ನವದೆಹಲಿ; ಗಣರಾಜ್ಯೋತ್ಸವದ ದಿನ ರೈತರ ಪ್ರತಿಭಟನೆ ವೇಳೆ ಕೆಲ ಉದ್ರಿಕ್ತರ ಗುಂಪು ಐತಿಹಾಸಿಕ ಕೆಂಪುಕೋಟೆಗೆ ನುಗ್ದಿ ಅಲ್ಲಿ ರಾಷ್ಟ್ರಧ್ವಜ ಹಾರಿಸುವ ಸ್ಥಳದಲ್ಲಿ ಹತ್ತಿ ಧಾರ್ಮಿಕ ಬಾವುಟವೊಂದನ್ನು ಹಾರಿಸಿದ್ದರು. ಈ ವೇಳೆ ಕೆಂಪು ಕೋಟೆಗೆ ಲಗ್ಗೆ ಹಾಕುವ ಮುನ್ನ ಪೊಲೀಸರು ಇರಿಸಿದ್ದ ಬ್ಯಾರಿಕೇಡ್ಗಳನ್ನು ಸೀಳಿ, ಪೊಲೀಸರನ್ನು ಥಳಿಸಲಾಗಿತ್ತು. ಈ ಹಿಂಸಾಚಾರದಲ್ಲಿ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಘಟನೆಯಲ್ಲಿ 300 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ 22 ಎಫ್ಐಆರ್ ದಾಖಲಿಸಲಾಗಿದೆ. ಕೆಂಪು ಕೋಟೆ ಹಿಂಸಾಚಾರ ಘಟನೆಯಲ್ಲಿ ನಟ ದೀಪ್ ಸಿಂಗ್ ಹಾಗೂ ಸಾಮಾಜಿಕ ಕಾರ್ಯಕರ್ತ ಲಖಾ ಸಿಧಾನಾ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ನವದೆಹಲಿಯಲ್ಲಿ ಮಂಗಳವಾರ ರೈತರ ಪ್ರತಿಭಟನೆ ಗಲಭೆಯಾಗಿ ಪರಿವರ್ತನೆಗೊಂಡಿತ್ತು. ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದಲ್ಲಿ ನಟ ದೀಪ್ ಸಿಧು ಅವರ ಹೆಸರು ಮುಂಚೂಣಿಯಾಗಿ ಕೇಳಿಬರುತ್ತಿದೆ. ರೈತ ಸಂಘಗಳು ಪ್ರತಿಭಟನಾಕಾರರನ್ನು ಪ್ರಚೋದಿಸಿ, ಆಂದೋಲನವನ್ನು ಹಿಂಸಾತ್ಮಕಗೊಳಿಸಲಾಗಿದೆ ಎಂದು ಆರೋಪಿಸಿದರೆ, ಸಿಧು ಅವರು ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿದ್ದು, ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ತೆಗೆಯಲಿಲ್ಲ, ಬದಲಿಗೆ ಪ್ರತಿಭಟನೆಯ ಸಾಂಕೇತಿಕವಾಗಿ 'ನಿಶಾನ್ ಸಾಹಿಬ್' ಬಾವುಟವನ್ನು ಅಲ್ಲಿ ಹಾರಿಸಲಾಯಿತು ಎಂದು ಹೇಳಿದ್ದಾರೆ.
ಇದನ್ನು ಓದಿ: Farmers Protest: ರೈತ ಮಸೂದೆಯನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮತ್ತೋರ್ವ ನಾಯಕ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ತೆಗೆದುಹಾಕಬೇಕು ಎಂದು ರೈತರು ಆಗ್ರಹಿಸಿ ಕಳೆದ ಎರಡು ತಿಂಗಳಿನಿಂದ ದೆಹಲಿ ಗಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವು. ಈ ವೇಳೆ ಜನವರಿ 26ರ ಮಂಗಳವಾರದಂದು ಗಣರಾಜ್ಯೋತ್ಸವದ ದಿನ ಕಿಸಾನ್ ಟ್ರ್ಯಾಕ್ಟರ್ ಪರೇಡ್ ನಡೆಸಲಾಯಿತು. ಆದರೆ, ಈ ವೇಳೆ ಕೆಲ ಉದ್ರಿಕ್ತ ರೈತರ ಗುಂಪು ದಿಕ್ಕು ಬದಲಾಯಿಸಿ ದೆಹಲಿ ಹೃದಯ ಭಾಗವನ್ನು ಪ್ರವೇಶಿಸಿತ್ತು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಘರ್ಷಣೆ ನಡೆಯಿತು. ಘರ್ಷಣೆಯಲ್ಲಿ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆ ಖಂಡಿಸಿ ಸ್ವತಃ ರೈತ ಹೋರಾಟದಲ್ಲಿ ಪಾಲ್ಗೊಂಡಿದ್ದ ಎರಡು ರೈತ ಸಂಘಟನೆಗಳು ತಮ್ಮ ಬೆಂಬಲವನ್ನು ವಾಪಸ್ ಪಡೆದಿವೆ.
#WATCH Delhi: Union Home Minister Amit Shah meets and speaks to an injured Police personnel, who is admitted at Tirath Ram Shah Hospital.
These Police personnel were injured in the violence during the farmers' tractor rally on January 26th. pic.twitter.com/f0WsgOvSPP
— ANI (@ANI) January 28, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ