ಲಂಡನ್​ನಲ್ಲಿ ನೀರವ್​ ಮೋದಿ ಬಂಧನ; ಜಾಮೀನು ನಿರಾಕರಿಸಿದ ಕೋರ್ಟ್; ಮಾ. 29ರವರೆಗೆ ಪೊಲೀಸ್ ಕಸ್ಟಡಿಗೆ

ಅವರನ್ನು ಲಂಡನ್​ನಲ್ಲಿ ಬಂಧನ ಮಾಡಲಾಗಿದ್ದು, ಭಾರತದ ಜತೆ ಹಸ್ತಾಂತರ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆಯಿದೆ. ಎಲ್ಲವೂ ಲೆಕ್ಕಾಚಾರಗಳಂತೆ ನಡೆದರೆ ಮದ್ಯ ದೊರೆ ವಿಜಯ್​ ಮಲ್ಯಾ ಸ್ಥಿತಿಯೇ ನೀರವ್​ ಮೋದಿಗೂ ಬರಲಿದೆ.

news18
Updated:March 20, 2019, 7:03 PM IST
ಲಂಡನ್​ನಲ್ಲಿ ನೀರವ್​ ಮೋದಿ ಬಂಧನ; ಜಾಮೀನು ನಿರಾಕರಿಸಿದ ಕೋರ್ಟ್; ಮಾ. 29ರವರೆಗೆ ಪೊಲೀಸ್ ಕಸ್ಟಡಿಗೆ
ನೀರವ್​ ಮೋದಿ ಕಾರ್ಟೂನ್​
news18
Updated: March 20, 2019, 7:03 PM IST
ಲಂಡನ್​: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಸಾವಿರಾರು ಕೋಟಿ ರೂಪಾಯಿ ಪಾವತಿಸದೇ ದೇಶ ಬಿಟ್ಟು ಓಡಿಹೋಗಿದ್ದ ವಜ್ರದ ಉದ್ಯಮಿ ನೀರವ್​ ಮೋದಿಯನ್ನು ಲಂಡನ್​ನಲ್ಲಿ ಬಂಧಿಸಲಾಗಿದೆ. ನೀರವ್​ ಮೋದಿ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಿಂದ 13 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ ತಲೆತಪ್ಪಿಸಿಕೊಂಡಿದ್ದರು. ಆದರೀಗ ಅವರನ್ನು ಲಂಡನ್​ನಲ್ಲಿ ಬಂಧನ ಮಾಡಲಾಗಿದ್ದು ಭಾರತದ ಜತೆ ಹಸ್ತಾಂತರ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಇವತ್ತು ವೆಸ್ಟ್​ಮಿಂಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ನೀರವ್ ಮೋದಿ ಅವರನ್ನು ಹಾಜರುಪಡಿಸಲಾಯಿತು. ಈ ವೇಳೆ ನೀರವ್ ಮೋದಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತು. ಜಾಮೀನು ನೀಡಿದರೆ ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಮೋದಿ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ನೀರವ್ ಮೋದಿ ಅವರು ಮಾರ್ಚ್ 29ರವರೆಗೆ ಪೊಲೀಸ್ ಕಸ್ಟಡಿಯಲ್ಲೇ ಇರಲಿದ್ದಾರೆ.

ಇವತ್ತು ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಜಾಮೀನು ಅರ್ಜಿ ಸಲ್ಲಿಸುವ ವೇಳೆ ನೀರವ್ ಅವರು 5 ಲಕ್ಷ ಪೌಂಡ್ (ಸುಮಾರು 4.5 ಕೋಟಿ ರೂ) ಬಾಂಡ್ ನೀಡಲು ಮುಂದೆ ಬಂದಿದ್ದರು. ಆದರೆ, ಜಾಮೀನು ನೀಡಿದರೆ ನೀರವ್ ತಪ್ಪಿಸಿಕೊಳ್ಳುವ ಸಾಧ್ಯತೆಯೇ  ಹೆಚ್ಚು ಎಂಬ ಅಭಿಪ್ರಾಯಕ್ಕೆ ಬಂದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನೇ ವಜಾ ಮಾಡಿ ನೀರವ್ ಅವರನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು. ಒಂದು ವೇಳೆ ನೀರವ್​ಗೆ ಇವತ್ತು ಜಾಮೀನು ಸಿಕ್ಕಿದ್ದರೆ ಅವರ ಬಂಧನ ಅಸಾಧ್ಯವಾಗುತ್ತಿತ್ತು.

ಕೆಲ ದಿನಗಳ ಹಿಂದೆ ಇಂಗ್ಲೆಂಡ್​ನ ಪತ್ರಿಕೆ 'ಟೆಲಿಗ್ರಾಫ್​' ವರದಿಗಾರರೊಬ್ಬರಿಗೆ ಅಚಾನಕ್ಕಾಗಿ ನೀರವ್​ ಮೋದಿ ಸಿಕ್ಕಿದ್ದರು. ಲಕ್ಷಾಂತರ ರೂ. ಬೆಲೆ ಬಾಳುವ ಆಸ್ಟ್ರಿಚ್​ ಲೆದರ್​ ಜ್ಯಾಕೆಟ್​ ಹಾಕಿಕೊಂಡು ರಾಜಾರೋಷವಾಗಿ ನೀರವ್​ ಮೋದಿ ಓಡಾಡುತ್ತಿದ್ದಾಗ ವರದಿಗಾರರೊಬ್ಬರು ಭಾರತಕ್ಕೆ ಮರಳುವ ಮತ್ತು ತೆರಿಗೆದಾರರಿಗೆ ವಂಚಿಸಿರುವ ಹಣವನ್ನು ಮರುಪಾವತಿ ಮಾಡುವ ಬಗ್ಗೆ ಕೇಳಿದಾಗ, ಪ್ರತಿಕ್ರಿಯೆ ನೀಡಿರಲಿಲ್ಲ.

ಇತ್ತೀಚೆಗೆ ಅವರು ಬೆಲೆಬಾಳುವ ಜಾಕೆಟ್​ ಧರಿಸಿ ಲಂಡನ್​ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು.

ಭಾರತದ ವಜ್ರದ ವ್ಯಾಪಾರಿ ನೀರವ್​ ಮೋದಿ ವಿರುದ್ಧ ಲಂಡನ್​ನ ವೆಸ್ಟ್​ಮಿನ್​ಸ್ಟರ್​ ನ್ಯಾಯಾಲಯ ಮಂಗಳವಾರವಷ್ಟೇ ಅರೆಸ್ಟ್​​ ವಾರಂಟ್​ ಹೊರಡಿಸಿತ್ತು. ಅದರ ಬೆನ್ನಲ್ಲೇ ಈಗ ಅವರನ್ನು ಬಂಧಿಸಲಾಗಿದೆ.

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನ 13,000 ಕೋಟಿ ರೂ. ಹಗರಣದ ಪ್ರಮುಖ ಆರೋಪಿ ಆಗಿರುವ ನೀರವ್​ ಲಂಡನ್​ನಲ್ಲಿ ತಲೆಮರಿಸಿಕೊಂಡಿದ್ದರು. ಅವರನ್ನು ಭಾರತಕ್ಕೆ ಹಸ್ತಾಂತರಿಸುವಂಗತೆ ಭಾರತ ಕೋರಿತ್ತು. ಕೇಂದ್ರ ಗೃಹಸಚಿವಾಲಯದ ಕಾರ್ಯದರ್ಶಿ ಸಾಜಿದ್​ ಜಾವೀದ್​ ದೃಢೀಕರಿಸಿದ ನಂತರದಲ್ಲಿ ಈ ಬೆಳವಣಿಗೆ ನಡೆದಿತ್ತು.
Loading...

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಮುಂಬೈ ಬ್ರ್ಯಾಂಚ್​ ಒಂದರಲ್ಲಿ ಬೃಹತ್ ಮೊತ್ತದ ಅವ್ಯವಹಾರ ನಡೆದಿರುವುದನ್ನು ಪತ್ತೆಹಚ್ಚಿತ್ತು. ಸುಮಾರು 1.77 ಬಿಲಿಯನ್ ಡಾಲರ್ (ಸುಮಾರು 13,000 ಕೋಟಿ ರೂ) ಮೊತ್ತದಷ್ಟು ವಂಚನೆ ಎಸಗಲಾಗಿದೆ ಎಂದು ಸಂಸ್ಥೆ ಹೇಳಿತ್ತು. 2018ರ ಆಗಸ್ಟ್​ ತಿಂಗಳಲ್ಲಿ ನೀರವ್​ ಮೋದಿ ಹಸ್ತಾಂತರಕ್ಕೆ ಭಾರತ ಮನವಿ ಮಾಡಿತ್ತು. ಜೊತೆಗೆ ಭಾರತ ಅವರನ್ನು ಗಡೀಪಾರು ಮಾಡುವಂತೆ ಕೋರಿತ್ತು. ಅಕ್ರಮ ಹಣ ವರ್ಗಾವಣೆ ಸೇರಿ ಅನೇಕ ಪ್ರಕರಣಗಳು ಅವರ ಮೇಲಿವೆ. ಇತ್ತೀಚೆಗೆ ಅವರಿಗೆ ಸೇರಿದ ಐಷಾರಾಮಿ ಕಟ್ಟಡವನ್ನು ನೆಲಸಮ ಮಾಡಲಾಗಿತ್ತು.

First published:March 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...