• Home
  • »
  • News
  • »
  • national-international
  • »
  • Bhagavad Gita: ಭಗವದ್ಗೀತೆಯಲ್ಲೂ ಜಿಹಾದ್, ಶ್ರೀಕೃಷ್ಣನಿಂದ ಅರ್ಜುನನಿಗೆ ಜಿಹಾದ್ ಬೋಧನೆ; ಕಾಂಗ್ರೆಸ್ ನಾಯಕ

Bhagavad Gita: ಭಗವದ್ಗೀತೆಯಲ್ಲೂ ಜಿಹಾದ್, ಶ್ರೀಕೃಷ್ಣನಿಂದ ಅರ್ಜುನನಿಗೆ ಜಿಹಾದ್ ಬೋಧನೆ; ಕಾಂಗ್ರೆಸ್ ನಾಯಕ

ಶಿವರಾಜ್ ಪಾಟೀಲ್ ಮತ್ತು ರಾಹುಲ್ ಗಾಂಧಿ

ಶಿವರಾಜ್ ಪಾಟೀಲ್ ಮತ್ತು ರಾಹುಲ್ ಗಾಂಧಿ

ಕೇವಲ ಕುರಾನ್‌ನಲ್ಲಿ ಮಾತ್ರವಲ್ಲ, ಮಹಾಭಾರತದಲ್ಲಿನ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಅರ್ಜುನ್‌ಗೆ ಜಿಹಾದ್ ಬಗ್ಗೆ ವಿವರಿಸುತ್ತಾನೆ ಎಂದು ಹಿರಿಯ ಕಾಂಗ್ರೆಸ್ ನಾಯಕ ವಿವಾದ ಹುಟ್ಟಿಸಿದ್ದಾರೆ.

  • Share this:

ದೆಹಲಿ: ಶ್ರೀಕೃಷ್ಣನೇ ಅರ್ಜುನನಿಗೆ ಜಿಹಾದ್ ಬೋಧಿಸಿದ್ದ. ಜಿಹಾದ್ ಪರಿಕಲ್ಪನೆ ಇಸ್ಲಾಂ ಧರ್ಮದಲ್ಲಿ ಮಾತ್ರವಲ್ಲ, ಭಗವದ್ಗೀತೆ (Bhagavad Gita ) ಮತ್ತು ಕ್ರಿಶ್ಚಿಯನ್ ಧರ್ಮದಲ್ಲೂ ಇದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಿವರಾಜ್ ಪಾಟೀಲ್ (Congress Leader Shivraj Patil) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಹಿರಿಯ ಮತ್ತು ಮಾಜಿ ಕೇಂದ್ರ ಸಚಿವ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶಿವರಾಜ್ ಪಾಟೀಲ್ ಇಸ್ಲಾಂ ಧರ್ಮದಲ್ಲಿ ಜಿಹಾದ್ ಬಗ್ಗೆ (Jihad) ಸಾಕಷ್ಟು ಚರ್ಚೆಗಳಿವೆ. ಕೇವಲ ಕುರಾನ್‌ನಲ್ಲಿ ಮಾತ್ರವಲ್ಲ, ಮಹಾಭಾರತದಲ್ಲಿನ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಅರ್ಜುನ್‌ಗೆ ಜಿಹಾದ್ ಬಗ್ಗೆ ವಿವರಿಸುತ್ತಾನೆ. ಜಿಹಾದ್ ಎಂಬುದು ಕುರಾನ್ ಅಥವಾ ಗೀತೆಯಲ್ಲಿ ಮಾತ್ರವಲ್ಲದೆ ಕ್ರಿಶ್ಚಿಯನ್ ಧರ್ಮದಲ್ಲಿಯೂ ಇದೆ ಎಂದು ಶಿವರಾಜ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


2004ರಿಂದ 2008ರವರೆಗೆ ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದ ಶಿವರಾಜ್ ಪಾಟೀಲ್ ಅವರ ಈ ಹೇಳಿಕೆ ವಿವಾದ ಸೃಷ್ಟಿಸಿದೆ.


ಇದನ್ನೂ ಓದಿ: Kedarnath: ಕೇದಾರನಾಥದಲ್ಲಿ ಮೋದಿ ಧರಿಸಿದ ಉಡುಗೆ ಚರ್ಚೆಯಲ್ಲಿ, ಹಿಮಾಚಲ ಮಹಿಳೆ ಕೊಟ್ಟ ಉಡುಗೊರೆ!


ಶಸ್ತ್ರಾಸ್ತ್ರಗಳೊಂದಿಗೆ ಹೋರಾಟಕ್ಕೆ ಬಂದರೆ ಓಡಿಹೋಗಲು ಆಗದು
ಶಿವರಾಜ್ ಪಾಟೀಲ್ ಜಿಹಾದ್ ಪರಿಕಲ್ಪನೆಯನ್ನು ಸಮರ್ಥಿಸಿಕೊಂಡಿದ್ದಾರೆ. "ನಮ್ಮ ಕೈಲಾದಷ್ಟು ಪ್ರಯತ್ನಿಸಿದರೂ, ಯಾರಾದರೂ ಶಸ್ತ್ರಾಸ್ತ್ರಗಳೊಂದಿಗೆ ನಿಮ್ಮ ಬಳಿಗೆ ಬಂದರೆ, ನೀವು ಸುಮ್ಮನೆ ಓಡಿಹೋಗಲು ಸಾಧ್ಯವಿಲ್ಲ. ನೀವು ಅದನ್ನು ತಪ್ಪು ಎಂದು ಕರೆಯಲು ಸಾಧ್ಯವಿಲ್ಲ"ಎಂದು ಶಿವರಾಜ್ ಪಾಟೀಲ್ ವ್ಯಾಖ್ಯಾನಿಸಿದ್ದಾರೆ.


ಲಕ್ಷ್ಮೀ ದೇವಿಯನ್ನು ಪೂಜಿಸದ ಮುಸ್ಲಿಮರಲ್ಲಿ ಕೋಟ್ಯಾಧಿಪತಿಗಳಿಲ್ಲವೇ? ಬಿಜೆಪಿ ಶಾಸಕ
ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಮಾತ್ರ ನಾವು ಸಂಪತ್ತನ್ನು ಪಡೆಯುತ್ತಿದ್ದರೆ, ಮುಸ್ಲಿಮರಲ್ಲಿ ಕೋಟ್ಯಾಧಿಪತಿಗಳು ಇರುತ್ತಿರಲಿಲ್ಲ. ಮುಸ್ಲಿಮರು ಲಕ್ಷ್ಮಿ ದೇವಿಯನ್ನು ಪೂಜಿಸುವುದಿಲ್ಲ, ಅವರು ಶ್ರೀಮಂತರಲ್ಲವೇ? ಮುಸ್ಲಿಮರು ಸರಸ್ವತಿ ದೇವಿಯನ್ನು ಪೂಜಿಸುವುದಿಲ್ಲ. ಮುಸ್ಲಿಮರಲ್ಲಿ ವಿದ್ವಾಂಸರು ಇಲ್ಲವೇ? ಅವರು ಐಎಎಸ್ ಅಥವಾ ಐಪಿಎಸ್ ಆಗುವುದಿಲ್ಲವೇ? ಎಂದು ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಪ್ರಶ್ನಿಸಿದ್ದಾರೆ. "ಆತ್ಮ ಮತ್ತು ಪರಮಾತ್ಮ" ಪರಿಕಲ್ಪನೆಯು ಕೇವಲ ಜನರ ನಂಬಿಕೆಯಾಗಿದೆ ಎಂದು ಬಿಜೆಪಿ ಶಾಸಕ ವಾದಿಸಿದ್ದಾರೆ.


ಇದನ್ನೂ ಓದಿ: Boy Murder: ಕಾಪಿ ಚೀಟಿಯನ್ನ ಲವ್ ಲೆಟರ್ ಅಂದುಕೊಂಡಿದ್ದಕ್ಕೆ ದುರಂತ, ಪರೀಕ್ಷೆ ಬರೆಯಬೇಕಿದ್ದ ಹುಡುಗ ಕೊಲೆಯಾದ!


ಬಿಹಾರದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಅವರು ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಭಾಗಲ್ಪುರ ಜಿಲ್ಲೆಯ ಪಿರ್ಪೈಂಟಿ ವಿಧಾನಸಭಾ ಕ್ಷೇತ್ರದ ಶಾಸಕ ಲಾಲನ್ ಪಾಸ್ವಾನ್ ಹಿಂದೂ ನಂಬಿಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.


ಹನುಮಂತನನ್ನು ಪೂಜಿಸದವರಿಗೆ ಶಕ್ತಿ ಇಲ್ಲವೇ?
ಹನುಮಂತ ಅತ್ಯಂತ ಶಕ್ತಿಯುಳ್ಳ ದೇವರು. ನಮ್ಮಲ್ಲೂ ಶಕ್ತಿಯನ್ನು ತುಂಬುತ್ತಾರೆ ಎಂದು ನಂಬಲಾಗಿದೆ. ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಬಜರಂಗಬಲಿ ಪೂಜೆ ಮಾಡುವುದಿಲ್ಲ. ಅವರು ಶಕ್ತಿವಂತರಲ್ಲವೇ? ನೀವು ದೇವರನ್ನು ನಂಬುವುದನ್ನು ನಿಲ್ಲಿಸಿದ ದಿನ, ಇವೆಲ್ಲವೂ ಕೊನೆಗೊಳ್ಳುತ್ತದೆ" ಎಂದು ಬಿಜೆಪಿ ಶಾಸಕ ಪಾಸ್ವಾನ್ ವಾದಿಸಿದ್ದಾರೆ.


ಪ್ರತಿಕೃತಿ ದಹನ
ದೀಪಾವಳಿಯಂದು ಲಕ್ಷ್ಮಿ ದೇವಿಯ ಆರಾಧನೆಯನ್ನು ಪಾಸ್ವಾನ್ ಪ್ರಶ್ನಿಸಿದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಅವರ ವಿರುದ್ಧ ಭಾಗಲ್ಪುರದ ಶೆರ್ಮರಿ ಬಜಾರ್‌ನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅವರ ಪ್ರತಿಕೃತಿಯನ್ನು ಸುಡಲಾಗಿದೆ.

Published by:ಗುರುಗಣೇಶ ಡಬ್ಗುಳಿ
First published: