ಆಗ್ರಾ: ತಾಜ್ ಮಹಲ್ (Taj Mahal) ಅನ್ನು ತೇಜೋ ಮಹಲ್ (Tejo Mahal) ಎಂದು ಪರಿಗಣಿಸುವವರ ಕೂಗು ಮತ್ತು ಹಕ್ಕು ಗಟ್ಟಿಯಾಗುತ್ತಿದೆ. ಇದೇ ಕಾರಣಕ್ಕೆ ತಾಜ್ಮಹಲ್ನ ಮೇಲಿನ ಮಹಡಿಯಲ್ಲಿ ನಿರ್ಮಿಸಲಾಗಿರುವ 22 ಕೊಠಡಿಗಳಲ್ಲಿ (Room) ಶಿವನ (Shiva) ವಿಗ್ರಹ ಮತ್ತು ಶಾಸನಗಳನ್ನು ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮುಚ್ಚಿದ ಕೊಠಡಿಗಳನ್ನು ತೆರೆಯುವಂತೆ ಅಲಹಾಬಾದ್ ಹೈಕೋರ್ಟ್ನ (High Court) ಲಕ್ನೋ ಪೀಠದಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇದಲ್ಲದೇ ಸತ್ಯಶೋಧನಾ ಸಮಿತಿ ರಚನೆ ಮಾಡುವಂತೆ ಹೈಕೋರ್ಟ್ನಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಕೆ ಮಾಡಲಾಗಿದೆ. ತಾಜ್ ಮಹಲ್ ಅನ್ನು ತೇಜೋ ಮಹಲ್ ಎಂದು ಕರೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ತಾಜ್ ಮಹಲ್ ನಲ್ಲಿ ಹಳೆಯ ಶಿವನ ದೇವಸ್ಥಾನವಿದೆ ಎಂದು ಅರ್ಜಿ ಸಲ್ಲಿಕೆ
ಈ ಹಿಂದೆ, ಅಯೋಧ್ಯೆಯ ಪರಮಹಂಸ ದಾಸ್ ತಾಜ್ ಮಹಲ್ನಲ್ಲಿರುವ ಶಿವನ ಪಿಂಡಿ ಎಂದು ಹೇಳಿದ್ದರು. ಅಯೋಧ್ಯೆಯ ಬಿಜೆಪಿ ಘಟಕದ ಮಾಧ್ಯಮ ಉಸ್ತುವಾರಿಯಾಗಿರುವ ಅರ್ಜಿದಾರ ಡಾ. ರಜನೀಶ್ ಕುಮಾರ್ ಸಿಂಗ್ ಅವರು ತಮ್ಮ ವಕೀಲ ರುದ್ರ ವಿಕ್ರಮ್ ಸಿಂಗ್ ಮೂಲಕ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಇದರಲ್ಲಿ ತಾಜ್ ಮಹಲ್ ನಲ್ಲಿ ಹಳೆಯ ಶಿವನ ದೇವಸ್ಥಾನವಿದೆ ಎಂದು ಹೇಳಿಕೊಂಡಿದ್ದಾರೆ. ಮೊಘಲ್ ಚಕ್ರವರ್ತಿ ಷಹಜಹಾನ್ ತಾಜ್ ಮಹಲ್ ಒಳಗೆ ಶಿವ ದೇವಾಲಯದ ಶಿಲ್ಪ ಮತ್ತು ಶಾಸನಗಳನ್ನು ಮರೆ ಮಾಡಿದ್ದಾರೆ.
ಇದನ್ನೂ ಓದಿ: ಗರ್ಭಾಶಯ ಡಿಡೆಲ್ಫಿಸ್ ಎಂದರೇನು? ಈ ಕಾಯಿಲೆ ಇದ್ದರೆ ಗರ್ಭಧಾರಣೆ ಕಷ್ಟಕರ ಏಕೆ?
ಈ ಮಹತ್ವದ ಐತಿಹಾಸಿಕ ಪುರಾವೆಗಳು ತಾಜ್ ಮಹಲ್ನಲ್ಲಿ ಇಂದಿಗೂ ಹುದುಗಿವೆ. ಅಲ್ಲಿ ಹುಡುಕಿದರೆ ಎಲ್ಲವೂ ಸಿಗುತ್ತದೆ. ಈ ಸಾಕ್ಷ್ಯಗಳನ್ನು ಶೋಧನೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.
ತಾಜ್ ಮಹಲ್ ಮೇಲಿನ ಮಹಡಿಯಲ್ಲಿ ಪ್ರತಿಮೆ ಮತ್ತು ಪುರಾವೆ ಲಾಕ್ ಮಾಡಲಾಗಿದೆ
ತಾಜ್ ಮಹಲ್ನ ನಾಲ್ಕು ಅಂತಸ್ತಿನ ಕಟ್ಟಡದ ಮೇಲ್ಭಾಗದಲ್ಲಿ 22 ಕೊಠಡಿಗಳಿವೆ ಎಂದು ಅರ್ಜಿದಾರರು ಪ್ರತಿಪಾದನೆ ಮಾಡಿದ್ದಾರೆ. ತಾತ್ಕಾಲಿಕವಾಗಿ ತಾಜ್ ಮಹಲ್ ನ್ನು ಮುಚ್ಚಲಾಗಿದೆ. ತಾಜ್ ಮಹಲ್ ಸಂಕೀರ್ಣದ ಮುಚ್ಚಿದ ಕೊಠಡಿಗಳ ಬಾಗಿಲು ತೆರೆಯುವಂತೆ ಅರ್ಜಿದಾರರು ಎಎಸ್ಐಗೆ ಒತ್ತಾಯ ಮಾಡಿದ್ದಾರೆ.
ಈ ಕೊಠಡಿಗಳಲ್ಲಿರುವ ಶಿವನ ವಿಗ್ರಹ, ಶಾಸನಗಳು ಪ್ರಮುಖ ಸಾಕ್ಷ್ಯಗಳಾಗಿವೆ ಎಂದು ಹೇಳಿದ್ದಾರೆ. ತಾಜ್ ಮಹಲ್ಗಿಂತ ಮೊದಲು ಇಲ್ಲಿ ಶಿವನ ದೇವಾಲಯ ಇತ್ತು. ಇದನ್ನು ಇತಿಹಾಸಕಾರರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸತ್ಯ ಸಾರ್ವಜನಿಕರ ಮುಂದೆ ಬಂದಿದೆ
ತಾಜ್ ಮಹಲ್ ಪುರಾತನ ಸ್ಮಾರಕ ಆಗಿದೆ. ಸ್ಮಾರಕದ ರಕ್ಷಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಅರ್ಜಿದಾರ ಡಾ.ರಜನೀಶ್ ಕುಮಾರ್ ಸಿಂಗ್ ವಾದ ಮಂಡಿಸಿದ್ದಾರೆ. ಅದರ ಬಗ್ಗೆ ನಿಜವಾದ ಮತ್ತು ಸಂಪೂರ್ಣ ಐತಿಹಾಸಿಕ ಸಂಗತಿಗಳನ್ನು ಸಾರ್ವಜನಿಕರ ಮುಂದೆ ತರಬೇಕು ಎಂದು ಹೇಳಿದ್ದಾರೆ.
ಏನಿದು ವಾರಣಾಸಿ ಗೌರಿ ವಿವಾದ?
ಕಾಶಿ ವಿಶ್ವನಾಥ ಮತ್ತು ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಶೃಂಗಾರ್ ಗೌರಿ ಸೇರಿದಂತೆ ಅನೇಕ ದೇವತೆಗಳ ಸಮೀಕ್ಷೆಯ ಬಗ್ಗೆ ಗಲಾಟೆ ನಡೆದಿದೆ. ಸಮೀಕ್ಷೆ ಆರಂಭವಾದಾಗಿನಿಂದ ಪ್ರತಿಭಟನೆ ನಡೆಯುತ್ತಿವೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಈ ಕ್ರಮವನ್ನು ಕಾನೂನಿನ ಉಲ್ಲಂಘನೆ ಎಂದಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟಿ ಮಹಿಮಾ ಮಕ್ವಾನಾ ಗ್ಲಾಮರಸ್ ಲುಕ್ ಮತ್ತು ಅಂದದ ತ್ವಚೆಯ ರಹಸ್ಯ ಇಲ್ಲಿದೆ
ಜ್ಞಾನವಾಪಿ ಮಸೀದಿಯಲ್ಲಿ ಸರ್ವೆ ಮಾಡಿಲ್ಲ
ವಿವಾದದ ನಡುವೆಯೇ ಜ್ಞಾನವಾಪಿ ಮಸೀದಿಯಲ್ಲಿ ಎರಡನೇ ದಿನವಾದ ಶನಿವಾರವೂ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಸಮೀಕ್ಷೆಗಾಗಿ ಹಿಂದೂ ಪರ ವಕೀಲರ ತಂಡ ಸ್ಥಳಕ್ಕೆ ಆಗಮಿಸಿತ್ತು. ಆದರೆ ಅವರನ್ನು ಒಳಗೆ ಹೋಗದಂತೆ ತಡೆ ಹಿಡಿಯಲಾಗಿತ್ತು. ಇದಾದ ಬಳಿಕ ಹಿಂದೂ ಪರ ವಕೀಲರು ಕಾಶಿ ವಿಶ್ವನಾಥ ಧಾಮದಿಂದಲೇ ವಾಪಸ್ಸಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ