• Home
 • »
 • News
 • »
 • national-international
 • »
 • Teacher: ಸೇನೆಯಲ್ಲಿದ್ದ ಮಗನ ಅಂಗವೈಕಲ್ಯದಿಂದ ದೀರ್ಘಾವಧಿ ರಜೆ: ಶಿಕ್ಷಕಿಯ ಇನ್‌ಕ್ರಿಮೆಂಟ್ ಮೊತ್ತ ಹಿಂದಿರುಗಿಸಲು ಎಜಿ ಇಲಾಖೆ ಪತ್ರ

Teacher: ಸೇನೆಯಲ್ಲಿದ್ದ ಮಗನ ಅಂಗವೈಕಲ್ಯದಿಂದ ದೀರ್ಘಾವಧಿ ರಜೆ: ಶಿಕ್ಷಕಿಯ ಇನ್‌ಕ್ರಿಮೆಂಟ್ ಮೊತ್ತ ಹಿಂದಿರುಗಿಸಲು ಎಜಿ ಇಲಾಖೆ ಪತ್ರ

ತಾಯಿ ಮತ್ತು ಮಗ

ತಾಯಿ ಮತ್ತು ಮಗ

ಆಕೆ ಸರ್ಕಾರಿ ಶಾಲೆಯ ಮುಖ್ಯೋಧ್ಯಾಪಕಿ. ಆದ್ರೆ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ಕೆಡೆಟ್‌ ಆಗಿ ತರಬೇತಿ ಪಡೆಯುತ್ತಿದ್ದ ಮಗನಾದ ಕಿಶನ್‌ ಕುಲಕರ್ಣಿ ಅಂಗವೈಕಲ್ಯದ ಬಳಿಕ ದೀರ್ಘ ರಜೆ ತೆಗೆದುಕೊಂಡರು ಅದರೆ ಶಿಕ್ಷಕಿಯ ಇನ್‌ ಕ್ರಿಮೆಂಟ್ ಮೊತ್ತ ಹಿಂದಿರುಗಿಸಲು ಎಜಿ ಇಲಾಖೆ ಪತ್ರ ಕೇಳಿತಂತೆ

ಮುಂದೆ ಓದಿ ...
 • News18 Kannada
 • Last Updated :
 • New Delhi, India
 • Share this:

  ಆಕೆ ಸರ್ಕಾರಿ ಶಾಲೆಯ (Government School)  ಮುಖ್ಯೋಧ್ಯಾಪಕಿ (Teacher). ಆದ್ರೆ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ (National Defense Academy)  ಕೆಡೆಟ್‌ ಆಗಿ ತರಬೇತಿ ಪಡೆಯುತ್ತಿದ್ದ ಮಗನಾದ ಕಿಶನ್‌ ಕುಲಕರ್ಣಿ ಅಂಗವೈಕಲ್ಯದ ಬಳಿಕ ದೀರ್ಘ ರಜೆ (Long Leave) ತೆಗೆದುಕೊಂಡ ಇವರ ಕ್ರಮವನ್ನು ಎಜಿ ಇಲಾಖೆ ( Department of AG )  ಪ್ರಶ್ನಿಸಿದೆ. ಸೇನೆಯಲ್ಲಿ ಇನ್ನೊಬ್ಬ ಮಾಜಿ ಕೆಡೆಟ್‌ ಆಗಿದ್ದ ಅಂಕುರ್‌ ಅವರು ಈ ಬಗ್ಗೆ ಟ್ವಿಟ್ಟರ್‌ ನಲ್ಲಿ ಹಂಚಿಕೊಂಡ ಈ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಉಂಟುಮಾಡಿದೆ.


  ಶಿಕ್ಷಕಿಯ ಮಗನಿಗೆ ಏನಾಗಿತ್ತು?


  ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಪಕಿಯಾಗಿ ಭಾರತಿ.ಎಂ.ಜೋಶಿ ಕೆಲಸ ಮಾಡುತ್ತಿದ್ದರು. ಅವರ ಮಗ ಕಿಶನ್‌ ಕುಲಕರ್ಣಿ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವಾಗ ಅಂಗವಿಕಲರಾಗಿ ಮನೆಗೆ ಕಳುಹಿಸಲ್ಪಟ್ಟರು.


  ಕೆಡೆಟ್ ಕುಲಕರ್ಣಿ 2021 ರಲ್ಲಿ ತಮ್ಮ ಕ್ಯಾಬಿನ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಾಗ ಅವರು NDA ಯ ನಾಲ್ಕನೇ ಅವಧಿಯಲ್ಲಿದ್ದರು. ಅವರನ್ನು ತಕ್ಷಣವೇ ಮಿಲಿಟರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯ್ತು. ಆದರೆ ಆಘಾತಕಾರಿ ವಿಷಯವೆಂದರೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗದೇ ಅವರ ಮೆದುಳಿಗೆ ಹಾನಿಯಾಗಿತ್ತು.


  ಹೆಚ್ಚುವರಿ ವೇತನ, ಭತ್ಯೆ ಹಿಂದಿರುಗಿಸುವಂತೆ ಪತ್ರ


  ಈ ಹಿನ್ನೆಲೆಯಲ್ಲಿ ಭಾರತಿ ಅವರು ದೀರ್ಘಾವಧಿ ರಜೆ ತೆಗೆದುಕೊಂಡಿದ್ದಾರೆ. ಆದ್ರೆ ಅವರಿಗೆ ಏಪ್ರಿಲ್ 13, 2021 ರಿಂದ ಏಪ್ರಿಲ್ 7, 2022 ರವರೆಗೆ ಯಾವ ಆಧಾರದ ಮೇಲೆ 360 ದಿನಗಳ ಮಕ್ಕಳ ಆರೈಕೆ ರಜೆಯನ್ನು ಮಂಜೂರು ಮಾಡಲಾಗಿದೆ ಎಂಬುದಾಗಿ ಎಜಿ ಇಲಾಖೆ ಪತ್ರದಲ್ಲಿ ಪ್ರಶ್ನಿಸಿದೆ.


  Long leave due to disability of son in army AG department letter to return increment amount of teacher
  ತಾಯಿ ಮತ್ತು ಮಗ


  ಅಲ್ಲದೇ ಇದು ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಅದು ಸೂಚಿಸುತ್ತದೆ. ಈ ಅವಧಿಯಲ್ಲಿ ಭಾರತಿಗೆ ಪಾವತಿಸಿದ ಹೆಚ್ಚುವರಿ ವೇತನ ಮತ್ತು ಭತ್ಯೆಗಳ ಬಗೆಗಿನ ವಿವರಗಳನ್ನು ಪತ್ರದಲ್ಲಿ ಕೋರಲಾಗಿದೆ.


  ಹೃದಯಹೀನ ವ್ಯವಸ್ಥೆ ಎಂದ ನೆಟ್ಟಿಗರು


  ಅಕ್ಟೋಬರ್‌ 21 ರಂದು ಕರ್ನಾಟಕ ಎಜಿ ಇಲಾಖೆಯು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಈ ಪತ್ರ ಬರೆದಿದೆ. ಇದನ್ನು ಎನ್‌ ಡಿಎ ನ ಮಾಜಿ ಕೆಡೆಟ್‌ ಆಗಿರುವ ಅಂಕುರ್‌ ಚತುರ್ವೇದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


  ಅಲ್ಲದೇ ಈ ತಾಯಿಗಾಗಿ @CMofKarnataka @narendramodi ಅವರನ್ನು ಮಧ್ಯಪ್ರವೇಶಿಸುವಂತೆ ವಿನಂತಿಸಿರುವ ಟ್ವೀಟ್‌ ಮಾಡಿದ್ದಾರೆ.


  ಕರ್ನಾಟಕ ಎಜಿ ಇಲಾಖೆ ನೀಡಿದ ಪತ್ರದ ಜೊತೆಗೆ ಫಿಟ್‌ ಆಗಿರುವ ಕುಲಕರ್ಣಿ ಅವರ ಫೋಟೋ ಹಾಗೂ ಈಗಿನ ದುರ್ಬಲವಾಗಿ ವೀಲ್‌ ಚೇರ್‌ ನಲ್ಲಿ ಕುಳಿತಿರುವ ಕುಲಕರ್ಣಿ ಯ ಫೋಟೋ ಎರಡನ್ನೂ ಅವರು ಶೇರ್‌ ಮಾಡಿದ್ದಾರೆ.


  ಚತುರ್ವೇದಿಯವರ ಟ್ವಿಟ್ಟರ್ ಪೋಸ್ಟ್ ಗೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಪಿ ಮಲಿಕ್ ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಜನರಲ್ ಮಲಿಕ್, ಈ ಬೆಳವಣಿಗೆಯನ್ನು "ಹೃದಯಹೀನ" ಎಂದು ಹೇಳುವ ಮೂಲಕ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಅವರು ಪಿಎಂಒ, ಕರ್ನಾಟಕ ಸರ್ಕಾರ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.


  ಈ ಮಧ್ಯೆ ತನ್ನ ಏಕೈಕ ಮಗನ ಪರಿಸ್ಥಿತಿಯನ್ನು ವಿವರಿಸಿರುವ ತಾಯಿ ಭಾರತಿ ಜೋಶಿ, ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರವೂ ತನ್ನ ಮಗನ ತೂಕವು ತೀವ್ರವಾಗಿ ಕಡಿಮೆಯಾಗಿದೆ.


  ಮೆದುಳಿಗೆ ಹಾನಿಯಾಗಿತ್ತು


  ಆ ಸಮಯದಲ್ಲಿ ಥೇಟ್‌ ಅಸ್ಥಿಪಂಜರದಂತೆಯೇ ಕಾಣುತ್ತಿದ್ದನು. ಮೆದುಳಿಗೆ ಹಾನಿಯಾಗಿದ್ದರಿಂದ ತೀವ್ರ ಆರೈಕೆ ಪರಿಣಾಮವಾಗಿ ಇದೀಗ ಸ್ವಲ್ಪ ಸುಧಾರಿಸಿದ್ದಾನೆ ಎಂಬುದಾಗಿ ಹೇಳಿದ್ದಾರೆ.


  “ಆದಾಗ್ಯೂ, ಮಗನ ಆರೈಕೆಗಾಗಿ ನನ್ನ ರಜೆಯನ್ನು ಇನ್ನೂ 370 ದಿನಗಳವರೆಗೆ ವಿಸ್ತರಿಸಬೇಕೆಂದು ಸರ್ಕಾರಕ್ಕೆ ಭಾರತಿ ಜೋಶಿ ವಿನಂತಿಸಿಕೊಂಡಿದ್ದಾರೆ.


  ನಿಯಮಗಳ ಪ್ರಕಾರ ಬುದ್ಧಿಮಾಂದ್ಯ ಮತ್ತು ಸಂಪೂರ್ಣ ಅಂಗವೈಕಲ್ಯ ಹೊಂದಿರುವ ಮಕ್ಕಳನ್ನು ಹೊಂದಿರುವ ಸರ್ಕಾರಿ ಅಧಿಕಾರಿಗಳು 730 ದಿನಗಳ ರಜೆಗೆ ಅರ್ಹರಾಗಿರುತ್ತಾರೆ ಎಂದಿದ್ದಾರೆ. ಅಲ್ಲದೇ ತನ್ನ ಮಗನ ಪಿಂಚಣಿಗಾಗಿ ತಾಯಿ ಮಿಲಿಟರಿಯನ್ನೂ ಒತ್ತಾಯಿಸಿದ್ದಾರೆ.


  ಇದನ್ನೂ ಓದಿ:  Ali Mehdi: ನಾನು ದೊಡ್ಡ ತಪ್ಪು ಮಾಡಿದೆ ಕ್ಷಮಿಸಿ, ಎಎಪಿಗೆ ಸೇರಿದ 24 ಗಂಟೆಯಲ್ಲೇ ಕಾಂಗ್ರೆಸ್​ಗೆ ಮರಳಿದ ನಾಯಕ!


  ಈ ಮಧ್ಯೆ ಕೆಸಿಎಸ್‌ಆರ್ ನಿಯಮಾನುಸಾರ ಮುಖ್ಯಶಿಕ್ಷಕಿಯರಿಗೆ ರಜೆ ಮಂಜೂರು ಮಾಡಿದ್ದೇವೆ. ಆದಾಗ್ಯೂ, ಸರ್ಕಾರಿ ಅಧಿಕಾರಿಯು ರಜೆಯ ಅವಧಿಯಲ್ಲಿ ಯಾವುದೇ ರೀತಿಯ ಏರಿಕೆಗೆ ಅರ್ಹರಾಗಿರುವುದಿಲ್ಲ.


  ಈ ನಡುವೆ, ಅಧಿಕಾರಿಯು ತನ್ನ ಒಂದು ವರ್ಷದ ರಜೆಯ ಅವಧಿಯಲ್ಲಿ ಆಕೆಗೆ ಪಾವತಿಸಿದ ಇನ್‌ಕ್ರಿಮೆಂಟ್ ಮೊತ್ತವನ್ನು ಹಿಂದಿರುಗಿಸಬೇಕಾಗುತ್ತದೆ ಎಂಬುದಾಗಿ ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಷಣ್ಮುಖಸ್ವಾಮಿ ಕೆಳದಿಮಠ ಹೇಳಿದ್ದಾರೆ.

  Published by:Gowtham K
  First published: