿಸಲು ಆರಂಭಿಸಿದರು.

  ಇದನ್ನೂ ಓದಿ: T-Shirt for 50 paise: 50 ಪೈಸೆಗೆ 1 ಟಿ -ಶರ್ಟ್ ಕೊಡ್ತಾರೆ ಅಂತ ಮುಗಿಬಿದ್ದ ಜನ: ಕ್ರೌಡ್​ ಕಂಟ್ರೋಲ್​ ಮಾಡಲಾಗದೇ ಶಾಪ್​ ಕ್ಲೋಸ್​!

  ಸುಳ್ಳು ಸುದ್ದಿ ಹರಡಿದ್ದು ಹೇಗೆ?

  ಫೆ .14ರಂದು ರಾಜಕೀಯವಾಗಿ ಸೂಕ್ಷ್ಮವಾಗಿರುವ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಭಾರತೀಯ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದರು. ಹತ್ತಾರು ಜನರು ಗಾಯಗೊಂಡರು. ಭಾರತ ಸರ್ಕಾರ ಈ ದಾಳಿಯನ್ನು ಪಾಕಿಸ್ತಾನದ ಭಯೋತ್ಪಾದಕ ಗುಂಪು ಮಾಡಿದೆ ಎಂದು ಹೇಳಿತು. ಶೀಘ್ರದಲ್ಲೇ ಪಾಕಿಸ್ತಾನದ ವಿರೋಧಿ ದ್ವೇಷದ ಮಾತಿನ ಸುರಿಮಳೆಯಾಯಿತು. ಇದರಲ್ಲಿ ಶಿರಚ್ಛೇದದ ಚಿತ್ರಗಳು ಮತ್ತು ಪಾಕಿಸ್ತಾನಿಯರ ಗುಂಪನ್ನು ಸೋಲಿಸಲು ಸಿದ್ಧತೆಗಳನ್ನು ತೋರಿಸುವ ಗ್ರಾಫಿಕ್ ಚಿತ್ರಗಳು ಒಳಗೊಂಡಿದ್ದವು.

  ಇದನ್ನೂ ಓದಿ: PMASBY: ಪ್ರಧಾನ ಮಂತ್ರಿ ಆತ್ಮನಿರ್ಭರ್ ಸ್ವಸ್ತ್​​ ಭಾರತ್ ಯೋಜನೆಗೆ ಮೋದಿ ಚಾಲನೆ; ಏನಿದು ಯೋಜನೆ!

  ರಾಷ್ಟ್ರೀಯವಾದ ಸಂದೇಶಗಳು, ಪಾಕಿಸ್ತಾನದಲ್ಲಿ ಭಾರತದ ವಾಯುದಾಳಿಗಳ ಬಗ್ಗೆ ಉತ್ಪ್ರೇಕ್ಷಿತ ಹೇಳಿಕೆಗಳು, ಬಾಂಬ್ ಸ್ಫೋಟಗಳ ನಕಲಿ ಫೋಟೋಗಳು ಮತ್ತು ದಾಳಿಯಲ್ಲಿ ಹೊಸದಾಗಿ ಮದುವೆಯಾದ ಸೇನಾ ಸಿಬ್ಬಂದಿ ತನ್ನ ಕುಟುಂಬಕ್ಕೆ ಮರಳಲು ತಯಾರಿ ನಡೆಸುತ್ತಿದ್ದಾಗ ದಾಳಿಗೆ ತುತ್ತಾಗಿದ್ದನ್ನು ಬಿಂಬಿಸಲಾಗಿತ್ತು.
  Published by:MAshok Kumar
  First published: