ರಾಮ ನಮ್ಮವನು, ಅಯೋಧ್ಯೆ ಇರುವುದು ನಮ್ಮಲ್ಲಿಯೇ; ಹೊಸ ಕ್ಯಾತೆ ತೆಗೆದ ನೇಪಾಳ

ವಾಲ್ಮಿಕಿ ಆಶ್ರಮ ನೇಪಾಳದಲ್ಲಿದೆ. ದಶರಥ ನೇಪಾಳದ ಆಡಳಿತ ನಡೆಸಿದ್ದರು. ಹೀಗಾಗಿ ರಾಮ ಕೂಡ ನೇಪಾಳದಲ್ಲೇ ಜನಿಸಿದ್ದಾರೆ. ಈ ಎಲ್ಲ ಕಾರಣಕ್ಕೆ ಅವರು ನಮ್ಮ ದೇಶದವರು ಎಂದು ಓಲಿ ಹೇಳಿದ್ದಾರೆ.

news18-kannada
Updated:July 14, 2020, 8:47 AM IST
ರಾಮ ನಮ್ಮವನು, ಅಯೋಧ್ಯೆ ಇರುವುದು ನಮ್ಮಲ್ಲಿಯೇ; ಹೊಸ ಕ್ಯಾತೆ ತೆಗೆದ ನೇಪಾಳ
ಕೆಪಿ ಶರ್ಮಾ ಓಲಿ
  • Share this:
ನವದೆಹಲಿ (ಜು.14): ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಸದಾ ಕ್ಯಾತೆ ತೆಗೆಯುತ್ತಲೇ ಬರುತ್ತಿರುವ ನೆರೆಯ ನೇಪಾಳ ಈಗ ಹೊಸ ರಾಗ ಆರಂಭಿಸಿದೆ. ರಾಮ ಭಾರತೀಯನಲ್ಲ ನೇಪಾಳಿ ಎಂದು ಹೇಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ನೇಪಾಳದ ಕವಿ ಭಾನುಭಕ್ತ ಅವರ ಜನ್ಮದಿನ ಅಂಗವಾಗಿ ಅಲ್ಲಿನ​ ಪ್ರಧಾನಿ ಕೆಪಿ ಶರ್ಮಾ ಓಲಿ ಅವರ ಮನೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ “ನಾವು ಸಾಂಸ್ಕೃತಿಕವಾಗಿ ಅತಿಕ್ರಮಣಕ್ಕೆ ಒಳಪಟ್ಟಿದ್ದೇವೆ. ನಮ್ಮಲ್ಲಿ ಇತಿಹಾಸವನ್ನೇ ತಿರುಚಲಾಗಿದೆ,” ಎಂದು  ಮಾತು ಆರಂಭಿಸಿದ್ದರು.

“ರಾಮ ನೇಪಾಳಿ. ಅವರು ಭಾರತೀಯನಲ್ಲವೇ ಅಲ್ಲ. ಅಯೋಧ್ಯೆ ಇರುವುದು ಭಾರತದಲ್ಲಲ್ಲ ನಮ್ಮಲ್ಲಿ,” ಎಂದು ಹೇಳುವ ಮೂಲಕ ಹೊಸ ಕ್ಯಾತೆ ತೆಗೆದಿದ್ದಾರೆ. “ನಾವು ರಾಮಾಯಣವನ್ನು ನಂಬುತ್ತೇವೆ. ಅಯೋಧ್ಯೆಯಲ್ಲಿ ರಾಮ-ಸೀತೆ ಮದುವೆ ಆದರು ಎಂಬುದು ನಮ್ಮ ನಂಬಿಕೆಯೇ. ಆದರೆ, ಅಯೋಧ್ಯೆ ಇರುವುದು ಬಿರ್ಗುಂಜ್​ ಭಾಗದಲ್ಲಿ. ಭಾರತ ಮಾತ್ರ ಅಯೋಧ್ಯೆ ಉತ್ತರ ಪ್ರದೇಶದಲ್ಲಿದೆ ಎಂದು ಹೇಳುತ್ತಿದೆ," ಎಂದಿದ್ದಾರೆ.

ವಾಲ್ಮಿಕಿ ಆಶ್ರಮ ನೇಪಾಳದಲ್ಲಿದೆ. ದಶರಥ ನೇಪಾಳದ ಆಡಳಿತ ನಡೆಸಿದ್ದರು. ಹೀಗಾಗಿ ರಾಮ ಕೂಡ ನೇಪಾಳದಲ್ಲೇ ಜನಿಸಿದ್ದಾರೆ. ಈ ಎಲ್ಲ ಕಾರಣಕ್ಕೆ ಅವರು ನಮ್ಮ ದೇಶದವರು ಎಂದು ಓಲಿ ಹೇಳಿದ್ದಾರೆ.

ಭಾರತೀಯ ನ್ಯೂಸ್​ ಚಾನೆಲ್​ಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿರುವುದಾಗಿ ನೇಪಾಳದ ಕೇಬಲ್​ ಆಪರೇಟರ್​ಗಳು ಇತ್ತೀಚೆಗೆ ಹೇಳಿದ್ದರು. ಕಳೆದ ಗುರುವಾರ ಸಂಜೆಯಿಂದ ಡಿಡಿ ನ್ಯೂಸ್​ ಚಾನೆಲ್​ ಹೊರತುಪಡಿಸಿ ಉಳೆದ ಎಲ್ಲ ಸುದ್ದಿ ವಾಹಿನಿಗಳನ್ನು ಬ್ಯಾನ್​ ಮಾಡಿದ್ದೇವೆ ಎಂದು ಅಲ್ಲಿನ ಕೇಬಲ್​ ಆಪರೇಟರ್​ಗಳು ಸ್ಪಷ್ಟಪಡಿಸಿದ್ದರು. ಭಾರತೀಯ ಮಾಧ್ಯಮಗಳು ನೇಪಾಳದ ಬಗ್ಗೆ ಸುಳ್ಳು ವರದಿಗಳನ್ನು ಪ್ರಕಟ ಮಾಡುತ್ತಿದ್ದಾರೆ ಎಂಬುದು ಇದಕ್ಕೆ ಕಾರಣ ಎನ್ನಲಾಗಿದೆ.
Published by: Rajesh Duggumane
First published: July 14, 2020, 7:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading