ಲಂಡನ್​ನ ದಿ ಸ್ಪೋರ್ಟ್ಸ್ ಬಿಸಿನೆಸ್ ಶೃಂಗಸಭೆ; ಸಂಜೆ 7ಕ್ಕೆ ವಿಷಯ ಮಂಡಿಸಿ ಮಾತನಾಡಲಿರುವ ನೀತಾ ಅಂಬಾನಿ

ಅಕ್ಟೋಬರ್ 7 ರಿಂದ 10 ರವರೆಗೆ ಲಂಡನ್​ನಲ್ಲಿ ನಡೆಯಲಿರುವ 2019ರ ಈ ಸಮ್ಮೇಳನದಲ್ಲಿ ನೀತಾ ಅಂಬಾನಿಯವರಲ್ಲದೆ ವಿಶ್ವದಾದ್ಯಂತ ಸುಮಾರು 3,000 ಕ್ಕೂ ಹೆಚ್ಚು ಕ್ರೀಡಾಪಟುಗಳು, ಕ್ರೀಡಾ ಉದ್ಯಮದಾರರು ಮತ್ತು ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವವರು ಭಾಗವಹಿಸಲಿದ್ದಾರೆ.

MAshok Kumar | news18-kannada
Updated:October 8, 2019, 5:22 PM IST
ಲಂಡನ್​ನ ದಿ ಸ್ಪೋರ್ಟ್ಸ್ ಬಿಸಿನೆಸ್ ಶೃಂಗಸಭೆ; ಸಂಜೆ 7ಕ್ಕೆ ವಿಷಯ ಮಂಡಿಸಿ ಮಾತನಾಡಲಿರುವ ನೀತಾ ಅಂಬಾನಿ
ಯುವ ಕ್ರೀಡಾಪಟುಗಳೊಂದಿಗೆ ನೀತಾ ಅಂಬಾನಿ.
  • Share this:
ಲಂಡನ್​ (ಅಕ್ಟೋಬರ್​ 08); ರಿಲಾಯನ್ಸ್ ಫೌಂಡೇಶನ್​ನ ಸಂಸ್ಥಾಪಕ ಅಧ್ಯಕ್ಷೆ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಮೊದಲ ಭಾರತೀಯ ಮಹಿಳಾ ಸದಸ್ಯೆ ನೀತಾ ಅಂಬಾನಿ ಲಂಡನ್​ನಲ್ಲಿ ಇಂದು ಸಂಜೆ 7 ಗಂಟೆಗೆ ನಡೆಯಲಿರುವ ದಿ ಸ್ಪೋರ್ಟ್ ಬ್ಯುಸಿನೆಸ್ ಶೃಂಗಸಭೆಯಲ್ಲಿ “ಬಿಲಿಯನ್ ಡ್ರೀಮ್ಸ್: ದಿ ಇಂಡಿಯಾ ಆಪರ್ಚುನಿಟಿ” ಎಂಬ ಶೀರ್ಷಿಕೆಯ ಕುರಿತು ತಮ್ಮ ವಿಷಯ ಮಂಡನೆ ಮಾಡಲಿದ್ದಾರೆ.

ಅಕ್ಟೋಬರ್ 7 ರಿಂದ 10 ರವರೆಗೆ ಲಂಡನ್​ನಲ್ಲಿ ನಡೆಯಲಿರುವ 2019ರ ಈ ಸಮ್ಮೇಳನದಲ್ಲಿ ನೀತಾ ಅಂಬಾನಿಯವರಲ್ಲದೆ ವಿಶ್ವದಾದ್ಯಂತ ಸುಮಾರು 3,000 ಕ್ಕೂ ಹೆಚ್ಚು ಕ್ರೀಡಾಪಟುಗಳು, ಕ್ರೀಡಾ ಉದ್ಯಮದಾರರು ಮತ್ತು ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವವರು ಭಾಗವಹಿಸಲಿದ್ದಾರೆ. ಅಲ್ಲದೆ, ಇಂದಿನ ಸಮ್ಮೇಳನದಲ್ಲಿ ಈ ಎಲ್ಲರೂ ಕ್ರೀಡೆಯ ಭವಿಷ್ಯ, ಆದ್ಯತೆ ಹಾಗೂ ಕ್ರೀಡೆಯಲ್ಲಿ ಆಗಬೇಕಾದ ತುರ್ತು ಬದಲಾವಣೆ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕ್ರೀಡೆಯ ಭವಿಷ್ಯ ಹಾಗೂ ಕ್ರೀಡಾ ಉದ್ಯಮದ ಕುರಿತ ಚರ್ಚೆ

ವಿಶ್ವದ ಕ್ರೀಡಾ ಜಗತ್ತಿನಲ್ಲಿ ಪ್ರತಿನಿತ್ಯ ನೂತನ ಮತ್ತು ಉತ್ತಮವಾದ ಬದಲಾವಣೆಗಳು ನಡೆಯುತ್ತಲೇ ಇರುತ್ತದೆ. ವಿಭಿನ್ನ ಕ್ರೀಡೆಗಳಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿರುವ ಕಾರಣ, ಕ್ರೀಡೆಯಲ್ಲಿ ತಂತ್ರಜ್ಞಾನವನ್ನು ಬದಲಾಯಿಸುವುದರೊಂದಿಗೆ ಗ್ರಾಹಕರನ್ನು ಆಕರ್ಷಿಸುವ ದೃಷ್ಟಿಯಿಂದ ಕ್ರೀಡಾ ಉದ್ಯಮದಲ್ಲಿ ಸ್ಪರ್ಧೆಯೂ ಹೆಚ್ಚಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಉದ್ಯಮವು ಕ್ರೀಡೆಯ ಭವಿಷ್ಯಕ್ಕಾಗಿ ಸಂಪೂರ್ಣವಾಗಿ ಸಿದ್ಧವಾಗಬೇಕಿದೆ. ಈ ವಿಷಯದ ಬಗ್ಗೆ ಚರ್ಚಿಸಲು ಲಂಡನ್​ನಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು, ಪ್ರಪಂಚದಾದ್ಯಂತ ಇರುವ ಕ್ರೀಡಾ ಸಾಧಕರು ಮತ್ತು ಉದ್ಯಮದವರು ಇದರಲ್ಲಿ ಭಾಗವಹಿಸುತ್ತಿದ್ದಾರೆ.

ಭಾರತದ ಹೆಸರಾಂತ ಉದ್ಯಮಿಯಾಗಿರುವ ನೀತಾ ಅಂಬಾನಿ ಓರ್ವ ಶಿಕ್ಷಣ ತಜ್ಞೆಯೂ ಹೌದು. ರಿಲಾಯನ್ಸ್ ಫೌಂಡೇಶನ್ ಸ್ಥಾಪಿಸಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಅವರು ತಮ್ಮನ್ನು ಸಮಾಜ ಸೇವಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಇದೇ ಫೌಂಡೇಶನ್ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡಿರುವ ನೀತಾ ಅಂಬಾನಿ ಮೂರು ಕೋಟಿಗೂ ಅಧಿಕ ಯುವಕರಿಗೆ ಅವರ ನೆಚ್ಚಿನ ಕ್ರೀಡೆಯಲ್ಲಿ ಮುಂದುವರೆಯಲು ಸಹಕಾರಿಯಾಗಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಗುರುತಿಸಿದ್ದ ಟೈಮ್ಸ್ ಆಫ್ ಇಂಡಿಯಾ ಸಂಸ್ಥೆ 2017ರಲ್ಲಿ “ಭಾರತೀಯ ಕ್ರೀಡೆಗಳ ಅತ್ಯುತ್ತಮ ಕಾರ್ಪೊರೇಟ್ ಪ್ರವರ್ತಕ” ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಇದೇ ವರ್ಷ ದೇಶದ ರಾಷ್ಟ್ರಪತಿ ರಾಮನಾಥ ಕೋವಿಂದ್ ನೀತಾ ಅಂಬಾನಿ ಅವರಿಗೆ ರಾಷ್ಟ್ರೀಯ ಕ್ರೀಡಾ ಪ್ರಚಾರ ಪ್ರಶಸ್ತಿ ನೀಡಿದ್ದರು. ಭಾರತೀಯ ಕ್ರೀಡಾ ಕ್ಷೇತ್ರದಲ್ಲಿನ ಅಭಿವೃದ್ಧಿಗಾಗಿ ರಿಲಾಯನ್ಸ್ ಫೌಂಡೇಶನ್ ಮಾಡಿರುವ ಅತ್ಯುತ್ತಮ ಕಾರ್ಯಗಳಿಗಾಗಿ ನೀತಾ ಅಂಬಾನಿ ಅವರನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಎರಡು ಪ್ರತಿಷ್ಠಿತ ಆಯೋಗಗಳಿಗೂ ಆಯ್ಕೆ ಮಾಡಲಾಗಿದೆ.ಇದನ್ನೂ ಓದಿ : ವಿಧಾನಮಂಡಲ ಅಧಿವೇಶನಕ್ಕೆ ದಿನಗಣನೆ; ವಿರೋಧ ಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆದಿರುವ ಸಿಎಂ ಯಡಿಯೂರಪ್ಪ

First published: October 8, 2019, 5:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading